Bigg Boss Kannada 10: ವೀಕ್ಷಕರು.. 4 ಮಂದಿ ಅತಿಥಿಗಳಿಂದಲೇ ಸ್ಪರ್ಧಿಗಳ ಆಯ್ಕೆ.. ವೇದಿಕೆ ಮೇಲೆ ಸಿಗುತ್ತೆ ಸರ್ಪ್ರೈಸ್!
ಕನ್ನಡ ಕಿರುತೆರೆಯ ಅತೀ ದೊಡ್ಡ ಇವೆಂಟ್ ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಉಳಿದಿವೆ. ಅಷ್ಟರಲ್ಲೇ ಬಿಗ್ ಬಾಸ್ ಮನೆಯಿಂದ ಒಂದರ ಹಿಂದೊಂದು ಸರ್ಪ್ರೈಸ್ ಸಿಗುತ್ತಲೇ ಇದೆ.
ಬಿಗ್ ಬಾಸ್ ಕನ್ನಡದ 10ನೇ ಸೀಸನ್ ಆಗಿರುವುದರಿಂದ ವಿಶೇಷವಾಗಿ ರಿಯಾಲಿಟಿ ಶೋಗಳನ್ನು ಡಿಸೈನ್ ಮಾಡಲಾಗಿದೆ. ಈ ಸುಳಿವನ್ನು ಕಲರ್ಸ್ ಕನ್ನಡದ ಮುಖ್ಯಸ್ಥರು ಪ್ರೆಸ್‌ಮೀಟ್‌ನಲ್ಲಿ ಇಂತಹದ್ದೊಂದು ಸುಳಿವನ್ನು ನೀಡಿದ್ದರು. ಅದೀಗ ಬಿಗ್ ಬಾಸ್ ಆರಂಭ ಆಗುವುದಕ್ಕೂ ಮುನ್ನ ಒಂದೊಂದೇ ಸಂಗತಿಗಳು ಹೊರಬಿಳುತ್ತಿವೆ.

ಈ ಬಾರಿ ಬಿಗ್ ಬಾಸ್ ಒಂದಿಷ್ಟು ಬದಲಾವಣೆಗಳನ್ನು ತಂದಿದೆ. ವೀಕ್ಷಕರಿಗೆ ರಿಯಾಲಿಟಿ ಶೋದ ವಿಶೇಷ ಅನುಭವವನ್ನು ನೀಡುವುದಕ್ಕಾಗಿಯೇ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಹಿಂದಿ ಬಿಗ್‌ಬಾಸ್‌ನ ಕೆಲವು ಅಂಶಗಳನ್ನು ಈ ಬಾರಿಗೆ ಕನ್ನಡದ ರಿಯಾಲಿಟಿ ಶೋಗಳಲ್ಲಿ ಅಳವಡಿಸಿಕೊಳ್ಳುವುದಕ್ಕೆ ಹೊರಟಿದೆ. ಹಾಗಿದ್ರೆ, ಬಿಗ್‌ಬಾಸ್‌ನಲ್ಲಿ ಏನೆಲ್ಲ ಬದಲಾವಣೆಯಾಗಿದೆ? ಈ ಬಾರಿ ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ? ಇದೆಲ್ಲವನ್ನು ತಿಳಿಯಲು ಮುಂದೆ ಓದಿ..
ಬದಲಾಯಿದೆ ಕನ್ನಡ ಬಿಗ್ ಬಾಸ್
ಬಿಗ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ಹಿಂದಿನ 9 ಸೀಸನ್‌ಗಿಂತ ವಿಭಿನ್ನವಾಗಿರುತ್ತೆ. ಅದರಲ್ಲೂ ಆಯ್ಕೆ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿಕೊಂಡಿದೆ. ಹಿಂದಿನ 9 ಸೀಸನ್‌ಗಳಂತೆ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಆಯ್ಕೆಯಾದ ಸ್ಪರ್ಧಿಗಳು ನೇರವಾಗಿ ಮನೆಯೊಳಗೆ ಎಂಟ್ರಿಕೊಡುತ್ತಿದ್ದರು. ಆದರೆ, ಈ ಬಾರಿ ಆ ರೀತಿ ನಡೆಯೋದಿಲ್ಲ. ಕನ್ನಡ ಬಿಗ್ ಬಾಸ್ ಆಯ್ಕೆ ಸಂಪೂರ್ಣ ಬದಲಾಗಿದೆ.
ವೀಕ್ಷಕರಿಂದಲೇ ಬಿಗ್‌ಬಾಸ್ ಸ್ಪರ್ಧಿಗಳ ಆಯ್ಕೆ
ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಗಳನ್ನು ಕಲರ್ಸ್ ಕನ್ನಡ ಆಯ್ಕೆ ಮಾಡಿದೆ. ಅವರೆಲ್ಲರೂ ಬಿಗ್ ಬಾಸ್ ಕನ್ನಡ 10 ವೇದಿಕೆ ಮೇಲೆ ಪ್ರತ್ಯಕ್ಷ ಆಗುತ್ತಾರೆ. ಅವರೆಲ್ಲರ ಬಿಗ್ ಬಾಸ್ ಮನೆಯೊಳಗೆ ಹೋಗೋದು ಅನುಮಾನ. ಯಾಕಂದೆರೆ, ಇಲ್ಲಿ ವೇದಿಕೆ ಮೇಲೆ ವೀಕ್ಷಕರಿಂದಲೇ ಆಯ್ಕೆ ನಡೆಯುತ್ತೆ. ವೀಕ್ಷಕರು ಸ್ಪರ್ಧಿಗಳಿಗೆ ಶೇ.50ಕ್ಕಿಂತಲೂ ವೋಟ್ ಕೊಡುತ್ತಾರೋ ಅಂತಹವರು ಬಿಗ್‌ಬಾಸ್ ಮನೆಯೊಳಗೆ ಹೋಗುತ್ತಾರೆ.
ನಾಲ್ಕು ಮಂದಿ ಅತಿಥಿಗಳು ಪ್ರತ್ಯಕ್ಷ
ಬಿಗ್ ಬಾಸ್ ಮನೆಯೊಳಗೆ ಅತಿಥಿಗಳನ್ನು ಮನೆಯೊಳಗೆ ಕಳುಹಿಸುವುದಕ್ಕೆ ಮತ್ತೊಂದು ಮಾನದಂಡವಿದೆ. ಅದಕ್ಕಾಗಿ ನಾಲ್ಕು ಮಂದಿ ಅತಿಥಿಗಳು ಪ್ರತ್ಯಕ್ಷ ಆಗಲಿದ್ದಾರೆ. ಮೂಲಗಳ ಪ್ರಕಾರ, ಹಿರಿಯ ನಟಿ ಶ್ರುತಿ, ಮಾಜಿ ಬಿಗ್ ಬಾಸ್ ವಿನ್ನರ್ ಪ್ರಥಮ್, ಮಂಜು ಪಾವಗಡ, ಚಂದನ್ ಆ ನಾಲ್ಕು ಮಂದಿ ಅತಿಥಿಗಳು. ಇವರಿಂದಲೂ ಸ್ಪರ್ಧಿಗಳ ಆಯ್ಕೆ ನಡೆಯಲಿದೆ.
ಹೋಲ್ಡ್‌ನಲ್ಲಿ ಇರೋರು ಯಾರು?
ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಸ್ಪರ್ಧಿಗಳಿಗೆ ಈಗಾಗಲೇ ವೀಕ್ಷಕರು ವೋಟ್ ಮಾಡಿದ್ದಾರೆ. ಅವರಲ್ಲಿ ಕೆಲವು ಸ್ಪರ್ಧಿಗಳು ಹೋಲ್ಡ್‌ನಲ್ಲಿ ಇಟ್ಟಿದ್ದಾರೆ ಎನ್ನಲಾಗಿದೆ. ಅವರಲ್ಲಿ ರಕ್ಷಕ್ ಬುಲೆಟ್, ಡ್ರೋಣ್ ಪ್ರತಾಪ್, ತನಿಶಾ ಕುಪ್ಪಂಡ ಹೆಸರು ಹೋಲ್ಡ್‌ನಲ್ಲಿವೆ ಅನ್ನೋ ಮಾಹಿತಿಯಿದೆ. ಆದರೆ, ಈ ಬಗ್ಗೆ ಖಚಿತಾ ಮಾಹಿತಿಯಿಲ್ಲ.


Click it and Unblock the Notifications











