ಸ್ಮೃತಿ ಇರಾನಿ ಧಾರಾವಾಹಿಯಲ್ಲಿ ವಿಶ್ವದ 13ನೇ ಶ್ರೀಮಂತ ಬಿಲ್ ಗೇಟ್ಸ್ ನಟನೆ; ಕಿರುತೆರೆಯಲ್ಲಿ ಏನಾಗ್ತಿದೆ?
ಭಾರತದ ಅತ್ಯಂತ ದುಬಾರಿ ಧಾರಾವಾಹಿಗಳಲ್ಲಿ ಸ್ಮೃತಿ ಇರಾನಿ ನಟಿಸುತ್ತಿರುವ 'ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ 2'. ಮೊದಲ ಸೀಸನ್ ಕಿರುತೆರೆ ವೀಕ್ಷಕರಿಂದ ಭಾರೀ ಜನಪ್ರಿಯತೆ ಪಡೆದುಕೊಂಡಿತ್ತು. ಬಹಳ ವರ್ಷಗಳ ಬಳಿಕ ಎರಡನೇ ಸೀಸನ್ ಶುರುವಾಗಿದೆ. ಇದೇ ವರ್ಷ ಜುಲೈ 29 ರಿಂದ ಗ್ರ್ಯಾಂಡ್ ಆಗಿ ಸೀಸನ್ 2 ಆರಂಭ ಆಗಿತ್ತು. ಅದರ ಪ್ರಮುಖ ಆಕರ್ಷಣೆಯಾಗಿದ್ದವರೇ ಸ್ಮೃತಿ ಇರಾನಿ.
ರಾಜಕೀಯದಿಂದ ಬ್ರೇಕ್ ತೆಗೆದುಕೊಂಡು ಸ್ಕೃತಿ ಇರಾನಿ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ 2' ಆರಂಭ ಆದ ದಿನದಿಂದ ಕಿರುತೆರೆಯ ಟಾಸ್ ಸೀರಿಯಲ್ ಆಗಿ ಮುಂದುವರೆದಿದೆ. ಕಥೆಯ ಜೊತೆಗೆ ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್‌ಗಳನ್ನು ಕೊಡಲಾಗುತ್ತಿದೆ. ಜೊತೆಗೆ ಸಾಮಾಜಿಕ ಸಮಸ್ಯೆಗಳನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗುತ್ತಿದೆ.

ಈ ಕಾರಣಕ್ಕೆ 'ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ 2' ಟಿಆರ್‌ಪಿಯಲ್ಲಿ ಟಾಪ್‌ನಲ್ಲಿದೆ. ಇತ್ತೀಚೆಗೆ ಸೀರಿಯಲ್‌ನಲ್ಲಿ ಈ ಹಿಂದೆ ನಟಿಸಿದ ಕೆಲವು ತಾರೆಯರು ಬಂದು ಹೋಗಿದ್ದರು. ಸಾಕ್ಷಿ ತನ್ವಾರ್, ಕಿರಣ್ ಕರ್ಮಾಕರ್ ಸೇರಿದಂತೆ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಮತ್ತೊಬ್ಬ ಉದ್ಯಮಿ ಸೆಲೆಬ್ರೆಟಿ ವಿಶ್ವದ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಆಗಮನ ಆಗಲಿದೆ ಎಂದು ಹೇಳಲಾಗುತ್ತಿದೆ. ಅಸಲಿಗೆ ಬಿಲ್ ಗೇಟ್ಸ್ ಈ ಧಾರಾವಾಹಿಯಲ್ಲಿ ನಟಿಸೋದು ನಿಜವೇ? ಏನಿದು ಸುದ್ದಿ? ತಿಳಿಯುವುದಕ್ಕೆ ಮುಂದೆ ಓದಿ.
ಸ್ಮೃತಿ ಇರಾನಿ ಸೀರಿಯಲ್‌ನಲ್ಲಿ ಬಿಲ್ ಗೇಟ್ಸ್
'ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ 2' ಸೀರಿಯಲ್ ವೀಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಏಕ್ತಾ ಕಪೂರ್ ನಿರ್ಮಾಣದ ಈ ಧಾರಾವಾಹಿ ಈಗ ಬಿಲ್ ಗೇಟ್ಸ್ ವಿಚಾರಕ್ಕೆ ಸುದ್ದಿಯಲ್ಲಿದೆ. ಇಟೈಮ್ಸ್ ವರದಿಯ ಪ್ರಕಾರ, ಸ್ಮೃತಿ ಇರಾನಿ ನಟಿಸುತ್ತಿರುವ ಈ ದುಬಾರಿ ಸೀರಿಯಲ್‌ನಲ್ಲಿ ಬಿಲ್ಸ್ ಗೇಟ್ಸ್ ನಟಿಸಲಿದ್ದರೆ. ಈಗಾಗಲೇ ಅದಕ್ಕೆ ಬೇಕಾಗಿರೋ ಸಿದ್ಧತೆಗಳನ್ನು ತಂಡ ಮಾಡಿಕೊಂಡಿದೆ ಎಂದು ವರದಿಯಾಗಿದೆ.
ಎಷ್ಟು ಎಪಿಸೋಡ್?
ವಿಶ್ವದ 13ನೇ ಶ್ರೀಮಂತ, ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಇತ್ತೀಚೆಗೆ ಸಾಮಾಜಿಕ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮದ ಕೆಲಸಗಳಲ್ಲಿ ಬ್ಯುಸಿಯಾಗಿರುವ ಇವರು ಭಾರತದ ಸೀರಿಯಲ್‌ನಲ್ಲಿ ನಟಿಸುತ್ತಿರೋ ವಿಷಯ ಕಿರುತೆರೆ ಲೋಕದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಅದರಲ್ಲೂ ಮೂರು ಎಪಿಸೋಡ್‌ಗಳಲ್ಲಿ ಬಿಲ್ ಗೇಟ್ಸ್ ಕಾಣಿಸಿಕೊಳ್ಳುತ್ತಿದ್ದಾರೆಂದು ವರದಿಯಾಗಿದೆ.

ಬಿಲ್ ಗೇಟ್ಸ್ ನಟಿಸುತ್ತಿರೋದ್ಯಾಕೆ?
ಇನ್ನು ಭಾರತದ ಧಾರಾವಾಹಿಗಳಲ್ಲಿ ಬಿಲ್ ಗೇಟ್ಸ್‌ಗೆ ಏನು ಕೆಲಸ? ಅವರನ್ನೇ ಯಾಕೆ ಕರೆದುಕೊಂಡು ಬರಬೇಕಿತ್ತು? ಅನ್ನೋ ಪ್ರಶ್ನೆಗಳಿಗೂ ಉತ್ತರವಿದೆ. 'ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ 2' ಧಾರಾವಾಹಿಯಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಲಾಗುತ್ತಿದೆ. ಬಿಲ್ ಗೇಟ್ಸ್ ತಮ್ಮ ಫೌಂಡೇಷನ್ ಮೂಲಕ ವಿಶ್ವದಾದ್ಯಂತ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಸೀರಿಯಲ್‌ನಲ್ಲಿ ಗರ್ಭಿಣಿ ಮಹಿಳೆಯ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವ ಸನ್ನಿವೇಶವಿದೆ. ಈ ಎಪಿಸೋಡ್‌ನಲ್ಲಿ ಸ್ಮೃತಿ ಇರಾನಿಯೊಂದಿಗೆ ಬಿಲ್ ಗೇಟ್ಸ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.


Click it and Unblock the Notifications











