Bigg Boss Kannada 13: ಮೋಸ ಹೋಗ್ಬೇಡಿ.. ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಎಂಟ್ರಿ ಕೊಡೋಕೆ ಇಲ್ಲಿದೆ ಅಧಿಕೃತ ಲಿಂಕ್
ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೊಂದು ಸೀಸನ್‌ಗೆ ವೇದಿಕೆ ರೆಡಿಯಾಗುತ್ತಿದೆ. ಕಲರ್ಸ್ ಕನ್ನಡ ಅಂದುಕೊಂಡಿದ್ದಕ್ಕಿಂತ ಬೇಗನೇ ಬಿಗ್ ಬಾಸ್ ಅನ್ನು ಆರಂಭ ಮಾಡುವುದಕ್ಕೆ ವೇದಿಕೆಯನ್ನು ರೆಡಿ ಮಾಡಿಕೊಳ್ಳುತ್ತಿದೆ. ಈ ಬಾರಿ ಸೆಲೆಬ್ರೆಟಿಗಳ ಜೊತೆಗೆ ಸಾಮಾನ್ಯ ಜನರಿಗೂ ಬಿಗ್ ಬಾಸ್ ಮನೆಗೆ ಹೋಗುವುದಕ್ಕೆ ಅವಕಾಶ ನೀಡಲಾಗುತ್ತಿದೆ. ಹೀಗಾಗಿ 13ನೇ ಸೀಸನ್ ಸಾಮಾನ್ಯ ಜನರು Vs ಸೆಲೆಬ್ರೆಟಿಗಳು ಆಗುವ ಸಾಧ್ಯತೆಯಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಬೆನ್ನಲ್ಲೇ 13ನೇ ಸೀಸನ್ ಅನ್ನು ಅಂದುಕೊಂಡಿದ್ದಕ್ಕಿಂತ ಬೇಗನೇ ಶುರು ಮಾಡಲಾಗುತ್ತಿದೆ. ಈಗಾಗಲೇ ನೋಡಿರುವ ಹಾಗೆ ಪ್ರತಿಯೊಂದು ಸೀಸನ್‌ನಲ್ಲೂ ಒಂದೊಂದು ವಿಭಿನ್ನ ಕಾನ್ಸೆಪ್ಟ್ ಇಟ್ಕೊಂಡು ಈ ರಿಯಾಲಿಟಿ ಶೋ ವೀಕ್ಷಕರನ್ನು ರಂಜಿಸಿದೆ. ಈ ಬಾರಿ ಕೂಡ ಅಂತಹದ್ದೇ ಒಂದು ಕಾನ್ಸೆಪ್ಟ್ ಮೂಲಕ ರಂಜಿಸುವುದಕ್ಕೆ ರೆಡಿಯಾಗಿದೆ.

ಪ್ರತಿಭೆ ಇರುವ ಸಾಮಾನ್ಯ ಜನರು ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಬಹುದು. ಅಂದರೆ, ಸೋಶಿಯಲ್ ಮೀಡಿಯಾ ಇನ್ಸ್ಪ್ಯೂಯೆನ್ಸರ್‌ಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಬಿಗ್ ಬಾಸ್ ಆಡಿಷನ್‌ಗೆ ಹೋಗುವುದು ಹೇಗೆ ಅನ್ನೋ ಗೊಂದಲ ಇದ್ದೇ ಇರುತ್ತೆ. ಅದಕ್ಕಾಗಿ ಕಲರ್ಸ್ ಕನ್ನಡ ಒಂದು ಅಧಿಕೃತ ಲಿಂಕ್ ಅನ್ನು ನೀಡಿದೆ. ಅದರ ಮೂಲಕ ಆಡಿಷನ್‌ನಲ್ಲಿ ಭಾಗವಹಿಸಿವ ಅವಕಾಶ ಪಡೆದುಕೊಳ್ಳಬಹುದು.
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಉತ್ಸಾಹ
'ಬಿಗ್ ಬಾಸ್' ರಿಯಾಲಿಟಿ ಶೋ ನೂತನ ಸೀಸನ್‌ನ ಆಡಿಷನ್ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯಾದ್ಯಂತ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಲು ಪ್ರತಿಭೆಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ನೂರಾರು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಭಾರಿ ಉತ್ಸಾಹ ತೋರಿಸುತ್ತಿದ್ದಾರೆಂದು ಕಲರ್ಸ್ ಕನ್ನಡ ಮಾಹಿತಿ ಹಂಚಿಕೊಂಡಿದೆ.
ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ವಿಶಿಷ್ಟವಾದ ಆಡಿಷನ್ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಇನ್‌ಫ್ಲುಯೆನ್ಸರ್‌ಗಳು ಕಲರ್ಸ್ ಕನ್ನಡ ವಾಹಿನಿಯನ್ನು ಟ್ಯಾಗ್ ಮಾಡುವ ಮೂಲಕ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿರೋ ಕಲರ್ಸ್ ಕನ್ನಡ ಇವರಿಗಾಗಿಯೇ ಒಂದು ವೇದಿಕೆಯನ್ನು ರೆಡಿ ಮಾಡಿಕೊಡುತ್ತಿದೆ.

ಅಧಿಕೃತ ಮಾರ್ಗ ಅನುಸರಿಸಿ
ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಬೇಕು ಅಂತ ಬಯಸುವವರು ಇನ್‌ಸ್ಟಾಗ್ರಾಂನಲ್ಲಿ ಟ್ಯಾಗ್ ಮಾಡಿದರೆ ಮಾತ್ರ ಸಾಲದು. ಅದಕ್ಕೆ ಸೂಕ್ತವಾದ ಅಧಿಕೃತ ಮಾರ್ಗವನ್ನು ಅನುಸರಿಸಬೇಕು. ಈ ಸುವರ್ಣಾವಕಾಶ ಕೈತಪ್ಪಬಾರದು ಎಂದರೆ ಆಡಿಷನ್ ಪ್ರಕ್ರಿಯೆಯನ್ನು ಅಧಿಕೃತ ಚಾನೆಲ್ ಮೂಲಕವೇ ಪೂರ್ಣಗೊಳಿಸಬೇಕು. ಕೇವಲ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಕಿ ಟ್ಯಾಗ್ ಮಾಡುವುದರಿಂದ ನಿಮ್ಮ ಅಪ್ಲಿಕೇಶನ್ ಅನ್ನು ಆಯ್ಕೆ ಸಮಿತಿ ಪರಿಶೀಲಿಸುವುದಿಲ್ಲ ಎಂದು ಕಲರ್ಸ್ ಕನ್ನಡ ಹೇಳಿಕೊಂಡಿದೆ.
ನಿಮ್ಮ ವಿಡಿಯೋ ಹಾಗೂ ವೈಯಕ್ತಿಕ ವಿವರಗಳು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಬಿಗ್ ಬಾಸ್ ಆಯ್ಕೆ ಮಂಡಳಿಗೆ ತಲುಪಲು ಈ ಅಧಿಕೃತ ವೆಬ್‌ಸೈಟ್ ಲಿಂಕ್ ಮಾತ್ರ ಏಕೈಕ ಮಾರ್ಗ. 🔗 ಅಧಿಕೃತ ಆಡಿಷನ್ ಲಿಂಕ್: https://colorskannada.jiostar.com/
ವಂಚಕರ ಬಗ್ಗೆ ಎಚ್ಚರ
ಇನ್ನು ಬಿಗ್ ಬಾಸ್ ಆಡಿಷನ್ ಪ್ರಕ್ರಿಯೆ ಸಂಪೂರ್ಣವಾಗಿ ಉಚಿತವಾಗಿದ್ದು, ಆಡಿಷನ್ ವಿಡಿಯೋ ಮಾಡಲು, ಪ್ರವೇಶ ಫಾರ್ಮ್ ನೀಡಲು ಅಥವಾ ಶೋಗೆ ನಿಮ್ಮನ್ನು ಆಯ್ಕೆ ಮಾಡಿಕೊಡುವುದಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಹಣದ ಬೇಡಿಕೆ ಇಟ್ಟರೆ, ಅವರನ್ನು ನಂಬಿ ಮೋಸ ಹೋಗಬೇಡಿ. ಬಿಗ್ ಬಾಸ್ ಹೆಸರಿನಲ್ಲಿ ನಡೆಯುವ ಇಂತಹ ವಂಚನೆಗಳಿಗೆ ಸಿಕ್ಕಿಕೊಳ್ಳಬೇಡಿ.
ನಿಮ್ಮಲ್ಲಿರುವ ಅಪ್ಪಟ ಪ್ರತಿಭೆ, ನಿಮ್ಮ ಜೀವನದ ಅನನ್ಯ ಕಥೆ ಮತ್ತು ನಿಮ್ಮ ನೈಜ ವ್ಯಕ್ತಿತ್ವವನ್ನು ಇಡೀ ಜಗತ್ತಿನ ಮುಂದೆ ಅನಾವರಣಗೊಳಿಸಲು ಇದುವೇ ಸೂಕ್ತ ಸಮಯ. ಇನ್ನು ತಡ ಮಾಡಬೇಡಿ, ತಕ್ಷಣವೇ ಮೇಲೆ ನೀಡಿರುವ ಅಧಿಕೃತ ಲಿಂಕ್‌ಗೆ ಭೇಟಿ ಕೊಟ್ಟು, ನಿಮ್ಮ ವಿಡಿಯೋ ಅಪ್‌ಲೋಡ್ ಮಾಡಿ.


Click it and Unblock the Notifications
