Bigg Boss Kannada 10: ಎಲ್ಲಾ ರೆಡಿ.. ಬಿಗ್ ಬಾಸ್ ಕನ್ನಡ 10 ಆರಂಭಕ್ಕೆ ಮುಹೂರ್ತ ಫಿಕ್ಸ್.. ದಿನ ಯಾವುದು?
ಬಿಗ್ ಬಾಸ್ ಕನ್ನಡದ ಈ ರಿಯಾಲಿಟಿ ಶೋ ಕಳೆದ ವೀಕ್ಷಕರನ್ನು ರಂಜಿಸುತ್ತಲೇ ಬರುತ್ತಿದೆ. ಬಿಗ್ ಬಾಸ್ ಧ್ವನಿ. ಮನೆಯೊಳಗಿನ ಆಟ. ಸ್ಪರ್ಧಿಗಳ ನಡುವಿನ ಪೈಪೋಟಿ, ಕಿಚ್ಚ ಸುದೀಪ್ ನಿರೂಪಣೆ. ಎಲ್ಲವೂ ವೀಕ್ಷಕರನ್ನು ಸೆಳೆದಿತ್ತು.
ಪ್ರತಿದಿನವೂ ತಪ್ಪದೇ ಬಿಗ್ ಬಾಸ್ ಕನ್ನಡ ನೀಡುತ್ತಿದ್ದ ಮನರಂಜನೆಯನ್ನು ವೀಕ್ಷಣೆ ಮಾಡುತ್ತಲೇ ಇದ್ದರು. ಕಳೆದ 9 ಸೀಸನ್‌ನಲ್ಲಿ ಯಶಸ್ಸು ಕಂಡ ಬಳಿಕ ಈಗ 10ನೇ ಸೀಸನ್‌ಗೆ ಕಲರ್ಸ್ ಕನ್ನಡ ರೆಡಿಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಬಿಗ್ ಬಾಸ್ 10ನೇ ಸೀಸನ್‌ಗೆ ಭರ್ಜರಿ ತಯಾರಿ ನಡೆಯುತ್ತಿತ್ತು. ಆದರೆ, ಎಂದಿನಿಂದ ಆರಂಭ ಅನ್ನೋದು ರಹಸ್ಯವನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ.

ಸದ್ಯ ಬಿಗ್ ಬಾಸ್ ಕನ್ನಡ ಎಂದಿನಿಂದ ಪ್ರಸಾರ ಆರಂಭ ಮಾಡಲಿದೆ ಅನ್ನೋ ಬಗ್ಗೆ ಮಾಹಿತಿಯೊಂದು ಫಿಲ್ಮಿಬೀಟ್‌ಗೆ ಲಭ್ಯವಾಗಿದೆ. ಹೌದು ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ಮುಹೂರ್ತ ಫಿಕ್ಸ್ ಆಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಹಾಗಿದ್ದರೆ, ಬಿಗ್ ಬಾಸ್ ಆರಂಭ ಯಾವಾಗಾ? ರಿಯಾಲಿಟಿ ಶೋ ಅಪ್‌ಡೇ ಏನಿದೆ? ತಿಳಿಯಲು ಮುಂದೆ ಓದಿ.
ಬಿಗ್ ಬಾಸ್ ಸೀಸನ್ 10 ಕಥೆಯೇನು?
ಬಿಗ್ ಬಾಸ್ ಕನ್ನಡ ಸೀಸನ್ 10ಗೆ ಪೂರ್ವ ತಯಾರಿ ನಡೆಯುತ್ತಿದೆ. ದುಬಾರಿ ರಿಯಾಲಿಟಿ ಶೋಗಳನ್ನು ನಡೆಸಿಕೊಡುವ ಎಂಡಲೋಲ್ ಸಂಸ್ಥೆ ಕರ್ನಾಟಕದಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿದೆ. ಕಲರ್ಸ್ ಕನ್ನಡ ಹಾಗೂ ಎಂಡಮೋಲ್ ಕಾಂಬಿನೇಷನ್‌ನಲ್ಲಿ ಬಿಗ್ ಬಾಸ್ ಸೀಸನ್ 10 ಶೀಘ್ರವೇ ಆರಂಭ ಆಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 10 ಪ್ರೋಮೊ ಕೂಡ ರಿಲೀಸ್ ಆಗಲಿದೆ.
ಬಿಗ್ ಬಾಸ್ ಸೀಸನ್ 10ಗೆ ಮುಹೂರ್ತ ಯಾವಾಗ?
ಬಿಗ್ ಬಾಸ್ ಕನ್ನಡ ಸೀನಸ್ 10 ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿಯೇ ಆರಂಭ ಆಗುತ್ತೆ ಅನ್ನೋ ಮಾತು ಕೇಳಿ ಬಂದಿತ್ತು. ಆದ್ರೀಗ ಅಂದುಕೊಂಡಿದ್ದಕ್ಕಿಂತ ಸ್ವಲ್ಪ ತಡವಾಗಿ ಬಿಗ್ ಬಾಸ್ ಸೀಸನ್ 10 ಆರಂಭ ಆಗಲಿದೆ. ಅಕ್ಟೋಬರ್ ತಿಂಗಳ 8ನೇ ತಾರೀಕು ಬಿಗ್ ಬಾಸ್ ಸೀಸನ್ 10 ಆರಂಭ ಆಗಲಿದೆ ಅಂತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಸದ್ಯ ಸೀಸನ್ 10 ಪ್ರೋಮೊ ಬಗ್ಗೆ ಕಲರ್ಸ್ ಕನ್ನಡ ತಲೆ ಕೆಡಿಸಿಕೊಂಡಿದೆ ಅನ್ನೋ ವಿಷಯ ಹೊರಬಿದ್ದಿದೆ.
ಬಿಗ್ ಬಾಸ್ ಮನೆಯೊಳಗೆ ಹೋಗೋದ್ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 10 ಈ ಹಿಂದೆ ಬಂದಿದ್ದ ಬಿಗ್ ಬಾಸ್‌ಗಿಂತ ವಿಭಿನ್ನವಾಗಿ ಇರಲಿದೆ. ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ರಿಲೀಸ್ ಆಗಿದ್ದ ಚಿಕ್ಕದೊಂದು ತುಣುಕು ಈ ಬಾರಿಯ ಬಿಗ್ ಬಾಸ್ ವಿಭಿನ್ನವಾಗಿರುತ್ತೆ ಅನ್ನೋದನ್ನು ಹೇಳಿತ್ತು. ಇನ್ನು ಈ ಶೋಗೆ ಯಾರೆಲ್ಲ ಹೋಗಬಹುದು ಅನ್ನೋ ಬಗ್ಗೆನೂ ಚರ್ಚೆಯಾಗುತ್ತಿದೆ. ಅದರಲ್ಲಿ 'ನಾಗಿಣಿ' ಧಾರಾವಾಹಿ ಖ್ಯಾತಿಯ ನಮ್ರತಾ ಗೌಡ, ಸೋಶಿಯಲ್ ಮೀಡಿಯಾ ಸೆಲೆಬ್ರೆಟಿ ಭೂಮಿಕಾ ಬಸವರಾಜ್, ನಟ ಸುನೀಲ್ ರಾವ್, ಮಾನಸಿ ಜೋಷಿ ಸೇರಿದಂತೆ ಹಲವರ ಹೆಸರುಗಳು ಕೇಳಿ ಬರುತ್ತಿದೆ.
3 ಸೀರಿಯಲ್‌ಗಳಿಗೆ ಕೋಕ್?
ಬಿಗ್ ಬಾಸ್ ಸೀಸನ್ 10ಗಾಗಿ ಕಲರ್ಸ್ ಕನ್ನಡ ಮೂರು ಸೀರಿಯಲ್‌ಗಳನ್ನು ನಿಲ್ಲಿಸಲಾಗುತ್ತಿದೆ ಅಂತ ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರತಿ ದಿನ ಒಂದೂವರೆ ಗಂಟೆಗಳ ಕಾಲ ಬಿಗ್ ಬಾಸ್ ಪ್ರಸಾರ ಆಗಲಿರುವುದರಿಂದ ಮೂರು ಧಾರಾವಾಹಿಗಳಿಗೆ ಅಂತ್ಯ ಹಾಡಲಿದೆ ಎಂದು ಹೇಳಲಾಗುತ್ತಿದೆ. 'ಲಕ್ಷಣ', 'ತ್ರಿಪುರ ಸುಂದರಿ' ಹಾಗೂ 'ಪುಣ್ಯವತಿ' ಧಾರಾವಾಹಿಗಳು ಪ್ರಸಾರ ಆಗಲಿವೆ.


Click it and Unblock the Notifications











