Tukali Santhosh Elimination: ಫಿನಾಲೆಯಲ್ಲಿ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ತುಕಾಲಿ ಸಂತೋಷ್?
ಬಿಗ್‌ಬಾಸ್ ಕನ್ನಡ 10ನೇ ಸೀಸನ್‌ನ ಗ್ರ್ಯಾಂಡ್ ಫಿನಾಲೆ ಸಂಭ್ರಮ ಶುರುವಾಗಿದೆ. ಇಂದು (ಜನವರಿ 27) ಹಾಗೂ ನಾಳೆ (ಜನವರಿ 28) ಎರಡೂ ದಿನ ಅದ್ದೂರಿ ವೇದಿಕೆಯಲ್ಲಿ ಕ್ಷಣ ಕ್ಷಣಕ್ಕೂ ರೋಚಕ ಮನರಂಜನೆ ಸಿಗೋದು ಗ್ಯಾರಂಟಿ. ಕಿಚ್ಚ ಸುದೀಪ್ ಕೂಡ ಈಗಾಗಲೇ ಫಿನಾಲೆ ರೆಡಿಯಾಗಿದ್ದು, ಜಿಯೋ ಸಿನಿಮಾ ಪ್ರೋಮೊ ಕೂಡ ರಿಲೀಸ್ ಮಾಡಿದೆ.
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ಸುದೀಪ್ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇವರೊಂದಿಗೆ ಬಿಗ್ ಬಾಸ್ ಫಿನಾಲೆಯಲ್ಲಿ ಆರು ಮಂದಿ ಸ್ಪರ್ಧಿಗಳು ಇದ್ದಾರೆ. ರಂಗುರಂಗಿನ ವೇದಿಕೆ ಮೇಲೆ ವಿಜೇತರನ್ನು ನೋಡುವುದಕ್ಕೆ ಕಾದು ಕೂತಿದೆ. ಈ ಮಧ್ಯೆ ಬಿಗ್ ಬಾಸ್ ಫಿನಾಲೆಯಲ್ಲಿ ಮನೆಯಿಂದ ಹೊರಬರುವ ಮೊದಲ ಸ್ಪರ್ಧಿ ಯಾರು? ಅನ್ನೋ ಕುತೂಹಲ ಎದ್ದಿದೆ.

ಜಿಯೊ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಿಚ್ಚ ಸುದೀಪ್ ಬೇರೆ "ಈ ಹತ್ತು ಸೀಸನ್‌ನಲ್ಲಿ ಇಷ್ಟು ಸುದ್ದಿ ಮಾಡಿದ ಸೀಸನ್ ಬೇರೆ ಇಲ್ಲ" ಅಂತ ಬೇರೆ ಹೇಳಿದ್ದಾರೆ. ವರ್ತೂರು ಸಂತೋಷ್ ಜೈಲಿಗೆ ಹೋಗಿದ್ದ ಸಂಗತಿಯನ್ನು ರಿವೀಲ್ ಮಾಡಿದ್ದಾರೆ. ವರ್ತೂರು ಹಾಗೂ ವರ್ತೂರು ಸಂತೋಷ್ ಅವರ ತಾಯಿ ಕಣ್ಣುಗಳು ಒದ್ದೆಯಾಗಿವೆ. ಈ ಮಧ್ಯೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿರೋ ಸ್ಪರ್ಧಿಯ ಬಗ್ಗೆ ಸುದ್ದಿಯೊಂದಿ ಸಿಕ್ಕಿದೆ.
ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಸಂತೋಷ್ ಇರೋದು ಗೊತ್ತೇ ಇದೆ. ಒಬ್ಬರು ತುಕಾಲಿ ಸಂತೋಷ್, ಮತ್ತೊಬ್ಬರು ವರ್ತೂರು ಸಂತೋಷ್. ಇವರಿಬ್ಬರಲ್ಲಿ ಒಬ್ಬರು ಗ್ರ್ಯಾಂಡ್ ಫಿನಾಲೆಯಲ್ಲಿ ಎಲಿಮಿನೇಟ್ ಆಗೋ ಮೊದಲ ಸ್ಪರ್ಧಿಯಾಗಿರುತ್ತಾರೆ ಅನ್ನುವ ಸುಳಿವು ಸಿಕ್ಕಿದೆ. ಸಂತು-ಪಂತು ಅಂತ ಗುರುತಿಸಿಕೊಂಡಿರೋ ಈ ಜೋಡಿಯಲ್ಲಿ ಯಾರು ಹೊರಗೆ ಬರಬಹುದು?
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿರೋ ಮೊದಲ ಸ್ಪರ್ಧಿ ತುಕಾಲಿ ಸಂತೋಷ್. ಇಂತಹದ್ದೊಂದು ಸುದ್ದಿ ಕಿರುತೆರೆ ವಲಯದಿಂದ ಫಿಲ್ಮಿಬೀಟ್‌ಗೆ ಸಿಕ್ಕಿದ್ದು, ಈಗಾಗಲೇ ಅವರು ಹೊರಬಂದಿದ್ದಾರೆ. ಈ ಸನ್ನಿವೇಶವನ್ನು ಇಂದು (ಜನವರಿ 27) ಅಥವಾ ನಾಳೆ (ಜನವರಿ 28) ಶೋನಲ್ಲಿ ರಿವೀಲ್ ಆಗುತ್ತೆ ಎನ್ನಲಾಗಿದೆ.

ಇನ್ನೊಂದು ಕಡೆ ವರ್ತೂರು ಸಂತೋಷ್‌ಗೆ ಬಿಗ್ ಬಾಸ್ ವೇದಿಕೆಯಲ್ಲಿ ಅತೀ ಹೆಚ್ಚು ವೋಟ್ ಬಂದಿದೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ವರ್ತೂರು ಸಂತೋಷ್ ಬಿಗ್ ಬಾಸ್ ಕಿರೀಟ ಗೆಲ್ಲುವ ಲಿಸ್ಟ್‌ನಲ್ಲಿ ಟಾಪ್‌ನಲ್ಲಿದ್ದಾರೆ ಎನ್ನಲಾಗಿದೆ. ಸದ್ಯ ಜಿಯೋ ಹೊರಬಿಟ್ಟಿರುವ ಪ್ರೋಮೊದಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಇಬ್ಬರನ್ನೂ ನೋಡಬಹುದು. ಹಾಗೇ ಡ್ರೋನ್ ಪ್ರತಾಪ್ ಅಮ್ಮ ಕಣ್ಣೀರು ಹಾಕಿದ ದೃಶ್ಯ ಕೂಡ ರಿವೀಲ್ ಆಗಿದೆ.


Click it and Unblock the Notifications











