Bigg Boss Kannada 10: 'ಬಿಗ್ ಬಾಸ್ ಕನ್ನಡ 10' ಎಲ್ಲಿ? ಯಾವಾಗ? ಯಾವ ಸಮಯಕ್ಕೆ ಪ್ರಸಾರ? ಕಂಪ್ಲೀಟ್ ಡಿಟೈಲ್ಸ್!
ಬಿಗ್ ಬಾಸ್ ರಿಯಾಲಿಟಿ ಶೋ ಭಾರತದಲ್ಲಿ ಅದ್ಭುತ ಯಶಸ್ಸನ್ನು ಕಂಡಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಕನ್ನಡ ಭಾಷೆಯಲ್ಲಿ ಅದ್ಭುತ ಯಶಸ್ಸು ಕಂಡಿದೆ. ಕನ್ನಡದ ಕಿರುತೆರೆ ವೀಕ್ಷಕರು ಕಳೆದ 9 ಸೀಸನ್‌ಗೂ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಬೆನ್ನಲ್ಲೇ ಮತ್ತೊಂದು ಸೀಸನ್ ಆರಂಭ ಆಗುತ್ತಿದೆ.
ಅಕ್ಟೋಬರ್ 8 ರಿಂದ ಅದ್ಧೂರಿಯಾಗಿ ಆರಂಭ ಆಗುತ್ತಿದೆ ಎಂದು ಮೊದಲು ಫಿಲ್ಮಿಬೀಟ್ ವರದಿ ಮಾಡಿತ್ತು. ಅಂತಯೇ ಬಿಗ್ ಬಾಸ್ ಕನ್ನಡ ಸೀಸನ್ 10 ಪ್ರೋಮೊ ಪ್ರಸಾರ ಆಗುತ್ತಿದ್ದು, ಆರಂಭದ ದಿನವನ್ನು ರಿವೀಲ್ ಮಾಡಲಾಗಿದೆ.

ಈ ಬಾರಿಯ ಬಿಗ್ ಬಾಸ್ ಸೀಸನ್ 10 ಕಳೆದ 9 ಸೀಸನ್‌ಗಳಿಗಿಂತ ಭಿನ್ನವಾಗಿರುತ್ತೆ. ಈಗಾಗಲೇ ಕಿರುತೆರೆ ವೀಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುವುದಕ್ಕೆ ಬೇಕಿರೋ ಸಕಲ ತಯಾರಿಗಳನ್ನೂ ಮಾಡಿಕೊಂಡಿದೆ. ಕಲರ್ಸ್ ಕನ್ನಡದಲ್ಲಿ ಈ ರಿಯಾಲಿಟಿ ಶೋ ಆರಂಭ ಆಗುತ್ತಿದ್ದು, ಪ್ರಸಾರದ ದಿನದ ಸಮೇತ ಪ್ರೋಮೊ ಬಿಡುಗಡೆ ಮಾಡಲಾಗಿದೆ.
ಅಕ್ಟೋಬರ್ 8 ರಿಂದ ಅದ್ಧೂರಿ ಆರಂಭ
ಕಲರ್ಸ್ ಕನ್ನಡ 'ಬಿಗ್ ಬಾಸ್ ಕನ್ನಡ ಸೀಸನ್ 10'ಕ್ಕೆ ಸಂಬಂಧಿಸಿದ ಎರಡು ಪ್ರೋಮೊಗಳನ್ನು ಬಿಡುಗಡೆ ಮಾಡಿತ್ತು. ಒಂದು ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಚಿಕ್ಕದೊಂದು ಝಲಕ್ ಕೊಟ್ಟಿದ್ದರು. ಅದಾದ ಬಳಿಕ ಸೆಪ್ಟೆಂಬರ್ 14ರಂದು ಕಿಚ್ಚ ಸುದೀಪ್ ಪ್ರೋಮೊ ರಿಲೀಸ್ ಮಾಡಲಾಗಿತ್ತು. ಆದರೆ, ಎಂದಿನಿಂದ ಪ್ರಸಾರ ಆರಂಭ ಅನ್ನೋದನ್ನು ರಿವೀಲ್ ಮಾಡಿರಲಿಲ್ಲ. ಈಗ ಅಧಿಕೃತವಾಗಿ ಅಕ್ಟೋಬರ್ 8ರಂದು ಬಿಗ್ ಬಾಸ್ ಕನ್ನಡ ಪ್ರಸಾರವನ್ನು ಆರಂಭ ಮಾಡುವುದಾಗಿ ಅನೌನ್ಸ್ ಮಾಡಲಾಗಿದೆ.
ಬಿಗ್ ಬಾಸ್ ಮನೆಯ ಆಟ ಶುರು ಯಾವಾಗ?
ಅಕ್ಟೋಬರ್ 8ರಂದು ಬಿಗ್ ಬಾಸ್ ಸೀಸನ್ 10 ಚಾಲನೆ ಸಿಗಲಿದೆ. ಎರಡು ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳನ್ನು ಕಳುಹಿಸಿ ಕೊಡಲಾಗುತ್ತೆ. ಈ ಬಾರಿ ಸುಮಾರು 17 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುತ್ತಾರೆ ಎನ್ನಲಾಗಿದೆ. ಹೀಗಾಗಿ ಇವರ ಇಂಟ್ರುಡಕ್ಷನ್ ಅನ್ನೇ ಎರಡು ದಿನ ಪ್ರಸಾರ ಮಾಡಲಾಗುತ್ತೆ. ಬಿಗ್ ಬಾಸ್ ಮನೆಯೊಳಗೆ ಅಸಲಿ ಆಟ ಅಕ್ಟೋಬರ್ 10ರಿಂದ ಆರಂಭ ಆಗಲಿದೆ.
ಬಿಗ್ ಬಾಸ್ ಎಷ್ಟು ದಿನ ಪ್ರಸಾರ?
ಬಿಗ್ ಬಾಸ್ ಕನ್ನಡ ಸೀಸನ್ 10 ಈ ಬಾರಿ ಅದ್ಧೂರಿಯಾಗಿರುತ್ತೆ. ಬಿಗ್ ಬಾಸ್ ಮನೆ ಕೂಡ ಹೊಸತು. ಹೊಸ ಸೆಟ್, ಹೊಸ ಲೋಕೇಶ್‌ನಲ್ಲಿ ಈ ಬಾರಿ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯಲಿದೆ. ಸುಮಾರು 100 ದಿನಗಳ ಕಾಲ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಇರುತ್ತಾರೆ ಎನ್ನಲಾಗಿದೆ. 15 ವಾರಗಳ ಕಾಲ ಕಿರುತೆರೆ ವೀಕ್ಷಕರಿಗೆ ಭರಪೂರ ಮನರಂಜನೆ ನೀಡಲೇಬೇಕು ಕಲರ್ಸ್ ಕನ್ನಡ ಸ್ಕೆಚ್ ಹಾಕಿದೆ.
ಓಟಿಟಿಯಲ್ಲಿ ಪ್ರಸಾರ ಆಗುತ್ತಾ?
ಬಿಗ್ ಬಾಸ್ ಸೀಸನ್ 9 ಓಟಿಟಿಯಲ್ಲಿ ಪ್ರಸಾರ ಆಗಿತ್ತು. ಇಡೀ ಎಪಿಸೋಡ್ ಅನ್ನು 24 ಗಂಟೆ ಲೈವ್ ಮಾಡಲಾಗಿತ್ತು. ಆದರೆ, ಈ ಬಾರಿ ಕೇವಲ ಟಿವಿಗಷ್ಟೇ ಬಿಗ್ ಬಾಸ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕಳೆದ ಬಾರಿಯಂತೆ ಓಟಿಟಿ ಸೀಸನ್ ಕೂಡ ಇರುವುದಿಲ್ಲ. ಹೀಗಾಗಿ ಎಲ್ಲಾ ಶ್ರಮವನ್ನು ಬಿಗ್ ಬಾಸ್ ಸೀಸನ್ 10 ಮೇಲೆ ಹಾಕಲಿದೆ ಅನ್ನೋ ಒಳಗಿನ ಸುದ್ದಿ. ಆದರೆ, ಕಳೆದ 9 ಸೀಸನ್‌ಗಿಂತ ಸೀಸನ್ 10 ವಿಭಿನ್ನವಾಗಿರುತ್ತೆ ಅನ್ನೋ ಮಾತು ಬಲವಾಗಿ ಕೇಳಿ ಬರುತ್ತಿವೆ.


Click it and Unblock the Notifications











