Bigg Boss: "ತನಿಶಾ ಜೊತೆ ಹೊಂದಿಕೊಳ್ಳಲು ಸಾಧ್ಯವಿಲ್ಲ".. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಪವಿ ಪೂವಪ್ಪ
ಬಿಗ್ ಬಾಸ್ ಆಟನೇ ಅಂತಹದ್ದು, ಆಗಾಗ ಮನೆಯ ಸದಸ್ಯರಿಗೆ ಏನಾದರೂ ಒಂದು ಟ್ವಿಸ್ಟ್ ಕೊಡುತ್ತಲೇ ಇರುತ್ತಾರೆ. 50 ದಿನಗಳಾದ್ಮೇಲೆ ಬಿಗ್ ಬಾಸ್ ಮನೆಗೆ ಇಬ್ಬರು ಸ್ಪರ್ಧಿಗಳನ್ನು ವೈಲ್ಡ್ ಕಾರ್ಡ್ ಎಂಟ್ರಿ ಕೊಡಿಸಿದ್ದಾರೆ. ಈಗ ಮನೆಯೊಳಗೆ ಉಳಿದಿರುವ ಸ್ಪರ್ಧಿಗಳಿಗೆ ಟಪ್ ಕಾಂಪಿಟೇಷನ್ ಕೊಡೋದು ಗ್ಯಾರಂಟಿ.
ಅಂದ್ಹಾಗೆ ಬಿಗ್ ಬಾಸ್ ಮನೆಯೊಳಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವವರಲ್ಲಿ ಪವಿ ಪೂವಪ್ಪ ಕೂಡ ಒಬ್ಬರು. ಸುಮಾರು 10 ವರ್ಷಗಳಿಂದ ಮಾಡಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರೊ ಪವಿ ಪೂವಪ್ಪ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಜಿಯೋ ಸಿನಿಮಾಗೆ ಸಂದರ್ಶನ ನೀಡಿದ್ದರು. ಅದರ ತುಣುಕನ್ನು ಜಿಯೋ ಸಿನಿಮಾ ರಿಲೀಸ್ ಮಾಡಿದೆ.
ಬಿಗ್ ಬಾಸ್ ಮನೆಯೊಳಗಿರುವ ಸದಸ್ಯರ ಲೆಕ್ಕಾಚಾರಗಳನ್ನು ತಪ್ಪಿಸುವುದಕ್ಕೆ ಸಿದ್ದರಾಗಿ ಪವಿ ಪೂವಯ್ಯ ರೆಡಿಯಾಗಿ ಒಳಗೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ಈ ಸಂದರ್ಶನದಲ್ಲಿ ಜಾಲಿಗೆ ಜಾಲಿ. ಕೋಷಕ್ಕೆ ಕೋಪ ಎಂದು ಹೇಳಿದ್ದಾರೆ. ಈ ಸಂದರ್ಶನದ ಕೆಲವು ತುಣುಕುಗಳು ಇಲ್ಲಿವೆ.

"ಹತ್ತು ವರ್ಷದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದೀನಿ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಹೋಗುತ್ತಿರೋದು ನನಗೆ ತುಂಬಾನೇ ಖುಷಿ ಕೊಟ್ಟಿದೆ. ತುಂಬಾ ಕುತೂಹಲವಿದೆ. ಆದರೆ, ಭಯ ಮಾತ್ರ ಖಂಡಿತಾ ಇಲ್ಲ." ಎಂದು ಪವಿ ಪೂವಪ್ಪ ಹೇಳಿದ್ದಾರೆ.
ವೈಲ್ಡ್ ಎಂಟ್ರಿ ಮೂಲಕ ಬಿಗ್ ಬಾಸ್‌ಗೆ ಹೋಗುತ್ತಿರೋದು ಅವರ ಅಮ್ಮ ಅಣ್ಣನಿಗೆ ಎಲ್ಲ ತುಂಬ ಖುಷಿಯಾಗಿತ್ತೆಂದು ಹೇಳಿದ್ದಾರೆ. "ಇದೂವರೆಗೆ ಜನರು ನನ್ನನ್ನು ಮಾಡೆಲಿಂಗ್ ಫೀಲ್ಡ್‌ನಲ್ಲಿ ನೋಡಿದ್ದಾರೆ. ನನ್ನ ಕ್ಯಾರೆಕ್ಟರ್ ಬಿಹೇವಿಯರ್ ಎಲ್ಲವನ್ನು ಇಡೀ ಕರ್ನಾಟಕದ ಜನರು ನೋಡಬಹುದು. ಜನರು ನನ್ನಿಂದ ಮನರಂಜನೆಯನ್ನು ನಿರೀಕ್ಷಿಸಬಹುದು." ಎಂದು ಭರವಸೆ ನೀಡಿದ್ದಾರೆ.
"ನಾನು ಸ್ವಲ್ಪ ಕೋಪಿಷ್ಟೇ. ಆದರೆ, ಸಂದರ್ಭದ ಮೇಲೆ ಎಲ್ಲವೂ ಹೋಗತ್ತೆ. ಸುಮ್ ಸುಮ್ನೆ ಚಿಕ್ಕ ಪುಟ್ಟ ವಿಷಯಕ್ಕೆಲ್ಲ ಕೋಪ ಬರಲ್ಲ. ಅದು ಬಿಟ್ರೆ ನಾನು ಖುಷಿ ಖುಷಿಯಾಗಿರುತ್ತೇನೆ. ಕೋಪ ಬಂದ್ರೆ ಕಷ್ಟ ಅಷ್ಟೇ." ಎಂದು ಮೊದಲೇ ಎಚ್ಚರಿಕೆ ಕೊಟ್ಟಿದ್ದಾರೆ.

ಅಂದ್ಹಾಗೆ, ಪವಿ ಪೂವಪ್ಪ ಅವರ ನಾಯಿಗಳನ್ನು ಮಿಸ್ ಮಾಡಿಕೊಳ್ಳುತ್ತಾರಂತೆ. ಅವರ ಬಳಿ ಸುಮಾರು ಹನ್ನೆರಡು ನಾಯಿಗಳಿದ್ದು, ತಮ್ಮ ಜಗತ್ತು ಅದೇನೇ ಎನ್ನುತ್ತಾರೆ. ಹಾಗೇ "ವೈಲ್ಡ್ ಕಾರ್ಡ್ ಎಂಟ್ರಿ ಅಂತ ಹೋದಾಗ ಎಲ್ಲ ಸ್ಪರ್ಧಿಗಳು ಡಾಮಿನೆಂಟ್ ಮಾಡ್ತಾರೆ ಅಂತೆಲ್ಲ ಕೇಳಿದೀನಿ. ಆದರೆ, ನನಗೂ ಒಂದು ಅಡ್ವಾಂಟೇಜ್ ಇದೆ. ನಾನು ಅವರನ್ನೆಲ್ಲ ಮೊದಲೇ ನೋಡಿಕೊಂಡು ಮನೆಯೊಳಗೆ ಹೋಗುತ್ತಿದ್ದೇನೆ. ಅದೇನೇ ಇದ್ದರೂ ನನ್ನ ಗೇಮ್ ನಾನು ಆಡ್ತೀನಿ ಅಷ್ಟೆ." ಎಂದಿದ್ದಾರೆ.
ಇಷ್ಟೇ ಅಲ್ಲದೆ ತನ್ನ ಪವಿ ಪೂವಪ್ಪ ತನ್ನ ಸ್ಟ್ರೆಂಥ್ ಏನು? ವೀಕ್ನೆಸ್ ಏನು ಅನ್ನೋದನ್ನು ರಿವೀಲ್ ಮಾಡಿ ಹೋಗಿದ್ದಾರೆ. "ನಾನು ಫಿಜಿಕಲಿ ಸ್ಟ್ರಾಂಗ್ ಇದೀನಿ. ಅದು ನನ್ನ ಸ್ಟ್ರೆಂಥ್. ಯಾರಾದ್ರೂ ಚಿಕ್ಕ ಪುಟ್ಟ ವಿಷಯಕ್ಕೆ ಗಲಾಟೆ ಮಾಡಿದ್ರೆ ನಾನು ಶಾರ್ಟ್ ಟೆಂಪರ್ ಆಗ್ತೀನಿ. ಅದು ನನ್ನ ವೀಕ್‌ನೆಸ್." ಎಂದು ತನ್ನ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಸದ್ಯಕ್ಕೆ ಇವರ ಫೇವರಿಟ್ ಸ್ಪರ್ಧಿ ಕಾರ್ತಿಕ್ ಅಂತೆ. ಆದರೆ, ತನಿಷಾ ಕುಪ್ಪಂಡ ಜೊತೆಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಅನಿಸುತ್ತಿದೆ. ಅವರ ಕ್ಯಾರೆಕ್ಟರ್‌ಗೆ ತದ್ವಿರುದ್ಧವಾದ ಸ್ವಭಾವ ತನ್ನದು ಎಂದು ಹೇಳಿದ್ದಾರೆ. "ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್‌ಬಾಸ್ ಮನೆಗೆ ಹೋಗ್ತಿದೀನಿ. ಆದಷ್ಟೂ ಗೆಲ್ಲಲು ಪ್ರಯತ್ನಪಡ್ತೀನಿ. ವೈಲ್ಡ್‌ಕಾರ್ಡ್‌ಯಲ್ಲಿ ಒಳಗೆ ಹೋದವರು ಗೆಲ್ಲಲು ಸಾಧ್ಯ ಇಲ್ಲ ಎಂದು ಎಲ್ಲರೂ ಅಂದುಕೊಂಡಿರ್ತಾರೆ. ಅದನ್ನು ಈ ಸಲ ಬದಲಾಯಿಸೋಣ ಅಂದುಕೊಂಡಿದೀನಿ." ಎಂದು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.


Click it and Unblock the Notifications











