BBK 10: ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ಸ್ನೇಹಿತ್ ಗೌಡ.. ಯಾರಿವರು?
ಬಿಗ್ ಬಾಸ್ ಕನ್ನಡ ಸೀಸನ್ ಕನ್ನಡದ ಎರಡನೇ ಅತಿಥಿಯಾಗಿ ಸ್ನೇಹಿತ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆ, ಸಿನಿಮಾ ಹಾಗೂ ಟಿವಿ ಶೋಗಳಲ್ಲಿ ಯುವ ಪ್ರತಿಭೆ ಸ್ನೇಹಿತ್ ಗೌಡ ಬ್ಯುಸಿಯಾಗಿದ್ದಾರೆ. ಇವರೇ ಈಗ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಾರೆ.
ಸ್ನೇಹಿತ್ ಗೌಡ ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಅಭಿಮಾನಿ ಕೂಡ ಹೌದು. 'ಮೈ ಆಟೋಗ್ರಾಫ್' ಸಿನಿಮಾದಿಂದ ಸುದೀಪ್ ನೋಡಬೇಕು ಅನ್ನೋ ಆಸೆ ಇಟ್ಟುಕೊಂಡಿದ್ದರು. ಹಲವು ದಿನಗಳಿಂದ ಕಿಚ್ಚ ಸುದೀಪ್ ಭೇಟಿ ಮಾಡಬೇಕು ಅನ್ನೋ ಈ ಆಸೆ ಕೊನೆಗೂ ಈಗ ಈಡೇರಿದೆ. ಒಂದೇ ವೇದಿಕೆ ಮೇಲೆ ಕಿಚ್ಚ ಸುದೀಪ್ ಎದುರು ನಿಂತು ಆಸೆಯನ್ನು ಈಡೇರಿಸಿಕೊಂಡಿದ್ದಾರೆ.

ಕನ್ನಡದ ನಟ ಸ್ನೇಹಿತ್ ಗೌಡ ಈಗ ಎರಡನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ವೀಕ್ಷಕರು ಸುಮಾರು 81 ಪರ್ಸೆಂಟ್‌ನಷ್ಟು ವೋಟ್ ಪಡೆದುಕೊಂಡು ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.
2016ರ ಸಿನಿಮಾ 'ಚಿರವಾದ ನೆನಪು'ನಲ್ಲಿಯೂ ಸ್ನೇಹಿತ್ ಗೌಡ ನಟಿಸಿದ್ದರು. 'ನಮ್ಮನೆ ಯುವರಾಣಿ' ಅನ್ನೋ ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿದ್ದಾರೆ. 2017ರಲ್ಲಿ ಕಲರ್ಸ್ ಕನ್ನಡದ ಧಾರಾವಾಹಿಯಲ್ಲಿ ಆಡಿಷನ್ ಕೊಟ್ಟಿದ್ದಾಗಿ ಸ್ನೇಹಿತ್ ಗೌಡ ಹೇಳಿಕೊಂಡಿದ್ದಾರೆ.
ನಟನಾಗಬೇಕು ಅನ್ನೋ ಆಸೆಯಿಟ್ಟುಕೊಂಡಿದ್ದಾರೆ. ಅದಕ್ಕೆ ಬೇಕಾಗಿರೋ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ವರ್ಕ್‌ಔಟ್, ಡೆಟ್ ಕ್ರೇಜ್ ಹೆಚ್ಚಿದೆ. ಸಕ್ಕರೆಯನ್ನು ಮುಟ್ಟೋದೇ ಇಲ್ಲ. ಅಪ್ಪ, ಅಮ್ಮ ಅಂದರೆ ಪಂಚ ಪ್ರಾಣ. ಅಪ್ಪ ಅಮ್ಮನನ್ನು ಬಿಟ್ಟು ಹೆಚ್ಚೆಂದರೆ ಎರಡು ಮೂರು ದಿನ ಇದ್ದ ಸ್ನೇಹಿತ್ ಗೌಡ 100 ದಿನ ಮನೆಯೊಳಗೆ ಇರುತ್ತಾರಾ? ಅನ್ನೋ ಪ್ರಶ್ನೆಯಿದೆ.


Click it and Unblock the Notifications











