ಕಲರ್ಸ್ ಕನ್ನಡಕ್ಕೆ "ಕಾನೂನಿನ ಮೂಲಕ ಮಾತನಾಡಿ" ಎಂದರೇ ಭವ್ಯಾ ಗೌಡ: ಬಿಸಿ ಮುಟ್ಟಿಸಲು ಹೊರಟಿತೇ ಚಾನಲ್?

ನಿನ್ನೆ (ಜೂನ್ 16) ಕನ್ನಡದ ಪ್ರಮುಖ ವಾಹಿನಿ ಜೀ ಕನ್ನಡದಲ್ಲಿ ರಾತ್ರಿ 08 ಗಂಟೆಗೆ 'ಕರ್ಣ' ಹೆಸರಿನ ಧಾರಾವಾಹಿ ಪ್ರಸಾರವಾಗಬೇಕಿತ್ತು. ಆದರೆ, ಜೀ ಕನ್ನಡ ಪ್ರಸಾರ ಮಾಡಿರಲಿಲ್ಲ. ಇದಕ್ಕೆ ಕಾರಣ ಆ ಧಾರಾವಾಹಿಯ ನಟಿ ಭವ್ಯಾ ಗೌಡ ಎಂದು ವರದಿಯಾಗಿದೆ. ಕಲರ್ಸ್ ಕನ್ನಡದ ಜೊತೆ ಮಾಡಿಕೊಂಡ ಒಪ್ಪಂದ ಮುರಿದಿದ್ದೇ 'ಕರ್ಣ' ಪ್ರಸಾರ ಆಗದೇ ಇರುವುದಕ್ಕೆ ಕಾರಣ ಎನ್ನಲಾಗಿದೆ.

'ಕರ್ಣ' ಧಾರಾವಾಹಿಯ ನಾಯಕ ನಟಿಯಾಗಿದ್ದ ಭವ್ಯಾ ಗೌಡ ಬಿಗ್‌ ಬಾಸ್‌ ಕನ್ನಡ ಕಾರ್ಯಕ್ರಮದ ಜೊತೆ ಮಾಡಿಕೊಂಡ ಒಪ್ಪಂದದಂತೆ ಆರು ತಿಂಗಳು ಬೇರೆ ಮನರಂಜನಾ ವಾಹಿನಿಯನಲ್ಲಿ ಕಾಣಿಸಿಕೊಳ್ಳುವ ಹಾಗಿರಲಿಲ್ಲ. ಆದರೆ ಭವ್ಯ ಗೌಡ- 'ಕರ್ಣ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಈ ಅಗ್ರಿಮೆಂಟ್‌ ನಿಯಮ ಪಾಲಿಸಿಲ್ಲ ಎಂದು ಬಿಗ್‌ ಬಾಸ್‌ ಪ್ರಸಾರ ಮಾಡಿದ್ದ ಕಲರ್ಸ್ ಕನ್ನಡ ವಾಹಿನಿಯವರು 'ಕರ್ಣ' ಧಾರಾವಾಹಿಗೆ ಸ್ಟೇ ತಂದಿದ್ದರು. ಹೀಗಾಗಿ 'ಕರ್ಣ' ಪ್ರಸಾರವಾಗುವ ಜಾಗದಲ್ಲಿ 'ಅಣ್ಣಯ್ಯ' ಧಾರಾವಾಹಿಯ ಒಂದು ಗಂಟೆಯ ಮಹಾ ಸಂಚಿಕೆ ಪ್ರಸಾರವಾಗಿತ್ತು.

Buzz is that Bhavya Gowda broke the agreement and said Colors Kannada to come in a legal way

ಈಗ ಮತ್ತೊಂದು ವಿಷಯ ಕಿರುತೆರೆ ವಲಯದಲ್ಲಿ ಕೇಳಿ ಬರುತ್ತಿದೆ. ಭವ್ಯಾ ಗೌಡ ಕಲರ್ಸ್ ಕನ್ನಡದ ಜೊತೆ ಒಪ್ಪಂದ ಮುರಿದಿದ್ದೇ ಅಲ್ಲದೆ, ವಾಹಿನಿಗ ಪ್ರತಿಕ್ರಿಯೆ ನೀಡಿರಲಿಲ್ಲ. ಜೊತೆ ಕಾನೂನಿನ ಮೂಲಕವೇ ಮಾತನಾಡಿ ಎಂದಿದ್ದಾರಂತೆ. ಹೀಗಾಗಿ ಕಾನೂನಿ ಮೂಲಕವೇ ಉತ್ತರ ಕೊಡುವುದಕ್ಕೆ ವಾಹಿನಿ ನಿರ್ಧರಿಸಿದೆ ಅನ್ನೋದು ಸದ್ಯದ ಸುದ್ದಿ.

'ಕರ್ಣ' ಬರೋದನ್ನ ತಡೆಯೋಕೆ ಸಾಧ್ಯವೇ ಇಲ್ಲ

ಎರಡು ಪ್ರಮುಖ ವಾಹಿನಿ ಮತ್ತು ನಟಿಯ ನಡುವಿನ ಈ ವಿಚಾರ ಈಗ ಮತ್ತಷ್ಟು ಕಗ್ಗಂಟಾಗುವ ಲಕ್ಷಣಗಳು ಕಾಣಿಸುತ್ತಿದೆ. ಯಾವಾಗ 'ಕರ್ಣ' ಧಾರಾವಾಹಿಯ ಮೇಲೆ ಸ್ಟೇ ತರಲಾಯಿತೋ ನಿನ್ನೆ (ಜೂನ್ 16) ಆ ವಾಹಿನಿಯು ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿತ್ತು. ಅದರಲ್ಲಿ "ಕರ್ಣ ಬರೋದನ್ನ ತಡ ಆಗುವಂತೆ ಮಾಡಬಹುದು, ಆದರೆ ಬರೋದನ್ನ ತಡೆಯೋಕೆ ಸಾಧ್ಯವೇ ಇಲ್ಲ" ಎನ್ನುವಂತಹ ಪದವನ್ನು ಬಳಸಿತ್ತು. ಕೆಲ ಮಾದ್ಯಮಗಳು ಇದನ್ನು‌ - "ಪ್ರತಿಸ್ಪರ್ದಿ ಚಾನಲ್‌ಗೆ ಟಾಂಗ್‌ ಕೊಟ್ಟ ವಾಹಿನಿ" ಎಂಬ ಶೀರ್ಷಿಕೆ ಕೊಟ್ಟು ಸುದ್ದಿಯನ್ನೂ ಬರೆದಿದ್ದವು. ಈಗ ಇದೇ ವಿಚಾರವನ್ನು ನ್ಯಾಯಾಲಯದ ತನಕ ತಲುಪಿಸಲು ಹೊರಟಿದೆ ಕಲರ್ಸ್ ಕನ್ನಡ ಹೊರಟಿದೆ ಎನ್ನಲಾಗಿದೆ.

Buzz is that Bhavya Gowda broke the agreement and said Colors Kannada to come in a legal way

ವಾಹಿನಿ ಮತ್ತು ಭವ್ಯಾ ಗೌಡ ಅಗ್ರಿಮೆಂಟ್‌

ಭವ್ಯಾ ಗೌಡ ವಿರುದ್ಧ ಕಾನೂನು ಹೋರಾಟ ಮಾಡುತ್ತಿರುವ ವಾಹಿನಿಯ ಮೂಲಗಳು ಹೇಳುವಂತೆ- ಬಿಗ್‌ ಬಾಸ್‌ ಕಾರ್ಯಕ್ರಮದ ಅಗ್ರಿಮೆಂಟ್‌ ಪ್ರಕಾರ ನಟಿ ಭವ್ಯಾ ಗೌಡ ಅವರು ಜುಲೈ ಅಂತ್ಯದ ತನಕ ಬೇರೆ ಮನರಂಜನಾ ವಾಹಿನಿಗಳಲ್ಲಿ ಕಾಣಿಸಿಕೊಳ್ಳುವ ಹಾಗಿರಲಿಲ್ಲ. ನಮ್ಮದೇ ವಾಹಿನಿಯ ಧಾರಾವಾಹಿ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಂದು ಭವ್ಯಾ ಅವರಿಗೆ ಆಫರ್‌ ಕೂಡಾ ಕೊಡಲಾಗಿತ್ತಂತೆ. ಎರಡು ಧಾರಾವಾಹಿಗಳಿಗೆ ಆಫರ್ ಕೊಟ್ಟರೂ ಒಪ್ಪಿರಲಿಲ್ಲ. "ನಾನು ಸಿನಿಮಾ ಮಾಡ್ತಾ ಇದೀನಿ.." ಎಂದು ಭವ್ಯಾ ಗೌಡ ಸುಳ್ಳು ಹೇಳಿ 'ಕರ್ಣ' ಧಾರಾವಾಹಿಯಲ್ಲಿ ಕಾಣಿಸಿಕೊಂಡರು ಎಂಬ ಆರೋಪ ಮಾಡಲಾಗಿದೆಯಂತೆ. ಯಾವಾಗ 'ಕರ್ಣ' ಧಾರಾವಾಹಿಯ ಪ್ರೋಮೋ ಪ್ರಸಾರವಾಯ್ತೋ ಆಗಲೂ ವಾಹಿನಿಯವರು ಭವ್ಯಾ ಗೌಡ ಅವರನ್ನು ಸಂಪರ್ಕಿಸಿ, ಮಾತನಾಡಲು ಪ್ರಯತ್ನ ಪಟ್ಟಿದ್ದು, ಅವರು - "ಬೇಕಾದ್ರೆ ಕಾನೂನಿನ ಮೂಲಕ ಮಾತನಾಡಿ.." ಎಂದಿದ್ದಾರೆ. ಹೀಗಾಗಿ ವಾಹಿನಿಯವರು ಕಾನೂನಿನ ಮೂಲಕವೇ ಉತ್ತರಿಸಿದ್ದಾರೆ ಎನ್ನಲಾಗುತ್ತಿದೆ.

ಒಳ ದನಿಯ ಪೋಸ್ಟ್!

ಈ ನಡುವೆ 'ಕರ್ಣ' ಧಾರಾವಾಹಿ ಪ್ರಸಾರ ಆಗುತ್ತಿಲ್ಲ ಎಂಬ ವಿಷಯವನ್ನು ತಿಳಿಸಲು ಹೊರಟ ಜೀ ಕನ್ನಡ ನಿನ್ನೆ (ಜೂನ್ 16) ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿತ್ತು. ಅದರಲ್ಲಿ- "ಕರ್ಣ ಬರೋದನ್ನ ತಡ ಆಗುವಂತೆ ಮಾಡಬಹುದು, ಆದ್ರೆ ಬರೋದನ್ನ ತಡೆಯೋಕೆ ಸಾಧವೇ ಇಲ್ಲ.." ಎಂದು ಬರೆದುಕೊಂಡಿತ್ತು. ಇದನ್ನ ಕೂಡಾ ನ್ಯಾಯಾಲಯದ ಗಮನಕ್ಕೆ ತಂದು ಹೀಗೆ ಒಳ ದನಿಯ ಪೋಸ್ಟ್‌ ಮಾಡಿದ್ದಕ್ಕೂ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಕಲರ್ಸ್ ಕನ್ನಡ ವಾಹಿನಿ ಮುಂದಾಗಿದೆ ಎನ್ನಲಾಗುತ್ತಿದೆ.

ಸ್ಟೇ ವಿಚಾರ ಕಾನೂನಿನ ಸುಪರ್ದಿಯಲ್ಲಿ ಇರುವಾಗ ದೊಡ್ಡ ವಾಹಿನಿಯೊಂದು ಹೀಗೆ ಒಳಾರ್ಥದ ಪೋಸ್ಟ್‌ ಹಾಕಿರುವುದು ನ್ಯಾಯಾಂಗ ನಿಂದನೆ ಆಗುತ್ತದೆ ಎಂಬುದು ಕಲರ್ಸ್ ಕನ್ನಡದ ವಾದ. ಹೀಗೆ ಒಳ ದನಿಯ ಪೋಸ್ಟ್‌ಗಳನ್ನು ಅಥವಾ ಹೇಳಿಕೆಗಳನ್ನು ಕಾನೂನು ಹೇಗೆ ಪರಿಗಣಿಸುತ್ತೆ? ಯಾವುದಾದರೂ ವಿಷಯವನ್ನು ಒಳಾರ್ಥದಲ್ಲಿ ಪರೋಕ್ಷವಾಗಿ ತಿಳಿಸಿ ಅದನ್ನು ಪದಗಳಲ್ಲಿ ಬೇರೆ ರೀತಿ ಬಿಂಬಿಸಿದರೆ ಅದು ಎಷ್ಟರ ಮಟ್ಟಿಗೆ ಕಾನೂನಿನಲ್ಲಿ ಪ್ರಶ್ನೆ ಮಾಡಬಹುದು? ಹಾಕಿರುವ ಪೋಸ್ಟ್‌ ಮತ್ತು ಸಂದರ್ಭವನ್ನು ಕಾನೂನು ಹೇಗೆ ಪರಿಗಣನೆಗೆ ತೆಗೆದುಕೊಳ್ಳುತ್ತೆ? ಈ ಎಲ್ಲ ವಿಚಾರಗಳು ಈಗ ಎರಡೂ ವಾಹಿನಿಗಳ ನಡುವೆ ಬಿಸಿ ಬಿಸಿ ಸುದ್ದಿಯಾಗಿ ಓಡಾಡುತ್ತಿದೆ.

More from Filmibeat

English summary
Buzz is that Bhavya Gowda broke the agreement and said Colors Kannada to come in a legal way;
Read more about: serial bhavya controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X