VJ Archana: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟ ವಿಜೆ ಅರ್ಚನಾ

ಕಮಲ್ ಹಾಸನ್ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ತಮಿಳು ಸೀನನ 7 ಕೊನೆಗೊಂಡಿದೆ. ರಿಯಾಲಿಟಿ ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ನಟಿ, ವಿಜೆ, ಅರ್ಚನಾ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಶೋನಲ್ಲಿ ಕಠಿಣ ಸ್ಪರ್ಧಿಗಳಾಗಿದ್ದ ವಿಷ್ಣು ವಿಜಯ್, ದಿನೇಶ್ ಗೋಪಾಲ ಸಮಯ್, ಮಾಯಾ ಕೃಷ್ಣನ್ ಮತ್ತು ಮಣಿಚಂದ್ರರನ್ನು ಸೋಲಿಸಿ ಬಿಗ್ ಬಾಸ್ ಗೆದ್ದಿದ್ದಾರೆ.

ಶೋನಲ್ಲಿ ಮೊದಮೊದಲು ಅಷ್ಟೇನು ಕಮಾಲ್ ಮಾಡದ ಅವರು, ಬಳಿಕ ಕಠಿಣ ಸ್ಪರ್ಧಿ ಎಂಬುದನ್ನು ಸಾಬೀತು ಮಾಡಿದ್ದರು. ಹೀಗಾಗಿ ಬಿಗ್ ಬಾಸ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಗ್ರ್ಯಾಂಡ್ ಫಿನಾಲೆಯಲ್ಲಿ ಟ್ರೋಫಿ ಗೆದ್ದ ಮೊದಲ ಸ್ಪರ್ಧಿಯಾಗಿ ನಟಿ ಅರ್ಚನಾ ಇತಿಹಾಸ ಸೃಷ್ಟಿಸಿದ್ದಾರೆ.

Bigg Boss Tamil 7: Wild card contestant VJ Archana lifted bigg boss trophy

ತಮಿಳು ಬಿಗ್ ಬಾಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಅರ್ಚನಾ

ನಟ ಕಮಲ್ ಹಾಸನ್ ಅವರು ನಡೆಸಿಕೊಟ್ಟ ಜನಪ್ರಿಯ ರಿಯಾಲಿಟಿ ಶೋ, ಬಿಗ್ ಬಾಸ್ ತಮಿಳಿನ ಇತಿಹಾಸದಲ್ಲಿ ಪ್ರಶಸ್ತಿಯನ್ನು ಗೆದ್ದ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿ ವಿಜೆ ಅರ್ಚನಾ . ಈ ಶೋನಲ್ಲಿ ಹೆಚ್ಚು ಚರ್ಚೆಗೆ ಒಳಗಾದ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ತಮ್ಮ ಆಟದಿಂದ ಲಕಷಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

ನಟಿ ಅರ್ಚನಾ ಬಿಗ್ ಬಾಸ್ ಟ್ರೋಫಿಯ ಜೊತೆಗೆ ಇನ್ನು ಹೆಚ್ಚು ಹಣವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಅರ್ಚನಾ ಅವರು ಬಿಗ್ ಬಾಸ್ ತಮಿಳು 7 ನಲ್ಲಿ ಭಾಗವಹಿಸಲು ವಾರಕ್ಕೆ 2.25 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ಅವರ ಒಟ್ಟಾರೆ ಸಂಭಾವನೆಯು 24.75 ಲಕ್ಷ ರೂಪಾಯಿಗಳಾಗಿವೆ.

ಬಿಗ್ ಬಾಸ್ ತಮಿಳು 7 ಗೆದ್ದ ನಂತರ ಟ್ರೋಫಿ ಜೊತೆಗೆ ಅರ್ಚನಾ ಅವರಿಗೆ 50 ಲಕ್ಷ ರೂಪಾಯಿಗಳ ದೊಡ್ಡ ನಗದು ಬಹುಮಾನ ಕೂಡ ಗೆದ್ದಿದ್ದಾರೆ. ಇದರ ಜೊತೆಗೆ ಅರ್ಚನಾ ಅವರು ಹೊಚ್ಚಹೊಸ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಕಾರನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಇದರ ಬೆಲೆ 10.7 ಲಕ್ಷದಿಂದ 19.92 ಲಕ್ಷ ರೂಪಾಯಿಗಳು.

Bigg Boss Tamil 7: Wild card contestant VJ Archana lifted bigg boss trophy

ವಿಜೆ ಅರ್ಚನಾ ಪಡೆದ ಮತಗಳು

Studybizz ಹಂಚಿಕೊಂಡ ಓಟಿಂಗ್ ಟ್ರೆಂಡ್‌ಗಳ ಪ್ರಕಾರ, ವಿಜೆ ಅರ್ಚನಾ ಮಣಿಚಂದ್ರ ಮತ್ತು ಮಾಯಾ ಕೃಷ್ಣನ್ ಅವರಿಗಿಂತ ಶೇಕಡಾ 50 ಕ್ಕಿಂತ ಹೆಚ್ಚು ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಮಾಯಾ 23054 ಮತಗಳನ್ನು ಪಡೆದರೆ, ಮಣಿಚಂದ್ರ 35184 ಮತಗಳನ್ನು ಪಡೆದಿದ್ದರು. ಮತ್ತೊಂದೆಡೆ, ಅರ್ಚನಾ ಅವರು 109468 ಮತಗಳನ್ನು ಪಡೆದಿದ್ದಾರೆ.

ತನ್ನ ಬಿಗ್ ಬಾಸ್ ಜರ್ನಿ ಬಗ್ಗೆ ಮಾತನಾಡಿದ್ದ ನಟಿ ಅರ್ಚನಾ, "ಜನರು ನನ್ನ ಆಟಿಟ್ಯೂಡ್ ಬದಲಾಯಿಸಕೊಳ್ಳಲು ಏಕೆ ಹೇಳುತ್ತಾರೆ ಎಂಬುದೇ ನನಗೆ ಆಶ್ಚರ್ಯ. ಹೀಗಾಗಿ ನಾನು ಮೊದಲು ನನ್ನನ್ನು ಅರ್ಥ ಮಾಡಿಕೊಳ್ಳುತ್ತೇನೆ. ಏಕೆಂದರೆ ನಾನು ಇತರರಿಗಿಂತ ಭಿನ್ನ. ನಾನು ಬಿಗ್ ಬಾಸ್‌ಗೆ ಪ್ರವೇಶಿಸಿದಾಗ, ಕೆಲವು ಘಟನೆಗಳು ನಡೆದವು, ಎಂದಿನಂತೆ ಇಲ್ಲಿಂದ ಓಡಿಹೋಗಬೇಕೆನಿಸಿತು. ಆದರೆ ಮೊದಲ ಬಾರಿಗೆ ನನ್ನ ಪರವಾಗಿ ನಿಲ್ಲಲು ಬಯಸಿದೆ. ಹಾಗಾಗಿ, ನನ್ನನ್ನು ವೀಕ್ ಎಂದು ಕರೆದ ಅದೇ ಜನರು ನನ್ನನ್ನು ಕಠಿಣ ಸ್ಪರ್ಧಿ ಎಂದು ಕರೆದರು" ಎಂದು ಹೇಳಿದ್ದಾರೆ.

ಇನ್ನು, ನಟಿ ಅರ್ಚನಾ ರಾಜಾ ರಾಣಿ 2 ನಲ್ಲಿನ ನಟನೆಯಿಂದಾಗಿ ಖ್ಯಾತಿಗೆ ಏರಿದ್ದರು. ನಂತರ ಅವರು ಮೊರಟ್ಟು ಸಿಂಗಲ್ ಸೀಸನ್ 2 ಮತ್ತು ಕಾಮಿಡಿ ರಾಜಾ ಕಾಲಕ್ಕಲ್ ರಾಣಿಯಲ್ಲಿ ಕಾಣಿಸಿಕೊಂಡಿದ್ದರು. ನಟಿ ಅರ್ಚನಾ ಅವರಿಗೆ 1 ರಿಂದ 2 ಕೋಟಿ ರೂಪಾಯಿಗಳ ನಿವ್ವಳ ಆದಾಯ ಹೊಂದಿದ್ದಾರೆ.

More from Filmibeat

English summary
Wild card contestant VJ Archana won Bigg Boss Tamil 7
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X