Varthur Santhosh: ಹಳ್ಳಿಕಾರ್ ಒಡೆಯನ ಬಿಗ್‌ಬಾಸ್ ಜರ್ನಿ ಹೇಗಿತ್ತು? ಅದ್ಭುತ ಕ್ಷಣಗಳ್ಯಾವುವು?
ಬಿಗ್‌ಬಾಸ್ ಕನ್ನಡ ಸೀಸನ್ 10ರ ಗ್ರ್ಯಾಂಡ್ ಫಿನಾಲೆಯ ನಾಲ್ಕನೇ ರನ್ನರ್ ಅಪ್ ವರ್ತೂರು ಸಂತೋಷ್. ಇದೇ ಸೀಸನ್‌ನ ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಮನೆಯೊಳಗೆ ಹೋಗಿ ವರ್ತೂರು ಸಂತೋಷ್ ಅವರನ್ನು ಕರೆದುಕೊಂಡು ಬಂದಿದ್ದರು. ಗೆಳೆಯ ತುಕಾಲಿ ಸಂತೋಷ್ ಹಿಂದೆನೇ ವರ್ತೂರು ಸಂತೋಷ್ ಕೂಡ ಹೊರಬಂದಿದ್ದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ವರ್ತೂರು ಸಂತೋಷ್ ಅವರನ್ನು ಮನೆಯ ಸದಸ್ಯರು 'ಜೈ ಹಳ್ಳಿಕಾರ್' ಎಂದು ಘೋಷಣೆ ಕೂಗಿ ಬೀಳ್ಕೊಟ್ಟಿದ್ದರು. ಬಿಗ್‌ಬಾಸ್‌ಗೆ ಎಂಟ್ರಿ ಕೊಡುತವಾಗ "ರೈತ ಅಂದ್ರೆ ಸಗಣಿನೇ ಎತ್ಕೊಬೇಕು ಅಂತಿಲ್ಲ. ಶೋಕಿನೂ ಮಾಡ್ಬೋದು ಕೃಷಿನೂ ಮಾಡ್ಬೋದು ಅಂತ ತೋರಿಸಿಕೊಟ್ಟಿದೀನಿ" ಎನ್ನುತ್ತಲೇ ಬಿಗ್‌ಬಾಸ್ ಮನೆಯೊಳಗೆ ಹೋಗಿದ್ದರು.

ಹಳ್ಳಿಕಾರ್ ಒಡೆಯ ಎಂದೇ ಜನಪ್ರಿಯರಾಗಿರುವ ವರ್ತೂರು ಸಂತೋಷ್ ಬಿಗ್‌ಬಾಸ್ ರೇಸ್‌ನಲ್ಲಿದ್ದರು. ಇಲ್ಲಿ ನೋವು, ನಲಿವು ಎರಡನ್ನೂ ಅನುಭವಿಸಿದ್ದರು. ಈಗ 5ನೇ ರನ್ನರ್ ಅಪ್ ಆಗಿ ಹೊರಬಂದಿರೋ ವರ್ತೂರು ಬಿಗ್ ಬಾಸ್ ಮನೆಯಲ್ಲಿ ಹೇಗಿದ್ದರು? ಅನ್ನೋದನ್ನು ಜಿಯೋ ಸಿನಿಮಾ ಮೆಲುಕು ಹಾಕಿದೆ.
ಅಸಮರ್ಥರಾಗಿ ವರ್ತೂರು ಎಂಟ್ರಿ
ಬಿಗ್‌ಬಾಸ್ ಮನೆಯೊಳಗೆ ಅಸಮರ್ಥರಾಗಿ ವರ್ತೂರು ಸಂತೋಷ್ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಬಿಗ್‌ಬಾಸ್ ಮನೆಯೊಳಗೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಪರದಾಡಿದ್ದರು. ಆದರೆ, ಮೊದಲ ಕೆಲವು ವಾರ ವರ್ತೂರು ಸಂತೋಷ್ ಆಕ್ಟಿವ್ ಆಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಮೊದಲ ಕೆಲವು ವಾರ ಎಲ್ಲರೂ ನಾಮಿನೇಟ್ ಮಾಡುತ್ತಿದ್ದರು. ಬಳಿಕ ಆಕ್ಟಿವ್ ಆಗಿ ಆಟ ಆಡುವುದಕ್ಕೆ ಶುರುಮಾಡಿದ್ದರು.
ಜೈಲಿಗೆ ಹೋಗಿ ಬಂದ ವರ್ತೂರು
ವರ್ತೂರು ಸಂತೋಷ್ ಕೆಲವು ದಿನ ಬುಗ್ ಬಾಸ್ ಮನೆಯಿಂದ ಮಾಯವಾಗಿದ್ದರು. ಆಗ ಮನೆಯವರು ವರ್ತೂರು ಸಂತೋಷ್ ಮಾಯವಾಗಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದರು. ಮನೆಯವರೆಲ್ಲ ಎಲ್ಲಿಗೆ ಹೋಗಿರಬಹುದು ಅಂತ ಲೆಕ್ಕ ಹಾಕುವುದಕ್ಕೆ ಶುರು ಮಾಡಿದ್ದರು. ಆದರೆ, ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ್ದಕ್ಕೆ ವನ್ಯಜೀವಿ ರಕ್ಷಣಾ ಕಾನೂನಿನ ಪ್ರಕಾರ ಕಾನೂನುಬಾಹಿರ ಎಂಬ ಕಾರಣಕ್ಕೆ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿತ್ತು.
ಮನೆಯೊಳಗೆ ಇರಲ್ಲ ಎಂದಿದ್ದ ವರ್ತೂರು
ಜೈಲಿಗೆ ಹೋಗಿ ವಾಪಾಸ್ ಬರುತ್ತಿದ್ದಂತೆ ವರ್ತೂರು ಸಂತೋಷ್ "ನನಗೆ ಇಲ್ಲಿ ಇರಲಾಗುತ್ತಿಲ್ಲ. ದಯವಿಟ್ಟು ಹೊರಗೆ ಬಿಟ್ಟುಬಿಡಿ" ಎಂದು ಕಣ್ಣೀರು ಹಾಕಿದ್ದರು. ಮನೆಯ ಸದಸ್ಯರೆಲ್ಲರೂ ಎಷ್ಟೇ ಹೇಳಿದರೂ ಒಪ್ಪಿರಲಿಲ್ಲ. ಮನೆಯಿಂದ ಹೊರಗೆ ಹೋಗಲೇಬೇಕು ಎಂದು ಹಟ ಹಿಡಿದಿದ್ದರು. ಕೊನೆಗೆ ವರ್ತೂರು ಸಂತೋಷ್ ಅಮ್ಮ ಮನೆಯೊಳಗೆ ಬಂದು ಮನಸ್ಸು ಬದಲಾಯಿಸಿದ್ದರು.

ಸಂತು-ಪಂತು ಸ್ನೇಹ
ಬಿಗ್ ಬಾಸ್ ಜರ್ನಿಯಲ್ಲಿ ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಇಬ್ಬರ ಉತ್ತಮ ಸ್ನೇಹಿತರು ಅಂತ ಪ್ರೂವ್ ಮಾಡಿದ್ದರು. ಸಂತು-ಪಂತು ಜೋಡಿ ಅಂತಲೇ ಜನಪ್ರಿಯರಾಗಿದ್ದಾರೆ. ಈ ಜೋಡಿಯ ಬಿನ್ ಬ್ಯಾಗ್ ಮಾತುಗಳಿಗೆ ಹೆಚ್ಚು ಜನಪ್ರಿಯವಾಗಿದೆ.
ಬೆಂಕಿಯ ಜೊತೆಗೆ ಸರಸ!:
ಬಿಗ್‌ಬಾಸ್ ಮನೆಯ ಬೆಂಕಿ ಎಂದೇ ಜನಪ್ರಿಯಾಗಿದ್ದ ತನಿಷಾ ಜೊತೆಗಿನ ವರ್ತೂರು ಒಡನಾಟ ಈ ಸೀಸನ್‌ನ ಹೈಲೈಟ್. ಇಬ್ಬರೂ ಸೃಷ್ಟಿಸಿದ ರಸಪ್ರಸಂಗಗಳು ಸಖತ್ ಮನರಂಜನೆ ನೀಡಿವೆ. ತನಿಷಾ, ವರ್ತೂರು ತಮಾಷೆಯ ಟ್ರ್ಯಾಕ್‌ಗಳು ಸಖತ್ ಹಿಟ್ ಆಗಿತ್ತು. ಶಾಲೆಯ ಟಾಸ್ಕ್‌ನಲ್ಲಿ ವರ್ತೂರು "ಪಟಾಕಿ ಯಾರದ್ದಾದ್ರೂ ಆಗಿರಲಿ, ಹಚ್ಚೋರು ನಾವಾಗಿರಬೇಕು" ಎಂಬ ಡೈಲಾಗ್ ಸಿಕ್ಕಾಪಟ್ಟೆ ಫೇಮಸ್.
ಕ್ಯಾಪ್ಟನ್ ಎಂಬ ಕನಸು:
ಕ್ಯಾಪ್ಟನ್ ಆಗಬೇಕು ಎಂದು ಜಿದ್ದಿಗೆ ಬಿದ್ದವರೇನಲ್ಲ ವರ್ತೂರು. ಆದರೆ ಅವರಿಗೂ ಕ್ಯಾಪ್ಟನ್ ಆಗುವ ಅವಕಾಶ ಬಂದಿತ್ತು. ಆದರೆ, ಅವರು ಗೆದ್ದಿದ್ದು ವಿನಯ್ ಸಹಾಯದಿಂದ ಅನ್ನೋದು ಕಿಚ್ಚು ಸುದೀಪ್ ರಿವೀಲ್ ಮಾಡಿದ್ದರು. "ಕ್ಯಾಪ್ಟನ್‌ಗೆ ಗೌರವ ಕೊಡುವ ಅಭ್ಯಾಸ ಇಲ್ಲದ ಈ ಮನೆಗೆ ಕ್ಯಾಪ್ಟನ್ ಅಗತ್ಯ ಇಲ್ಲ" ಎಂದು ಬಿಗ್‌ಬಾಸ್ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಕ್ಯಾಪ್ಟನ್ ರೂಮ್ ಬೀಗ ಹಾಕಲಾಗಿತ್ತು. ಕ್ಯಾಪ್ಟನ್ ರೂಮಿಗೆ ಬೀಗ ಹಾಕಿಸಿದ ದಾಖಲೆಯೂ ವರ್ತೂರು ಅವರಿಗೆ ಸಲ್ಲುತ್ತೆ.
ಟಿಕೆಟ್ ಟು ಫಿನಾಲೆ:
ಟಿಕೆಟ್ ಟು ಫಿನಾಲೆ'ಯಲ್ಲಿ ವರ್ತೂರು ಸಂತೋಷ್ ತೋರಿದ ಗೇಮ್ ಫರ್ಪಾರ್ಮೆನ್ಸ್ ನೋಡಿ ಮನೆಯ ಜನರೆಲ್ಲ ಬೆರಗಾಗಿದ್ದರು. ಹಲವು ಆಟಗಳಲ್ಲಿ ಭಾಗವಹಿಸಿ ಕೆಲವನ್ನು ಗೆದ್ದು ಎಲ್ಲರಿಗಿಂತ ಮೊದಲು 200 ಪಾಯಿಂಟ್ಸ್ ಪಡೆದುಕೊಂಡಿದ್ದರು. ಇದರಿಂದಾಗಿ ಒಂದು ಹಂತಕ್ಕೆ ವರ್ತೂರು ಅವರೇ ಎಲ್ಲರಿಗಿಂತ ಮೊದಲು ಫಿನಾಲೆ ಪ್ರವೇಶಿಸುತ್ತಾರೇನೋ ಎಂಬ ಊಹೆಯೂ ಹುಟ್ಟಿತ್ತು. ಆದರೆ ನಂತರ ಪ್ರತಾಪ್, ಸಂಗೀತಾ ಮತ್ತು ನಮೃತಾ ವರ್ತೂರು ಅವರನ್ನ ಹಿಂದಿಕ್ಕಿದರು. ಆದರೆ ಫಿನಾಲೆಯಲ್ಲಿ 4ನೇ ರನ್ನರ್ ಅಪ್ ಆಗಿ ಹೊರಬಂದಿದ್ದಾರೆ.


Click it and Unblock the Notifications











