BBK 11: 11ನೇ ಸೀಸನ್‌ಗೂ ಮೊದಲೇ ತ್ರಿವಿಕ್ರಮ್‌ಗಿತ್ತು ಬಿಗ್‌ಬಾಸ್ ಆಫರ್; ಕೈ ಬಿಟ್ಟಿದ್ದಕ್ಕೆ ಕಾರಣ ಆ ಸಿನಿಮಾ!
ಎಲ್ಲೆಲ್ಲೂ ಬಿಗ್‌ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ ಬಗ್ಗೆನೇ ಚರ್ಚೆ. ಆರು ಮಂದಿ ಸ್ಪರ್ಧಿಗಳಲ್ಲಿ ಯಾರು ಗೆಲ್ಲಬೇಕು? ಅನ್ನೋದೇ ಮಾತು. ಈ ಆರು ಮಂದಿಗಳಲ್ಲಿ ನಟ ತ್ರಿವಿಕ್ರಮ್ ಕೂಡ ಗಮನ ಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತ್ರಿವಿಕ್ರಮ್ ಹೆಸರು ಓಡಾಡುತ್ತಿದೆ. ಈ ಬಾರಿ ಟ್ರೋಪಿ ಗೆಲ್ಲೋದೇ ತ್ರಿವಿಕ್ರಮ್ ಅಂತ ಸಾಕಷ್ಟು ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಗೆಲ್ಲುವ ಆರು ಮಂದಿ ಸ್ಪರ್ಧಿಗಳಲ್ಲಿ ತ್ರಿವಿಕ್ರಮ್ ಕೂಡ ಒಬ್ಬರು. ಮೊದಲ ದಿನದಿಂದ ಇಲ್ಲಿವರೆಗೂ ತ್ರಿವಿಕ್ರಮ್ ಬಗ್ಗೆ ವೀಕ್ಷಕರಲ್ಲಿ ಒಳ್ಳೆಯ ಓಪಿನಿಯನ್ ಇದೆ. ಈ ಕಾರಣಕ್ಕೆ ಬಿಗ್ ಬಾಸ್ ಗೆಲ್ಲಬಹುದಾದ ಸ್ಪರ್ಧಿಗಳಲ್ಲಿ ತ್ರಿವಿಕ್ರಮ್‌ಗೂ ಆಗ್ರಸ್ಥಾನವಿದೆ. ಆದರೆ, ಕನ್ನಡದ ಅತೀ ದೊಡ್ಡ ಈ ರಿಯಾಲಿಟಿ ಶೋ ಅನ್ನು ಈ ಹಿಂದೆ ತ್ರಿವಿಕ್ರಮ್ ರಿಜೆಕ್ಟ್ ಮಾಡಿದ್ದರು ಅನ್ನೋ ವಿಷಯ ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಆಫರ್ ಬರುವುದಕ್ಕೂ ಮುನ್ನವೇ ಎರಡು ಬಾರಿ ಆಫರ್ ಬಂದಿತ್ತು. ಆದರೆ, ಆ ಎರಡೂ ಬಾರಿ ಕೂಡ ಕೂಡ ಬಿಗ್ ಬಾಸ್ ಮನೆಗೆ ಬರುವುದಕ್ಕೆ ಇಷ್ಟ ಪಟ್ಟಿರಲಿಲ್ಲ. ಬಿಗ್ ಬಾಸ್ ನೀಡಿದ ಆಫರ್‌ಗಳನ್ನು ರಿಜೆಕ್ಟ್ ಮಾಡುತ್ತಲೇ ಬರುತ್ತಿದ್ದರು. ಇಲ್ಲದೇ ಹೋಗಿದ್ದರೆ, ಈ ಹಿಂದಿನ ಎರಡು ಸೀಸನ್‌ಗಳ ಪೈಕಿ ಒಂದರಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಬೇಕಿತ್ತು. ಆದರೆ, ಎರಡೂ ಬಾರಿ ಆಫರ್‌ಗಳನ್ನು ರಿಜೆಕ್ಟ್ ಮಾಡಿದ್ದರು ಯಾಕೆ ಗೊತ್ತೇ?
ಹೌದು, ತ್ರಿವಿಕ್ರಮ್ ಈ ಹಿಂದೆನೇ ಎರಡು ಬಾರಿ ಬಿಗ್ ಬಾಸ್‌ಗೆ ಆಫರ್ ಬಂದಿತ್ತು. ಆದರೆ, ಅದನ್ನು ಸಿನಿಮಾ ಒಂದಕ್ಕಾಗಿ ಕೈ ಬಿಟ್ಟಿದ್ದಾಗಿ ಹೇಳಿಕೊಂಡಿದ್ದರು. ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮುನ್ನ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದರು. ಅಲ್ಲದೆ ಅದೇ ಸಂದರ್ಶನದಲ್ಲಿ ತಮ್ಮ ಕಷ್ಟದ ದಿನಗಳನ್ನು ಕೂಡ ಹೇಳಿಕೊಂಡಿದ್ದರು. ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಬಿಗ್ ಬಾಸ್ ಆಫರ್‌ಗಳನ್ನು ಕೈ ಬಿಟ್ಟಿದ್ದಿದ್ದು ಯಾಕೆ? ಅನ್ನೋದನ್ನು ರಿವೀಲ್ ಮಾಡಿದ್ದರು.
"ಸಿನಿಮಾ ರಿಲೀಸ್ ಆಗುವುದಕ್ಕೆ ಮೂರು ದಿನ ಹಿಂದೇನೆ ತುಂಬಾನೇ ದೊಡ್ಡ ದೊಡ್ಡ ವ್ಯಕ್ತಿಗಳೇ ಕಾಲ್ ಮಾಡಿದ್ದರು. ಮೂರು ಸಿನಿಮಾಗಳಿಗೆ, ಎರಡು ಸಿನಿಮಾಗಳಿಗೆ ಬುಕ್ ಮಾಡಿಕೊಳ್ಳೋಣ ಎಂದಿದ್ದರು. ಅದೊಂದು ಫೀನಿಕ್ಸ್ ಅನ್ನುವ ಪಾತ್ರವನ್ನು ನೆಗೆಟಿವ್ ಆಗಿ ಮಾಡಿಕೊಂಡಿದ್ದೆ. ಇದರ ಮಧ್ಯೆ ತಮಿಳಿನಲ್ಲಿ ಎಷ್ಟು ದೊಡ್ಡ ಸೀರಿಯಲ್‌ಗಳು ಸಿಕ್ಕಿದ್ದವು. ಅದಾದ್ಮೇಲೆ ಎರಡು ವರ್ಷಗಳಿಂದ ಬಿಗ್‌ಬಾಸ್‌ಗೆ ಆಫರ್ ಬರುತ್ತಿತ್ತು. ನಾನು ಬೇಡ ಅಂತ ಎಲ್ಲಾ ರಿಜೆಕ್ಟ್ ಮಾಡಿಕೊಂಡು ಬಂದಿದ್ದೆ" ಎಂದು ಸಂದರ್ಶನದಲ್ಲಿ ತ್ರಿವಿಕ್ರಮ್ ಹೇಳಿದ್ದರು.

ಅಷ್ಟಕ್ಕೂ ಆ ಸಿನಿಮಾ ಯಾವುದು ಅಂದರೆ, ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್. ಈ ಸಿನಿಮಾದಲ್ಲಿ ಫೀನಿಕ್ಸ್ ಅನ್ನೋ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರ ನೋಡಿ ಕೆಲವು ನಿರ್ಮಾಪಕರು ಸಿನಿಮಾ ಮಾಡುವುದಕ್ಕೆ ಮುಂದೆ ಬಂದಿದ್ದರು. ಎರಡು, ಮೂರು ಸಿನಿಮಾಗಳಿಗೆ ಅಗ್ರಿಮೆಂಟ್ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದರು. ಆ ಕಾರಣಕ್ಕೆ ಬಿಗ್ ಬಾಸ್‌ಗೆ ಬರುತ್ತಿದ್ದ ಆಫರ್‌ಗಳನ್ನು ತ್ರಿವಿಕ್ರಮ್ ರಿಜೆಕ್ಟ್ ಮಾಡುತ್ತಾ ಬಂದಿದ್ದರು. ಆದರೆ, ಆ ನಿರ್ಮಾಪಕರು ಕೈ ಎತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
" ಈ ಎರಡು ವರ್ಷದಲ್ಲಿ ಸೀರಿಯಲ್ ಮಾಡುವುದಿಲ್ಲ ಅಂತ ಬೇರೆ ಹೇಳಿದ್ದೆ. ಸೀರಿಯಲ್‌ಗಳು ಕೂಡ ಯಾವುದೂ ಬರುತ್ತಿಲ್ಲ. ಮತ್ತೆ ಸಿನಿಮಾ ಮಾಡಬೇಕಾ?" ಅನ್ನೋ ಗೊಂದಲದಲ್ಲಿ ಇದ್ದಿದ್ದಾಗಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಮೂರನೇ ಬಾರಿ ಬಿಗ್ ಬಾಸ್ ಆಫರ್ ಬಂದಾಗ ತ್ರಿವಿಕ್ರಮ್ ಒಪ್ಪಿಕೊಂಡಿದ್ದರು. ಈಗ ಫಿನಾಲೆವರೆಗೂ ಬಂದು ನಿಂತಿದ್ದಾರೆ.


Click it and Unblock the Notifications











