BBK 11: ಬಿಗ್‌ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಔಟ್: ಒಳಗೆ ಹೋಗ್ತಾರಾ? ಇಲ್ವಾ?

ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಬಿಗ್‌ ಬಾಸ್ ಮನೆಯಿಂದ ಹೊರ ಬಂದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದು, ದಿಢೀರನೇ ಹೊರ ಬರುವುದಕ್ಕೆ ಅಷ್ಟೇ ಪ್ರಬಲವಾದ ಕಾರಣವಿದೆ. ಸದ್ಯಕ್ಕೀಗ ಚೈತ್ರಾ ಸುದ್ದಿ ಟ್ರೆಂಡಿಂಗ್‌ನಲ್ಲಿದೆ.

ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಬರುವುದಕ್ಕೂ ಮುನ್ನ ವಿವಾದವೊಂದರಲ್ಲಿ ಸಿಕ್ಕಿಕೊಂಡಿದ್ದರು. ಅದು ಕೋರ್ಟ್ ಮೆಟ್ಟಿಲೇರಿತ್ತು. ಆ ಕೇಸ್‌ನ ವಿಚಾರಣೆ ಇದ್ದಿದ್ದರಿಂದ ಇಂದು( ಡಿಸೆಂಬರ್ 3) ಬಿಗ್ ಬಾಸ್‌ ಮನೆಯೊಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಈಗಾಗಲೇ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಚೈತ್ರಾ ಕುಂದಾಪುರ ಮುಖಕ್ಕೆ ಮಾಸ್ಕ್ ಹಾಕಿಕೊಂಡಿ, ಕೂಲಿಂಗ್ ಗ್ಲಾಸ್ ಧರಿಸಿ ಕೋರ್ಟ್‌ಗೆ ಹಾಜರಾಗಿದ್ದಾರೆ. ಇದೇ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

bigg-boss-kannada-season-11-chaitra-kundapura-court-case-update

2023ರಲ್ಲಿ ಕರ್ನಾಟಕ ವಿಧಾನ ಸಭೆ ಚುನಾವಣೆ ವೇಳೆ ಚೈತ್ರಾ ಕುಂದಾಪುರ ಹೆಸರು ವಿವಾದಕ್ಕೆ ಸಿಕ್ಕಿಕೊಂಡಿತ್ತು. ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ 5 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪದಡಿಯಲ್ಲಿ ಚೈತ್ರಾ ಅವರನ್ನು ಬಂಧಿಸಲಾಗಿತ್ತು. ಆ ಕೇಸ್‌ನ ವಿಚಾರಣೆ ಇದ್ದಿದ್ದರಿಂದ ಚೈತ್ರಾ ಅವರನ್ನು ಬಿಗ್‌ಬಾಸ್ ಮನೆಯಿಂದ ರಹಸ್ಯವಾಗಿ ಕರೆದುಕೊಂಡು ಬರಲಾಗಿತ್ತು. ಹಾಗಿದ್ದರೆ, ಚೈತ್ರಾ ಬಿಗ್ ಬಾಸ್‌ ಮನೆಯಿಂದ ಹೊರಬಿದ್ದರೇ? ಮತ್ತೆ ಮನೆಯೊಳಗೆ ಹೋಗುತ್ತಾರಾ? ಇಲ್ವಾ? ವಂಚನೆ ಕೇಸ್ ಏನು? ವಿಚಾರಣೆ ಬಳಿಕೆ ಏನಾಯ್ತು? ತಿಳಿಯಲು ಮುಂದೆ ಓದಿ.

2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಚೈತ್ರಾ ಕುಂದಾಪುರ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂಪಾಯಿ ಪಡೆದು ವಂಚಿಸಿದ ಆರೋಪ ಮಾಡಲಾಗಿತ್ತು. ಇವರೊಂದಿಗೆ ಶ್ರೀಕಾಂತ್, ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಸ್ವಾಮೀಜಿ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಬಳಿಕ ಈ ವಂಚನೆ ಕೇಸ್‌ನಿಂದ ಜಾಮೀನು ಪಡೆದು ಹೊರಬಂದಿದ್ದರು.

ಜಾಮೀನು ಪಡೆದು ಹೊರಬಂದ ಬಳಿಕ ಚೈತ್ರಾ ಕುಂದಾಪುರ ಕನ್ನಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್‌ 11ರ ಸ್ಪರ್ಧಿಯಾಗಿದ್ದಾರೆ. ಸುಮಾರು ಐವತ್ತೂ ಅಧಿಕ ದಿನಗಳು ಬಿಗ್‌ಬಾಸ್ ಮನೆಯಲ್ಲೇ ಇದ್ದ ಚೈತ್ರಾ ಕೋರ್ಟ್‌ ಕೇಸ್ ಮೂಲಕ ರಹಸ್ಯವಾಗಿ ಹೊರಗೆ ಬಂದಿದ್ದರು. ಅವರನ್ನು ಕಲರ್ಸ್ ಕನ್ನಡದ ಸಿಬ್ಬಂದಿಗಳೇ ಕರೆದುಕೊಂಡು ಬಂದಿದ್ದರು. ವಿಚಾರಣೆ ಮುಗಿಸಿ ಹೊರ ಹೋಗುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಬಿಗ್‌ ಬಾಸ್ ಮನೆಯೊಳಗೆ ಇದ್ದ ಚೈತ್ರಾ ಕುಂದಾಪುರ ಅವರಿಗೆ ವಿಚಾರಣೆಗೆ ಹಾಜರಾಗಲೇಬೇಕು ಅಂತ ಕೋರ್ಟ್ ವಾರೆಂಟ್ ಜಾರಿಯಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಅವರನ್ನು ಬಿಗ್‌ಬಾಸ್ ಮನೆಯಿಂದ ಗುಟ್ಟಾಗಿ ಕೋರ್ಟ್‌ಗೆ ಕರೆದುಕೊಂಡು ಬರಲಾಗಿತ್ತು. ಬಿಗ್‌ಬಾಸ್ ಮನೆಯಿಂದ ಬಂದವರೇ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಅಲ್ಲಿ ಚೈತ್ರಾ ಕುಂದಾಪುರ ಅವರ ಕೇಸ್‌ನ ವಿಚಾರಣೆಯನ್ನು ನ್ಯಾಯಾಧೀಶರು ಜನವರಿ 13ಕ್ಕೆ ಮುಂದೂಡಿದ್ದಾರೆ.

ವಿಚಾರಣೆ ಜನವರಿ 13ಕ್ಕೆ ಮುಂದೂಡಿಕೆಯಾಗಿದ್ದರಿಂದ ಚೈತ್ರಾ ಕುಂದಾಪುರ ಅವರನ್ನು ಮತ್ತೆ ಬಿಗ್‌ ಬಾಸ್ ಮನೆಯೊಳಗೆ ಕಳುಹಿಸಲಾಗಿದೆ. ಮುಂದಿನ ವಿಚಾರಣೆ ವೇಳೆಗೆ ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದಿರುತ್ತೆ. ಇನ್ನು 36 ದಿನಗಳು ಬಾಕಿ ಉಳಿದಿದರುವುದರಿಂದ ಬಿಗ್ ಬಾಸ್‌ನಿಂದ ಹೊರ ಬಂದ ಬಳಿಕ ಮತ್ತೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಬೇಕಾಗುತ್ತೆ. ಸದ್ಯಕ್ಕೆ ಜನವರಿ 13ರವರೆಗೆ ಚೈತ್ರಾ ಕುಂದಾಪುರಕ್ಕೆ ರಿಲೀಫ್ ಸಿಕ್ಕಿದೆ.

More from Filmibeat

English summary
Bigg Boss Kannada 11 contestant Chaitra Kundapura came out for court case and went back;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X