Bigg Boss: ಬಿಗ್ ಬಾಸ್‌ಗೆ ಸಂಜನಾ ಗಲ್ರಾನಿ ಮತ್ತೆ ಗ್ರ್ಯಾಂಡ್ ಎಂಟ್ರಿ; ಏನಿದು ಸರ್ಪ್ರೈಸ್?
ಎಲ್ಲಾ ಭಾಷೆಯಲ್ಲೂ ಬಿಗ್ ಬಾಸ್ ಸೀಸನ್ ಶುರುವಾಗಿದೆ. ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ ಬಾಸ್ 19ನೇ ಸೀಸನ್‌ಗೆ ಅದ್ಧೂರಿ ಆರಂಭ ಆಗಿ ಮುನ್ನುಗ್ಗುತ್ತಿದೆ. ಇತ್ತ ಮೋಹನ್‌ಲಾಲ್ ನಿರೂಪಣೆ ಮಾಡುತ್ತಿರುವ ಮಲಯಾಳಂ ಬಿಗ್ ಬಾಸ್ ಕೂಡ ಸದ್ದು ಮಾಡುತ್ತಿದೆ. ಇಂದು (ಸೆಪ್ಟೆಂಬರ್ 7) ತೆಲುಗು ಬಿಗ್‌ಬಾಸ್‌ನ 9ನೇ ಸೀಸನ್ ಗ್ರ್ಯಾಂಡ್ ಲಾಂಚ್ ಆಗಿದೆ.
ಬಿಗ್ ಬಾಸ್ ತೆಲುಗು ಆರಂಭ ಆದರೆ, ಅಲ್ಲಿ ಕನ್ನಡದ ನಟ-ನಟಿಯರಿಗೂ ಅವಕಾಶ ಇರುತ್ತೆ. ಬಿಗ್ ಬಾಸ್ ಮನೆಯೊಳಗೆ ಸರ್ಪ್ರೈಸ್ ಎಂಟ್ರಿ ಕೊಡುತ್ತಾರೆ. ಕಳೆದ ಸೀಸನ್‌ನಲ್ಲೂ ಕೂಡ ಕನ್ನಡದ ಕಿರುತೆರೆ ಸ್ಟಾರ್‌ಗಳು ತೆಲುಗಿನ ಬಿಗ್ ಬಾಸ್ ಮನೆಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದರು. ತೆಲುಗು ಸದಸ್ಯರಿಗೆ ಪೈಪೋಟಿ ಕೊಟ್ಟಿದ್ದರು. ಈ ಬಾರಿ ಕೂಡ ಕನ್ನಡದ ಜನಪ್ರಿಯ ನಟಿಗೆ ತೆಲುಗು ಬಿಗ್ ಬಾಸ್ ಮಣೆ ಹಾಕಿದೆ. ಅವರೇ ಸಂಜನಾ ಗಲ್ರಾನಿ.

ಬಿಗ್ ಬಾಸ್ ತೆಲುಗು ಸೀಸನ್ 9ರ 10ನೇ ಸ್ಪರ್ಧಿಯಾಗಿ ಸಂಜನಾ ಗಲ್ರಾನಿ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಮದುವೆ, ಮಗು ಅಂತಾದ ಮೇಲೆ ನಟಿ ಸಂಜನಾ ಗಲ್ರಾನಿ ತೆರೆ ಮರೆಗೆ ಸರಿದಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಆಕ್ಟಿವ್ ಆಗಿದ್ದ ಈ ನಟಿ ದಿಢೀರನೇ ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಸಂಜನಾ ಗಲ್ರಾನಿ ಕನ್ನಡಿಗರಿಗಷ್ಟೇ ಅಲ್ಲ, ತೆಲುಗು ಮಂದಿಗೂ ಪರಿಚಯವಿದೆ. ಡಾರ್ಲಿಂಗ್ ಪ್ರಭಾಸ್ ನಟಿಸಿದ್ದ 'ಬುಜ್ಜಿಗಾಡು' ಸಿನಿಮಾದಲ್ಲಿ ಸಂಜನಾ ಗಲ್ರಾನಿ ಸೆಕೆಂಡ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಮೂಲಕವೇ ತೆಲುಗು ಪ್ರೇಕ್ಷಕರಿಗೂ ಇಷ್ಟವಾಗಿದ್ದರು. ಕನ್ನಡ ಸೇರಿದಂತೆ ತೆಲುಗು, ತಮಿಳು, ಭಾಷೆಗಳಲ್ಲೂ ನಟಿಸಿರುವುದರಿಂದ ದಕ್ಷಿಣ ಭಾರತದ ಸಿನಿಪ್ರಿಯರಿಗೆ ಪರಿಚಯವಿದೆ. ಅಂದ್ಹಾಗೆ ಈ ನಟಿ ಎರಡನೇ ಬಾರಿ ಬಿಗ್ ಬಾಸ್ ವೇದಿಕೆ ಏರುತ್ತಿರೋದು ಮತ್ತೊಂದು ವಿಶೇಷ.
ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಡುವ ಮುನ್ನ ಸಂಜನಾ ಗಲ್ರಾನಿ ಭಾವುಕರಾಗಿದ್ದರು. ತನ್ನ ವೃತ್ತಿ ಜೀವನದ ಬಗ್ಗೆ ನೆನೆಯುತ್ ಸಂಜನಾ ತಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ಮಾತಾಡಿದ್ದಾರೆ. ಡ್ರಗ್ಸ್ ಕೇಸ್‌ನಲ್ಲಿ ಸಂಜನಾ ಗಲ್ರಾನಿ ಬಂಧನವಾಗಿ ಜೈಲಿ ಸೇರಿದ್ದು, ನಂತರ ಜೀವನದ ಬಗ್ಗೆ ಭಾವುಕರಾಗಿ ಮಾತಾಡಿದ್ದಾರೆ. ಅನಾವಶ್ಯಕವಾಗಿ ಡ್ರಗ್ಸ್ ಕೇಸ್‌ನಲ್ಲಿ ತಮ್ಮನ್ನು ಸಿಲುಕಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಡ್ರಗ್ಸ್ ಕೇಸ್‌ನಲ್ಲಿ ಸಂಜನಾ ಜೈಲು ಸೇರಿದ ವೇಳೆ ಸಾಯಬೇಕು ಅಂತ ಅನಿಸಿತು ಎಂದೂ ಹೇಳಿಕೊಂಡಿದ್ದಾರೆ. ಅಸಲಿ ವಿಷಯ ಗೊತ್ತಿಲ್ಲದೆ ತಮ್ಮ ಬಗ್ಗೆ ವರದಿಗಳು ಪ್ರಸಾರ ಆಗಿದ್ದವು. ಅವು ತನ್ನ ವೃತ್ತಿ ಬದುಕನ್ನು ಹಾಳು ಮಾಡಿದ್ದವು. ಈ ಪ್ರಕರಣದಲ್ಲಿ ಹೈಕೋರ್ಟ್ ತನಗೆ ಕ್ಲೀನ್ ಚೀಟ್ ಕೊಟ್ಟಿದೆ. ಆದರೆ,ಈ ವಿಷಯ ಜನರಿಗೆ ತಿಳಿದಿಲ್ಲ ಎಂದೂ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ತೆಲುಗು ಸೀಸನ್ 9 ಅದ್ದೂರಿಯಾಗಿ ಆರಂಭಗೊಂಡಿದೆ. ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ತನುಜಾ ಗೌಡ, ಫ್ಲೋರಾ ಶೈನಿ, ಇಮ್ಯಾನ್ಯುಯೆಲ್, ಮಾಸ್ಕ್ ಮ್ಯಾನ್ ಹರೀಶ್, ಭರಣಿ, ಪವನ್ ಕಲ್ಯಾಣ್ ಪಡಾಲ, ರಾಮು ರಾಥೋಡ್, ದಮ್ಮು ಶ್ರೀಜಾ ಸ್ಪರ್ಧಿಗಳಾಗಿ ಎಂಟ್ರಿಕೊಟ್ಟಿದ್ದಾರೆ. ಇವರೊಂದಿಗೆ ಸಂಜನಾ ಗಲ್ರಾನಿ 10ನೇ ಸ್ಪರ್ಧಿಯಾಗಿ ದೊಡ್ಮನೆ ಸೇರಿದ್ದಾರೆ. 12 ವರ್ಷಗಳ ಹಿಂದೆ, ಅಂದರೆ, 2013ರಲ್ಲಿ ಬಿಗ್ ಬಾಸ್ ಕನ್ನಡದಲ್ಲಿ ಭಾಗವಹಿಸಿದ್ದರು. ಈಗ ತೆಲುಗು ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದು ಅಲ್ಲಿ ಎಷ್ಟು ದಿನ ಮನೆಯೊಳಗೆ ಇರುತ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ನೀವು ನೋಡಬಹುದು.


Click it and Unblock the Notifications











