ಬ್ರಹ್ಮಾಂಡ ಗುರುಗಳು ಮುಚ್ಚಿಟ್ಟಿದ್ದ ಸತ್ಯ ಸಂಗತಿ

By Rajendra
<ul id="pagination-digg"><li class="previous"><a href="/tv/chandrika-honest-truth-bigg-boss-075124.html">« Previous</a>

ಇನ್ನೊಮ್ಮೆ ಚಕ್ರವನ್ನು ತಿರುಗಿಸಿದಾಗ ಅದು ನಿಂತಿದ್ದು ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಹೆಸರಿನ ಬಳಿ. ಅವರು ಮಾತನಾಡುತ್ತಾ, ಇವರೆಲ್ಲರೂ ಕಷ್ಟಪಡುತ್ತಿದ್ದಾರೆ. ಟಾಸ್ಕ್ ಮಾಡದೆ ಸುಮ್ಮನೆ ತಿನ್ತಾ ಇದ್ದೀನಲ್ಲಾ ಎಂಬ ಬೇಸರ ಇದೆ ಎಂದು ಒಂದೇ ಒಂದು ಕಟು ಸತ್ಯ ಹೇಳಿದರು. ಈ ಒಂದು ಅಪರಾಧಿ ಭಾವನೆ ನನ್ನನ್ನು ಕಾಡುತ್ತಿದೆ ಎಂದು ಕಣ್ಣು ಒರೆಸಿಕೊಂಡರು.

ಇನ್ನೊಮ್ಮೆ ಚಕ್ರ ತಿರುಗಿಸಿದಾಗ ನಿಕಿತಾ ಹೆಸರನ್ನು ಸೂ‌ಚಿಸಿತು. ಅವರು ಮಾತನಾಡುತ್ತಿದ್ದಂತೆ ಚಂದ್ರಿಕಾ ಮುಖವನ್ನು ಒಂಥರಾ ಮಾಡಿಕೊಂಡರು. ಮಧ್ಯ ಪ್ರವೇಶಿಸಿದ ಸುದೀಪ್ ಸ್ಟಾಪ್ ಇಟ್ ಎಂದರು. ಅವರು ಮಾತನಾಡಬೇಕಾದರೆ ನೀವು ಗಮನಕೊಟ್ಟು ಕೇಳಿ. ನೀವು ಅಲ್ಲೇ ರಿಯಾಕ್ಷನ್ ಕೊಡುವುದು ಬೇಡ. ಮುಖ ಮನಸ್ಸಿನ ಕನ್ನಡಿ ಇದ್ದಂತೆ. ನಿಮ್ಮ ಭಾವನೆ ನಮಗೆ ಬೇಸರ ತರಿಸಿದೆ. ನಿಕಿತಾ ಸತ್ಯವನ್ನು ಹೇಳುವುದು ಬೇಡ ಎಂದು ಬ್ರೇಕ್ ಹಾಕಿದರು.

Narendra Babu Sharma
ಈ ಘಟನೆಯಿಂದ ಒಂಚೂರು ಗಲಿಬಿಲಿಗೊಂಡು ಪೆಚ್ಚಾದ ಚಂದ್ರಿಕಾ ಬಳಿಕ ಮುಂದುವರೆಯುವಂತೆ ಸುದೀಪ್ ಬಳಿ ವಿನಂತಿಸಿಕೊಂಡರು. ಕಡೆಗೆ ನಿಕಿತಾ ಹಾಗೂ ಚಂದ್ರಿಕಾ ಇಬ್ಬರೂ ಅಕ್ಕತಂಗಿಯರಂತೆ ಒಬ್ಬರನ್ನೊಬ್ಬರು ಅಪ್ಪಿ ಕ್ಷಮಿಸುವಂತೆ ಕೇಳಿಕೊಂಡರು. ಅಲ್ಲಿಗೆ ಅವರಿಬ್ಬರ ನಡುವಿನ ಮನಸ್ತಾಪ ಕಣ್ಣೀರಿನ ಮೂಲಕ ಕೊಚ್ಚಿಹೋಯಿತು.

ಫೈನಲ್ ತಲುಪಿದ್ದೀನಿ ಎಂಬ ಹುಮ್ಮಸ್ಸಿನಲ್ಲಿ ಬೀಗುತ್ತಿದ್ದ ಅರುಣ್ ಸಾಗರ್ ಅವರಿಗೆ ಸುದೀಪ್ ಈ ಬಾರಿ ಎಚ್ಚರಿಸಿದರು. ಅದೇನೆಂದರೆ ಇಷ್ಟು ದಿನ ತಾವು ಫೈನಲ್ ತಲುಪಿದ್ದೀರಿ ಎಂಬ ಖುಷಿಯಲ್ಲಿದ್ದಿರಿ. ಈಗ ನೀವು ಯು ಆರ್ ಜಸ್ಟ್ ಲೈಕ್ ಅಧರ್ ತ್ರೀ ಎಂದರು. ನಾಲ್ಕು ಮಂದಿಯಲ್ಲಿ ನೀವು ಒಬ್ಬರು ಈಗ. ಗೆಲುವು ಯಾರಿಗೆ ಎಂಬುದು ಗೊತ್ತಾಗಬೇಕಾದರೆ ಇನ್ನು ಒಂದೇ ಒಂದು ವಾರವಷ್ಟೇ ಬಾಕಿ ಇದೆ.

ಈ ವಾರ ಸುದೀಪ್ ಎಂದಿನಂತೆ ತಮ್ಮ ನಿರೂಪಣಾ ಶೈಲಿಯಲ್ಲಿ ಮನಗೆದ್ದರು. 'ಸೀಸನ್ ಟೂ' ನಾನು ನಿರೂಪಿಸುವುದಿಲ್ಲ ಎಂಬುದನ್ನು ಈಗಾಗಲೆ ಅವರು ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಅವರ ನಿರೂಪಣಾ ಶೈಲಿಯನ್ನು ಸರಿದೂಗುವ ಮತ್ತೊಬ್ಬ ನಟ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

<ul id="pagination-digg"><li class="previous"><a href="/tv/chandrika-honest-truth-bigg-boss-075124.html">« Previous</a>

More from Filmibeat

English summary
Kannada films old antique piece Chandrika second time evicted from Etv Kannada's reality show Bigg Boss. She missed Bigg Boss grand finale. Vijay Raghavendra, Narendra Babu Sharma, Arun Sagar and Nikita enters final. Here is the 'Vaarada Kathe Kichchana Jothe' highlights.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X