'ಲಕ್ಷ್ಮಿ ನಿವಾಸ' ಧಾರಾವಾಹಿಯಿಂದ ಹೊರ ನಡೆದ ಅಶ್ವಥ್ ನೀನಾಸಂ? ಇದೊಂದೇ ಕಾರಣನಾ?
ಕನ್ನಡದ ಜನಪ್ರಿಯ ಧಾರಾವಾಹಿ 'ಲಕ್ಷ್ಮಿ ನಿವಾಸ'ದಲ್ಲಿ ಪಾತ್ರಗಳು ನಿರಂತರವಾಗಿ ಬದಲಾಗುತ್ತಲೇ ಇವೆ. ಇತ್ತೀಚೆಗಷ್ಟೇ ಎರಡು ಪ್ರಮುಖ ಪಾತ್ರಗಳು ಬದಲಾವಣೆ ಕಂಡಿದ್ದವು. ಆದ್ರೀಗ ಮತ್ತೊಬ್ಬ ಹಿರಿಯ ನಟ ಈ ಧಾರಾವಾಹಿಯಿಂದ ಹೊರ ನಡೆದಿದ್ದಾರೆಂದು ಹೇಳಲಾಗುತ್ತಿದೆ. ಅವರು ಮತ್ಯಾರೂ ಅಲ್ಲ ಅಶ್ವಥ್ ನೀನಾಸಂ. ಈ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಶ್ವಥ್ ನಟಿಸುತ್ತಿದ್ದರು.
ಜೀ ಕನ್ನಡದಲ್ಲಿ 'ಲಕ್ಷ್ಮಿ ನಿವಾಸ' ಧಾರಾವಾಹಿ ಒಳ್ಳೆಯ ರೀತಿಯಲ್ಲಿ ಮೂಡಿ ಬರುತ್ತಿದೆ. ಈ ಫ್ಯಾಮಿಲಿ ಸ್ಟೋರಿಯನ್ನು ವೀಕ್ಷಕರು ಇಷ್ಟ ಪಟ್ಟಿದ್ದಾರೆ. ಅದರಲ್ಲೂ ಈ ಧಾರಾವಾಹಿಯಲ್ಲಿ ಬರುವ ಒಬ್ಬೊಬ್ಬ ಕಲಾವಿದ ಕೂಡ ವೀಕ್ಷಕರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿದ್ದರು. ಸೀರಿಯಲ್ ಅಷ್ಟೇ ಅಲ್ಲ. ಅದರಿಂದ ಆಚೆಗೂ ಈ ತಂಡ ಒಂದು ಕುಟುಂಬದಂತೆ ಇತ್ತು. ಆದ್ರೀಗ ಒಬ್ಬೊಬ್ಬರೇ ಈ ಸೀರಿಯಲ್‌ನಿಂದ ಹೊರ ಹೋಗುತ್ತಿದ್ದಾರೆ.

ಕೆಲವು ದಿನಗಳ ಹಿಂದೆ 'ಲಕ್ಷ್ಮಿ ನಿವಾಸ'ದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ಹಿರಿಯ ನಟಿ ಹೊರ ನಡೆದಿದ್ದರು. ಇವರೊಂದಿಗೆ ತನು ಪಾತ್ರಧಾರಿ ಕೂಡ ಈ ಧಾರಾವಾಹಿಯಿಂದ ಹೊರ ನಡೆದಿದ್ದರು. ಈಗ ಕನ್ನಡ ಚಿತ್ರರಂಗದ ಸೀನಿಯರ್ ಆಕ್ಟರ್ ಅಶ್ವಥ್ ನೀನಾಸಂ ಕೂಡ ಹೊರ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಇವರು ಹೊರ ಹೋಗಿದ್ದಕ್ಕೆ ಕಾರಣದ ಬಗ್ಗೆ ಕಿರುತೆರೆಯಲ್ಲಿ ಚರ್ಚೆಯಾಗುತ್ತಿದೆ.
ಕಳೆದ ಕೆಲವು ದಿನಗಳಿಂದ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ನಿರ್ಮಾಪಕರು ಹಾಗೂ 'ಲಕ್ಷ್ಮಿ ನಿವಾಸ' ಧಾರಾವಾಹಿಯ ಕಲಾವಿದರು, ತಂತ್ರಜ್ಞರ ಬಗ್ಗೆ ಭಿನ್ನಾಭಿಪ್ರಾಯಗಳು ಮೂಡಿದ್ದವು. ಹೀಗಾಗಿ ಒಬ್ಬೊಬ್ಬರೇ ಹಿರಿಯ ಕಲಾವಿದರು ಈ ಧಾರಾವಾಹಿಯಿಂದ ನಿರ್ಗಮಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಈಗ ನೀನಾಸಂ ಅಶ್ವಥ್ ಅವರು ಕೂಡ ಇದೇ ರೀತಿಯ ಭಿನ್ನಾಭಿಪ್ರಾಯದಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ 'ಲಕ್ಷ್ಮಿ ನಿವಾಸ' ಟೀಮ್‌ನಲ್ಲಿ ಅಸಮಧಾನದ ಎದ್ದಿದೆ ಎಂಬ ಮಾತು ಕೇಳಿ ಬರುತ್ತಿದೆ.
ಕೆಲವು ದಿನಗಳ ಹಿಂದೆ 'ಲಕ್ಷ್ಮಿ ನಿವಾಸ'ದ ಧಾರಾವಾಹಿಯ ನಿರ್ಮಾಪಕರು ಬದಲಾಗಿದ್ದಾರೆ. ಅವರ ಬದಲಿಗೆ ಜೀ ಕನ್ನಡ ವಾಹಿನಿ ಹೊಸ ನಿರ್ಮಾಪಕರನ್ನು ಕರೆತಂದಿದೆ. ಹಿಂದಿದ್ದ ನಿರ್ಮಾಪಕರು ಕಲಾವಿದರು ಹಾಗೂ ತಂತ್ರಜ್ಞರಿಗೆ ನೀಡಬೇಕಿದ್ದ ಸಂಭಾವನೆಯನ್ನು ಉಳಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಶ್ವೇತಾ ಅವರು ಧಾರಾವಾಹಿಯಿಂದ ಹೊರ ನಡೆದಿದ್ದರು. ಹೊಸದಾಗಿ ಸೇರ್ಪಡೆಯಾಗಿರುವ ನಿರ್ಮಾಪಕರು ಉಳಿಸಿಕೊಂಡಿರುವ ಸಂಭಾವನೆಯನ್ನು ನೀಡುವುದಕ್ಕೆ ತಯಾರಿಲ್ಲ ಎನ್ನಲಾಗಿದೆ. ಹೀಗಾಗಿ ಒಬ್ಬೊಬ್ಬರೇ ಈ ಧಾರಾವಾಹಿಯಿಂದ ಹೊರ ನಡೆಯುತ್ತಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಯಾವ ಕಲಾವಿದರೂ ಇದನ್ನು ಹೇಳಿಕೊಂಡಿಲ್ಲ.
'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ನೂರೆಂಟು ಸಮಸ್ಯೆಗಳು ಇವೆ. ಹೀಗಾಗಿ ಒಬ್ಬೊಬ್ಬರೇ ಧಾರಾವಾಹಿ ತೊರೆಯುತ್ತಿದ್ದಾರೆಂದು ಗುಲ್ಲೆದಿದ್ದೆ. ಇವೆಲ್ಲ ಏನೇ ಇದ್ದರೂ 'ಲಕ್ಷ್ಮಿ ನಿವಾಸ' ಸೀರಿಯಲ್ ಅನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಫ್ಯಾಮಿಲಿ ಡ್ರಾಮಾ ಹಾಗೂ ಸೆಂಟಿಮೆಂಟ್ ಮಹಿಳೆಯನ್ನು ಸೆಳೆಯುತ್ತಿದೆ. ಟಿಆರ್‌ಪಿಯಲ್ಲಿಯೂ ಲಕ್ಷ್ಮಿ ನಿವಾಸ ಧಾರಾವಾಹಿಗೆ ಒಳ್ಳೆಯ ನಂಬರ್‌ಗಳು ಸಿಗುತ್ತಿವೆ. ಆದರೆ, ಒಳ್ಳೊಳ್ಳೆ ಕಲಾವಿದರ ಹೊರ ಹೋಗುತ್ತಿರುವುದು ಧಾರಾವಾಹಿಯ ಜನಪ್ರಿಯತೆಯನ್ನು ಕಡಿಮೆ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ 'ಲಕ್ಷ್ಮಿ ನಿವಾಸ' ಕೂಡ ಒಂದು. ನಾಲ್ಕೈದು ಟ್ರ್ಯಾಕ್‌ಗಳಲ್ಲಿ ನಡೆಯುತ್ತಿರುವ ಈ ಧಾರಾವಾಹಿಗೆ ಫ್ಯಾನ್ ಫಾಲೋವಿಂಗ್ ಹುಟ್ಟಿಕೊಂಡಿದ್ದಾರೆ. ಕೆಲವು ಪಾತ್ರಗಳು ಈಗಾಗಲೇ ಜನಪ್ರಿಯವಾಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಂಡು ವೀಕ್ಷಕರನ್ನು ಹೀಗೆ ರಂಜಿಸುತ್ತಾ? ಎಂದು ಪ್ರಶ್ನೆ ಕಿರುತೆರೆ ವಲಯದಲ್ಲಿದೆ.


Click it and Unblock the Notifications











