BBK 10: ಬಿಗ್‌ಬಾಸ್ ಮನೆಯಲ್ಲಿ ಏನು ನಡೀತಿದೆ..? ಇಶಾನಿ ಕಣ್ಣ ಸಲುಗೆಗೆ ಕ್ಲೀನ್ ಬೋಲ್ಡ್ ಆಗಿದ್ದಾರಾ ಮೈಕಲ್?
ಬಿಗ್ ಬಾಸ್ ಮನೆಯಂದರೆ ಹಾಗೇ ವಿಭಿನ್ನ ವ್ಯಕ್ತಿತ್ವಗಳು ಎಲ್ಲರೊಂದಿಗೂ ಹೊಂದಾಣಿಕೆ ಮಾಡಿಕೊಂಡು ಹೋಗುವುದಕ್ಕೆ ಸಾಹಸ ಮಾಡುತ್ತಲೇ ಇರುತ್ತವೆ. ಹೊರಗಿನ ಪ್ರಪಂಚವನ್ನು ಬಿಟ್ಟು ತಮ್ಮ ಜೊತೆಗಿರುವವರನ್ನೇ ತಮ್ಮ ಪ್ರಪಂಚ ಎಂದುಕೊಂಡಿರುತ್ತಾರೆ. ಅದಕ್ಕೆ ಬಿಗ್ ಬಾಸ್ ಒಂಥರಾ ಮಜಾ ಅನಿಸೋದು.
ಬಿಗ್‌ಬಾಸ್ ಕೊಟ್ಟ ಟಾಸ್ಕ್ ಮಾಡೋದು, ಆಟ ಆಡೋದು, ಮೈಂಡ್ ಗೇಮ್, ಮುನಿಸು, ಕಿತ್ತಾಟ, ಡೈಲಾಗ್ ಬಿಡೋದು ಇವೆಲ್ಲವೂ ಇದ್ದೇ ಇರುತ್ತವೆ. ಇನ್ನು ಕೆಲವೊಮ್ಮೆ ಕಿತ್ತಾಡಿಕೊಂಡವರೇ ಮತ್ತೆ ಒಂದಾಗಿ ಸಪೋರ್ಟ್ ಮಾಡಿದ್ದೂ ಇದೆ. ಈ ಮಧ್ಯೆ ಕೆಲವು ಜೋಡಿಗಳ ಮಧ್ಯೆ ಪ್ರೀತಿನೂ ಚಿಗುರಿರುತ್ತೆ.

ಪ್ರತಿ ಬಿಗ್‌ಬಾಸ್‌ನಲ್ಲೂ ಯಾರಾದರೂ ಜೋಡಿಯಾಗಿಯೇ ಮನೆಯಿಂದ ಆಚೆ ಬರುತ್ತಾರೆ. ಇದು ಉದಾಹರಣೆ ಸಮೇತ ಕಣ್ಮುಂದೆನೇ ಇದೆ. ಈಗ ಬಿಗ್ ಬಾಸ್ ಸೀಸನ್ 10 ಆರಂಭ ಆಗಿದೆ. ಆರಂಭ ಆದ ಮೊದಲ ವಾರದಲ್ಲೇ ಇಶಾನಿ ಹಾಗೂ ಮೈಕಲ್ ನಡುವೆ ಏನೋ ನಡೀತಿದೆ ಅನ್ನೋ ಅನುಮಾನ ಮೂಡಿದೆ. ಅಷ್ಟಕ್ಕೂ ಬಿಗ್ ಬಾಸ್ ಮನೆಯಲ್ಲಿ ಇಬ್ಬರ ನಡುವೆ ನಡೆದ ಸಂಭಾಷಣೆ ಏನು? ನಮ್ರತಾ ಗೌಡ ಕಾಲೆಳೆದಿದ್ದು ಯಾಕೆ? ತಿಳಿಯಲು ಮುಂದೆ ಓದಿ..
ಟಫ್ ಟಾಸ್ಕ್ ಮಧ್ಯೆ ಅರಳಿತಾ ಪ್ರೀತಿ?
ಬಿಗ್ ಬಾಸ್ ಆರಂಭ ಆಗಿ ಒಂದು ವಾರ ಆಗಿದೆ. ಇನ್ನೇನು ಬಿಗ್ ಬಾಸ್ ಮನೆಯಿಂದ ಒಬ್ಬ ಸ್ಪರ್ಧಿ ಹೊರಬರುವ ಸಮಯವೂ ಸನಿಹವಾಗಿದೆ. ಈ ಮಧ್ಯೆ ಬಿಗ್ ಬಾಸ್ ಕಠಿಣ ಟಾಸ್ಕ್‌ಗಳನ್ನು ಸ್ಪರ್ಧಿಗಳ ಮುಂದೆ ಇಟ್ಟಿದ್ದಾಗಿದೆ. ಈ ಟಾಸ್ಕ್ ಕಡೆಗೆ ಸ್ಪರ್ಧಿಗಳು ಗಮನ ಹರಿಸುತ್ತಿರೋದೇನೋ ನಿಜ. ಅದೇ ಇನ್ನೊಂದು ಕಡೆ ಹೊಸ ಸಂಬಂಧಗಳು ಚಿಗುರೊಡೆಯುವ ಹಾಗಿದೆ. ಟಫ್ ಟಾಸ್ಕ್ ಮಧ್ಯೆ ಪ್ರೀತಿ ಅರಳಿತಾ ಎಂಬ ಸಂಶಯ ಮೂಡುತ್ತಿದೆ.
ಇಶಾನಿ ಕಣ್ಣು ಸನ್ನೆಗೆ ಮೈಕಲ್ ಬೋಲ್ಡ್
ಬಿಗ್ ಬಾಸ್ ಮನೆಯೊಳಗೆ ಇಬ್ಬರು ವಿಶೇಷ ಪ್ರತಿಭೆಗಳು ಎಂಟ್ರಿ ಕೊಟ್ಟಿವೆ. ಅದರಲ್ಲಿ ಒಬ್ಬರು ರಾಪರ್ ಇಶಾನಿ. ಕ್ಯಾಲಿಪೋರ್ನಿಯಾದಿಂದ ಭಾರತಕ್ಕೆ ಮರಳಿದ್ದು, ರಾಪ್ ಮ್ಯೂಸಿಕ್ ಮೇಲೆ ಹೆಚ್ಚು ಒಲವು. ಇನ್ನೊಂದು ಕಡೆ ನೈಜೀರಿಯನ್-ಇಂಡಿಯನ್ ಮೈಕಲ್ ಅಜಯ್. ಇವರೂ ಮಾಡಲ್ ಆಗಿ ಗುರುತಿಸಿಕೊಂಡಿದ್ದಾರೆ. ಒಂದು ವಾರದೊಳಗೆ ಇಶಾನಿ ಹಾಗೂ ಮೈಕಲ್ ಅಜಯ್ ಸ್ನೇಹಿತರಾಗಿದ್ದಾರೆ. ಈ ಮಧ್ಯೆ ಇಶಾನಿ ಕಣ್ಣ ಇಶಾರೆಗೆ ಮೈಕಲ್ ಕ್ಲೀನ್ ಬೋಲ್ಡ್ ಆಗಿದ್ದಾರಾ? ಅನ್ನೋ ಅನುಮಾನವನ್ನು ಹುಟ್ಟುಹಾಕುವಂತಿದೆ.

ಇಬ್ಬರ ನಡುವೆ ನಡೆದ ಏನ್ ನಡೀತಿದೆ?
ಇಶಾನಿ ಹಾಗೂ ಮೈಕಲ್ ಅಜಯ್ ನಡುವಿನ ಕೆಲವು ಸನ್ನಿವೇಶಗಳನ್ನು ಜೀ ಸಿನಿಮಾದ ಅನ್ ಸೀನ್ ಕಥೆಗಳು ಸೆಗ್ಮೆಂಟ್‌ನಲ್ಲಿ (Unseen ಕಥೆಗಳು) ತೋರಿಸಲಾಗಿದೆ. ಮೈಕಲ್ ಹಾಗೂ ಇಶಾನಿ ಡೀಪ್ ಆಗಿ ಮಾತುಕಥೆಯಲ್ಲಿ ತೊಡಗಿದ್ದಾರೆ. ಆ ಸಂಭಾಷಣೆಯ ಹೈಲೈಟ್ ಹೀಗಿದೆ.
ಮೈಕಲ್: ನಿಂಗೆ ನನ್ ಮೇಲೇ ನಂಬ್ಕೆನೇ ಇಲ್ಲ ಅಲ್ವಾ? ಯಾಕೆ?
ಇಶಾನಿ: ಅದ್ಕೆ ಟೈಮ್ ತಗೊಳತ್ತೆ. ನಾವು ಯಾವಾಗ ಅಷ್ಟೆಲ್ಲ ಮಾತಾಡಿದ್ವಿ?
ಮೈಕಲ್: ಹಮ್. ನಿಜ. ಮಾತಾಡಿಲ್ಲ. ಟೈಮೇ ಸಿಗ್ಲಿಲ್ವಲ್ಲಾ.... ಟೈಮ್ ಇದೆ... ಮಾತಾಡೋಣ... ನಿಂಗೆ ಇಷ್ಟವಾದ ವಿಷಯದ ಬಗ್ಗೆನೇ ಮಾತಾಡೋಣ... ನಿಂಗೆ ಯಾವ ವಿಷಯ ಇಷ್ಟ?
ಇಶಾನಿ: ನಂಗೆ ಅಧ್ಯಾತ್ಮ ಇಷ್ಟ...ನಿನ್ ಫೀಲಿಂಗ್ಸ್ ಏನಂತ ಗೊತ್ತಾಗ್ಬೇಕು... ನನ್ ಬಗ್ಗೆ ಅಲ್ಲ... ನಿನ್ ಬದುಕಿನ ಅನುಭವ ಏನು... ನಿಂಗೆ ಏನು ಅನಿಸುತ್ತೆ... ನಿನ್ ಮೈಂಡ್‌ಸೆಟ್ ಏನು...
ಮೈಕಲ್: ಹೇಳಿದೀನಲ್ಲಾ... ನನ್ ಲೈಫ್ ಸ್ಟೋರಿನೇ ಹೇಳಿದೀನಿ...
ಇಶಾನಿ: ಹೌದು... ನಂಗೆ ಸ್ವಲ್ಪ ಅನಿಸ್ತಿದೆ... ನಾನೂನೂ ಹಾಗೆ... ಒಂದು ಗೋಡೆ ಇದೆ ಅನ್ಸತ್ತೆ.
ಮೈಕಲ್: ನಂಗೆ ಗೋಡೆ ಇದೆ ಅನ್ಸತ್ತಾ? ನಂಗೆ ಇಲ್ಲ... ನಂಗೆ ನೀನೊಂದು ಗೋಡೆ ಕಟ್ಕೊಂಡಿದೀಯಾ ಅನ್ಸತ್ತೆ...
ಇಶಾನಿ: ಅದು ಹೌದು... ನಾನು ಹಾಗಿದೀನಿ..
ಇಬ್ಬರೂ ಹೀಗೆ ಮಾತಾಡಿಕೊಳ್ಳುತ್ತಿರುವಾಗಲೇ ನಮ್ರತಾ ಹಾಗೂ ಸ್ನೇಹಿತ್ ಇಬ್ಬರ ಕಾಲೆಳೆದಿದ್ದಾರೆ.
ನಮ್ರತಾ, ಸ್ನೇಹಿತ್ ಗೊತ್ತಾಗಿ ಹೋಯ್ತಾ?
ಇಶಾನಿ ಹಾಗೂ ಮೈಕಲ್ ಅಜಯ್ ಸಂಭಾಷಣೆ ವೇಳೆ ನಮ್ರತಾ ಹಾಗೂ ಸ್ನೇಹಿತ್ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ಬಾಸ್‌ಗೆ ಇವರದ್ದೊಂದು ಸ್ಲೋ ಮೋಷನ್ ಶಾಟ್ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ನಮ್ರತಾ ನಾವು ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಹಾಕ್ತೀವಿ ಎಂದಿದ್ದಾರೆ. ಸ್ನೇಹಿತ್ ಮತ್ತು ನಮ್ರತಾ ತಮಾಷೆಯಿಂದ ಕಾಲೆಳೆಯುತ್ತಿದ್ದಂತೆ ಇಶಾನಿ "ಇದು ಅತಿಯಾಯ್ತು" ಎಂದು ನಾಚಿಕೊಂಡಿದ್ದಾರೆ.


Click it and Unblock the Notifications











