Bigg Boss:ಕನ್ನಡ ಬಿಗ್ ಬಾಸ್ ಗೆದ್ದ ಗಿಲ್ಲಿ..ಬಿಗ್ ಬಾಸ್ ತಮಿಳಿನ ವಿನ್ನರ್ ಯಾರು? ಯಾರಿದು ದಿವ್ಯಾ ಗಣೇಶ್ ?

ಬಿಗ್ ಬಾಸ್ ಕನ್ನಡ ಸೀಸನ್ 12 ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಗಿಲ್ಲಿ ನಟ ಕನ್ನಡ ಬಿಗ್‌ ಬಾಸ್‌ನ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಆದರೆ, ಇದೇ ವೇಳೆ ಬಿಗ್ ಬಾಸ್ ತಮಿಳು ಸೀಸನ್ 9 ರ ಗ್ರ್ಯಾಂಡ್ ಫಿನಾಲೆ ಕೂಡ ನಡೆಯುತ್ತಿತ್ತು. ಇಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುತ್ತಿದ್ದರೆ, ಅತ್ತ ತಮಿಳಿನಲ್ಲಿ ವಿಜಯ್ ಸೇತುಪತಿ ನಿರೂಪಣೆ ಮಾಡುತ್ತಿದ್ದರು. ಈ ಬಾರಿ ಬಿಗ್ ಬಾಸ್‌ ತಮಿಳು ಕೂಡ ಸಿಕ್ಕಾಪಟ್ಟೆ ಕುತೂಹಲವನ್ನು ಕೆರಳಿಸಿತ್ತು.

ಬಿಗ್ ಬಾಸ್ ತಮಿಳು 9ನೇ ಸೀಸನ್‌ನ ವಿನ್ನರ್ ಆಗಿ ದಿವ್ಯಾ ಗಣೇಶ್ ಹೊರ ಹೊಮ್ಮಿದ್ದಾರೆ. ದಿವ್ಯಾ ಗಣೇಶ್ ಗೆಲ್ಲುತ್ತಿದ್ದಂತೆ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದಾರೆ. ದಿವ್ಯಾ ಗಣೇಶ್ ಬಗ್ಗೆ ಹುಡುಕಾಡುವುದಕ್ಕೆ ಶುರು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ನೆಟ್ಟಿಗರು ಕಾಮೆಂಟ್‌ಗಳ ಮೇಲೆ ಕಾಮೆಂಟ್ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಂತೂ ಇವರದ್ದೇ ಪೋಸ್ಟ್‌ಗಳು ಹರಿದಾಡುತ್ತಿವೆ.

Bigg Boss Tamil 9 Grand Finale wild card entry contestant Divya Ganesh Wins Trophy

ಅಷ್ಟಕ್ಕೂ ತಮಿಳು ಬಿಗ್ ಬಾಸ್‌ನಲ್ಲಿ ಸದ್ದು ಮಾಡಿದ್ದ ದಿವ್ಯಾ ಗಣೇಶ್ ಯಾರು? ಇಂಟರ್‌ನೆಟ್‌ನಲ್ಲಿ ಯಾಕಿಷ್ಟು ಸಂಚಲನ ಸೃಷ್ಟಿಸುತ್ತಿದ್ದಾರೆ. ಇವರ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಯಾಕಿಷ್ಟು ಸದ್ದು ಮಾಡುತ್ತಿವೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ,

ಬಿಗ್ ಬಾಸ್ ತಮಿಳು ಸೀಸನ್ 9 ಅನ್ನು ದಿವ್ಯಾ ಗಣೇಶ್ ಗೆಲ್ಲುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇದಕ್ಕೆ ಕಾರಣ ದಿವ್ಯಾ ಗಣೇಶ್ ಅವರ ಫೋಟೊಶೂಟ್. ಈ ಫೋಟೋಶೂಟ್‌ನಿಂದಲೇ ದಿವ್ಯಾ ಗಣೇಶ್ ನೆಟ್ಟಿಗರ ನಿದ್ದೆ ಕದ್ದಿದ್ದಾರೆ. ಬಿಗ್ ಬಾಸ್‌ ವಿನ್ನರ್ ಅಂದ ಕೂಡಲೇ ಸೋಶಿಯಲ್ ಮೀಡಿಯಾ ಖಾತೆಗಳನ್ನು ಜಾಲಾಡಿದ್ದಾರೆ. ಅವರಿಗೆ ದಿವ್ಯಾ ಗಣೇಶ್ ಅವರ ಗ್ಲಾಮರಸ್ ಫೋಟೊಗಳು ಸಿಕ್ಕಿವೆ.

ದಿವ್ಯಾ ಗಣೇಶ್ ಬಿಗ್ ಬಾಸ್ ತಮಿಳು ಸೀಸನ್‌ 9ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು. ದಿವ್ಯಾ ದಳಪತಿ ವಿಜಯ್ ಅವರ ಅಪ್ಪಟ ಅಭಿಮಾನಿ. ಇನ್‌ಸ್ಟಾಗ್ರಾಂ ವಿಜಯ್ ಅವರ ಫೋಟೊಗಳನ್ನು ಹಂಚಿಕೊಂಡಿದ್ದು, ದಳಪತಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಿವ್ಯಾ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ಕ್ಷಣದಿಂದಲೇ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದರು.

Bigg Boss Tamil 9 Grand Finale wild card entry contestant Divya Ganesh Wins Trophy

ಅವರ ಇನ್‌ಸ್ಟಾಗ್ರಾಂ ಖಾತೆಗೆ ಹೋದರೆ, ಹಲವು ವಿಭಿನ್ನ ಭಂಗಿಗಳಲ್ಲಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಮೀಸೆ-ಪಂಚೆ-ಶರ್ಟ್‌ನಲ್ಲಿ ಪೋಸ್ ನೀಡಿರುವ ಫೋಟೊವನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಹಾಗೇ ಬ್ಲ್ಯಾಕ್ ಅಂಡ್ ವೈಟ್ ಫೋಟೋಗಳು ಬೋಲ್ಡ್ ಗ್ಲಾಮರಸ್ ಶೈಲಿಯಲ್ಲಿದ್ದು, ವೈರಲ್ ಆಗಿವೆ. ಈ ಫೋಟೊಗಳನ್ನು ನೆಟ್ಟಿಗರನ್ನು ಸೆಳೆದಿದ್ದಲ್ಲದೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ದಿವ್ಯಾ ಗಣೇಶ್ ಸಾಂಪ್ರದಾಯಿಕ ಲುಕ್‌ನಲ್ಲಿ ವೀಕ್ಷಕರ ಮನಸ್ಸು ಗೆದಿದ್ದರು. ಆದರೆ, ಗ್ಲಾಮರಸ್‌ ಲುಕ್‌ನಲ್ಲಿಯೂ ಮಿಂಚಿದ್ದಾರೆ. ಹಲವು ಫೋಟೋಶೂಟ್‌ಗಳಲ್ಲಿ ದಿವ್ಯಾ ಗಣೇಶ್ ಕೊಟ್ಟಿರುವ ಪೋಸ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಸೀರೆಯಲ್ಲಿ ಸೊಂಟ ತೋರಿಸುವ ಫೋಟೋಗಳು ನೆಟ್ಟಿಗರ ಮನ ಸೆಳೆದಿವೆ. ಟೈಟ್ ಟಿ-ಶರ್ಟ್, ಜೀನ್ಸ್‌ನಲ್ಲಿ ಮಿಂಚಿರುವ ದಿವ್ಯಾ ಗಣೇಶ್‌ ಬಿಗ್ ಬಾಸ್ ಗೆದ್ದ ಬಳಿಕ ಸಿನಿಮಾದಲ್ಲಿ ಯಶಸ್ಸು ಕಾಣುತ್ತಾರೆಯೇ ಎಂಬ ಕುತೂಹಲ ಮೂಡಿದೆ.

More from Filmibeat

English summary
Bigg Boss Tamil 9 Grand Finale wild card entry contestant Divya Ganesh Wins Trophy.
Read more about: bigg boss contestants winner
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X