ಕಿರುತೆರೆ ವೀಕ್ಷಕರಿಗೆ ನಿರಾಸೆ; ಶೀಘ್ರದಲ್ಲೇ ಸ್ಟಾರ್ ಸುವರ್ಣದ ಜನಪ್ರಿಯ ಧಾರಾವಾಹಿ ಅಂತ್ಯ.. ಯಾವುದದು?

ಕನ್ನಡದ ಜನಪ್ರಿಯ ಎಂಟರ್‌ಟೈನ್ಮೆಂಟ್ ಚಾನೆಲ್‌ಗಳು ಪೈಪೋಟಿಗೆ ಬಿದ್ದು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿವೆ. ಹೊಚ್ಚ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರನ್ನು ಸೆಳೆಯುವುದಕ್ಕೆ ಮುಂದಾಗುತ್ತವೆ. ಆ ಹೊಸ ಧಾರಾವಾಹಿಗಳನ್ನು ಪರಿಚಯಿಸುವ ವೇಳೆ ಅದಾಗಲೇ ಪ್ರಸಾರ ಆಗುತ್ತಿದ್ದ ಸೀರಿಯಲ್‌ಗೆ ಗುಡ್‌ ಬೈ ಹೇಳುತ್ತಾರೆ. ಇದೆಲ್ಲವೂ ಕಿರುತೆರೆಯಲ್ಲಿ ಕಾಮನ್.

ಈಗ ಸ್ಟಾರ್ ಸುವರ್ಣ ಕೂಡ ಕೆಲವು ಜನಪ್ರಿಯ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಈ ಚಾನೆಲ್ ಪ್ರಸಾರ ಮಾಡುತ್ತಿರುವ ಧಾರಾವಾಹಿಗಳ ಪೈಕಿ ಕೆಲವು ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಅವುಗಳಲ್ಲಿ ಒಂದು ಜನಪ್ರಿಯ ಧಾರಾವಾಹಿಯನ್ನು ದಿಢೀರನೇ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ ಅನ್ನೋ ಸುದ್ದಿ ಕಿರುತೆರೆ ವಲಯದಲ್ಲಿ ಓಡಾಡುತ್ತಿದೆ.

Buzz is that Star Suvarna winding famous one of the serial this weekend

ಒಂದು ಸೀರಿಯಲ್‌ ನಿಲ್ಲಿಸಬೇಕು ಅಂದರೆ, ಅದಕ್ಕೆ ಒಂದು ತಿಂಗಳಿಂದಲೇ ಸಿದ್ಧತೆಗಳನ್ನು ಮಾಡುತ್ತಾರೆ. ವೀಕ್ಷಕರಿಗೂ ಮನವರಿಕೆ ಮಾಡಿಕೊಡುತ್ತಲೇ ಇರುತ್ತಾರೆ. ಆದ್ರೀಗ ಇದೇ ವೀಕೆಂಡ್‌ನಲ್ಲಿ ಆ ಜನಪ್ರಿಯ ಧಾರಾವಾಹಿ ಮುಕ್ತಾಯಗೊಳ್ಳಲಿದೆ ಅನ್ನೋದು ಸುದ್ದಿ. ಅಸಲಿಗೆ ಆ ಧಾರಾವಾಹಿ ಯಾವುದು? ಇದ್ದಕ್ಕಿದ್ದ ಹಾಗೆ ಆ ಧಾರಾವಾಹಿ ನಿಲ್ಲಿಸುತ್ತಿರುವುದಕ್ಕೆ ಕಾರಣವೇನು? ಇದಕ್ಕೆ ಉತ್ತರ ಇಲ್ಲಿದೆ. ಮುಂದೆ ಓದಿ.

ಹೌದು, ಸ್ಟಾರ್ ಸುವರ್ಣ ಈಗಾಗಲೇ ಹಲವು ಜನಪ್ರಿಯ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಇದರ ಜೊತೆಗೆ ಇನ್ನೂ ಮೂರರಿಂದ ನಾಲ್ಕು ಹೊಚ್ಚ ಹೊಸ ಧಾರಾವಾಹಿಗಳನ್ನು ರೆಡಿ ಮಾಡಿಟ್ಟುಕೊಂಡಿದೆ. ಶೀಘ್ರದಲ್ಲಿಯೇ ಕಿರುತೆರೆ ವೀಕ್ಷಕರಿಗೆ ಹೊಚ್ಚ ಹೊಸ ಧಾರಾವಾಹಿಗಳನ್ನು ಪರಿಚಯ ಮಾಡಿಕೊಡುತ್ತಿದೆ. ಅದರಲ್ಲಿ 'ಶಾರದೆ' ಕೂಡ ಒಂದು. ಈ ಧಾರಾವಾಹಿ ಮೊದಲು ಪ್ರಸಾರ ಆಗಲಿದೆ. ಅದೇ ಕಾರಣಕ್ಕೆ ಒಂದು ಧಾರಾವಾಹಿಯನ್ನು ನಿಲ್ಲಿಸುತ್ತಿದೆ ಅನ್ನೋದು ಕಿರುತೆರೆ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿ.

ಸ್ಟಾರ್ ಸುವರ್ಣ ಸದ್ಯ 'ಆಸೆ', 'ನಿನ್ನ ಜೊತೆ ನನ್ನ ಕಥೆ', 'ನೀನಾದೆ ನಾ 2', 'ಕಾವೇರಿ ಕನ್ನಡ ಮೀಡಿಯಂ', 'ಗೌರಿ ಶಂಕರ', 'ಶ್ರೀದೇವಿ ಮಹತ್ಮೆ', 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ','ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ', 'ಅವನು ಮತ್ತೆ ಶ್ರಾವಣಿ', ಅಂತಹ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಈ ಎಲ್ಲಾ ಧಾರಾವಾಹಿಗಳಿಗೂ ಅದರದ್ದೇ ವೀಕ್ಷಕರನ್ನು ಹೊಂದಿದೆ. ಈ ಧಾರಾವಾಹಿಗಳಲ್ಲಿ ಒಂದು ಈ ವೀಕೆಂಡ್‌ಗೆ ಮುಕ್ತಾಯ ಆಗೋದು ಗ್ಯಾರಂಟಿ.

ಇಂತಹದ್ದೊಂದು ಸುದ್ದಿ ಕಿರುತೆರೆ ವಲಯದಲ್ಲಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಸ್ಟಾರ್ ಸುವರ್ಣ ಇನ್ನೂ ಅಧಿಕೃತವಾಗಿ ಮಾಹಿತಿಯನ್ನು ನೀಡಿಲ್ಲ. ಸೋಶಿಯಲ್ ಮೀಡಿಯಾದಲ್ಲೂ ಕೂಡ ಇಂತಹದ್ದೊಂದು ಸುದ್ದಿ ಬಗ್ಗೆ ಚರ್ಚೆಯಾಗುತ್ತಿದೆ. ನೆಟ್ಟಿಗರು ಮೂರು ಸೀರಿಯಲ್‌ಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. 'ಆಸೆ', 'ನಿನ್ನ ಜೊತೆ ನನ್ನ ಕಥೆ', 'ನೀನಾದೆ ನಾ 2' ಅಂತ ಗೆಸ್ ಮಾಡುತ್ತಿದ್ದಾರೆ. ಆದರೆ, ಈ ಮೂರು ಧಾರಾವಾಹಿಗಳೂ ಅಲ್ಲ ಅನ್ನೋದು ಮೂಲಗಳ ಮಾಹಿತಿ.

'ಆಸೆ', 'ನಿನ್ನ ಜೊತೆ ನನ್ನ ಕಥೆ', 'ನೀನಾದೆ ನಾ 2' ಈ ಮೂರು ಧಾರಾವಾಹಿಗಳು ಅಲ್ಲ. ಬೇರೊಂದು ಧಾರಾವಾಹಿಯನ್ನು ದಿಢೀರನೇ ಅಂತ್ಯ ಹಾಡುತ್ತಿದೆ ಎನ್ನಲಾಗಿದೆ. ಯಾಕಂದ್ರೆ ಸ್ಟಾರ್ ಸುವರ್ಣದಲ್ಲಿ ಈ ಮೂರು ಧಾರಾವಾಹಿಗಳಿಗೂ ಟಿಆರ್‌ಪಿ ಚೆನ್ನಾಗಿದೆ. ಹೀಗಾಗಿ ಈ ಮೂರು ಧಾರಾವಾಹಿಗಳನ್ನು ನಿಲ್ಲಿಸುವುದಕ್ಕೆ ಅವಕಾಶವೇ ಇಲ್ಲ ಎಂದು ಹೇಳಲಾಗುತ್ತಿದೆ.

ಇದೇ ಭಾನುವಾರದ ಮುಕ್ತಾಯ ಆದ ಧಾರಾವಾಹಿಯ ಜಾಗದಲ್ಲಿ ಮತ್ತೊಂದು ಸೀರಿಯಲ್‌ ಮೆಗಾ ಎಪಿಸೋಡ್ ನಡೆಯಲಿದೆ ಅನ್ನೋ ಸುದ್ದಿನೂ ಇದೆ. ಸದ್ಯಕ್ಕೆ ಸ್ಟಾರ್ ಸುವರ್ಣ ವಾಹನಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಯ ಪ್ರೇಮಿಗಳಿಗೆ ಕೂತೂಹಲದ ಜೊತೆಗೆ ನಿರಾಸೆ ಕೂಡ ಆಗಿದೆ.

More from Filmibeat

English summary
Buzz is that Star Suvarna winding famous one of the serial this weekend.
Read more about: serial tv show filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X