BBK10:ಮೊದಲ ದಿನವೇ ಶುರು "ನೀನು ಸರಿ ಇಲ್ಲ.. ನಾನು ಸರಿ ಇದ್ದೀನಿ" ಏನಾಯ್ತು ಬಿಗ್ ಬಾಸ್ ಮನೆಯೊಳಗೆ..?

ಬಿಗ್ ಬಾಸ್ ಪ್ರತಿ ಸೀಸನ್‌ನಲ್ಲೂ ಒಂದೊಂದು ವಿಭಿನ್ನವಾದಂತ ಆಟವನ್ನು ನೀಡುತ್ತಲೇ ಇರುತ್ತದೆ. ಅದರಲ್ಲೂ ಬಿಗ್ ಬಾಸ್ ಮನೆಯೊಳಗೆ ಇರುವ ಅಷ್ಟು ಮಂದಿಗೆ ಅವರವರ ಬಗ್ಗೆ ಅಭಿಪ್ರಾಯ ಹೇಳುವಂತ ಟಾಸ್ಕ್ ಇದ್ದೆ‌ ಇರುತ್ತದೆ. ಯಾಕಂದ್ರೆ ಯಾರಿಗೆ ಯಾರ ಮೇಲೆ ಯಾವ ರೀತಿಯ ಅಭಿಪ್ರಾಯ ಇದೆ, ಎಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬುದೆಲ್ಲಾ ಇದರಿಂದಾನೇ ಅರ್ಥವಾಗುವುದು.

ಇವತ್ತು ಮೊದಲ ದಿನ. ಒಂದೇ‌ ದಿನಕ್ಕೆ ಯಾರಿಗೆ ಯಾರೂ ಅರ್ಥವಾಗುವುದಿಲ್ಲ. ಇಂದು ಒಬ್ಬರ ಬಗ್ಗೆ ಹೇಳಿರುವ ಅಭಿಪ್ರಾಯ ನಾಳೆ ಬದಲಾಗಲೂ ಬಹುದು. ಇಂದು ನೆಗೆಟಿವ್ ಶೇಡ್‌ನಲ್ಲಿ ಕಂಡವರೆ ನಾಳೆ ಬೆಸ್ಟ್ ಫ್ರೆಂಡ್ ಆಗಬಹುದು. ಯಾಕಂದ್ರೆ ಅದು ಬಿಗ್ ಬಾಸ್ ಮನೆ. ಮನೆಯೇ ಪ್ರಪಂಚವಾಗಿರುತ್ತದೆ.

bigg-boss-season-10-display

ಬೆಸ್ಟ್ ಆಗಿ ಕಂಡಿದ್ದು ಯಾರು..?

ಬಿಗ್ ಬಾಸ್ ಮನೆಗೆ ಮೊದಲಿಗೆ ಕಾಲಿಟ್ಟು ಬಂದಿದ್ದು ನಮ್ರತಾ ಗೌಡ. ಹಾಲಿನ ಕ್ಯಾನ್ ಹಿಡಿದು ಬಂದು, ದೇವರಿಗೆ ನಮಸ್ಕರಿಸಿ, ಹಾಲು ಉಕ್ಕಿಸಿದ್ದಾರೆ. ಆ ಹಾಲಿಗೆ ಡಿಕಾಕ್ಷನ್ ತಂದಿದ್ದು ಮಾತ್ರ ಸ್ನೇಹಿತ್. ಎಲ್ಲರಿಗೂ ವೆಲ್ಕಂ ಡ್ರಿಂಕ್ ನೀಡಿದರು. ಆ ಕಾಫಿ ಕುಡಿದವವರು ಯಾರೂ ಸ್ನೇಹಿತ್‌ನ ಬೆಸ್ಟ್ ಅಂತ ಹೇಳುತ್ತಾ ಇರಲಿಲ್ಲ. ಆದರೆ, ಫಸ್ಟ್ ಟೈಮ್ ಪರಿಚಯ ಆದವರಿಗೂ ಇಡೀ ಮನೆ ತೋರಿಸಿ, ಆತ್ಮೀಯತೆಯಿಂದ ಇದ್ದವರು ಸ್ನೇಹಿತ್. ಹೀಗಾಗಿ ಇವರೇ ಬೆಸ್ಟ್ ಆದರು.

ಪ್ರತಾಪ್ ಬಗ್ಗೆಯೇ ಹೆಚ್ಚು ನೆಗೆಟಿವ್ ವೋಟ್

ಡ್ರೋನ್ ಪ್ರತಾಪ್ ಬಗ್ಗೆ ಇಂಥವರಿಗೆ ಗೊತ್ತಿಲ್ಲ ಎಂದು ಹೇಳುವಂತೆಯೆ ಇಲ್ಲ. ಸೋಷಿಯಲ್ ಮೀಡಿಯಾದಲ್ಲಂತೂ ಎಲ್ಲರಿಗೂ ಗೊತ್ತು. ಇಂಟರ್‌ವ್ಯೂಗಳಲ್ಲಿ ಸಣ್ಣ ನಗುವೊಂದನ್ನಾದರೂ ಬೀರಿದ್ದಾರೆ. ಆದರೆ, ಬಿಗ್ ಬಾಸ್ ಮನೆ ಅವರಿಗೆ ಹೊಸ ಲೋಕದಂತೆ ಕಾಣಿಸಿದೆ. ಅಲ್ಲಿರುವವರನ್ನು ಯಾರನ್ನು ಮಾತನಾಡಿಸುವ ಸಾಹಸಕ್ಕೆ ಹೋಗುತ್ತಿಲ್ಲ. ತಮ್ಮದೇ ಲೋಕದಲ್ಲಿ ಇರುವ ಪ್ರತಾಪ್‌ನನ್ನು ಬಿಗ್ ಬಾಸ್ ಲೋಕಕ್ಕೆ ತರಬೇಕು ಎಂಬುದೇ ಸ್ಪರ್ಧಿಗಳ ಆಸೆ. ಹೀಗಾಗಿ ನೆಗೆಟಿವ್ ವಿಚಾರಕ್ಕೆ ಪ್ರತಾಪ್‌ನನ್ನೇ ತೆಗೆದುಕೊಂಡಿದ್ದಾರೆ.

ತನಿಷಾ ಪ್ರಭಾವಿಯಾದ್ರಾ..?

ಈ ಬಾರಿಯ ಬಿಗ್ ಬಾಸ್ ಮನೆಗೆ ಬಂದಿರುವ ಎಲ್ಲರೂ ಎಲ್ಲರಿಗೂ ಸಾಕಷ್ಟು ಪರಿಚಯವಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ. ತನಿಷಾ ಅಂತು ಎಲ್ಲರಿಗೂ ಗೊತ್ತಿರುತ್ತಾರೆ. ಇತ್ತೀಚೆಗೆ ಸಿನಿಮಾ ಒಂದರ ಪ್ರಮೋಷನ್ ವಿಚಾರವಾಗಿ ಸಿಕ್ಕಾಪಟ್ಟೆ ನೆಗೆಟಿವ್ ಆಗಿನೇ ಪ್ರಮೋಟ್ ಆಗಿದ್ದರು. ಇದರ ನಡುವೆ ತನಿಷಾ ವಾಯ್ಸ್ ಕೂಡ ಜೋರಾಗಿಯೇ ಕೇಳಿಸುತ್ತದೆ ಎಂಬುದು ಹೊಸತೇನು ಅಲ್ಲ. ಇದಕ್ಕೆ ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ಜನರ ವಿರೋಧವಿದೆ. ಡಾಮಿನೇಟ್ ಮಾಡಬೇಡಿ, ವಾಯ್ಸ್ ಸ್ವಲ್ಪ ಕಡಿಮೆ ಮಾಡಿ ಎಂದೇ ಸಲಹೆ ನೀಡಿದ್ದಾರೆ.

"ನಾನು ಸರಿ.. ನೀನು ಸರಿ" ಎಂಬ ಚರ್ಚೆ ಶುರು

ಬಿಗ್ ಬಾಸ್ ಮನೆಯಲ್ಲಿ ಅವರವರ ಅಭಿಪ್ರಾಯ ಹೇಳುವುದಕ್ಕೆ ಎಲ್ಲರಿಗೂ ಹಕ್ಕು ಇದೆ. ಹೀಗಾಗಿ ಎಲ್ಲರೂ ಅವರವರ ಅಭಿಪ್ರಾಯ ಹೇಳಿದ ಮೇಲೆ ಅದನ್ನ ಗೌರವಿಸಬೇಕು. ಹಾಗೇ ಅದರಿಂದ ತಪ್ಪುಗಳನ್ನು ತಿದ್ದುಕೊಳ್ಳುವುದಕ್ಕೆ ಆ ಅಭಿಪ್ರಾಯಗಳು ಅವಕಾಶ ಒದಗಿಸುತ್ತವೆ. ಅವರ ಅಭಿಪ್ರಾಯದ ಚರ್ಚೆಗಳು ನಡೆಯುತ್ತಿರಲಿಲ್ಲ. ಆದರೆ ಕಳೆದ ಎರಡು ಸೀಸನ್ ನಿಂದ, ಅಭಿಪ್ರಾಯ ಹೇಳುವುದೇ ತಪ್ಪು ಎಂಬಂತೆ ಆಗಿದೆ. ಈ ಬಾರಿಯ ಸೀಸನ್‌ನಲ್ಲೂ ಆ ಚರ್ಚೆ ಶುರುವಾಗಿದೆ. ತಮ್ಮ ಅಭಿಪ್ರಾಯ ಹೇಳಿದ್ದಕ್ಕೆ ಅದು ಹಾಗಲ್ಲ, ಈಗಲ್ಲ ಅಂತ ಸಮರ್ಥನೆ ಕೊಡುವುದಕ್ಕೆ ಶುರು ಮಾಡಿದ್ದಾರೆ.

More from Filmibeat

English summary
bigg boss kannada season 10 October 9th episode on changing of Opinion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X