BBK 11: ವಕೀಲ್ ಸಾಬ್‌ಗೆ ಸಿಎಂ ಆಗ್ಬೇಕು.. ಸಾಮಾನ್ಯ ಜನರು ಎಂಎಲ್‌ಎ, ಎಂಪಿ ಆಗ್ಬೇಕು; ಈಡೇರುತ್ತಾ ಕನಸು?

ನಿರೀಕ್ಷೆಯಂತೆ ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭ ಆಗಿದೆ. ಇಂದು (ಸೆಪ್ಟೆಂಬರ್ 29) ಕಿಚ್ಚ ಸುದೀಪ್ ಮುಂದೆ ಕೆಲವು ವಿಭಿನ್ನ ಕ್ಯಾರೆಕ್ಟರ್‌ಗಳಿರುವ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇವರಿಗೆ ಲಾಯರ್ ಜಗದೀಶ್ ಕೂಡ ಒಬ್ಬರು. ಸೋಶಿಯಲ್ ಮೀಡಿಯಾದಲ್ಲಿ ಪೊಲೀಸರು, ರಾಜಕಾರಣಿಗಳ ವಿರುದ್ಧ ಗಂಭೀರ ಅರೋಪಗಳನ್ನು ಮಾಡುತ್ತಾ ಸುದ್ದಿಯಲ್ಲಿದ್ದರು.

ಅದರಲ್ಲೂ ಇತ್ತೀಚೆಗೆ ವಕೀಲ್ ಸಾಬ್ ಜಗದೀಶ್ ಅವರ ವರಸೆ ಬದಲಾಗಿತ್ತು. ಕಾಸ್ಟ್ಯೂಮ್ ಬದಲಾಗಿತ್ತು. ಮಾತಾಡುವ ಶೈಲಿ ಬದಲಾಗಿತ್ತು. ಮಾಜಿ ಸಿ ಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ಲಾಯರ್ ಜಗದೀಶ್ ಸಮರ ಸಾರಿದ್ದರು. ಈ ಮೂಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.

Bigg Boss Kannada Season 11 Lawyer Jagdeesh said he wants to become C M in front of Kichcha Sudeep

ಇಷ್ಟೇ ಅಲ್ಲದೆ, ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದರು. ದರ್ಶನ್ ಕೇಸ್‌ನಲ್ಲಿ ಮುನಿರತ್ನ ಅವರ ವಿರುದ್ಧ ತಿರುಗಿಬಿದ್ದಿದ್ದರು. ಪೊಲೀಸರ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಹೇಳಿಕೊಂಡಿದ್ದರು. ಈ ಗ್ಯಾಪ್‌ನಲ್ಲೇ ಲಾಯರ್ ಜಗದೀಶ್‌ ಅವರ ಹೆಸರು ಬಿಗ್‌ಬಾಸ್‌ ಕನ್ನಡ 11 ರ ವೇದಿಕೆಯಲ್ಲಿ ಕೇಳಿ ಬಂದಿತ್ತು. ಈ ಬೆನ್ನಲ್ಲೇ ನಿನ್ನೆ (ಸೆಪ್ಟೆಂಬರ್ 27) ರಾಜ ರಾಣಿ ವೇದಿಕೆಯಲ್ಲಿ ವಕೀಲ್ ಸಾಬ್ ರಿವೀಲ್ ಆಗಿದ್ದರು.

ಅಷ್ಟಕ್ಕೂ ವಕೀಲ್ ಸಾಬ್ ಯಾಕೆ ಬಿಗ್‌ಬಾಸ್‌ಗೆ ಯಾಕೆ ಬಂದ್ರು? ಹೊರಗಡೆ ಭ್ರಷ್ಟಚಾರದ ವಿರುದ್ಧ ಹೋರಾಡುತ್ತೀನಿ ಎಂದಿದ್ದ ಲಾಯರ್ ಜಗದೀಶ್ ಮನೆಯೊಳಗೆ ಲಾಕ್ ಆಗಿದ್ದಾರೆ. ಅಷ್ಟಕ್ಕೂ ಬಿಗ್ ಬಾಸ್ ಮನೆಗೆ ಯಾಕೆ ಬಂದರು? ಯಾವ ಉದ್ದೇಶವನ್ನು ಇಟ್ಟುಕೊಂಡು ಬಿಗ್‌ಬಾಸ್ ಮನೆಯೊಳಗೆ ಹೋಗಿದ್ದಾರೆ? ಇದೆಲ್ಲದಕ್ಕೂ ವಕೀಲ್ ಸಾಬ್ ಇಂದು (ಸೆಪ್ಟೆಂಬರ್ 29) ವೇದಿಕೆ ಮೇಲೆ ಆ ರಹಸ್ಯವನ್ನು ರಿವೀಲ್ ಮಾಡಿದ್ದಾರೆ.

ಲಾಯರ್ ಜಗದೀಶ್‌ಗೆ ಬಿಗ್‌ಬಾಸ್ ವೇದಿಕೆ ಮೇಲೆ ರಿವೀಲ್ ಕರ್ನಾಟಕದ ಸಿಎಂ ಆಗಬೇಕು ಅನ್ನೋ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಶೇ.95ರಷ್ಟು ಜನರು ಸಂತೋಷವಾಗಿಲ್ಲ. ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಕೇವಲ ಶೇ.5ರಷ್ಟು ಮಂದಿ ಮಾತ್ರ ಖುಷಿಯಾಗಿದ್ದಾರೆ. ಅವರಿಗಾಗಿ ರಾಜಕೀಯಕ್ಕೆ ಬರಬೇಕು ಅಂತ ಹೇಳಿದ್ದಾರೆ. ಅಲ್ಲದೆ, ಜನರ ಸಾಮಾನ್ಯರು ಕೂಡ ಎಂಎಲ್‌ಎ, ಎಂಪಿ ಆಗಬೇಕು ಅಂದಿದ್ದಾರೆ. ಈ ಮೂಲಕ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಕೀಲರೊಬ್ಬರು ಎಂಟ್ರಿ ಕೊಟ್ಟಿದ್ದಾರೆ.

ಹಾಗೇ ತನ್ನ ಹಿಂದೆ ದೊಡ್ಡದೊಂದು ತಂಡವೇ ಕೆಲಸ ಮಾಡುತ್ತಿದೆ. ಬಿಗ್‌ಬಾಸ್ ಮನೆಯೊಳಗೆ ಇರುವಷ್ಟು ದಿನ ಅವರು ನೋಡಿಕೊಳ್ಳುತ್ತಾರೆ. ಹಾಗೇ ಈಗಾಗಲೇ ಕೆಲವರಿಗೆ ಮಾಂಜಾ ಕೊಟ್ಟಿದ್ದು, ಮೂರು ತಿಂಗಳು ರಿಲ್ಯಾಕ್ಸ್ ಆಗಿರಲಿ. ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಅವರನ್ನು ನೋಡಿಕೊಳ್ಳುತ್ತೇನೆ ಎನ್ನುವ ಅರ್ಥದಲ್ಲಿ ವೇದಿಕೆ ಮೇಲೆ ಹೇಳಿದ್ದಾರೆ.

ಲಾಯರ್ ಜಗದೀಶ್ ಸ್ವರ್ಗಕ್ಕೆ ಹೋಗಬೇಕಾ? ನರಕಕ್ಕೆ ಹೋಗಬೇಕಾ? ಅನ್ನೋ ಪ್ರಶ್ನೆ ಕೂಡ ಎದುರಾಗಿತ್ತು. ಈ ವೇಳೆ ಲಾಯರ್ ಜಗದೀಶ್ ನಮ್ಮ ಜನರು ನರಕದಲ್ಲಿ ಇದ್ದಾರೆ. ಅದಕ್ಕಾಗಿ ನರಕಕ್ಕೆ ಹೋಗಬೇಕು ಅಂತ ಹೇಳಿದ್ದರು. ಆದರೆ, ಅವರಿಗೆ ವೋಟಿಂಗ್ ಓಪನ್ ಆದ ಮೊದಲ 15 ನಿಮಿಷದಲ್ಲಿಯೇ 2 ಲಕ್ಷದ 13 ಸಾವಿರ ವೋಟ್ ಬಂದಿತ್ತು ಎಂದು ಕಿಚ್ಚ ಸುದೀಪ್ ರಿವೀಲ್ ಮಾಡಿದ್ದರು. ಹೀಗಾಗಿ ಲಾಯರ್ ಜಗದೀಶ್ ಸ್ವರ್ಗಕ್ಕೆ ಕಾಲಿಟಿದ್ದಾರೆ.

More from Filmibeat

English summary
Bigg Boss Kannada Season 11 Lawyer Jagdeesh said he wants to become C M in front of Kichcha Sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X