BBK 10: ಹುಲಿ ಉಗುರು ವಿವಾದ.. ಬಿಗ್ ಬಾಸ್ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ವರ್ತೂರು ಸಂತೋಷ್

ಬಿಗ್ ಬಾಸ್‌ ಕನ್ನಡ ಸೀಸನ್ 10ನಲ್ಲಿ ನಿರೀಕ್ಷೆಗೂ ಮೀರಿದ ಘಟನೆ ನಡೆದಿತ್ತು. ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯೊಳಗಿಂದಲೇ ಸ್ಪರ್ಧಿ ವರ್ತೂರು ಸಂತೋಷ್‌ರನ್ನು ಅರಣ್ಯ ಅಧಿಕಾರಿಗಳು ಅರೆಸ್ಟ್ ಮಾಡಿದ್ದರು. ಇದು ಬಿಗ್ ಬಾಸ್ ಮನೆಯ ಹೊರಗೆ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಬಂದು ಸ್ಪರ್ಧಿಯೊಬ್ಬರನ್ನು ಬಂಧಿಸಲಾಗಿತ್ತು. ಸದ್ಯ ವರ್ತೂರು ಸಂತೋಷ್ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಇದೇ ಬೆನ್ನಲ್ಲೇ ಬಿಗ್ ಬಾಸ್ ಮನೆಯೊಳಗೆ ಮತ್ತೆ ಪ್ರವೇಶ ಮಾಡುತ್ತಾರಾ? ಅನ್ನೋ ಪ್ರಶ್ನೆ ಎದ್ದಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

Bigg Boss Kannada Season 10: Vartur Santhosh back to big boss house

ವರ್ತೂರು ಸಂತೋಷ್ ಮತ್ತೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ನಿನ್ನೆಯಷ್ಟೇ (ಅಕ್ಟೋಬರ್ 29) ಕಿಚ್ಚ ಸುದೀಪ್ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುವ ಬಗ್ಗೆ ಚಿಕ್ಕದೊಂದು ಸುಳಿವು ನೀಡಿದ್ದರು. ಅದೀಗ ಸತ್ಯವಾಗಿದೆ. ವರ್ತೂರು ಸಂತೋಷ್ ರೀ ಎಂಟ್ರಿ ಕೊಟ್ಟಿರುವ ದೃಶ್ಯಗಳನ್ನು ಜಿಯೋ ಸಿನಿಮಾ ಪ್ರಸಾರ ಮಾಡುತ್ತಿದೆ.

ಕೆಲವು ದಿನಗಳ ಹಿಂದಷ್ಟೇ ಅನಿರೀಕ್ಷಿತವಾಗಿ ಬಿಗ್‌ಬಾಸ್ ಮನೆನಿಂದ ಹೊರ ಹೋಗಿದ್ದ ವರ್ತೂರ್ ಸಂತೋಷ್ ಮತ್ತೆ ಬಿಗ್ ಬಾಸ್ ಮನೆಯೊಳಗೆ ಅಚ್ಚರಿ ಎಂಬಂತೆ ಎಂಟ್ರಿ ಕೊಟ್ಟಿದ್ದಾರೆ. ಇದು ಬಿಗ್ ಬಾಸ್ ಮನೆಯಲ್ಲಿದ್ದ ಸದಸ್ಯರಿಗೂ ಬಿಗ್ ಶಾಕ್ ಆಗಿದೆ.

ಹುಲಿ ಉಗುರು ಧರಿಸಿದ ಆರೋಪದ ಮೇರೆಗೆ ವರ್ತೂರು ಸಂತೋಷ್ ಅವರನ್ನು ಅರಣ್ಯ ಅಧಿಕಾರಿಗಳು ವನ್ಯ ಜೀವಿ ಕಾಯ್ದೆ ಅಡಿ ಬಂಧಿಸಲಾಗಿತ್ತು. ಇದು ಮನೆಯೊಳಗೆ ಇರುವ ಸ್ಪರ್ಧಿಗಳಿಗೂ ಗೊತ್ತಿರಲಿಲ್ಲ. ಇಷ್ಟು ನಾಪತ್ತೆಯಾಗಿದ್ದ ವರ್ತೂರು ಸಂತೋಷ್ ಪ್ರತ್ಯಕ್ಷ ಆಗಿದ್ದಕ್ಕೆ ಮನೆಯ ಸದಸ್ಯರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕಿದೆ.

ಬಿಗ್ ಬಾಸ್ ಮನೆಯೊಳಗೆ ಗಲಾಟೆ

ಕಿಚ್ಚ ಸುದೀಪ್ ಸಲಹೆ ನೀಡುತ್ತಿದ್ದಂತೆ ನಾಲ್ಕನೇ ವಾರಕ್ಕೆ ಸ್ಪರ್ಧಿಗಳು ಎಚ್ಚರಕೊಂಡಿದ್ದಾರೆ. ಇಡೀ ಮನೆಯೇ ರಣರಂಗವಾಗುತ್ತಿದೆ. ಸ್ಪರ್ಧಿಗಳ ಒಬ್ಬ ಮೇಲೆ ಒಬ್ಬರು ಆರೋಪಗಳನ್ನು ಮಾಡುವುದಕ್ಕೆ ನಿಂತಿದ್ದಾರೆ. ಕಾರ್ತಿಕ್ ಅಂತೂ ಫುಲ್ ಆಕ್ಟೀವ್ ಆಗಿದ್ದು, ಮನೆ ಮಂದಿಯೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ಮನೆಯ ಕ್ಯಾಪ್ಟನ್ ಅನ್ನೇ ಬಿಟ್ಟಿಲ್ಲ.

ಕಳೆದ ವಾರ ಮನೆಯ ಕ್ಯಾಪ್ಟನ್ ಆಗಿರುವ ನೀತೂ ಜೊತೆ ಕಾರ್ತಿಕ್ ಜಗಳಕ್ಕೆ ನಿಂತಿದ್ದಾರೆ. ನೀತೂ ಕಾರ್ತಿಕ್‌ಗೆ 'ಹಿತ್ತಾಳೆ ಕಿವಿ' ಎಂದು ಗದರಿದ್ದಾರೆ. ಜೊತೆಗೆ "ನಾನು ಒಂದ್ಸಲ ಹೇಳಿದ್ಮೇಲೆ ಮುಗಿದೋಯ್ತು ಎಂದೂ ಖಡಕ್ ವಾರ್ನಿಂಗ್" ಕೊಟ್ಟಿದ್ದಾರೆ. ಮಾತಿಗೆ ಮಾತು ಬೆಳೆದು ಕಾರ್ತಿಕ್ ನೀವು ಕ್ಯಾಪ್ಟನ್. ಸಮಸ್ಯೆಯನ್ನು ಬಗೆಹರಿಸಿಕೊಡಲು ಸಾಧ್ಯವಾದರೆ ಬಗೆಹರಿಸಿ. ಇಲ್ಲವಾದರೆ ಮುಚ್ಕೊಂಡು ಕೂತ್ಕೊಂಡ್ ಬಿಡಿ' ಎಂದು ಕಿರುಚಾಡಿದ್ದಾರೆ.

More from Filmibeat

English summary
BBK 10: Vartur Santhosh back to big boss house
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X