Bigg Boss Kannada: ಸಂಗೀತಾರನ್ನು ಸೇವ್ ಮಾಡಲಿಲ್ವಾ ತನಿಷಾ-ಕಾರ್ತಿಕ್..? "ಕಿರುಚಬೇಡಿ ತನಿಷಾ.." ಅಂತ ಕೂಗಾಡಿದ್ದೇಕೆ?

ಬಿಗ್‌ಬಾಸ್ ಕನ್ನಡ ಸೀಸನ್‌ನಲ್ಲಿ ದಿನಕ್ಕೊಂದು ಟಾಸ್ಕ್. ದಿನಕ್ಕೊಂದು ಟ್ವಿಸ್ಟ್ ಇದ್ದೇ ಇರುತ್ತೆ. ಖುಷಿ ಖುಷಿಯಾಗಿಯೇ ಶುರುವಾಗಿದ್ದ ಈ ಸೀಸನ್ ದಿನದಿಂದ ದಿನಕ್ಕೆ ಉಗ್ರಸ್ವರೂಪವನ್ನು ತಾಳುತ್ತಲೇ ಇದೆ. ವೀಕ್ಷಕರಿಗೆ ದಿನಕ್ಕೊಂದು ಟ್ವಿಸ್ಟ್ ಕೊಡುತ್ತಲೇ ಇದೆ.

ಬಿಗ್ ಬಾಸ ಆರಂಭ ಆದಲ್ಲಿಂದ ಸಂಗೀತಾ, ಕಾರ್ತಿಕ್ ಹಾಗೂ ತನಿಷಾ ಮೂವರು ಆತ್ಮೀಯರಾಗಿದ್ದರು. ಮೂವರು ಸ್ನೇಹಿತರು ಅಂತಲೇ ಬಿಂಬಿಸಿಕೊಳ್ಳುತ್ತಿದ್ದರು. ಎಂತಹ ಸಂಕಷ್ಟಗಳು ಎದುರಾಗಲೂ ಈ ಮೂವರು ಒಬ್ಬರಿಗೊಬ್ಬರು ಬೆಂಬಲಕ್ಕೆ ನಿಂತ ಉದಾಹರಣೆಗಳು ಸಾಕಷ್ಟಿವೆ. ಅಲ್ಲದೆ ಎದುರಾಳಿಗಳನ್ನು ಒಟ್ಟಿಗೆ ಎದುರಿಸಿದ್ದರು.

Bigg Boss Kannada Season 10: Sangeetha Tanisha and Karthik Brokeup for this reason

ಇನ್ನು ಸಂಗೀತಾ ಜೈಲಿಗೆ ಹೋದ ಸಂದರ್ಭದಲ್ಲಿ ಕಾರ್ತಿಕ್, "ನಾವು ಮೂರು ಜನರೂ ಈ ಮನೆಗೆ ಬಂದ ದಿನದಿಂದಲೂ ಒಟ್ಟಿಗಿದ್ದೇವೆ. ಮುಂದೆಯೂ ಒಟ್ಟಿಗಿರುತ್ತೇವೆ. ಫ್ರೆಂಡ್‌ಗೆ ತೊಂದರೆಯಾದಾಗ ಅವರನ್ನುಬೆಂಬಲಿಸುವುದು ನನ್ನ ಕರ್ತವ್ಯ. ಅವರ ಜೊತೆ ನಾನು ನಿಂತೇ ನಿಲ್ಲುತ್ತೇನೆ" ಎಂದು ಗಟ್ಟಿ ಧ್ವನಿಯಲ್ಲೇ ಹೇಳಿದ್ದರು.

ಆದ್ರೀಗ ಸಂಗೀತಾ, ಕಾರ್ತಿಕ್ ಹಾಗೂ ತನಿಷಾ ಸ್ನೇಹ ಗಾಳಿಪಟದ ಸೂತ್ರ ಹರಿದಂತಾಗಿದೆ. ಜಿಯೋ ಸಿನಿಮಾದಲ್ಲಿ ಬೆಳಗ್ಗೆ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಈ ಮೂವರ ಸ್ನೇಹ ಮುರಿದು ಬಿದ್ದಿರೋದು ಸ್ಪಷ್ಟವಾಗಿದೆ.

ನಿನ್ನೆಯ ಎಲಿಮಿನೇಷನ್‌ ರೌಂಡ್‌ನ ಲೂಡೋ ಟಾಸ್ಕ್‌ನ ಒಂದು ಹಂತದಲ್ಲಿ ಕಾರ್ತಿಕ್ ಮತ್ತು ತನಿಷಾಗೆ ಎದುರಾಳಿ ತಂಡದಲ್ಲಿರೋ ಒಬ್ಬರನ್ನು ಸೇವ್ ಮಾಡುವ ಅವಕಾಶವಿತ್ತು. ವರ್ತೂರು ಸಂತೋಷ್ ಜೊತೆಗೂಡಿ ಒಂದು ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಎದುರಾಳಿ ತಂಡದಲ್ಲಿದ್ದ ಸಂಗೀತಾ ತನ್ನನ್ನು ಸೇವ್ ಮಾಡುತ್ತಾರೆ ಎಂದೇ ಭಾವಿಸಿದ್ದರು. ಆದರೆ, ತನಿಷಾ, ಕಾರ್ತಿಕ್ ಸಿರಿಯನ್ನು ಸೇವ್ ಮಾಡಿದ್ದರು.

More from Filmibeat

English summary
Bigg Boss Kannada: Sangeetha Tanisha and Karthik Brokeup
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X