Bigg Boss Telugu 8: ಬಿಗ್‌ಬಾಸ್ ಸೀಸನ್ 8ಕ್ಕೆ ಅದ್ಧೂರಿ ಚಾಲನೆ; 14 ಸ್ಪರ್ಧಿಗಳ ಲಿಸ್ಟ್ ಇಲ್ಲಿದೆ

ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್. ಕನ್ನಡ ಬಿಗ್‌ಬಾಸ್‌ಗಿಂತಲೂ ಮುನ್ನವೇ ತೆಲುಗಿನ ಬಿಗ್‌ಬಾಸ್ ಸೀಸನ್ 8 ಆರಂಭ ಆಗಿದೆ. ನಿನ್ನೆಯಿಂದ (ಸೆಪ್ಟೆಂಬರ್ 1) ಈ ರಿಯಾಲಿಟಿ ಶೋಗೆ ಚಾಲನೆ ನೀಡಲಾಗಿದೆ. ಹಿಂದಿನ ಶೋಗಳಂತೆ ಟಾಲಿವುಡ್‌ ಕಿಂಗ್ ನಾಗಾರ್ಜುನ್ ಅವರೇ ಈ ಬಾರಿನೂ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಿಗ್‌ಬಾಸ್ ತೆಲುಗು ಸೀಸನ್ 8ರಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಹಿಂದೆ ಒಬ್ಬೊಬ್ಬರೇ ಸ್ಪರ್ಧಿಗಳನ್ನು ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ನೀಡಲಾಗಿತ್ತು. ಈ ಬಾರಿ ಕೊಂಚ ಬದಲಾವಣೆ ಮಾಡಲಾಗಿದ್ದು, ಜೋಡಿಯಾಗಿ ಸ್ಪರ್ಧಿಗಳಿಗೆ ಪ್ರವೇಶ ನೀಡಲಾಗಿದೆ. ಈ ಬಾರಿ ಸ್ಪರ್ಧಿಗಳ ಪಟ್ಟಿ ಕೂಡ ಇಂಟ್ರೆಸ್ಟಿಂಗ್ ಆಗಿದೆ. ಕಿರುತೆರೆ ನಟರು, ಯೂಟ್ಯೂಬ್ ಸ್ಟಾರ್‌ಗಳು, ಸಿನಿಮಾ ಸೆಲೆಬ್ರಿಟಿಗಳು, ನಿರೂಪಕರನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸಲಾಗಿದೆ.

Bigg Boss Telugu season 8 Contestants full List and details of the show

ಈ ಬಾರಿ ಬಿಗ್‌ಬಾಸ್ ತೆಲುಗು ಸೀಸನ್ 8ರಲ್ಲಿ ಮನೆಯೊಳಗೆ ಪ್ರವೇಶಿಸಿದವರಲ್ಲಿ ಕಿರುತೆರೆ ನಟಿ ಯಶ್ಮಿ ಗೌಡ ಮೊದಲ ಸ್ಪರ್ಧಿ. ಎರಡನೇ ಸ್ಪರ್ಧಿಯಾಗಿ ಮತ್ತೊಬ್ಬ ಕಿರುತೆರೆ ನಟ ನಿಖಿಲ್ ಎಂಟ್ರಿ ಕೊಟ್ಟಿದ್ದಾರೆ. ಇವರೊಂದಿಗೆ ಒಟ್ಟು 14 ಮಂದಿ ಎಂಟ್ರಿ ಕೊಟ್ಟಿದ್ದು, ಅವರು ಯಾರು? ಹಿನ್ನೆಲೆ ಏನು? ಅನ್ನೋದನ್ನು ತಿಳಿಯೋಣ.

ಯಶ್ಮಿ ಗೌಡ

ತೆಲುಗು ಬಿಗ್‌ಬಾಸ್ ಸೀಸನ್ 8ರ ಮೊದಲ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶ ಮಾಡಿದ್ದು ಯಶ್ಮಿ ಗೌಡ. ಕನ್ನಡದ ಈ ನಟಿ ತೆಲುಗಿನ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದಾರೆ. 'ನಾಗ ಭೈರವಿ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದರು. 2017ರಲ್ಲಿ ಕನ್ನಡದ ಧಾರಾವಾಹಿ 'ವಿದ್ಯ ವಿನಾಯಕ' ಧಾರಾವಾಹಿ ಮೂಲಕ ನಟನಾ ವೃತ್ತಿಯನ್ನು ಆರಂಭಿಸಿದ್ದರು. 'ತ್ರಿನಯನಿ', 'ಕೃಷ್ಣ ಮುಕುಂದ ಮುರಾರಿ', ಸ್ವಾತಿ ಚಿನುಕುಲು' ಅಂತಹ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ನಿಖಿಲ್ ಮಲಿಯಕ್ಕಲ್

ನಿಖಿಲ್ ಮಲಿಯಕ್ಕಲ್ ಮೂಲತ: ಮೈಸೂರಿನವರು. ಕನ್ನಡ ಕಿರುತೆರೆಯಿಂದ ವೃತ್ತಿ ಜೀವನ ಆರಂಭಿಸಿದ್ದರೂ, ಈಗ ತೆಲುಗಿನಲ್ಲಿಯೇ ಹೆಚ್ಚಾಗಿ ನೆಲೆಸಿದ್ದಾರೆ. 'ಅಮ್ಮಕು ತೆಲಿಯನಿ ಕೊಯಿಲಮ್ಮ', 'ಕಲಸಿ ಉಂಟೆ ಕಲದು ಸುಖಂ' ಅಂತಹ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

Bigg Boss Telugu season 8 Contestants full List and details of the show

ಪ್ರೇರಣ ಕುಂಬಂ

ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ ಮತ್ತೊಬ್ಬ ನಟ ಪ್ರೇರಣಾ ಕುಂಬಂ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ 'ಹರ ಹರ ಮಹಾದೇವ್' ಧಾರಾವಾಹಿ ಮೂಲಕ ನಟನಾ ವೃತ್ತಿ ಆರಂಭಿಸಿದ್ದರು. ಬಳಿಕ 'ಚೂರಿಕಟ್ಟೆ'ಯಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾ 'ರಂಗನಾಯಕಿ', 'ಆನ', 'ಪೆಂಟಗಾನ್'ನಲ್ಲಿ ನಟಿಸಿದ್ದಾರೆ.

ಅಭಯ್ ನವೀನ್

ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಕೊಟ್ಟ ಮತ್ತೊಬ್ಬ ಸ್ಪರ್ಧಿ ಅಭಯ್ ನವೀನ್. ನಟ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.ಹಾಗೇ ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಇವರಿಗೆ 20.8K ಫಾಲೋವರ್ಸ್ ಇದ್ದಾರೆ.

ಶೇಖರ್ ಬಾಷಾ

ಹೈದರಾಬಾದ್ ಮೂಲದ ರೆಡಿಯೋ ಜಾಕಿ ಶೇಕರ್ ಬಾಷಾ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಬಿಗ್‌ ಎಫ್‌ಎಂ 92.7 ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. ಶೇಖರ್ 'ನಾ ನುವ್ವೆ' ಅನ್ನೋ ಸಿನಿಮಾದಲ್ಲಿ ನಟಿಸಿದ್ದಾರೆ.

ನಾಗ ಮಣಿಕಂಠ

ಆಂಧ್ರ ಪ್ರದೇಶದ ಈ ಯುವ ಪ್ರತಿಭೆ ನಾಗ ಮಣಿಕಂಠ. ಶಾರ್ಟ್ ಫಿಲ್ಮ್ ಹಾಗೂ ವೆಬ್‌ ಸೀರಿಸ್‌ನಿಂದ ಹೆಚ್ಚು ಸದ್ದು ಮಾಡಿದ್ದರು. 'ಕಸ್ತೂರಿ' ಅನ್ನುವ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ್ದರು.

ಕಿರಕ್ ಸೀತಾ

ಕಿರಕ್ ಸೀತಾ ಬಿಗ್‌ಬಾಸ್ ಪ್ರವೇಶಿಸಿದ ಮತ್ತೊಬ್ಬ ಸ್ಪರ್ಧಿ. ತನ್ನ ಯೂಟ್ಯೂಬ್ ಚಾನೆಲ್ 7 ಆರ್ಟ್ಸ್ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಹಾಗೇ ಬೇಬಿ ಸಿನಿಮಾದಲ್ಲೂ ನಟಿಸಿದ್ದಾರೆ.

ಬೆಜವಾಡ ಬೀಬಕ್ಕ (ಮಧು ನೆಕ್ಕಂಟಿ)

ಮತ್ತೊಬ್ಬ ಜನಪ್ರಿಯ ಪ್ರತಿಭೆ ಬೆಜವಾಡ ಬೀಬಕ್ಕ ಉರ್ಫ್ ಮಧು ನೆಕ್ಕಂಟಿ ಬಿಗ್‌ಬಾಸ್ ತೆಲುಗು ಸೀಸನ್ 8 ಪ್ರವೇಶ ಪಡೆದಿದ್ದಾರೆ. ಯುಎಸ್ ಹಾಗೂ ತೆಲುಗು ಎರಡೂ ಚಿತ್ರರಂಗದಲ್ಲೂ ಜನಪ್ರಿಯತೆ ಗಳಿಸಿದ್ದಾರೆ. ಯೂಟ್ಯೂಬ್‌ನಲ್ಲಿ ವಿಡಿಯೋ ಮೂಲಕ ಗಮನ ಸೆಳೆದಿದ್ದಾರೆ. '24 ಕಿಸ್ಸಸ್', 'ಮೀಲೋ', 'ಎವರು ಕೊಟೇಸ್ವರುಡು' ಅಂತ ಸಿನಿಮಾದಲ್ಲೂ ನಟಿಸಿದ್ದಾರೆ.

ವಿಷ್ಣುಪ್ರಿಯ ಭೀಮನೇನಿ

ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ನಟಿಸಿರುವ ವಿಷ್ಣುಪ್ರಿಯ ಭೀಮನೇನಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ.

ಪೃಥ್ವಿರಾಜ್

ತೆಲುಗಿನ 'ನಾಗ ಪಂಚಮಿ' ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ಪೃಥ್ವಿರಾಜ್ ಈ ಬಾರಿ ಬಿಗ್‌ಬಾಸ್ ಸೀಸನ್ 8ರ ಮತ್ತೊಬ್ಬ ಸ್ಪರ್ಧಿ.

ಸೋನಿಯಾ ಅಕುಲ

ರಾಮ್‌ ಗೋಪಾಲ್ ವರ್ಮ ಸಿನಿಮಾ 'ಕೊರೊನಾ ವೈರಸ್', 'ಆಶಾ ಎನ್‌ಕೌಂಟರ್', 'ಜಾರ್ಜ್ ರೆಡ್ಡಿ' ಯಲ್ಲಿ ನಟಿಸಿರುವ ಸೋನಿಯಾ ಅಕುಲ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಆದಿತ್ಯ ಓಂ

ತೆಲುಗು ಚಿತ್ರರಂಗಲ್ಲಿ ನಟ ನಿರ್ಮಪಕನಾಗಿ ಗುರುತಿಸಿಕೊಂಡಿರುವ ಆದಿತ್ಯ ಓಂ ಈ ಬಾರಿ ಬಿಗ್‌ಬಾಸ್ ಸೀಸನ್ 8ರ ಮತ್ತೊಬ್ಬ ಸ್ಪರ್ಧಿ. 2013ರಲ್ಲಿ 'ಬಂಡೂಕ್' ಸಿನಿಮಾ ಮೂಲಕ ನಿರ್ದೇಶಕರೂ ಆಗಿದ್ದರು.

ನೈನಿಕಾ ಅನಸುರು

'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ 6' ರಿಯಾಲಿಟಿ ಶೋನಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದ ನೈನಿಕಾ ಅನಸುರು ಬಿಗ್‌ಬಾಸ್ ಸೀಸನ್ 8ರ ಮತ್ತೊಬ್ಬ ಕಾಂಪಿಟೇಟರ್.

ನಬೀಲ್ ಅಫ್ರಿದಿ

ಸೋಶಿಯಲ್ ಮೀಡಿಯಾ ಕಡೆಯಿಂದ ನಬೀಲ್ ಅಫ್ರಿದಿ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಇವರ ಯೂಟ್ಯೂಬ್ ಚಾನೆಲ್ ವಾಂಗಲ್ ಡೈರೀಸ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಅವರ ಹಲವು ದಿನಗಳ ಕನಸು ಈಡೇರಿದೆ.

More from Filmibeat

English summary
Bigg Boss Telugu season 8 Contestants full List and details of the show:
Read more about: bigg boss telugu filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X