BBK 10: ಈ ವಾರ ಯಾರು ಉತ್ತಮ? ಯಾರು ಕಳಪೆ? ವಿನಯ್-ತನಿಷಾ ನಡುವೆ ಮಾತಿನ ಚಕಮಕಿ!
ಈ ಬಾರಿ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಇಂಟ್ರೆಸ್ಟಿಂಗ್ ಆಗಿದೆ. ಸ್ಪರ್ಧಿಗಳು ಕಿರುತೆರೆ ವೀಕ್ಷಕರಿಗೆ ಸಖತ್ ಮನರಂಜನೆಯನ್ನು ಕೊಡುತ್ತಿದ್ದಾರೆ. ಇನ್ನೊಂದು ಕಡೆ ಹ್ಯಾಪಿ ಬಿಗ್‌ಬಾಸ್ ಅನ್ನೋ ಟ್ಯಾಗ್ ಲೈನಿಂದಲೇ ಈ ಬಾರಿ ರಿಯಾಲಿಟಿ ಶೋ ಆರಂಭ ಆಗಿದೆ. ಹೀಗಾಗಿ ದಿನದಿಂದ ದಿನಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 10 ವೀಕ್ಷಕರ ಮನಸ್ಸು ಸೆಳೆಯುತ್ತಿದೆ.
ಆಟ-ಕಿತ್ತಾಟ, ಕಿರುಚಾಟ-ಹೋರಾಟ, ವಾದ-ವಿವಾದ ಎಲ್ಲವೂ ಈ ಬಾರಿನೂ ಇದೆ. ಕೆಲವೊಮ್ಮೆ ಬಿಗ್ ಬಾಸ್ ಸ್ಪರ್ಧಿಗಳು ಕಣ್ಣೀರು ಹಾಕಿದ್ದು ಕೂಡ ಇದೆ. ಇನ್ನೊಂದು ಪ್ರೇಮ ಪ್ರಕರಣಗಳು ಕೂಡ ನೋಡುವುದಕ್ಕೆ ಸಿಗುತ್ತಿವೆ.

ಹೀಗೇ 100 ದಿನಗಳ ಈ ಮೈಂಡ್ ಗೇಮ್ ಆಟದಲ್ಲಿ ಎರಡು ವಾರ ಕಳೆದು ಹೋಗಿದೆ. ಮತ್ತೊಂದು ವೀಕೆಂಡ್ ಬಂದಿದೆ. ಕಿಚ್ಚ ಪಂಚಾಯಿತಿ ಮತ್ತೆ ಆರಂಭ ಆಗುತ್ತಿದೆ. ಈ ವಾರ ಕಿಚ್ಚನಿಂದ ಯಾರು ಭೇಷ್ ಎನಿಸಿಕೊಳ್ಳುತ್ತಾರೆ? ಯಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ? ಅನ್ನೋ ಕುತೂಹಲದ ಮಧ್ಯೆನೇ ಉತ್ತಮ ಯಾರು? ಕಳಪೆ ಯಾರು ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ.
ಕಿಚ್ಚನ ಪಂಚಾಯ್ತಿಗೆ ಸ್ಪರ್ಧಿಗಳ ತಯಾರಿ
ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಆಗಮನ ಆಗುತ್ತೆ. ಒಂದು ವಾರದಲ್ಲಿ ನಡೆದ ಪ್ರಮುಖ ಘಟನೆಗಳ ಬಗ್ಗೆ ಸಂಪೂರ್ಣ ಚರ್ಚೆಯಾಗುತ್ತೆ. ಯಾರು ಹೇಗೆ ನಡೆದುಕೊಂಡಿದ್ದಾರೆ? ಯಾರು ಚೆನ್ನಾಗಿ ಆಡಿದ್ದಾರೆ? ಯಾರು ಕೆಟ್ಟದಾಗಿ ಆಡಿದ್ದಾರೆ? ಅನ್ನುವ ಬಗ್ಗೆ ಚರ್ಚೆಯಾಗುತ್ತೆ. ಕೆಲವರಿಗೆ ಕಿಚ್ಚ ಭೇಷ್ ಎನ್ನುತ್ತಾರೆ? ಮತ್ತೆ ಕೆಲವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಹೀಗಾಗಿ ಕಿಚ್ಚ ಪಂಚಾಯಿತಿ ಸಖತ್ ಇಂಟ್ರೆಸ್ಟಿಂಗ್ ಆಗಿರುತ್ತೆ. ಆದ್ರೀಗ ಅದಕ್ಕೂ ಮುನ್ನವೇ ವಿನಯ್ ಹಾಗೂ ತನಿಷಾ ನಡುವೆ ಕಿತ್ತಾಟ ಶುರುವಾಗಿದೆ.
ಯಾರು ಉತ್ತಮ? ಯಾರು ಕಳಪೆ?
ಕಿಚ್ಚನ ಪಂಚಾಯ್ತಿ ನಡೆಯುವ ಮುನ್ನವೇ ಯಾರು ಉತ್ತಮ? ಯಾರು ಕಳಪೆ ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ. ಮನೆಯವರೇ ಈ ಪ್ರಶ್ನೆಗೆ ಉತ್ತರವನ್ನೂ ಕಂಡುಕೊಂಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳು ತಮ್ಮಲ್ಲೇ ಉತ್ತಮ ಯಾರು? ಕಳಪೆ ಯಾರು? ಅಂತ ಆಯ್ಕೆ ಮಾಡಿಕೊಂಡಿದ್ದಾರೆ. ಇದರ ಝಲಕ್ ಜಿಯೋ ಸಿನಿಮಾದಲ್ಲಿ ಪ್ರಸಾರ ಆಗಿದೆ. ಈ ವಿಚಾರಕ್ಕೆ ತನಿಷಾ ಹಾಗೂ ವಿನಯ್ ನಡುವೆ ಮಾತಿನ ಚಕಮಕಿ ನಡೆದಿದೆ. ಅದೇನು? ಅಂತ ತಿಳಿಯಲು ಮುಂದೆ ಓದಿ.

ಈ ವಾರ ಕಳಪೆ ಯಾರು?
ಈ ವಾರ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಯಾರು? ಕಳಪೆ ಯಾರು? ಅನ್ನೋ ವಿಚಾರಕ್ಕೆ ವಿನಯ್ ಹಾಗೂ ತನಿಷಾ ನಡುವೆ ಮಾತಿನ ಚಕಮಕಿ ನಡೆದಿದೆ. ತನಿಷಾರನ್ನು ವಿನಯ್ ಈ ವಾರ ಅತ್ಯಂತ ಕಳಪೆ ಅಂತ ಹೇಳಿದ್ದಾರೆ. ಇದು ತನಿಷಾ ಕೋಪಕ್ಕೆ ಕಾರಣವಾಗಿದೆ. ವಿನಯ್ ಹಾಗೂ ತನಿಷಾ ನಡುವೆ ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ವಾಗ್ಯುದ್ಧ ನಡೆದಿದೆ. ಹೀಗಾಗಿ ಇಂದಿನ ಬಿಗ್ ಬಾಸ್ ಎಪಿಸೋಡ್ ವೀಕ್ಷಕರಿಗೆ ಮಜಾ ಕೊಡಬಹುದು.
ತನಿಷಾ ತಿರುಗೇಟು
ವಿನಯ್ ಕಳಪೆ ಪಟ್ಟಿಗೆ ತನಿಷಾ ಹೆಸರು ಸೇರಿಸಿದ್ದಕ್ಕೆ ನಟಿ ತಿರುಗೇಟು ನೀಡಿದ್ದಾರೆ. " ನಾನು ಅಡುಗೆ ಮನೆಯಲ್ಲಿ ಕೆಲಸ ಮಾಡಿದ್ದು ಕಾಣಿಸ್ಲಿಲ್ವಾ?" ಎಂದು ತನಿಷಾ ಪ್ರಶ್ನೆ ಮಾಡಿದ್ದಾರೆ. ಆಗ ವಿನಯ್ "ಮನೇಲಿ ಅವರ ಸೌಂಡ್ ಜೋರಿತ್ತು" ಎಂದು ಹೇಳಿದ್ದಾರೆ. ಆದರೆ, ತನಿಷಾ ಅಷ್ಟೇ ಖಡಕ್ ಆಗಿ "ನಿಮ್ಮ ಸೌಂಡ್ ಇರ್ಲಿಲ್ವಾ" ಎಂದು ತಿರುಗಿ ಪ್ರಶ್ನೆ ಮಾಡಿದ್ದಾರೆ. ಕೊನೆಯಲ್ಲಿ ಜೈಲಿನ ಗೇಟ್ ಓಪನ್ ಆಗಿದೆ. ಹಾಗಾದ್ರೆ ಜೈಲಿನೊಳಗೆ ಬಂಧಿಯಾದ ಸ್ಫರ್ಧಿ ಯಾರು ಎಂಬ ಪ್ರಶ್ನೆಗೆ ಇಂದಿನ ಎಪಿಸೋಡ್‌ನಲ್ಲಿ ಉತ್ತರ ಸಿಗಬಹುದು.


Click it and Unblock the Notifications











