BBK 12 Exclusive: ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗೋರು ಇವರೇ.. ಈ ಲಿಸ್ಟ್ ನೋಡಿ

ಬಿಗ್‌ ಬಾಸ್ ಕನ್ನಡ ಸೀಸನ್ 12 ಆರಂಭ ಆಗುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಹೊಸ ಸೀಸನ್ ಬಗ್ಗೆ ನೂರೆಂಟು ವಿಷಯಗಳು ಹೊರ ಬೀಳುತ್ತಿವೆ. ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿರುವ ಈ ರಿಯಾಲಿಟಿ ಶೋ ಕುತೂಹಲ ಕೆರಳಿಸಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗಬಹುದು? ಈ ಬಾರಿ ಮನೆಗೆ ಹೇಗಿರುತ್ತೆ? ಅನ್ನೋದನ್ನು ಕುತೂಹಲದಿಂದ ನೋಡುತ್ತಿದ್ದಾರೆ.

ಕಿಚ್ಚ ಸುದೀಪ್ ಈಗಾಗಲೇ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆ ಹೇಗಿರುತ್ತೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ದಸರಾ ಹಿನ್ನೆಲೆಯಲ್ಲಿ ಸೆಟ್ಟು ನಿರ್ಮಾಣ ಮಾಡಿದ್ದು, ಕಲರ್‌ ಫುಲ್ ಆಗಿದೆ. ನಾಡಹಬ್ಬ ಶುರುವಾಗಿ ಇನ್ನೂ ಒಂದು ವಾರ ಆಯ್ತು. ಆದರೆ, ಇಂದಿನಿಂದ ಬಿಗ್‌ ಬಾಸ್‌ ಮನೆಯಲ್ಲಿ ದಸರಾ ಆರಂಭ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

Bigg Boss Kannada season 12 reality show Exclusive contestants list

ಈ ಗ್ಯಾಪ್‌ನಲ್ಲಿ ಕಿಚ್ಚ ಸುದೀಪ್ ಅನಿರೀಕ್ಷಿತವಾದದನ್ನು ನಿರೀಕ್ಷಿಸಿ ಎಂದು ಹೇಳಿದ್ದರು. ಹೀಗಾಗಿ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಯಾರೆಲ್ಲ ಹೋಗ್ತಾರೆ? ಅನ್ನೋ ಕುತೂಹಲವಿತ್ತು. ಸದ್ಯ ಫಿಲ್ಮಿಬೀಟ್‌ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇವರೆಲ್ಲ ಬಿಗ್ ಬಾಸ್ ಮನೆಯೊಳಗೆ ಹೋಗೋದು ಕನ್ಫರ್ಮ್. ಹಾಗಿದ್ದರೆ, ಬಿಗ್ ಬಾಸ್ ಮನೆಯೊಳಗೆ ಹೋಗ್ತಿರೋ ಸದಸ್ಯರ ಪಟ್ಟಿ ಇಲ್ಲಿದೆ.

ಗಿಲ್ಲಿ ನಟ/ ನಟರಾಜ್

'ಕಾಮಿಡಿ ಕಿಲಾಡಿಗಳು' ಶೋಗಳಲ್ಲಿ ಭರಪೂರ ಮನರಂಜನೆ ನೀಡಿರುವ ನಟ ಗಿಲ್ಲಿ ನಟ ಅಲಿಯಾಸ್ ಗಿಲ್ಲಿ ನಟರಾಜ್. ಕಾಮಿಡಿ ಸೆನ್ಸ್‌ನಿಂದ ಜನರನ್ನು ಮನರಂಜಿಸಿರುವ ಗಿಲ್ಲಿ ನಟ ಬಿಗ್ ಬಾಸ್ ಮನೆಯೊಳಗೆ ಹೋಗುವುದು ಕನ್ಫರ್ಮ್ ಎನ್ನಲಾಗಿದೆ.

Bigg Boss Kannada season 12 reality show Exclusive contestants list

ಕಾಕ್ರೋಜ್ ಸುಧೀ

'ಟಗರು' ಸಿನಿಮಾ ಮೂಲಕ ಚಿತ್ರರಂಗದಲ್ಲಿ ಜನಪ್ರಿಯರಾದ ನಟ ಕಾಕ್ರೋಜ್ ಸುಧಿ. ನೆಗೆಟಿವ್ ರೋಲ್‌ಗಳಲ್ಲಿ ಮಿಂಚಿರುವ ಕ್ರಾಕೋಚ್ ಸುಧಿ ಬಿಗ್ ಬಾಸ್ ಮನೆಗೆ ಹೋಗೋದು ಕನ್ಫರ್ಮ್. ಇತ್ತೀಚೆಗೆ ಕಲರ್ಸ್ ಕನ್ನಡ ಮಾಸ್ಕ್ ಮ್ಯಾನ್ ವಿಡಿಯೋ ರಿಲೀಸ್ ಮಾಡಿತ್ತು. ಆ ವಿಡಿಯೋದಲ್ಲಿರೋದು ಕಾಕ್ರೋಜ್ ಸುಧಿ ಎಂದು ಗುರುತಿಸಿದ್ದರು. ಅವರೂ ಕೂಡ ಮನೆಯೊಳಗೆ ಹೋಗೋದು ಕನ್ಫರ್ಮ್ ಆಗಿದೆ.

ಶ್ವೇತಾ ಪ್ರಸಾದ್

ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ಶ್ವೇತಾ ಪ್ರಸಾದ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಮೂಲತಃ ಶಿವಮೊಗ್ಗದವರಾದ ಶ್ವೇತಾ ಪ್ರಸಾದ್ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. 'ರೀರಸ್ತು ಶುಭಮಸ್ತು' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ನಟಿ ಬಳಿಕ 'ರಾಧಾ ರಮಣ' ಧಾರಾವಾಹಿ ಜನಪ್ರಿಯತೆ ತಂದು ಕೊಟ್ಟಿತ್ತು.

ಧನುಷ್ ಗೌಡ

ಕನ್ನಡ ಕಿರುತೆರೆಯ ನಟ ಪ್ರಿಯ ನಟ ಧನುಷ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ 'ಟೆಂಟ್' ಸಿನಿಮಾ ಮೂಲಕ ನಟನೆಯನ್ನು ಕಲಿತ ಧನುಷ್ ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. 'ಗೀತಾ' ಧಾರಾವಾಹಿಯಲ್ಲಿ ನಾಯಕನಾಗಿ ವೀಕ್ಷಕರ ಮನಗೆದ್ದಿದ್ದಾರೆ.

ಡಾಗ್ ಮ್ಯಾನ್ ಸತೀಶ್

ತನ್ನ ಬಳಿ ₹50 ಕೋಟಿ ಶ್ವಾನವಿದೆ ಎಂದು ಹೇಳಿ ಜನಪ್ರಿಯವಾಗಿದ್ದ ಡಾಗ್ ಮ್ಯಾನ್ ಸತೀಶ್ ಬಿಗ್‌ ಬಾಸ್‌ಗೆ ಹೋಗೋದು ಕನ್ಫರ್ಮ್ ಆಗಿದೆ. ಇತ್ತೀಚೆಗೆ ಇವರು ಹೇಳಿದ್ದೆಲ್ಲ ಸುಳ್ಳು ಎಂದು ವಿವಾದಕ್ಕೆ ಸಿಲುಕಿದ್ದರು. ಇವರು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆಂದು ಮೂಲಗಳು ಹೇಳಿವೆ.

ವಿಜಯ್ ಸೂರ್ಯ

ವಿಜಯ್ ಸೂರ್ಯ ನಟಿಸುತ್ತಿರುವ 'ದೃಷ್ಟಿಬೊಟ್ಟು' ಸೀರಿಯಲ್‌ನಿಂದ ಕಣ್ಮರೆಯಾಗುತ್ತಿದ್ದಂತೆ ಬಿಗ್ ಬಾಸ್ ಮನೆಗೆ ಹೋಗೋದು ಕನ್ಫರ್ಮ್ ಎಂಬ ಸುದ್ದಿ ಹಬ್ಬಿತ್ತು. ಅದು ಈಗ ನಿಜವಾಗಿದೆ. ವಿಜಯ್ ಸೂರ್ಯ ಕೂಡ 18 ಮಂದಿ ಸ್ಪರ್ಧಿಗಳಲ್ಲಿ ಒಬ್ಬರು ಎನ್ನಲಾಗಿದೆ.

Bigg Boss Kannada season 12 reality show Exclusive contestants list

ಅಭಿಷೇಕ್ ಶ್ರೀಕಾಂತ್

ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುತ್ತಿರುವ ಮತ್ತೊಬ್ಬ ನಟ ಅಭಿಷೇಕ ಶ್ರೀಕಾಂತ್. 'ಶಾಂತಂ ಪಾಪಂ' ಮೂಲಕ ನಟನೆಗಿಳಿದ ಅಭಿಷೇಕ್ 'ಯಾಜಮಾನಿ' ಧಾರಾವಾಹಿಯಲ್ಲಿ ನಟಿಸಿದ್ದರು. ಆ ಬಳಿಕ 'ಲಕ್ಷಣ', 'ವಧು' ಧಾರಾವಾಹಿಗಳಲ್ಲಿ ಮಿಂಚಿದ್ದರು. ಇವರು ಬಿಗ್ ಬಾಸ್‌ ಕನ್ನಡದ 12ನೇ ಸೀಸನ್ ಎಂಟ್ರಿ ಕೊಡಲಿದ್ದಾರೆ.

More from Filmibeat

English summary
Bigg Boss Kannada season 12 reality show Exclusive contestants list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X