Bigg Boss Kannanda 10: ಈ ಬಾರಿ ಬಿಗ್ ಬಾಸ್ ಓಟಿಟಿಗೆ ಕೋಕ್.. ಸೀದಾ ಕಲರ್ಸ್ ಕನ್ನಡದಲ್ಲಿ ಸೀಸನ್ 10!

ನೆಚ್ಚಿನ ಕಲಾವಿದರ ನೈಜ ಮುಖಗಳ ಪರಿಚಯ ಆಗೋಕೆ ಶುರುವಾಗಿದ್ದು ಬಹುಶಃ ಬಿಗ್ ಬಾಸ್ ಕಾರ್ಯಕ್ರಮ ಶುರುವಾದ್ಮೇಲೇ ಅನ್ಸುತ್ತೆ. ತೆರೆ ಮೇಲೆ ನೋಡಿ ಮೆಚ್ಚಿದ ಅಭಿಮಾನಿಗಳೆಲ್ಲಾ ತೆರೆಯ ಹಿಂದೆ, ದೈನಂದಿನ ಬದುಕಿನಲ್ಲಿ ತಾರೆಯರು ಕೂಡಾ ನಮ್ಮ ನಿಮ್ಮಂತೆಯೇ ಸಾಮಾನ್ಯ ಮನುಷ್ಯರು ಅನ್ನೋದನ್ನ ಮೊದಲ ಬಾರಿ ತೋರಿಸಿಕೊಟ್ಟ ಕಾರ್ಯಕ್ರಮ ಅದು.

ಪರಿಚಿತ ಮುಖಗಳ ಜೊತೆಗೆ ಒಂದಷ್ಟು ಹೊಸಬರು, ಸಾಮಾನ್ಯ ಜನರಿಗೆ ಗೊತ್ತಿಲ್ಲದ ಪ್ರತಿಭೆಗಳನ್ನೂ ಆರಿಸಿ ಬಿಗ್ ಬಾಸ್ ಮನೆಯೊಳಗೆ ಕಳಿಸೋಕೆ ಶುರು ಮಾಡಿದ ನಂತರವಂತೂ ಮನರಂಜನೆಗೆ ಒಂಚೂರೂ ಬರವೇ ಇರಲಿಲ್ಲ. ಈಗಂತೂ ಬಿಗ್ ಬಾಸ್ ಮನೆಯಿಂದಲೇ ಸ್ಟಾರ್‌ಗಳಾದವರ ದೊಡ್ಡ ಗುಂಪೇ ಇದೆ.

kichcha-sudeep-reality-show

ಈಗ ಯಾಕಪ್ಪಾ ಇದೆಲ್ಲಾ ಪೀಠಿಕೆ ಅಂದ್ರೆ ಎಲ್ಲರ ನೆಚ್ಚಿನ ಬಿಗ್ ಬಾಸ್ ಈಗ ವಾಪಸ್ಸಾಗ್ತಿದೆ. ಕಳೆದ ಸಲ ಮೊಟ್ಟಮೊದಲ ಬಾರಿಗೆ ಒಟಿಟಿಯಲ್ಲಿ ಬಂದ ಬಿಗ್ ಬಾಸ್ ಬೇರೆಯೇ ಹಂತಕ್ಕೆ ತಲುಪಿತ್ತು. ಅದೇ ಫಾರ್ಮುಲಾ ಈ ಬಾರಿನೂ ಮುಂದುವರೆಯುತ್ತೆ ಎನ್ನಲಾಗಿತ್ತು. ಆದರೆ, ಈ ಬಾರಿ ಬಿಗ್ ಬಾಸ್ ಓಟಿಟಿಗೆ ಕೋಕ್ ಕೊಡಲಾಗಿದೆ. ಮೊದಲು ಒಟಿಟಿ ಆ ನಂತರ ಟಿವಿಗೆ ಅನ್ನೋ ಕಾನ್ಸೆಪ್ಟ್ ಅನ್ನು ಕೈ ಬಿಟ್ಟಿದೆ ಕಲರ್ಸ್ ಕನ್ನಡ.

Actress Chaitra Hallikeri: ಬಿಗ್ ಬಾಸ್ ಲೈಫ್ ಟೈಮ್ ಅನುಭವ ಎಂದ ಚೈತ್ರ ಹಳ್ಳಿಕೆರೆ

ಈಗಾಗ್ಲೇ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ದಿನಾಂಕ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮುಂತಾದವುಗಳ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಕಲರ್ಸ್ ಕನ್ನಡ ತಂಡ ಹತ್ತನೇ ಸೀಸನ್ ಬಿಗ್ ಬಾಸ್ ಗೆ ಭರ್ಜರಿ ತಯಾರಿ ಮಾಡಿಕೊಂಡಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಸದ್ಯ ಕಲರ್ಸ್ ಕನ್ನಡ ತಂಡ 'ಅನುಬಂಧ ಅವಾರ್ಡ್ಸ್' ಕಾರ್ಯಕ್ರಮದ ತಯಾರಿಯಲ್ಲಿ ಬ್ಯುಸಿಯಾಗಿದೆ. ಇದರ ಜೊತೆ ಜೊತೆಗೆ ಬಿಗ್ ಬಾಸ್ ಸೀಸನ್ 10ಕ್ಕೆ ತೆರೆಮರೆಯಲ್ಲಿ ತಯಾರಿ ಕೂಡ ನಡೆಯುತ್ತಿದೆ. ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಈ ಅವಾರ್ಡ್ಸ್ ಕಾರ್ಯಕ್ರಮ ನಡೆಯಲಿದ್ದು ಇದು ಮುಗಿದ ನಂತರ ಕೊನೆಯ ವಾರದ ವೇಳೆಗೆ ಬಿಗ್ ಬಾಸ್ ಆರಂಭ ಆಗಬಹುದು ಎಂದು ಮೂಲಗಳು ಹೇಳುತ್ತಿವೆ.

ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಎಲ್ಲಿ ನಡೆಯುತ್ತೆ? ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆ ನಡೆಯುತ್ತಿದೆ. ಅಂದ್ಹಾಗೆ ಈ ಬಾರಿ ಕಿರುತೆರೆ ನಟಿ ನಮ್ರತಾ ಗೌಡ, 'ಹುಚ್ಚ' ಸಿನಿಮಾ ನಾಯಕಿ ರೇಖಾ, ನಟಿ ಆಶಾ ಭಟ್, ಸೋಶಿಯಲ್ ಮೀಡಿಯಾ ಸ್ಟಾರ್ ಭೂಮಿಕಾ ಬಸವರಾಜ್ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಇವರ ಜೊತೆ ಇನ್ನು ಯಾವ್ಯಾವ ರಂಗದ ಖ್ಯಾತನಾಮರು ಬರುತ್ತಾರೋ ಅನ್ನೋ ಕುತೂಹಲವಂತೂ ಜನರಲ್ಲಿ ಇದ್ದೇ ಇದೆ. ಅಭಿಮಾನಿಗಳು ಖುದ್ದು ತಾವೇ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ನಡೆಸಿಕೊಡಲಿರೋ ಈ ಕಾರ್ಯಕ್ರಮ ವೀಕ್ಷಕರಲ್ಲಿ ಸಿಕ್ಕಾಪಟ್ಟೆ ಕುತೂಹಲ ಹುಟ್ಟು ಹಾಕಿರೋದಂತೂ ಸತ್ಯ.

ಇನ್ನು ಹಿಂದಿ ಬಿಗ್ ಬಾಸ್ ಕೂಡಾ ಅಲ್ಲಿನ ಪ್ರೇಕ್ಷಕರ ನೆಚ್ಚಿನ ಶೋ. ಸಲ್ಮಾನ್ ಖಾನ್ ನಡೆಸಿಕೊಡೋ ಈ ಕಾರ್ಯಕ್ರಮ ಇತ್ತೀಚೆಗಷ್ಟೇ ಮುಗಿದಿದೆ. ಅಲ್ಲಿ ಎಲ್ವಿಶ್ ಯಾದವ್ ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಖ್ಯಾತ ನಟಿ ಪೂಜಾ ಭಟ್, ಬೇಬಿಕಾ ಧುರ್ವೆ, ಮನಿಷಾ ರಾಣಿ, ಅಭಿಶೇಕ್ ಮಲ್ಹಾನ್ ಜೊತೆ ಎಲ್ವಿಶ್ ಯಾದವ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು. ಈಗ ಎಲ್ವಿಶ್ ಹಿಂದಿ ಬಿಗ್ ಬಾಸ್‌ನ ಓಟಿಟಿ ಸೀಸನ್ 2 ರ ವಿನ್ನರ್ ಆಗಿದ್ದು ಅಭಿಶೇಕ್ ಮಲ್ಹಾನ್ ಮೊದಲ ರನ್ನರ್ ಅಪ್ ಆಗಿದ್ದಾರೆ. ಗೆದ್ದ ಎಲ್ವಿಶ್ ಯಾದವ್ 25 ಲಕ್ಷ ರೂಪಾಯಿ ಮತ್ತು ಟ್ರೋಫಿಯನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಹೀಗಾಗಿ ಕನ್ನಡದಲ್ಲೂ ಮೊದಲು ಬಿಗ್ ಬಾಸ್ ಓಟಿಟಿ ಸೀಸನ್ 2 ಮೊದಲು ಆರಂಭ ಆಗುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಫಿಲ್ಮಿಬೀಟ್‌ಗೆ ಸಿಕ್ಕಿರೋ ಮಾಹಿತಿ ಪ್ರಕಾರ, ಈ ಬಾರಿ ಕನ್ನಡದಲ್ಲಿ ಬಿಗ್ ಬಾಸ್ ಓಟಿಟಿ ಸೀಸನ್ 2 ಇರೋದಿಲ್ಲ. ನೇರವಾಗಿ ಟಿವಿಯಲ್ಲೇ ಬಿಗ್ ಬಾಸ್ ಪ್ರಸಾರ ಆಗಲಿದೆ.

More from Filmibeat

English summary
Bigg Boss ott ruled out but bigg boss season 10 will start soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X