Brahmagantu Serial:ಚಿರು ಬಾಳಿನಿಂದ ದೀಪಾಳನ್ನು ದೂರ ಮಾಡುವ ಪ್ಲಾನ್ ವರ್ಕ್ ಔಟ್ ಆಗುತ್ತಾ?

ಕಿರುತೆರೆಯಲ್ಲಿ ಧಾರಾವಾಹಿಗಳಿಗೇನು ಕಮ್ಮಿಯಿಲ್ಲ. ಒಂದರ ಮೇಲೊಂದರಂತೆ ಪೈಪೋಟಿಗೆ ಬಿದ್ದು ವೀಕ್ಷಕರನ್ನು ರಂಜಿಸುವುದಕ್ಕೆ ಮುಂದಾಗಿವೆ. ಇದರಲ್ಲಿ 'ಬ್ರಹ್ಮಗಂಟು' ಧಾರಾವಾಹಿ ಕೂಡ ಒಂದು. ಕುಟುಂಬದಲ್ಲಿರುವ ವೈವಾಹಿಕ ಸಮಸ್ಯೆಗಳನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಾಗಿತ್ತು. ಹೀಗಾಗಿ ಜನರಿಗೆ ಈ ಧಾರಾವಾಹಿ ಕನೆಕ್ಟ್ ಆಗಿದೆ. ಸದ್ಯಕ್ಕೀಗ ಚಿರು ಮತ್ತು ದೀಪಾ ಬಾಳಿನಲ್ಲಿ ಬಿರುಗಾಳಿ ಎದ್ದಿದೆ.

ಚಿರು ಹಾಗೂ ದೀಪಾ ಇಬ್ಬರೂ ಹೇಗಾದರೂ ದೂರ ಮಾಡಬೇಕು ಅಂತ ಸೌಂದರ್ಯ ಸ್ಕೆಚ್ ಹಾಕಿದ್ದಾಳೆ. ಆ ಸಂಚಿಗೆ ಮುಗ್ಧೆ ದೀಪಾ ಬಲಿಯಾಗಿದ್ದಾರೆ. ಇಂದಿನ 'ಬ್ರಹ್ಮಗಂಟು' ಎಪಿಸೋಡ್‌ನಲ್ಲಿ ಈ ಎರಡು ಪ್ರಮುಖ ಪಾತ್ರಗಳ ಮೇಲೆ ಕಥೆ ನಡೆಯುತ್ತಿದೆ. ಇವತ್ತಿನ ಸಂಚಿಕೆಯಲ್ಲೂ ಕೂಡ ದೀಪಾ ಪಾತ್ರದ ಭಾವನ್ಮಾಕ ಸನ್ನಿವೇಶಗಳು ನಡೆಯುತ್ತಿವೆ.

Brahmagantu Kannada Serial May 28th episode revealing Chiru and Deepa divorce story

ಸದ್ಯಕ್ಕೀಗ ಬೇರೆಯಾಗುವ ಮೊದಲು ದೀಪಾ ಆಸೆಯಂತೆ ಚಿರು ಡಿನ್ನರ್‌ಗೆ ಕರೆದುಕೊಂಡು ಹೋಗುತ್ತಾನೆ. ಈ ಮೊದಲೇ ದೀಪಾ ಕೊಟ್ಟ ಮಾತಿನಂತೆ ಡಿವೋರ್ಸ್ ಪೇಪರ್‌ಗೂ ಸಹಿಯನ್ನು ಹಾಕಿದ್ದಾಳೆ. ಇನ್ನೇನು ಚಿರು ಮನಸ್ಸಿನಲ್ಲಿ ದೀಪಾ ಬಗ್ಗೆ ಪ್ರೀತಿ ಮೂಡಬೇಕು, ಅಷ್ಟರಲ್ಲೇ ಅವರಿಬ್ಬರನ್ನೂ ದೂರ ಮಾಡುವುದಕ್ಕೆ ಸೌಂದರ್ಯಾ ಮುಂದಾಗಿದ್ದಾಳೆ.

ದೀಪಾ ವಿಚ್ಛೇದನ ಕೊಡುವುದಕ್ಕೆ ಮುಂದಾಗುತ್ತಿದ್ದಂತೆ ಚಿರುಗೆ ಇನ್ನೊಂದು ಮದುವೆ ಮಾಡುವ ಪ್ಲಾನ್ ಮಾಡಿದ್ದಾಳೆ ಸೌಂದರ್ಯಾ. ಈ ವಿಷಯ ತಿಳಿದ ದೀಪಾ ತನ್ನಿಂದ ಏನೂ ಮಾಡಲಾರದೆ ಕಣ್ಣೀರಿಡುತ್ತಾಳೆ. ಆದರೆ, ತಾನೊಂದು ಬಗೆದರೆ ದೈವವೊಂದು ಬಗೆದೀತು ಎಂಬಂತೆ ಸೌಂದರ್ಯ ಪ್ಲಾನ್ ಉಲ್ಟಾ ಆಗುತ್ತಾ? ಇಲ್ಲಾ ಚಿರು ಮತ್ತು ದೀಪಾ ಬೇರೆಯಾಗುತ್ತಾರಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.

Brahmagantu Kannada Serial May 28th episode revealing Chiru and Deepa divorce story

ಸದ್ಯ 'ಬ್ರಹ್ಮಗಂಟು' ಧಾರಾವಾಹಿಯ ಪ್ರೋಮೋ ರಿಲೀಸ್ ಮಾಡಿದ್ದು, ದೀಪಾ ಹಾಗೂ ಸೌಂದರ್ಯಾ ನಡುವಿನ ಸಂಭಾಷಣೆ ಇಂದಿನ ಎಪಿಸೋಡ್ ಹೈ ಪಾಯಿಂಟ್ ಎನಿಸಿಕೊಂಡಿದೆ. "ನಾನು ಬದುಕಿರುವಾಗಲೇ ಇನ್ನೊಂದು ಮದುವೆ ಮಾಡುವುದಕ್ಕೆ ಹೊರಟಿದ್ದೀರಾ? ಎಂದು ದೀಪಾ, ಸೌಂದರ್ಯಾಗೆ ಕೇಳುತ್ತಾಳೆ. ಅದಕ್ಕೆ ತಾನು ಹಾಕಿದ ಸ್ಕೆಚ್ ಸಕ್ಸಸ್ ಆಗುತ್ತಿದ್ದಂತೆ ಆಹಂಕಾರದಿಂದ "ಓ.. ನೀನು ಸಾಯುವವರೆಗೂ ಕಾಯ್ಬೇಕಾ?" ಎಂದು ಸೌಂದರ್ಯಾ ಹೇಳುತ್ತಾಳೆ.

ಅದಕ್ಕೆ ದೀಪಾ "ನೋಡಿ ಮೇಡಂ ನನ್ನಂತಹ ಅಮಾಯಕ ಹೆಣ್ಣು ಮಗಳಿಗೆ ಮೋಸ ಮಾಡಿದರೆ, ಆ ಕರ್ಮ ನಿಮಗೆ ಸುಮ್ಮನೆ ಬಿಡುವುದಿಲ್ಲ." ಎಂದು ದೀಪಾ ಹೇಳಿದರೆ, "ಪಾಪ ಪುಣ್ಯ, ಧರ್ಮ, ಕರ್ಮ, ಇವನ್ನೆಲ್ಲ ನೋಡುತ್ತಾ ಹೋದರೆ, ಬದುಕುವುದಕ್ಕೆ ಆಗುವುದಿಲ್ಲ. ಚಿರುಗೆ ನೀನು ಡಿವೋರ್ಸ್ ಕೊಡುತ್ತಿದ್ದೀಯಾ ಅಂದ್ಮೇಲೆ, ಇನ್ಮುಂದೆ ನಿನಗೂ ಅವನಿಗೂ ಯಾವುದೇ ರೀತಿಯ ಸಂಬಂಧ ಇರೋದಿಲ್ಲ. ಕಾನೂನು ಪ್ರಕಾರನೂ ಅವನು ಬೇರೆ ಮದುವೆ ಆಗಬಹುದು. ಇದು ನಿನಗೂ ಗೊತ್ತಿದೆ ಅಂತ ಕಾಣುತ್ತೆ. ಹೇಗೂ ನೀನು ಡಿವೋರ್ಸ್ ಪೇಪರ್‌ಗೆ ಸಹಿ ಮಾಡಿದ್ದೀಯಲ್ಲ ಅದೆಲ್ಲಾ ಸುಳ್ಳಾ?" ಎಂದು ಸೌಂದರ್ಯಾ ಹೇಳುತ್ತಾಳೆ.

ಚಿರು ಹಾಗೂ ದೀಪಾ ಬಾಳಲ್ಲಿ ಸೌಂದರ್ಯಾ ಬಿರುಗಾಳಿ ಎಬ್ಬಿಸಿದ್ದಾಳೆ. ದೀಪಾಳನ್ನು ಅವಳ ಮಾತುಗಳಿಂದಲೇ ಕಟ್ಟಿ ಹಾಕಿದ್ದಾಳೆ. ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿದ್ದಾಳೆ. "ಚಿರುಗೆ ನಿನ್ನನು ಕಂಡರೆ ಇಷ್ಟ ಇಲ್ಲ ಅಂತ ಹೇಳಿದ್ದು ಸುಳ್ಳಾ? ಅವನು ನಿನಗೆ ಡಿವೋರ್ಸ್ ಕೊಡಬೇಕು ಅಂತ ಅಂದ್ಕೊಂಡಿದ್ದಾನೆ ಅಂತ ಹೇಳಿದ್ದು ಸುಳ್ಳಾ?" ಎಂದು ಗದರಿದ್ದಾಳೆ. ಅದರೆ ಚಿರುಗೆ ಮತ್ತೆ ಮದುವೆ ಮಾಡಿಸುತ್ತೇವೆ ಎನ್ನುವುದನ್ನು ರಿವೀಲ್ ಮಾಡಿರಲಿಲ್ಲ. "ಅವರಿಂದ ನನಗೆ ಡಿವೋರ್ಸ್ ಕೊಡಿಸುವುದಕ್ಕೆ ಹೋದ್ಮೇಲೆ, ಇನ್ನೊಂದು ಮದುವೆ ಮಾಡುತ್ತಿದ್ದೇವೆ ಅಂತ ನನಗೆ ಯಾಕೆ ಹೇಳಲಿಲ್ಲ" ಎಂದು ದೀಪಾ ಪ್ರಶ್ನೆ ಕೂಡ ಮಾಡಿದ್ದಾಳೆ.

ಅದಕ್ಕೆ ಸೌಂದರ್ಯಾ ತಮ್ಮ ಅಸಲಿ ಬಣ್ಣವನ್ನು ತೋರಿಸಿದ್ದಾಳೆ. "ಹೇಳಿದಿದ್ದರೆ, ನೀನು ಸಹಿ ಹಾಕುತ್ತಿರಲಿಲ್ಲ ಎನ್ನುವ ಡೌಟ್ ಇತ್ತು. ಅದಕ್ಕೆ ಹೇಳಲಿಲ್ಲ. ಈ ಫೋಟೋದಲ್ಲಿ ಇರುವ ಹುಡುಗಿನೇ ನಿನ್ನ ಚಿರುನ ಮದುವೆ ಆಗುತ್ತಿರೋದು. ಯಾರದು ಅವಳು ಹೇಗಿದ್ದಾಳೆ ಅಂತ ನೋಡುತ್ತೀಯಾ?" ಎಂದಾಗ ದೀಪಾ ಕಣ್ಣು ಮುಚ್ಚಿಕೊಂಡಿದ್ದಾಳೆ. ಈಗ ದೀಪಾ ಹಾಗೂ ಚಿರು ಬೇರೆಯಾಗುತ್ತಾರಾ? ಇಲ್ಲ ಸೌಂದರ್ಯಾ ಪ್ಲಾನ್ ಉಲ್ಟಾ ಆಗುತ್ತಾ? ಎನ್ನುವುದು ಇವತ್ತಿನ ಸಂಚಿಕೆಯಲ್ಲಿ ಗೊತ್ತಾಗಬಹುದು.

More from Filmibeat

English summary
Brahmagantu Kannada Serial May 28th episode revealing Chiru and Deepa divorce story;
Read more about: serial tv show actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X