ಬಿಗ್‌ಬಾಸ್‌ನಲ್ಲಿ ಇಬ್ಬರು ನಟಿಯರ ನಡುವೆ ಫೈಟ್; ಕಪಾಳಮೋಕ್ಷ ಮಾಡಿದ ನಟಿ ಮನೆಯಿಂದ ಔಟ್!

ಬಿಗ್ ಬಾಸ್ ರಿಯಾಲಿಟಿ ಶೋ ಮೈಂಡ್ ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. ಇಲ್ಲಿ ಆಟನೂ ಇರುತ್ತೆ ಪಾಠನೂ ಇರುತ್ತೆ. ಪೈಪೋಟಿನೂ ಇರುತ್ತೆ. ಕಿತ್ತಾಟನೂ ಇರುತ್ತೆ. ಟಾಸ್ಕ್‌ ಮಾಡುವಾಗ ಎಂತಹ ಪರಿಸ್ಥಿತಿ ಎದುರಾಗುತ್ತೋ ಗೊತ್ತಿಲ್ಲ. ಕೆಲವೊಮ್ಮೆ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗುತ್ತೆ. ಇಂತಹ ಘಟನೆಗಳು ಕನ್ನಡ ಬಿಗ್‌ಬಾಸ್‌ನಲ್ಲೂ ನಡೆದಿದೆ.

ಕನ್ನಡ ಬಿಗ್‌ಬಾಸ್‌ನಲ್ಲೂ ಒಬ್ಬರ ಮೇಲೆ ಇನ್ನೊಬ್ಬರು ಕೈ ಮಿಲಾಯಿಸಿ ಮನೆಯಿಂದ ಹೊರ ಬಂದಿದ್ದೂ ಇದೆ. ಅದಕ್ಕೆ ಹುಚ್ಚ ವೆಂಕಟ್ ಅವರೇ ಸಾಕ್ಷಿ. ಇಂತಹ ಹಲವು ಘಟನೆಗಳು ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ನಡೆಯುತ್ತಲೇ ಇರುತ್ತವೆ. ಸದ್ಯ ಬಿಗ್‌ಬಾಸ್ ಮರಾಠಿ ಸೀಸನ್ 5 ನಡೆಯುತ್ತಿದೆ. ಈ ವೇಳೆನೂ ಇಂತಹದ್ದೇ ಒಂದು ಘಟನೆ ನಡೆದಿದೆ.

Bigg Boss Marathi 5 Aarya Jadhao slapped Nikki Tamboli and evicted from the house

ಬಿಗ್‌ಬಾಸ್ ಮನೆಯೊಳಗೆ ಹೋಗುವಾಗಲೇ ಕೆಲವು ಷರತ್ತುಗಳನ್ನು ವಿಧಿಸಲಾಗಿರುತ್ತೆ. ಎಂತಹದ್ದೇ ಸಂದರ್ಭದಲ್ಲಿ ಯಾರಿಗೂ ದೈಹಿಕವಾಗಿ ಹಿಂಸೆ ಅಥವಾ ಹಲ್ಲೆಗೆ ಮುಂದಾಗಬಾರದು, ಹೊಡೆದಾಡಿಕೊಳ್ಳಬಾರದು ಎಂದು ಷರತ್ತು ಹಾಕಿಯೇ ಮನೆಯೊಳಗೆ ಕಳುಹಿಸುತ್ತಾರೆ. ಆದ್ರೀಗ ಬಿಗ್‌ ಬಾಸ್ ಮರಾಠಿಯ ಸ್ಪರ್ಧಿ ಆರ್ಯಾ ಜಾದವ್ ಸಹ ಸ್ಪರ್ಧಿಯ ಕೆನ್ನೆಗೆ ಬಾರಿಸಿ ರಿಯಾಲಿಟಿ ಶೋನಿಂದಲೇ ಹೊರಬಿದ್ದಿದ್ದಾರೆ. ಅಸಲಿಗೆ ನಡೆದ ಘಟನೆ ಏನು? ತಿಳಿಯಲು ಮುಂದೆ ಓದಿ.

ಬಿಗ್‌ಬಾಸ್ ಮರಾಠಿಯಲ್ಲಿ ಆರ್ಯಾ ಜಾದವ್ ಹಾಗೂ ನಿಕ್ಕಿ ತಂಬೋಲಿ ಸ್ಪರ್ಧಿಗಳಾಗಿದ್ದರು. ಕ್ಯಾಪ್ಟನ್ಸಿ ಟಾಸ್ಕ್‌ ನಡೆಯುತ್ತಿತ್ತು. ಈ ವೇಳೆ ಎದುರಾಳಿಗಳಿಂದ ಡೈಮಂಡ್ ಅನ್ನು ರಕ್ಷಣೆ ಮಾಡಬೇಕಿತ್ತು. ಈ ವೇಳೆ ಸ್ಪರ್ಧಿಯಾಗಿದ್ದ ಆರ್ಯಾ ಜಾದವ್ ಡೈಮಂಡ್ ರಕ್ಷಣೆ ಮಾಡುವುದಕ್ಕೆ ಬಾಗಿಲನ್ನು ಹಾಕಿದ್ದರು. ಈ ವೇಳೆ ನಟಿ ನಿಕ್ಕಿ ತಂಬೋಲಿ ಹಾಗೂ ಆರ್ಯಾ ಜಾದವ್ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಈ ವೇಳೆ ರೊಚ್ಚಿಗೆದ್ದ ಆರ್ಯಾ ಜಾದವ್ ಮತ್ತೊಬ್ಬ ಸ್ಪರ್ಧಿ ನಿಕ್ಕಿ ತಂಬೋಲಿ ಕೆನ್ನೆಗೆ ಬಾರಿಸಿದ್ದಾರೆ.

Bigg Boss Marathi 5 Aarya Jadhao slapped Nikki Tamboli and evicted from the house

ಈ ಘಟನೆ ನಡೆಯುತ್ತಿದ್ದಂತೆ ನಿಕ್ಕಿ ತಂಬೋಲಿ ಬಿಗ್‌ಬಾಸ್ ಮನೆಯೊಳಗೆ ನ್ಯಾಯಕ್ಕಾಗಿ ಮೊರೆ ಇಟ್ಟರು. ಆರ್ಯಾ ಜಾದವ್ ಕೆನ್ನೆಗೆ ಬಾರಿದ್ದಕ್ಕೆ ನ್ಯಾಯ ಬೇಕು ಅಂತ ಪಟ್ಟು ಹಿಡಿದಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಡ ಆರ್ಯಾ ಜಾದವ್ ಅವರನ್ನು ಬಿಗ್‌ಬಾಸ್ ಮನೆಯಿಂದ ಹೊರ ಹಾಕಬೇಕು ಅಂತ ಪಟ್ಟು ಹಿಡಿದಿದ್ದರು. ಬಿಗ್‌ಬಾಸ್ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದರಿಂದ ಅವರನ್ನು ಮನೆಯಿಂದ ಹೊರ ಹಾಕಲಾಗಿದೆ.

ನಟಿ ನಿಕ್ಕಿ ತಂಬೋಲಿ ಬಿಗ್‌ಬಾಸ್ ಮರಾಠಿ ಸೀಸನ್ 5ಗೆ ಬರುವುದಕ್ಕೂ ಮುನ್ನ ಬಿಗ್‌ಬಾಸ್ ಹಿಂದಿ 14ಕ್ಕೂ ಸ್ಪರ್ಧಿಯಾಗಿದ್ದರು. ಆ ವೇಳೆ ಕೂಡ ನಿಕ್ಕಿ ತಂಬೋಲಿ ವಿರುದ್ಧ ದೂರುಗಳು ಬಂದಿದ್ದವು. ಸಹ ಸ್ಪರ್ಧಿಗಳೊಂದಿಗೆ ನಿಕ್ಕಿ ತಂಬೋಲಿ ಸರಿಯಾಗಿ ನಡೆದುಕೊಳ್ಳುವುದಿಲ್ಲ. ಸ್ಪರ್ಧಿಗಳಿಗೆ ಗೌರವವನ್ನು ಕೊಡುವುದಿಲ್ಲ ಎಂದು ದೂರಿದ್ದರು. ಇಷ್ಟೇ ಅಲ್ಲದೆ ಬಿಗ್‌ ಬಾಸ್ ಮರಾಠಿಯ ನಿರೂಪಕ ರಿತೇಶ್ ದೇಶ್ಮುಖ್‌ಗೆ ಮರಾಠಿ ಹಾಗೂ ಮಹಾರಾಷ್ಟ್ರ ಸಂಸ್ಕೃತಿ ಬಗ್ಗೆ ಗೌರವವಿಲ್ಲ ಎಂದು ದೂರಿದ್ದಾರೆ.

ನಿಕ್ಕಿ ತಂಬೋಲಿ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಹಾಗೇ ರಿಯಾಲಿಟಿ ಶೋಗಳಲ್ಲಿ ಹೆಚ್ಚು ಆಕ್ಟಿವ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ನಟಿಯ ಹೆಸರು 200 ಕೋಟಿ ರೂಪಾಯಿ ವಂಚನೆ ಮಾಡಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಕೇಸ್‌ನಲ್ಲಿಯೂ ತಳುಕು ಹಾಕಿಕೊಂಡಿತ್ತು.

More from Filmibeat

English summary
Bigg Boss Marathi 5 Aarya Jadhao slapped Nikki Tamboli and evicted from the house:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X