Sanjjanaa Galrani: ಬಿಗ್ ಬಾಸ್ ಫಿನಾಲೆ.. ಟಾಪ್ 5 ನಿಂದ ಎಲಿಮಿನೇಟ್ ಆದರೇ ಸಂಜನಾ ಗಲ್ರಾನಿ?

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಗ್ರ್ಯಾಂಡ್ ಆಗಿ ಆರಂಭ ಆಗಿತ್ತು. ಈಗ ಒಂದೊಂದೇ ಭಾಷೆಯಲ್ಲಿ ಮುಕ್ತಾಯವಾಗುತ್ತಾ ಬರುತ್ತಿದೆ. ಹಿಂದಿ ಬಿಗ್ ಬಾಸ್ ಮುಗಿಯುತ್ತಿದ್ದಂತೆ ಈಗ ಮತ್ತೊಂದು ಭಾಷೆಯ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಟಾಲಿವುಡ್ ಕಿಂಗ್ ನಾಗಾರ್ಜುನ ನಡೆಸಿಕೊಡುವ ಬಿಗ್ ಬಾಸ್ ತೆಲುಗು ಸೀಸನ್ 9ಗೆ ಇನ್ನು ಕೆಲವೇ ಕ್ಷಣಗಳಲ್ಲಿ ತೆರೆ ಬೀಳಲಿದೆ.

ಈ ಬಾರಿ ಬಿಗ್ ಬಾಸ್ ತೆಲುಗು ಸೀಸನ್ 9ರಲ್ಲಿ ಹೈ ವೋಲ್ಟೇಜ್ ಡ್ರಾಮ, ಅನಿರೀಕ್ಷಿತ ತಿರುವುಗಳು, ಅನಗತ್ಯ ಕಿತ್ತಾಟ ಹಾಗೂ ಕೆಲವು ಭಾವನಾತ್ಮಕ ಸನ್ನಿವೇಶಗಳು ನೋಡುವುದಕ್ಕೆ ಸಿಕ್ಕಿದ್ದವು. ಈ 9ನೇ ಸೀಸನ್ ನಾಳೆ (ಡಿಸೆಂಬರ್ 21) ತೆರೆ ಕಾಣಲಿದೆ. ಬಿಗ್ ಬಾಸ್ ತೆಲುಗು 9ರ ಫಿನಾಲೆಗಾಗಿ ಭರ್ಜರಿ ಸಿದ್ಧತೆಗಳು ಶುರುವಾಗಿವೆ. ಈ ಮಧ್ಯೆ ನಿರೀಕ್ಷೆಗೂ ಮೀರಿದ ಬೆಳವಣಿಗೆಯೊಂದು ನಡೆದಿದೆ ಎಂದು ಹೇಳಲಾಗುತ್ತಿದೆ.

Bigg Boss Telugu 9 Grand Finale Buzz is that actress Sanjjanaa Galrani Eliminated from top 5

ಬಿಗ್ ಬಾಸ್ ತೆಲುಗು 9 ಫಿನಾಲೆಯಲ್ಲಿ ಐದು ಮಂದಿ ಸ್ಪರ್ಧಿಗಳು ಇದ್ದರು. ಅವರಲ್ಲಿ ಇಬ್ಬರು ಟಾಪ್ 5ನಿಂದ ಎಲಿಮಿನೇಟ್ ಆಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಈ ಐದೂ ಮಂದಿ ಬಿಗ್ ಬಾಸ್ ಕಿರೀಟಕ್ಕಾಗಿ ಕಳೆದ ಮೂರು ತಿಂಗಳಿನಿಂದ ಒಬ್ಬರಿಗೊಬ್ಬರು ಪೈಪೋಟಿ ನೀಡುತ್ತಲೇ ಬಂದಿದ್ದಾರೆ. ಅವರಲ್ಲಿ ಬಹುಭಾಷಾ ನಟಿ ಸಂಜನಾ ಗಲ್ರಾನಿ ಕೂಡ ಇದ್ದರು. ಇವರನ್ನು ಕೊನೆಯ ಹಂತದಲ್ಲಿ ಎಲಿಮಿನೇಟ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೌದು ಸಂಜನಾ ಗಲ್ರಾನಿಗೆ ಬಿಗ್ ಬಾಸ್ ರಿಯಾಲಿಟಿ ಶೋ ಹೊಸದೇನು ಅಲ್ಲ. ಈಗಾಗಲೇ ಕನ್ನಡದ ಬಿಗ್ ಬಾಸ್‌ನಲ್ಲಿಯೂ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದರು. ಕನ್ನಡದಲ್ಲಿ ಅವರಿಗೆ ಫಿನಾಲೆವರೆಗೂ ತಲುಪುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ, ಬಿಗ್ ಬಾಸ್ ತೆಲುಗಿನಲ್ಲಿ ಸಂಜ್ರನಾ ತನ್ನ ಪ್ರತಿಸ್ಪರ್ಧಿಗಳಿಗೆ ಫಿನಾಲೆವರೆಗೂ ಪೈಪೋಟಿ ನೀಡುತ್ತಲೇ ಬಂದಿದ್ದರು. ಪ್ರಶಸ್ತಿ ಗೆಲ್ಲುವ ಟಾಪ್‌ 5ನಲ್ಲಿದ್ದ ಸಂಜನಾ ಈಗ ರಿಯಾಲಿಟಿ ಶೋನಿಂದ ಹೊರ ಬಿದ್ದಿದ್ದಾರೆ ಎನ್ನಲಾಗಿದೆ.

ಇನ್ನು ಟಾಪ್‌ 5ನಲ್ಲಿ ಕಲ್ಯಾಣ್, ಇಮ್ಯಾನುಯೆಲ್, ಡಿಮನ್ ಪವನ್, ಸಂಜನಾ ಗಲ್ರಾನಿ ಮತ್ತು ತನುಜಾ ಇದ್ದರು. ಈ ಐವರಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ಗಳ ಪಟ್ಟಿಯಲ್ಲಿ ಸಂಜನಾ ಗಲ್ರಾನಿ ಕೂಡ ಇದ್ದರು. ಈ ಐವರಲ್ಲಿ ಯಾರು ಬಿಗ್ ಬಾಸ್ ಕಿರೀಟವನ್ನು ಮುಡಿಗೇರಿಸಿಕೊಳ್ಳುತ್ತಾರೋ ಎನ್ನುವ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿತ್ತು. ಆದ್ರೀಗ ಪ್ರಶಸ್ತಿ ಗೆಲ್ಲುವ ರೇಸ್‌ನಿಂದ ಸಂಜನಾ ಗಲ್ರಾನಿ ಹೊರಬಿದ್ದಿದ್ದಾರೆಂದು ಹೇಳಲಾಗುತ್ತಿದೆ.

Bigg Boss Telugu 9 Grand Finale Buzz is that actress Sanjjanaa Galrani Eliminated from top 5

ಒಂದು ವೇಳೆ ಸಂಜನಾ ಗಲ್ರಾನಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದೇ ಆದರೆ, ನಾಲ್ವರ ಮಧ್ಯೆ ಪೈಪೋಟಿ ಬೀಳಲಿದೆ. ಪ್ರಸ್ತುತ ಟ್ರೆಂಡ್‌ಗಳ ಪ್ರಕಾರ, ವಿಜೇತರ ಪಟ್ಟಕ್ಕಾಗಿ ತನುಜಾ ಮತ್ತು ಕಲ್ಯಾಣ್ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಿಗುವ ಮಾಹಿತಿಗಳೆಲ್ಲವೂ ಸತ್ಯವಾಗಿರುವುದಿಲ್ಲ. ಹೀಗಾಗಿ ಕೊನೆಯಲ್ಲಿ ರಿಸಲ್ಟ್ ಅನೌನ್ಸ್ ಆಗುವವರೆಗೂ ಯಾವುದನ್ನೂ ನಂಬುವುದಕ್ಕೆ ಆಗುವುದಿಲ್ಲ. ಗ್ರ್ಯಾಂಡ್ ಫಿನಾಲೆಯ ಕೊನೆಯ ಕ್ಷಣದಲ್ಲಿ ಏನೆಲ್ಲಾ ತಿರುವುಗಳು ಬರುತ್ತವೋ..ಅಲ್ಲಿವರೆಗೂ ಕಾಯಲೇಬೇಕು.

ಸದ್ಯ ಬಹುಭಾಷಾ ನಟಿ ಸಂಜನಾ ಗಲ್ರಾನಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿರುವ ವಿಷಯ ತೆಲುಗು ಮಂದಿಯಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಬಿಗ್ ಬಾಸ್ ತೆಲುಗು ಗ್ರ್ಯಾಂಡ್ ಫಿನಾಲೆಯ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಈ ವೇದಿಕೆ ಮೇಲೆ ಹಲವು ಕಾರ್ಯಕ್ರಮಗಳು ಕೂಡ ನಡೆದಿದ್ದು, ಇಂದಿನಿಂದ ಎರಡು ದಿನಗಳ ಕಾಲ ಫಿನಾಲೆ ನಡೆಯಲಿದೆ. ಸದ್ಯ ವಿಜೇತರ ರೇಸ್‌ನಲ್ಲಿ ಪ್ರಬಲ ಸ್ಪರ್ಧಿ 'ಡ್ರಾಮಾ ಕ್ವೀನ್' ಎಂದೇ ಸಂಜನಾ ಗಲ್ರಾನಿ ಜನಪ್ರಿಯರಾಗಿದ್ದರು. ಸಂಜನಾ ಗಲ್ರಾನಿ ಪ್ರತಿ ಟಾಸ್ಕ್‌ಗಳಲ್ಲಿ ಸ್ಪರ್ಧಿಸಿದ್ದರು. ಅಡುಗೆ ಮನೆಯಿರಲಿ, ಬೆಡ್ ರೂಮ್‌ನಲ್ಲಿ ಹರಟೆ ಹೊಡೆಯೋದಾಗಿರಲಿ, ಅವರ ಸುತ್ತ ಯಾವಾಗಲೂ ಕಂಟೆಂಟ್ ಇದ್ದೇ ಇರುತ್ತಿತ್ತು. 'ಸಂಜನಾ ಸೈಲೆನ್ಸರ್', 'ಸಂಜು ಬಾಬಾ', 'ಮಮ್ಮಿ' ಹೀಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರತಿ ನಿಮಿಷವೂ ಮನರಂಜನೆ ನೀಡಿದ್ದರು. ಹೀಗಾಗಿ ಇವರು ಎಲಿಮಿನೇಟ್ ಆಗಿರೋ ಸುದ್ದಿ ತೆಲುಗು ಮಂದಿಗೆ ಶಾಕ್ ಆಗಿದೆ.

More from Filmibeat

English summary
Bigg Boss Telugu 9 Grand Finale Buzz is that actress Sanjjanaa Galrani Eliminated from top 5.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X