Bigg Boss Kannada 10: ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಸ್ಯಾಂಡಲ್‌ವುಡ್ ಬಾರ್ಬಿ ಡಾಲ್? ಏನಿದು ಸುದ್ದಿ?

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್. ಇನ್ನೇನು ಕೆಲವೇ ದಿನಗಳಲ್ಲಿ ಸೀಸನ್ 10 ಆರಂಭ ಆಗಲಿದೆ. ಅದಕ್ಕೆ ಬೇಕಾಗಿರೋ ಸಕಲ ಸಿದ್ಧತೆಗಳನ್ನು ಈಗಾಗಲೇ ಮಾಡಿಟ್ಟುಕೊಂಡಿದ್ದಾರೆ. ಕಲರ್ಸ್ ಕನ್ನಡ ಈಗಾಗಲೇ ಪ್ರೋಮೊಗಳನ್ನು ರಿಲೀಸ್ ಮಾಡಿದ್ದು, ಕುತೂಹಲವನ್ನು ಹೆಚ್ಚಿಸಿದೆ. ಈ ಪ್ರೋಮೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಅಕ್ಟೋಬರ್ 8ರಂದು ಬಿಗ್‌ಬಾಸ್ ಕನ್ನಡದ ಸೀಸನ್ 10 ಗ್ರ್ಯಾಂಡ್ ಆಗಿ ಆರಂಭ ಆಗುತ್ತಿದೆ. ಈಗಾಗಲೇ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಮಾಡುವ ಸ್ಪರ್ಧಿಗಳ ಹೆಸರುಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಆದರೆ, ಇನ್ನೂ ಅಧಿಕೃತವಾಗಿ ಕಲರ್ಸ್ ಕನ್ನಡ ಯಾವುದೇ ಹೆಸರನ್ನು ರಿವೀಲ್ ಮಾಡಿಲ್ಲ.

bigg-boss-season-10-niveditha-gowda

ಈ ಮಧ್ಯೆ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಈ ಬಾರಿಯ ಬಿಗ್‌ಬಾಸ್ ವಿಶೇಷವಾಗಿರುತ್ತೆ ಎಂದು ಅಂದಾಜಿಸಲಾಗಿದೆ. ಕಿರುತೆರೆ ವೀಕ್ಷಕರಿಗೆ ಈ ಬಾರಿ ಸರ್ಪ್ರೈಸ್ ಇರುತ್ತೆ ಎಂದು ಗೆಸ್ ಮಾಡಿದ್ದಾರೆ. ಈ ಬೆನ್ನಲ್ಲೇ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಹೆಸರು ಓಡಾಡುತ್ತಿದೆ.

ಇತ್ತೀಚೆಗೆ ಬಿಗ್‌ಬಾಸ್ ಮನೆಯೊಳಗೆ ಹೋದ ಸ್ಪರ್ಧಿಗಳು ಮತ್ತೆ ರೀ ಎಂಟ್ರಿ ಕೊಟ್ಟಿರೋದು ಹೊಸತೇನು ಅಲ್ಲ. ಈ ಹಿಂದಿನ ಸೀಸನ್‌ ಕೂಡ ಹಾಗೇ ನಡೆದಿತ್ತು. ಹೊಸಬರು ಹಾಗೂ ಹಳೆಬರ ಸಮಾಗಮ ಆಗಿತ್ತು. ಈ ಮೂಲಕ ಜನರಿಗೆ ಎಂಟರ್‌ಟೈನ್ಮೆಂಟ್ ಕೊಡಲು ಮುಂದಾಗಿದ್ದಾರು.

ನಿವೇದಿತಾ ಗೌಡ ಈಗ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 5ರಲ್ಲಿ ಭಾಗವಹಿಸಿದ್ದ ನಿವೇದಿತಾ ಗೌಡ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ಈ ಕಾರಣದಿಂದ ನಿವೇದಿತಾ ಗೌಡರನ್ನು ಕಳುಹಿಸಬಹುದು ಎಂದು ವರದಿಯಾಗಿದೆ. ಆದರೆ, ಇದು ಕೇವಲ ವರದಿಯಷ್ಟೇ. ಕಲರ್ಸ್ ಕನ್ನಡ ಅಧಿಕೃತವಾಗಿ ಈ ಬಗ್ಗೆ ಎಲ್ಲೂ ಸುಳಿವನ್ನು ಬಿಟ್ಟುಕೊಟ್ಟಿಲ್ಲ.

ನಿವೇದಿತಾ ಗೌಡ ಬಿಗ್‌ಬಾಸ್ ಮನೆಯೊಳಗೆ ಹೋಗುವುದೇ ಆದರೆ, ಚಂದನ್ ಶೆಟ್ಟಿ ಹೊರಗೆ ಇರುತ್ತಾರಾ? ಅನ್ನೋ ಪ್ರಶ್ನೆನೂ ಎದುರಾಗುತ್ತೆ. ಸದ್ಯ ಚಂದನ್ ಶೆಟ್ಟಿ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುವ ಅನುಮಾನವಿದೆ.

ನಾಳೆ (ಅಕ್ಟೋಬರ್ 3) ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 10ಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಲಿದೆ. ಇಲ್ಲಿ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಮಾಡುವ ಸ್ಪರ್ಧಿ ಯಾರು ಅನ್ನೋದನ್ನು ತಿಳಿಸದೇ ಹೋದರೂ, ಸೀಸನ್ 10 ಆಗಿರುವುದರಿಂದ ರಿಯಾಲಿಟಿ ಶೋ ಸ್ವರೂಪ ಹೇಗಿರುತ್ತೆ ಅನ್ನೋ ಮಾಹಿತಿಯನ್ನು ಬಿಟ್ಟುಕೊಡಲಿದ್ದಾರೆ.

ಈ ಹಿಂದಿನ ಸೀಸನ್ ಅಂತೆಯೇ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 10 ನಿರೂಪಣೆ ಮಾಡುತ್ತಿದ್ದಾರೆ. ಹೀಗಾಗಿ ಸುದೀಪ್ ಕೂಡ ಬಿಗ್ ಬಾಸ್ ಸೀಸನ್ 10 ಬಗ್ಗೆ ಮಾಹಿತಿಯನ್ನು ನೀಡಲಿದ್ದಾರೆ. ಆದರೆ, ನಿವೇದಿತಾ ಗೌಡ ಪುನ: ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರಾ? ಅನ್ನೋ ಪ್ರಶ್ನೆಗೆ ಅಕ್ಟೋಬರ್ 8ರ ನಂತರವೇ ಉತ್ತರ ಸಿಗಲಿದೆ.

More from Filmibeat

English summary
Buzz Niveditha Gowda is one of the contestant of Bigg Boss Kannada Season 10
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X