ಮುಖವಾಡ ಧರಿಸಿದ ವ್ಯಕ್ತಿಯಿಂದ ಆಕ್ರಮಣ.. ದಿನವೀಡಿ ಊಟವಿಲ್ಲ.. ಮೊದಲ ದಿನವೇ ಸಂಜನಾ ಸುಸ್ತು
ಎಲ್ಲಿ ನೋಡಿದರೂ ಬಿಗ್‌ಬಾಸ್‌ನದ್ದೇ ಮಾತು. ಉತ್ತರದಿಂದ ದಕ್ಷಿಣದವರೆಗೂ ಬಿಗ್ ಬಾಸ್ ಮೇನಿಯಾ ಶುರುವಾಗಿದೆ. ಹಿಂದಿ, ಮಲಯಾಳಂ, ತೆಲುಗು ಭಾಷೆಗಳಲ್ಲಿ ಬಿಗ್ ಬಾಸ್ ಜ್ವರ ಆರಂಭ ಆಗಿದೆ. ಕಳೆದ ವೀಕೆಂಡ್‌ನಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 9 ಗ್ರ್ಯಾಂಡ್ ಆಗಿ ಲಾಂಚ್ ಆಗಿದೆ. ಎಂದಿನಂತೆ ಎವರ್‌ಗ್ರೀನ್ ನಾಗಾರ್ಜುನ ಬಿಗ್ ಬಾಸ್ ಅನ್ನು ಕಿಕ್ ಸ್ಟಾರ್ಟ್ ಮಾಡಿದ್ದಾರೆ.
ಸೆಪ್ಟೆಂಬರ್ 7 ರಂದು ಬಿಗ್ ಬಾಸ್ ತೆಲುಗು ಸೀಸನ್ 9 ಅದ್ದೂರಿಯಾಗಿ ಪ್ರಾರಂಭ ಆಗಿದ್ದು, ನಟ ಅಕ್ಕಿನೇನಿ ನಾಗಾರ್ಜುನ ಬಿಗ್‌ಬಾಸ್ 9ರ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇವರೊಂದಿಗೆ ಕನ್ನಡದಿಂದಲೂ ಇಬ್ಬರು ನಟಿಯರು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ. ಅದರಲ್ಲಿ ಸಂಜನಾ ಗಲ್ರಾನ್ ಎಂಟ್ರಿ ಸರ್ಪ್ರೈಸ್ ಕೊಟ್ಟಿತ್ತು. ನಿರೀಕ್ಷೆನೇ ಮಾಡದ ನಟಿಯನ್ನು ತೆಲುಗು ಬಿಗ್‌ಬಾಸ್ ಮನೆಯಲ್ಲಿ ಕಂಡು ಜನರು ಅಚ್ಚರಿ ಪಟ್ಟಿದ್ದಾರೆ.

ಸದ್ಯಕ್ಕೀಗ ಬಿಗ್ ಬಾಸ್ ತೆಲುಗು ಸೀಸನ್ 9ರ ಹೊಸ ಮನೆಯಲ್ಲಿ 15 ಮಂದಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇವರಲ್ಲಿ 9 ಮಂದಿ ಸೆಲೆಬ್ರಿಟಿಗಳು ಇದ್ದರೆ, ಇನ್ನು 6 ಜನ ಸಾಮಾನ್ಯರನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಗ್ರ್ಯಾಂಡ್ ಫಿನಾಲೆಯಲ್ಲಿ ಅಕ್ಕಿನೇನಿ ನಾಗಾರ್ಜುನ ಈ 15 ಮಂದಿಗೂ ಭವ್ಯ ಸ್ವಾಗತ ಕೋರಿ ಮನೆಯೊಳಗೆ ಕಳುಹಿಸಿದ್ದಾರೆ. ಆದರೆ, ಮನೆಯೊಳಗೆ ಹೋಗುತ್ತಿದ್ದಂತೆ ಸ್ಪರ್ಧಿಗಳು ಉಪವಾಸ ಬೀಳುವಂತಾಗಿದೆ.
ಈಗಾಗಲೇ ಮನೆಯೊಳಗೆ ಎಂಟ್ರಿ ಕೊಟ್ಟಿರುವ ಸೆಲೆಬ್ರಿಟಿ ಸ್ಪರ್ಧಿಗಳಲ್ಲಿ ಸಂಜನಾ ಗಲ್ರಾನಿ, ತನುಜಾ ಗೌಡ, ಆಶಾ ಶೈನಿ, ರಿತು ಚೌಧರಿ, ರಾಮು ರಾಥೋಡ್, ಭರಣಿ, ಶ್ರೇಷ್ಠಿ ವರ್ಮಾ, ಇಮ್ಯಾನುಯೆಲ್ ಮತ್ತು ಸುಮನ್ ಶೆಟ್ಟಿ ಸೇರಿದ್ದಾರೆ. ಸಾಮಾನ್ಯ ಸ್ಪರ್ಧಿಗಳಾಗಿ ಮಾಸ್ಕ್ ಮ್ಯಾನ್ ಹರೀಶ್, ಡಿಮೋನ್ ಪವನ್, ಕಲ್ಯಾಣ್ ಪಡಾಲ, ಪ್ರಿಯಾ ಶೆಟ್ಟಿ, ಶ್ರೀಜಾ ದಮ್ಮು ಮತ್ತು ಮರ್ಯಾದ್ ಮನೀಶ್ ಎಂಟ್ರಿ ಕೊಟ್ಟಿದ್ದಾರೆ.
ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳನ್ನು ಪ್ರತ್ಯೇಕವಾಗಿ ಇಡಲಾಗಿದೆ. ಮೊದಲು ಸೆಲೆಬ್ರಿಟಿಗಳನ್ನು 'ಬಾಡಿಗೆದಾರರು' ಎಂದು ಮಾಡಲಾಗಿದೆ. ಇನ್ನೊಂದು ಕಡೆ ಸಾಮಾನ್ಯ ಸ್ಪರ್ಧಿಗಳನ್ನು 'ಮಾಲೀಕರು' ಎಂಬ ಪಟ್ಟವನ್ನು ಕೊಡಲಾಗಿದೆ. ಎಲ್ಲ ಸೌಲಭ್ಯಗಳಿರುವ ಮನೆಯನ್ನು ಸಾಮಾನ್ಯ ಸ್ಪರ್ಧಿಗಳಿಗೆ ನೀಡಿ, ಸಾಮಾನ್ಯ ಮನೆಯನ್ನು ಸೆಲೆಬ್ರಿಟಿಗಳಿಗೆ ನೀಡಿರೋದು ಮೊದಲ ದಿನವೇ ವೀಕ್ಷಕರಿಗೆ ಟ್ವಿಸ್ಟ್ ಕೊಡಲಾಗಿದೆ.
ಪ್ರತಿದಿನ ರಾತ್ರಿ 9:30 ಕ್ಕೆ ಸ್ಟಾರ್ ಮಾ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಆಗುತ್ತಿದೆ. ಮೊದಲ ದಿನವೇ ಸ್ಪರ್ಧಿಗಳ ನಡುವೆ ನಡೆದ ಘಟನೆಗಳು ಕುತೂಹಲ ಹುಟ್ಟಾಕಿವೆ.ಮೊದಲ ದಿನದ ಬಿಗ್ ಬಾಸ್ ವೀಕ್ಷಕರಿಗೆ ಕಿಕ್ ಕೊಟ್ಟಿದೆ. ಇದರಲ್ಲಿ, ಸ್ಪರ್ಧಿಗಳು ಮನೆಯಲ್ಲಿ ಗೊಂದಲದಿಂದ ಓಡಾಡುತ್ತಿರುವುದು ಎದ್ದು ಕಾಣಿಸುತ್ತಿದೆ. ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರಿಗೆಲ್ಲ ಕಟ್ಟುನಿಟ್ಟಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಸೆಲೆಬ್ರಿಟಿಗಳು 'ಬಾಡಿಗೆದಾರರು' ಆದರೂ, ಅಡುಗೆ ಮನೆಯಲ್ಲಿ ಬಿರಿಯಾನಿ ತಿಂದಿದ್ದಾರೆ. ಕೆಲವರಿಗೆ ಮಾತ್ರ ಬಿರಿಯಾನಿ ಇದ್ದು, ಇನ್ನು ಕೆಲವರಿಗೆ ಏನೂ ಇರಲಿಲ್ಲ. ಬಿಗ್ ಬಾಸ್ ಕಳುಹಿಸಿದ ಬಿರಿಯಾನಿಯನ್ನು ತಿನ್ನಲು ಸ್ಪರ್ಧಿಗಳು ಸಿದ್ಧರಾದಾಗ, ಬಿಗ್ ಬಾಸ್ ಅವರೆಲ್ಲರನ್ನೂ ತಟ್ಟೆಗಳನ್ನು ಅಲ್ಲೇ ಬಿಟ್ಟು ಲಿವಿಂಗ್ ಹಾಲ್‌ಗೆ ಬರಲು ಹೇಳಿತ್ತು.
ಇಲ್ಲಿ ಮಾಲೀಕರ ಅನುಮತಿಯಿಲ್ಲದೆ ಬಾಡಿಗೆದಾರರು ತಮ್ಮ ಕೊಠಡಿಗಳಿಗೆ ಹೋಗುವಂತಿಲ್ಲ ಎಂದು ಆದೇಶಿಸಿತ್ತು. ಇದಾದ ನಂತರ, ಸೆಲೆಬ್ರಿಟಿ ಸ್ಪರ್ಧಿಗಳಾದ ಸಂಜನಾ ಗಲ್ರಾನಿ, ರಿತು ಚೌಧರಿ ಮತ್ತು ಇಮ್ಯಾನುಯೆಲ್ ಬಿಗ್ ಬಾಸ್ ಬಳಿ ಆತಂಕ ವ್ಯಕ್ತಪಡಿಸಿದ್ದರು. "ಬಿಗ್ ಬಾಸ್, ದಿನವಿಡೀ ಆಹಾರವಿಲ್ಲದೆ ಹೇಗೆ ಇರುವುದು?" ಎಂದು ಬೇಸರ ವ್ಯಕ್ತಪಡಿಸಿದರು. ಹೀಗೆ ಆಹಾರವಿಲ್ಲದೆ ಇರುವುದು ಅನ್ಯಾಯ ಎಂದು ಮೊದಲ ದಿನವೇ ವಾದ-ವಿವಾದಕ್ಕೆ ಇಳಿದಿದ್ದಾರೆ. ಹೀಗಾಗಿ ಮೊದಲ ದಿನವೇ ಸಂಜನಾ ಗಲ್ರಾನಿ ಉಪವಾಸಕ್ಕೆ ಬೀಳಬೇಕಾದ ಪರಿಸ್ಥಿತಿ ಬಂದಿದೆ.


Click it and Unblock the Notifications











