BBK 11: ಶೋಭಾ ಶೆಟ್ಟಿ ಕೆಂಗಣ್ಣಿಗೆ ಗುರಿಯಾಗಿರುವ ಗೌತಮಿ ಜಾಧವ್ ಒಂದು ವಾರದ ಸಂಭಾವನೆ ಎಷ್ಟು ಗೊತ್ತೇ?

ಈ ಬಾರಿಗೆ ಬಿಗ್‌ ಬಾಸ್ ಕನ್ನಡ ಸೀಸನ್ 11 ಹಲವು ಕಾರಣಗಳಿಂದ ಚರ್ಚೆಯಲ್ಲಿದೆ. ಇತ್ತೀಚೆಗೆ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋನ 11ನೇ ಸೀಸನ್ 50 ದಿನಗಳನ್ನು ಯಶಸ್ವಿಯಾಗಿ ಮುಗಿಸಿದೆ. ಇದೇ ವೇಳೆ ಮತ್ತಿಬ್ಬರು ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಕೊಡಲಾಗಿದೆ. ಶೋಭಾ ಶೆಟ್ಟಿ ಹಾಗೂ ರಜತ್ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ವಾತಾವರಣ ಬದಲಾಗಿಬಿಟ್ಟಿದೆ.

ಇಲ್ಲಿವರೆಗೂ ತಮ್ಮದೇ ಮೈಂಡ್ ಗೇಮ್ ಆಡುತ್ತಿದ್ದ ಸ್ಪರ್ಧಿಗಳಿಗೆ ಇವರಿಬ್ಬರ ಎಂಟ್ರಿ ಶಾಕ್ ಕೊಟ್ಟಿದೆ. ಅದರಲ್ಲೂ ಶೋಭಾ ಶೆಟ್ಟಿ ಹಾಗೂ ರಜತ್ ಇಬ್ಬರೂ ಸೇಫ್ ಆಗಿ ಆಡುತ್ತಿದ್ದ ಸ್ಪರ್ಧಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಅವರಲ್ಲಿ 'ಸತ್ಯ' ಸೀರಿಯಲ್ ಧಾರಾವಾಹಿಯ ನಟಿ ಗೌತಮಿ ಜಾಧವ್ ಕೂಡ ಒಬ್ಬರು. ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಶೋಭಾ ಶೆಟ್ಟಿ ಹಾಗೂ ಗೌತಮಿ ಜಾಧವ್ ಮಧ್ಯೆ ಕಿರಿಕ್ ಶುರುವಾಗಿದೆ.

Bigg Boss Kannada Season 11 contestant Gowthami Jadhav remuneration per week details

ಬಿಗ್‌ ಬಾಸ್ ಮನೆಯಲ್ಲಿ ಗೌತಮಿ ಜಾಧವ್ ಮುಖವಾಡ ಧರಿಸಿದ್ದಾರೆ. ಅವರ ಮುಖವಾಡ ಕಳಚುವುದೇ ತನ್ನ ಉದ್ದೇಶ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ 'ಸತ್ಯ' ನಟಿ ಗೌತಮಿ ಜಾಧವ್ ಮುಂದಿನ ನಡೆ ಇಂಟ್ರೆಸ್ಟಿಂಗ್ ಆಗಿದೆ. ಶೋಭಾ ಶೆಟ್ಟಿ ಹಾಗೂ ಗೌತಮಿ ಜಾಧವ್ ನಡುವಿನ ಕಿತ್ತಾಟ ಎಲ್ಲಿವರೆಗೂ ಇರುತ್ತೋ ಅಲ್ಲಿವರೆಗೂ ಇಬ್ಬರೂ ಸೇಫ್ ಆಗಿರುತ್ತಾರೆ. ಹಾಗಿದ್ದರೆ, ಗೌತಮಿ ಜಾಧವ್ ಬಿಗ್ ಬಾಸ್‌ನಲ್ಲಿ ಇರಲು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು? ಹೊರಗಡೆ ಆಗುತ್ತಿರುವ ಚರ್ಚೆ ಏನು?

ಗೌತಮಿ ಜಾಧವ್ ಆರಂಭದ ದಿನಗಳಲ್ಲಿ ಫ್ಯಾನ್ ಫಾಲೋವಿಂಗ್ ಹೊಂದಿದ್ದರು. ಆದರೆ, 50 ದಿನಗಳಾಗುವ ಹೊತ್ತಿಗೆ ನೆಟ್ಟಿಗರು ಕೂಡ ಅವರು ಬಿಗ್ ಬಾಸ್ ಮನೆಯೊಳಗೆ ನೈಜವಾಗಿ ಆಟ ಆಡುತ್ತಿಲ್ಲ. ಕಂಟ್ರೋಲ್ ಮಾಡಿಕೊಂಡು ಆಟ ಆಡುವುದಕ್ಕೆ ಶುರು ಮಾಡಿದ್ದಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ ಶೋಭಾ ಶೆಟ್ಟಿ ಕೂಡ ಅದೇ ಪಾಯಿಂಟ್ ಅನ್ನು ಇಟ್ಟುಕೊಂಡು ವಾದ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಗೌತಮಿ ಸಿಡಿದೇಳುತ್ತಾರಾ? ಅನ್ನುವುದನ್ನು ಕುತೂಹಲದಿಂದ ನೋಡುತ್ತಿದ್ದಾರೆ.

Bigg Boss Kannada Season 11 contestant Gowthami Jadhav remuneration per week details

ಸದ್ಯ ಸೋಶಿಯಲ್ ಮೀಡಿಯಾದಲ್ಲೀಗ ಗೌತಮಿ ಜಾಧವ್ ಟ್ರೆಂಡಿಂಗ್ ಟಾಪಿಕ್ ಆಗಿದ್ದಾರೆ. ಇದೇ ವೇಳೆ ಬಿಗ್‌ ಬಾಸ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಅಂತಲೂ ಚರ್ಚೆಯಾಗುತ್ತಿದೆ. ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆದಿರುವ ಸ್ಪರ್ಧಿಗಳ ಪೈಕಿ 'ಸತ್ಯ' ಧಾರಾವಾಹಿಯ ನಟಿ ಗೌತಮಿ ಜಾಧವ್ ಅವರಿಗೆ ಹೆಚ್ಚು ಸಂಭಾವನೆ ನೀಡಲಾಗಿದೆ ಅನ್ನೋ ಮಾತು ಹರಿದಾಡುತ್ತಿವೆ. ಮೂಲಗಳ ಪ್ರಕಾರ, ಗೌತಮಿಯವರಿಗೆ ಬಿಗ್ ಬಾಸ್ ಕಡೆಯಿಂದ ಒಂದು ವಾರ ಒಂದೂವರೆ ಲಕ್ಷ ರೂಪಾಯಿ ಸಂಭಾವನೆ ಸಿಗುತ್ತಿದೆ ಎನ್ನಲಾಗಿದೆ.

ಇಂತಹದ್ದೊಂದು ಸುದ್ದಿಯಂತೂ ಚರ್ಚೆಯಾಗುತ್ತಿದೆ. ಒಂದು ವೇಳೆ ಸುದ್ದಿ ನಿಜವೇ ಆಗಿದ್ದರೆ, ಈಗಾಗಲೇ ಎಂಟು ವಾರಗಳನ್ನು ಮನೆಯೊಳಗೆ ಕಳೆದಿದ್ದಾರೆ. ಇಲ್ಲಿವರೆಗೂ ಅವರು ಸುಮಾರು 12 ಲಕ್ಷ ರೂಪಾಯಿವರೆಗೂ ಸಂಭಾವನೆ ಪಡೆದಿರಬಹುದೆಂದು ಅಂದಾಜಿಸಲಾಗುತ್ತಿದೆ. ಅಂದ್ಹಾಗೆ, ಸಂಭಾವನೆ ವಿಷಯವನ್ನು ಕಲರ್ಸ್ ಕನ್ನಡ ಗೌಪ್ಯವಾಗಿ ಇಟ್ಟಿದೆ. ಹಾಗೇ ಗೌತಮಿ ಜಾಧವ್ ಕಡೆಯವರು ಇದನ್ನು ಬಹಿರಂಗ ಪಡಿಸಿಲ್ಲ. ಇದು ಟಿವಿ ಇಂಡಸ್ಟ್ರಿಯಲ್ಲಿ ಹರಿದಾಡುತ್ತಿರುವ ಸುದ್ದಿ.

ಶೋಭಾ ಶೆಟ್ಟಿ ಸಿಕ್ಕಾಪಟ್ಟೆ ಪ್ರಬಲ ಸ್ಪರ್ಧಿ. ಈಗಾಗಲೇ ಒಮ್ಮೆ ಬಿಗ್‌ ಬಾಸ್ ಮನೆಗೆ ಹೋಗಿ ಅನುಭವವಿದೆ. ತೆಲುಗು ಬಿಗ್‌ಬಾಸ್ ಸೀಸನ್ 7ರ ಸ್ಪರ್ಧಿಯಾಗಿದ್ದರು. ಕನ್ನಡದ ನಟಿಯಾಗಿದ್ದರೂ ತೆಲುಗು ರಿಯಾಲಿಟಿ ಶೋನಲ್ಲಿ ಅಬ್ಬರಿಸಿದ್ದರು. ಹೀಗಾಗಿ ಕನ್ನಡದಲ್ಲಿ ಅದೇ ಖದರ್ ನೋಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ, ಬರುತ್ತಿದ್ದಂತೆ ಗೌತಮಿ ಜಾಧವ್ ಟಾರ್ಗೆಟ್ ಮಾಡಿದ್ದು ವೀಕ್ಷಕರಲ್ಲಿ ಕುತೂಹಲ ಹುಟ್ಟಾಕಿದೆ.

More from Filmibeat

English summary
Bigg Boss Kannada Season 11 contestant Gowthami Jadhav remuneration per week details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X