'ಬಿಗ್ ಬಾಸ್' ವಿರುದ್ಧ ತಿರುಗಿಬಿದ್ದ ನಟಿ ಮೇಲೆ ಕೇಸ್ ದಾಖಲು
ಬಿಗ್ ಬಾಸ್ ಶೋ ಮನರಂಜನೆಗಿಂತ ವಿವಾದದಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಹಿಂದಿಯಲ್ಲಿ 12 ಆವೃತ್ತಿಯನ್ನ ಯಶಸ್ವಿಯಾಗಿ ಮುಗಿಸಿದೆ. ಕನ್ನಡದಲ್ಲೂ 6 ಆವೃತ್ತಿಯನ್ನ ಸಕ್ಸಸ್ ಫುಲ್ ಆಗಿ ನಡೆಸಿದೆ. ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲೂ ಬಿಗ್ ಬಾಸ್ ಆರಂಭವಾಗಿದೆ.
ಎಲ್ಲ ಭಾಷೆಯಲ್ಲೂ ಒಂದು ಹಂತಕ್ಕೆ ಸ್ಥಿರತೆ ಕಾಯ್ದುಕೊಂಡಿರುವ ಬಿಗ್ ಬಾಸ್ ತಮಿಳಿನಲ್ಲು ಮಾತ್ರ ಅತಿರೇಕವಾಗಿ ಹೋಗುತ್ತಿದೆ. ಒಂದಲ್ಲ ಒಂದು ವಿವಾದಗಳಿಂದ ಪ್ರೇಕ್ಷಕರಿಗೆ ಭಾರಿ ನಿರಾಸೆ ಮತ್ತು ಅಸಹ್ಯ ಹುಟ್ಟಿಸುವಂತೆ ಮಾಡುತ್ತಿದೆ.
Recommended Video
ಇತ್ತೀಚಿಗಷ್ಟೆ ಬಿಗ್ ಬಾಸ್ ಮನೆಯೊಳಗೆ ನಟಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಆಕೆಯನ್ನ ಮನೆಯಿಂದ ಹೊರಹಾಕಿದ್ದರು ಬಿಗ್ ಬಾಸ್. ಈಗ, ನಟಿಯೊಬ್ಬರ ಮೇಲೆ ಬಿಗ್ ಬಾಸ್ ಆಯೋಜಕರೇ ಕೇಸ್ ದಾಖಲಿಸಿದ್ದಾರೆ. ಅಷ್ಟಕ್ಕೂ, ಏನಿದು ಹೊಸ ಪ್ರಕರಣ? ಮುಂದೆ ಓದಿ...

ಆತ್ಮಹತ್ಯೆ ಯತ್ನಿಸಿದ್ದ ನಟಿ ಮೇಲೆ ಕೇಸ್
ತಮಿಳು ಬಿಗ್ ಬಾಸ್ ಮೂರನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಮಧುಮಿತಾ ಬಿಗ್ ಮನೆಯೊಳಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಘಟನೆ ನಡೆದ ಬಳಿಕ, ಶೋಗೆ ಕೆಟ್ಟ ಹೆಸರು ಬಂದಿದೆ ಎಂಬ ಕಾರಣ ನೀಡಿ ಆಕೆಯನ್ನ ಮನೆಯಿಂದ ಹೊರ ಕಳುಹಿಸಿದ್ದರು. ಇದೀಗ, ಆ ನಟಿಯ ಮೇಲೆ ಬಿಗ್ ಬಾಸ್ ಆಯೋಜಕರೇ ಕೇಸ್ ಹಾಕಿದ್ದಾರೆ.

ಸಂಭಾವನೆ ವಿಚಾರದಲ್ಲಿ ಕಿರಿಕ್
ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದಕ್ಕೆ ನನಗೆ ಸರಿಯಾದ ಸಂಭಾವನೆ ನೀಡಿಲ್ಲ ಎಂದು ಮಧುಮಿತಾ ಆರೋಪಿಸಿದ್ದಾರೆ. ಮೊದಲೇ ನಿಗದಿಪಡಿಸಿದಂತೆ ಬಿಗ್ ಬಾಸ್ ಶೋ ಆಯೋಜಕರು ನನಗೆ ಸಂಭಾವನೆ ನೀಡಿಲ್ಲ, ಅದನ್ನ ಕೊಡಿಸಿ ಎಂದು ಕೇಳುತ್ತಿದ್ದಾರೆ.

ಪೊಲೀಸರ ಮೊರೆ ಹೋದ ಆಯೋಜಕರು
ಈಗಾಗಲೇ ಮಧುಮಿತಾ ಅವರಿಗೆ ಕೊಡಬೇಕಿದ್ದ ಸಂಭಾವನೆಯನ್ನ ನೀಡಲಾಗಿದೆ. ಹಾಗಿದ್ದರೂ ಮತ್ತಷ್ಟು ಬಾಕಿ ಇದೆ, ಸಂಭಾವನೆ ಕೊಡಿ ಎಂದು ಕೇಳುತ್ತಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಮಲ್ ಹಾಸನ್ ಮೊರೆ ಹೋದ ಮಧುಮಿತಾ
ಆದ್ರೆ, ಬಿಗ್ ಬಾಸ್ ಆಯೋಜಕರು ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಮಧುಮಿತಾ ಅವರು, ಇದನ್ನ ನಿರಾಕರಿಸಿದ್ದಾರೆ. ನಮಗೆ ಒಪ್ಪಂದದ ಪ್ರಕಾರ ನಿಗದಿ ಪಡಿಸಿದಂತೆ ಸಂಭಾವನೆ ಕೊಟಿಲ್ಲ. ಅದನ್ನ ಕೇಳಿದ್ದಕ್ಕೆ ನನ್ನ ಮೇಲೆ ಕೇಸ್ ಹಾಕಿದ್ದಾರೆ. ನಾನು ಕಮಲ್ ಹಾಸನ್ ಅವರನ್ನ ಕೇಳಿಕೊಳ್ಳುತ್ತಿದ್ದೇನೆ, ಈ ಬಗ್ಗೆ ವಿಚಾರಿಸಿ ನನಗೆ ಸೇರಬೇಕಿರುವ ಸಂಭಾವನೆಯನ್ನ ಕೊಡಿಸಬೇಕೆಂದು ವಿನಂತಿಸಿದ್ದಾರೆ.


Click it and Unblock the Notifications











