BBK 12: ಬಿಗ್ ಬಾಸ್ ಮನೆಯೊಳಗೆ ಹೋಗೋರು ಇವರೇನಾ? ಲೀಕ್ ಆದ ಪಟ್ಟಿಯಲ್ಲಿ ಇರೋದ್ಯಾರು? ತಿರಸ್ಕರಿಸಿದ್ಯಾರು?
ಎಲ್ಲಾ ಕಡೆಯಲ್ಲೂ ಬಿಗ್ ಬಾಸ್ ಹವಾ ಜೋರಾಗಿದೆ. ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಬಿಗ್ ಬಾಸ್ ಈಗಾಗಲೇ ಶುರುವಾಗಿದೆ. ಬಿಗ್ ಬಾಸ್ ಕನ್ನಡದ 12ನೇ ಸೀಸನ್‌ಗೂ ವೇದಿಕೆ ಸಿದ್ಧವಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿರೂ ಬಿಗ್ ಬಾಸ್‌ನ 12ನೇ ಸೀಸನ್ ಅದ್ಧೂರಿಯಾಗಿ ಆರಂಭ ಆಗುತ್ತಿದೆ. ಕಿಚ್ಚ ಸುದೀಪ್ ಕೂಡ ನಿರೂಪಣೆ ಮಾಡುವುದಕ್ಕೆ ಸಿದ್ಧವಾಗಿ ನಿಂತಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋ ಆರಂಭ ಆಗುವುದಕ್ಕೂ ಮುನ್ನ ಈ ಬಾರಿ ಮನೆಯೊಳಗೆ ಯಾರೆಲ್ಲ ಹೋಗಬಹುದು ಎನ್ನುವ ಕುತೂಹಲ ಇದ್ದೇ ಇರುತ್ತೆ. ಕೆಲವು ಹೆಸರುಗಳು ಶೋ ಆರಂಭಕ್ಕೂ ಮುನ್ನವೇ ಲೀಕ್ ಆಗುತ್ತೆ. ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ಆಗುತ್ತಿರುತ್ತವೆ. ಆದರೆ, ಫೈನಲ್ ಅಂತ ಆಗೋದು ಗ್ರ್ಯಾಂಡ್ ಓಪನಿಂಗ್ ದಿನವೇ. ಈಗ ಕೂಡ 18 ಮಂದಿಯ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬಿಗ್ ಬಾಸ್ ಕನ್ನಡ 12 ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ. ಯಾಕಂದ್ರೆ 11ನೇ ಸೀಸನ್ ಸೂಪರ್ ಸಕ್ಸಸ್ ಆಗಿತ್ತು. ಹೀಗಾಗಿ 12ನೇ ಸೀಸನ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇನ್ನೇನು ಶೋ ಆರಂಭಕ್ಕೆ 10 ದಿನ ಬಾಕಿ ಉಳಿದಿದೆ. ಅಷ್ಟರಲ್ಲೇ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುತ್ತಾರೆ ಎನ್ನಲಾಗುತ್ತಿರುವ 18 ಮಂದಿಯ ಪಟ್ಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಹಾಗಿದ್ದರೆ, ಆ 18 ಮಂದಿ ಯಾರು? ಇವರಿಗೆ ರಿಜೆಕ್ಟ್ ಮಾಡಿದವರು ಯಾರು? ತಿಳಿಯುವುದಕ್ಕೆ ಮುಂದೆ ಓದಿ.
ಹೈಲೈಟ್ಸ್
ಬಿಗ್ ಬಾಸ್ ಕನ್ನಡ ಸೀಸನ್ 12 ಸೆಪ್ಟೆಂಬರ್ 28ರಿಂದ ಆರಂಭ
ಬಿಗ್ ಬಾಸ್‌ಗ ಎಂಟ್ರಿ ಕೊಡುತ್ತಿರುವ 18 ಮಂದಿ ಲಿಸ್ಟ್ ಲೀಕ್
18 ಮಂದಿಯ ಪಟ್ಟಿಯಲ್ಲಿ ಕೆಲವರಿಂದ ಆಫರ್ ರಿಜೆಕ್ಟ್
18 ಮಂದಿಯ ಪಟ್ಟಿ ಲೀಕ್
ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುವವರ 18 ಮಂದಿಯ ಪಟ್ಟಿಯೊಂದು ಕಳೆದೆರಡು ದಿನಗಳಿಂದ ಓಡಾಡುತ್ತಿದೆ. ಅದರಲ್ಲಿ ಬಹುತೇಕ ಸೀರಿಯಲ್ ಕಲಾವಿದರ ಹೆಸರುಗಳೇ ಹೆಚ್ಚಿದೆ. ಜೊತೆಗೆ ವಿವಾದ ಸೃಷ್ಟಿಸಿದವರ ಪಟ್ಟಿ ಕೂಡ ಇದೆ. ಸಾಮಾನ್ಯವಾಗಿ ಸಿನಿಮಾ, ಸೀರಿಯಲ್ ಸೇರಿದಂತೆ ಬೇರೆ ಬೇರೆ ಕ್ಷೇತ್ರಕ್ಕೆ ಸಂಬಂಧಿಸಿದವರು, ವಿವಾದ ಸೃಷ್ಟಿಸಿದವರನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗುತ್ತೆ. ಈಗ ಲೀಕ್ ಆಗಿರುವ ಪಟ್ಟಿಯಲ್ಲಿ ಕೆಲವರ ಹೆಸರು ಔಟ್ ಆಗಿದೆ.
ಲಿಸ್ಟ್‌ನಲ್ಲಿರುವ ಆ 18 ಮಂದಿ ಯಾರು?
ಈಗಾಗಲೇ ಲೀಕ್ ಆಗಿರುವ 18 ಮಂದಿಯ ಪಟ್ಟಿಯಲ್ಲಿ ಹಿರಿಯ ಕಿರುತೆರೆ ನಟಿ ಸ್ವಾತಿ, ಸಾಗರ್ ಬಿಲ್ಲಿಗೌಡ, ಸಂಜನಾ ಬುರ್ಲಿ, ಶ್ವೇತಾ ಪ್ರಸಾದ್, ಮೇಘಾ ಶೆಟ್ಟಿ, ಅರವಿಂದ್ ರತನ್, ಪಾಯಲ್ ಚೆಂಗಪ್ಪ, ವರುಣ್ ಆರಾಧ್ಯ, ವಿಜಯ್ ಸೂರ್ಯ, ದೀಪಿಕಾ ಗೌಡ, ಧನುಷ್, ಅಮೃತಾ ರಾಮಸ್ವಾಮಿ, ಸಿಂಗರ್ ಸುನೀಲ್, ಬಾಳು ಬೆಳಗುಂದಿ ಹೆಸರುಗಳು ಈ ಪಟ್ಟಿಯಲ್ಲಿ ಇವೆ.

ವಿವಾದಾತ್ಮಕ ಹೆಸರುಗಳು
ಬಿಗ್ ಬಾಸ್ ಕನ್ನಡ ಸೀಸನ್ 12ರ ಪಟ್ಟಿಯಲ್ಲಿ ವಿವಾದಾತ್ಮಕ ಹೆಸರುಗಳು ಇವೆ. ಅವುಗಳಲ್ಲಿ ಮುಂಚೂಣಿಯಲ್ಲಿರೋದು ಖಾಸಗಿ ವಾಹಿನಿಯಲ್ಲಿ ಮಾಜಿ ಸುದ್ದಿ ನಿರೂಪಕಿ ಹಾಗೂ ವಿವಾದಾತ್ಮಕ ಪರ್ಸನಾಲಿಟಿ ದಿವ್ಯಾ ವಸಂತ್ ಇದ್ದಾರೆ. ಹಾಗೇ ಸೌಜನ್ಯ ಪ್ರಕರಣದಲ್ಲಿ ಸುದ್ದಿಯಾಗಿದ್ದ ಯೂಟ್ಯೂಬರ್ ಸಮೀರ್ ಎಂಡಿ ಹೆಸರುಗಳು ಕೂಡ ಈ ಪಟ್ಟಿಯಲ್ಲಿವೆ.
ತಿರಸ್ಕರಿಸಿವರು ಯಾರು?
ಈ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಇದರಲ್ಲಿ ಕೆಲವರು ಈಗಾಗಲೇ ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸರಿಗಮಪ ಗಾಯಕ ಬಾಳು ಬೆಲಗುಂದಿ ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲವೆಂದು ಪ್ರತಿಕ್ರಿಯೆ ನೀಡಿದ್ದಾಗಿ ವರದಿಯಾಗಿದೆ. ಹಾಗೇ ಇನ್ನೂ ಕೆಲವರ ಹೆಸರುಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅವರು ಯಾರೂ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











