BBK 10: ಆಟ ಹೋಗಿ ಹೊಡೆದಾಟ ಆಯ್ತಾ? ವಿನಯ್- ಕಾರ್ತಿಕ್ ಮಾತಿನ ಚಕಮಕಿ.. ಬೀಪ್ ಹಾಕೋವರೆಗೂ ಬಂದ್ಬಿಡ್ತು!

ಸದ್ಯಕ್ಕೀಗ ಕಿರುತೆರೆಯಲ್ಲಿ ಬಿಗ್ ಬಾಸ್ ಸೀಸನ್ ನಡೆಯುತ್ತಿದೆ. ಕನ್ನಡ, ತಮಿಳು, ಹಿಂದಿಯಲ್ಲಿ ಬಿಗ್ ಬಾಸ್ ಶುರುವಾಗಿದೆ. ಆದರೆ, ಕನ್ನಡದಲ್ಲಿ ಇವರೆಲ್ಲರಿಗಿಂತ ಒಂದು ಲೆವೆಲ್‌ಗೆ ಹೆಚ್ಚು ಸದ್ದು ಮಾಡುತ್ತಿದ್ದೆ ಅಂತಾನೇ ಹೇಳಬಹುದು. ಬಿಗ್ ಬಾಸ್ ಕನ್ನಡ ಸೀಸನ್ 10ನಲ್ಲಿ ಟಾಸ್ಕ್‌ಗಳು ಸದ್ದು ಮಾಡುತ್ತಿವೆಯೋ.. ಇಲ್ಲ ಟಾಸ್ಕ್ ಮಾಡುತ್ತಿರುವ ಸ್ಪರ್ಧಿಗಳು ಟಾಸ್ಕ್ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ.

ಬೆಳಂಬೆಳಗ್ಗೆನೇ ಸಂಗೀತಾ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದರು ಅನ್ನೋ ಗೊಂದಲ ಸೃಷ್ಟಿಯಾಗಿತ್ತು. ಸಂಗೀತಾ ಕೂಡ ಕಣ್ಣೀರು ಹಾಕಿ ಒಂದಿಷ್ಟು ಸೀನ್ ಕ್ರಿಯೇಟ್ ಮಾಡಿದ್ದರು. ಅವರ ಕಥೆ ಆಮೇಲೆ ಏನಾಯ್ತು ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಅಷ್ಟರಲ್ಲೇ ಇನ್ನೊಂದು ಮತ್ತೊಂದು ಟಾಸ್ಕ್ ಕೊಟ್ಟು ಆಗಿದೆ. ಅಲ್ಲೊಂದಿಷ್ಟು ಹಂಗಾಮನೂ ನಡೆದಿದೆ.

Bigg Boss Kannada Season 10 Vinay and Karthik fight during durty game task

ಇತ್ತೀಚೆಗೆ ಜಿಯೋ ಸಿನಿಮಾ ರಿಲೀಸ್ ಹೊಚ್ಚ ಹೊಸ ಪ್ರೋಮೊ ರಿಲೀಸ್ ಮಾಡಿದೆ. ಇದರಲ್ಲಿ ಆಟ ಹೋಗಿ ಹೊಡೆದಾಟ ಶುರುವಾಗೋ ಹಾಗೇ ಕಾಣಿಸುತ್ತಿದೆ. ವಿನಯ್ ಹಾಗೂ ಕಾರ್ತಿಕ್ ನಡುವೆ ಮಾತಿನ ಚಕಮಕಿ ನಡೆದಿದೆ. ಒಂದು ಹಂತಕ್ಕೆ ಕೈ ಕೈ ಮಿಲಾಯಿಸುವ ಹಂತಕ್ಕೂ ಬಂದು ನಿಂತಿದ್ದಾರೆ. ಅಷ್ಟಕ್ಕೂ ಇದೆಲ್ಲ ಯಾಕಾಯ್ತು? ಏನಕ್ಕಾಗಿ ಆಯ್ತು? ಅನ್ನೋದು ತಿಳಿಯಲು ಮುಂದೆ ಓದಿ..

ಬಿಗ್‌ಬಾಸ್ ಮನೆಯ ಸದಸ್ಯರಿಗೆಲ್ಲ ದಿನಕ್ಕೊಂದು ಟಾಸ್ಕ್ ಸಿಕ್ಕೇ ಸಿಗುತ್ತೆ. ಪ್ರತಿದಿನ ಒಂದಲ್ಲ ಒಂದು ಟಾಸ್ಕ್ ಮಾಡಲೇ ಬೇಕು. ಅದೇ ಟಾಸ್ಕ್. ಇಂದು (ನವೆಂಬರ್ 22) ಕೂಡ 'ಮಣ್ಣಿನಲ್ಲಿ ಬಣ್ಣದ ಹೂಗಳನ್ನು ನೆಟ್ಟು, ಎದುರಾಳಿ ತಂಡದಿಂದ ಅವುಗಳನ್ನು ಕಾಪಾಡಿಕೊಳ್ಳಬೇಕು' ಅನ್ನೋ ಟಾಸ್ಕ್ ನೀಡಲಾಗಿತ್ತು. ಇಲ್ಲೇ ಆಗಿದ್ದು ಯಡವಟ್ಟು.

ಹೂವಿನ ಆಟದಿಂದ ಏನೋ ಟಾಸ್ಕ್ ಶುರುವಾಗಿತ್ತು. ಎಲ್ಲವೂ ಆರಾಮಾಗಿ ಶುರುವಾಗಿದ್ದ ಟಾಸ್ಕ್ ಸ್ವಲ್ಪ ಹೊತ್ತಿನಲ್ಲೇ ಉಗ್ರಸ್ವರೂಪವನ್ನು ತಾಳಿತ್ತು. ಇಲ್ಲಿ ಒಂದು ತಂಡದ ಹೂವುಗಳನ್ನು ಇನ್ನೊಂದು ತಂಡ ಕಿತ್ತುಕೊಳ್ಳಬೇಕಿತ್ತು. ಈ ವೇಳೆ ವಿನಯ್ ಹಾಗೂ ಕಾರ್ತಿಕ್ ನಡುವೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ಕೈ ಕೈ ಮಿಲಾಯಿಸುವವರೆಗೂ ಬಂದಿದೆ.

ಇಬ್ಬರೂ ಎಳೆದಾಡಿಕೊಳ್ತಿರೋದು, ಜಗಳ ಆಡುತ್ತಿರುವಾಗಲೇ ತುಕಾಲಿ ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಇಬ್ಬರೂ ಮಧ್ಯೆ ಸಿಕ್ಕಿದ್ದಾರೆ. ಅವರನ್ನೂ ನೆಲಕ್ಕುರುಳಿಸಿ ಹೂವುಗಳನ್ನು ಹಾಳು ಮಾಡಿದ್ದಾರೆ. ಈ ವೇಳೆ ಕಾರ್ತಿಕ್ ಎದುರಾಳಿ ತಂಡದ ಹೂಬುಟ್ಟಿಯನ್ನು ಹೊತ್ತೊಯ್ದಿದ್ದಾರೆ. ಅವರನ್ನು ಹಿಂಬಾಲಿಸಿದ ವಿನಯ್ ಎಳೆದಾಡಿದ್ದಾರೆ.

ಮೈಕಲ್ ಹೂಬುಟ್ಟಿ ಗಟ್ಟಿಯಾಗಿ ಹಿಡಿದುಕೊಂಡರೆ ಉಳಿದವರೆಲ್ಲ ಅವರ ಮೇಲೆ ಬಿದ್ದಿದ್ದಾರೆ. ಹೀಗೆ ಶುರುವಾಗಿದ್ದು ಮಾತಿಗೆ ಮಾತು ಬೆಳೆದಿದೆ. ಮಾತಿನ ಚಕಮಕಿ ಬೀಪ್ ಹಾಕೋವರೆಗೂ ಬಂದು ನಿಂತಿದೆ. "ಬಾರೋ ಅಂದ್ರೆ ಬರದೆ ಇರ್ತೀವಾ ನಾವು?.. ಇದು ನಿಮ್ಮ ಆಟ... ನಿಮ್.. ಏನೋ ನಿಮ್... ಹೇಳೋ... ಮುಂದಕ್ಕೆ ಹೇಳೋ... ಅಗ್ರೆಸಿವ್ ಆಗಿ ಆಡ್ಬೇಕಾ? ಡರ್ಟಿ ಗೇಮ್ ನಾನ್ ತೋರಿಸ್ತೀನಿ" ಎಂದು ಕಿತ್ತಾಡಿದ್ದಾರೆ.

More from Filmibeat

English summary
Bigg Boss Kannada Season 10 Vinay and Karthik fight during durty game task.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X