ಈ ಬಿಗ್ ಬಾಸ್‌ ಸ್ಪರ್ಧಿಗೆ ದಿನಕ್ಕೆ 45 ಸಾವಿರ;ಈಗ ಎಲಿಮಿನೇಟ್ ಆದ ಈತನಿಗೆ ಸಿಕ್ಕ ಸಂಭಾವನೆ ಎಷ್ಟು?

ಎಲ್ಲಾ ಕಡೆಯೂ ಬಿಗ್ ಬಾಸ್ ಹವಾ ಜೋರಾಗಿದೆ. ಮೊದಲು ಆರಂಭ ಆಗಿದ್ದ ಬಿಗ್ ಬಾಸ್ ಹಿಂದಿ ಫಿನಾಲೆ ತಲುಪಿದ್ದರೆ, ಇತ್ತ ದಕ್ಷಿಣ ಭಾರತದಲ್ಲಿ ಒಂದೊಂದೇ ಭಾಷೆಯಲ್ಲಿ ಬಿಗ್ ಬಾಸ್ ಕೊನೆಯ ಘಟ್ಟ ತಲುಪಿದೆ. ಅದರಲ್ಲಿ ಬಿಗ್ ಬಾಸ್ ತೆಲುಗು ಕೂಡ ಒಂದು. ಕನ್ನಡದಂತೆಯೇ ಬಿಗ್ ಬಾಸ್ ತೆಲುಗಿನ 9ನೇ ಸೀಸನ್ ಕೂಡ ಸಾಕಷ್ಟು ಸುದ್ದಿಯಲ್ಲಿತ್ತು. ಈಗ ಕೊನೆಯ ಹಂತಕ್ಕೆ ಬಂದು ತಲುಪಿದೆ.

ಬಿಗ್ ಬಾಸ್ ತೆಲುಗು ಸೀಸನ್ 9 ಅಂತಿಮ ಹಂತಕ್ಕೆ ಬಂದಿದ್ದು, ಒಂದು ವಾರದಲ್ಲಿ ಈ ರಿಯಾಲಿಟಿ ಶೋಗೆ ತೆರೆ ಬೀಳಲಿದೆ. ಕಿಂಗ್ ನಾಗಾರ್ಜುನ ನಡೆಸಿಕೊಡುವ ಈ ರಿಯಾಲಿಟಿ ಶೋ ವೀಕ್ಷಕರನ್ನು ಸೆರೆ ಹಿಡಿಯುವುದರಲ್ಲಿ ಯಶಸ್ವಿಯಾಗಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಟಾಪ್ 5 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಅವರಲ್ಲಿ ಯಾರು ಬಿಗ್ ಬಾಸ್ ಕಿರೀಟವನ್ನು ಮುಡಿಗೇರಿಸಿಕೊಳ್ಳಬಹುದೆಂಬ ಕುತೂಹಲವಿದ್ದರೂ, ಈ ವಾರ ಎಲಿಮಿನೇಟ್ ಆದ ಸ್ಪರ್ಧಿಯ ಬಗ್ಗೆ ಚರ್ಚೆ ನಡೆಯುತ್ತಿದೆ.

Bigg Boss Telugu 9 eliminated contestant Suman Shetty remuneration is hot topic in telugu states

ಬಿಗ್ ಬಾಸ್ ತೆಲುಗು 9ರ ಕೊನೆಯ ಹಂತದಲ್ಲಿ ಸುಮನ್ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ. ಇವರು ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದು, ಸಾಕಷ್ಟು ಚಿರಪರಿಚಿತ. ಹೀಗಾಗಿ ಸುಮನ್ ಶೆಟ್ಟಿ ಎಲಿಮಿನೇಷನ್ ಆಗಿದ್ದು ಅಚ್ಚರಿ ವೀಕ್ಷಕರಲ್ಲಿ ಅಚ್ಚರಿಸಿ ಮೂಡಿಸಿದೆ. ಇನ್ನೇನು ಎಲಿಮಿನೇಟ್ ಆಗುತ್ತಿದ್ದಂತೆ ಸುಮನ್ ಶೆಟ್ಟಿಯ ಸಂಭಾವನೆ ಬಗ್ಗೆ ತೆಲುಗು ರಾಜ್ಯಗಳಲ್ಲಿ ಸಿಕ್ಕಾ ಪಟ್ಟೆ ಚರ್ಚೆಯಾಗುತ್ತಿದೆ. ಅದ್ಯಾಕೆ ಅಂದರೆ, ದಕ್ಷಿಣ ಭಾರತದ ಬಿಗ್ ಬಾಸ್ ಇತಿಹಾಸದಲ್ಲಿಯೇ ಅತೀ ಹೆಚ್ಚು ಸಂಭಾವನೆ ನೀಡಲಾಗಿದೆ ಎಂಬ ಚರ್ಚೆ ಎದ್ದಿದೆ.

ಬಿಗ್ ಬಾಸ್ ಮನೆಯಲ್ಲಿ ಸುಮನ್ ಶೆಟ್ಟಿ ಸುಮಾರು 14 ವಾರಗಳು ಇದ್ದರು. ಅವರು ಬಿಗ್ ಬಾಸ್ ಕೊಟ್ಟ ಟಾಸ್ಕ್‌ಗಳಲ್ಲಿ ಹೆಚ್ಚು ಪ್ರಭಾವ ಬೀರದೇ ಹೋದರೂ, ಮನೆಯಲ್ಲಿದ್ದು ಗಳಿಸಿದ ಸಂಭಾವನೆ ವೀಕ್ಷಕರು ಚರ್ಚೆ ಮಾಡುವಂತೆ ಮಾಡಿದೆ. ಯಾಕಂದ್ರೆ ಬಿಗ್ ಬಾಸ್ ತೆಲುಗು 9ನೇ ಸೀಸನ್ ಆರಂಭದಿಂದಲೂ ಸುಮನ ಆಡುತ್ತಿದ್ದ ಆಟದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಆದರೆ, ಟಾಸ್ಕ್‌ಗಳಲ್ಲಿ ಮಿಂಚದೇ ಇದ್ದರೂ, ಅವರ ಮುಗ್ಧತೆ, ಒಳ್ಳೆಯತನವು ವೀಕ್ಷಕರಿಂದ ಅನುಕಂಪ ಗಳಿಸಿತ್ತು.

ಕಳೆದ ವಾರವೇ ಸುಮನ್ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕಿತ್ತು ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಹಿಂದಿನ ವಾರ ಎಲಿಮಿನೇಟ್ ಆಗಿದ್ದ ರೀತು ಚೌಧರಿ ಗೆಲ್ಲುವ ಸ್ಪರ್ಧಿ ಎಂದು ವೀಕ್ಷಕರು ನಂಬಿದ್ದರು. ಆದರೆ, ರೀತು ಎಲಿಮಿನೇಟ್ ಆಗಿ, ಸುಮನ್ ಶೆಟ್ಟಿ ಮನೆಯಲ್ಲಿಯೇ ಉಳಿದು ಕೊಂಡಿದ್ದರು. ಹೀಗಾಗಿ ಸುಮನ್ ಅವರನ್ನು ಮನೆಯಿಂದ ಹೊರ ಕಳಿಸಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

Bigg Boss Telugu 9 eliminated contestant Suman Shetty remuneration is hot topic in telugu states

ಈಗ ಅವರ ಪಡೆದಿರುವ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ. ಮಾಹಿತಿ ಪ್ರಕಾರ, ಸುಮನ್ ಶೆಟ್ಟಿಗೆ ಬಿಗ್ ಬಾಸ್ ಮನೆಯಲ್ಲಿ ದಿನಕ್ಕೆ ₹45,000 ಸಂಭಾವನೆ ಸಿಕ್ಕಿದೆ. 14 ವಾರಗಳ ಮನೆಯ ಇದ್ದಿದ್ದರಿಂದ ಅವರಿಗೆ ಬರೋಬ್ಬರಿ ₹44 ಲಕ್ಷಕ್ಕೂ ಹೆಚ್ಚು ಹಣ ಗಳಿಸಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ, ಇದು ಬಿಗ್ ಬಾಸ್ ತೆಲುಗು ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಎಂದೂ ಚರ್ಚೆಯಾಗುತ್ತಿದೆ. ಈ ಹಿಂದೆ ಆಂಕರ್ ರವಿ ಎಂಬುವವರು ಅತಿ ದೊಡ್ಡ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ.

ಸುಮನ್ ಶೆಟ್ಟಿ ಟಾಸ್ಕ್‌ನಲ್ಲಿ ಹೆಚ್ಚು ಗಮನ ಸೆಳೆಯದೇ ಇದ್ದರೂ 14 ವಾರಗಳಲ್ಲಿ ಇಷ್ಟು ದೊಡ್ಡ ಮೊತ್ತ ಸಂಭಾವನೆ ಪಡೆದು ಗೆದ್ದಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಬಿಗ್ ಬಾಸ್ ತೆಲುಗು 9ನೇ ಸೀಸನ್‌ನಿಂದ ಸುಮನ್ ಶೆಟ್ಟಿ ಹೊರಬಿದ್ದ ಬಳಿಕ ಟಾಪ್ 5ನಲ್ಲಿ ಪೈಪೋಟಿ ಜೋರಾಗಿದೆ. ಸದ್ಯಕ್ಕೀಗ ತನುಜಾ, ಕಲ್ಯಾಣ್ ಮತ್ತು ಇಮ್ಯಾನುಯೆಲ್ ನಡುವೆಯೇ ಟೈಟಲ್‌ಗೆ ಪೈಪೋಟಿಯಿದೆ ಎನ್ನಲಾಗಿದೆ. ಇವರೊಂದಿಗೆ ಡಿಮೋನ್ ಪವನ್ ಹಾಗೂ ಸಂಜನಾ ಗಲ್ರಾನಿ ಕೂಡ ಬಿಗ್ ಬಾಸ್ ಗೆಲ್ಲುವ ರೇಸ್‌ನಲ್ಲಿ ಇದ್ದಾರೆ.

More from Filmibeat

English summary
Bigg Boss Telugu 9 eliminated contestant Suman Shetty remuneration is hot topic in telugu states.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X