'ಪುಟ್ಟಕ್ಕನ ಮಕ್ಕಳ' ಸೀರಿಯಲ್ ತೊರೆದಿದ್ದ ಸಂಜನಾ ಬುರ್ಲಿ 'ಶ್ರೀ ಗಂಧದ ಗುಡಿ'ಗೆ ಬರ್ತಾರಾ?

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಸಂಜನಾ ಬುರ್ಲಿ ಹೊಸ ಸೀರಿಸ್‌ಗೆ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದಲ್ಲಿ ಇವರು ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದರು. ಇವರ ಪಾತ್ರಕ್ಕೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇತ್ತು. ಆದರೆ, ಕೆಲವು ತಿಂಗಳ ಹಿಂದಷ್ಟೇ ಈ ಸೀರಿಯಲ್‌ನಿಂದ ಸಂಜನಾ ಹೊರಗೆ ಬಂದಿದ್ದರು.

ಸಂಜನಾ ಬುರ್ಲಿ ಸೀರಿಯಲ್ ಬಿಡುವ ನಿರ್ಧಾರಕ್ಕೆ ಬಂದಿದ್ದಾಗ ತಂಡಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ನಿರಾಸೆ ಆಗಿತ್ತು. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ನಿರ್ದೇಶಕರು ಈ ಪಾತ್ರಕ್ಕೆ ಮತ್ತೊಬ್ಬರನ್ನು ಹುಡುಕಿಕೊಂಡು ಬರಲಿಲ್ಲ. ಬದಲಾಗಿ ಅವರ ಪಾತ್ರವನ್ನೇ ಕೊನೆ ಮಾಡಿದ್ದರು. ಆ ಮಟ್ಟಿಗೆ ಪ್ರಭಾವ ಬೀರಿದ್ದರು. ಉನ್ನತ ಶಿಕ್ಷಣದ ಕಾರಣವೊಡ್ಡಿ ಈ ಧಾರಾವಾಹಿಯಿಂದ ಹೊರ ಬಂದಿದ್ದ ಸಂಜನಾ ಮತ್ತೆ ಸೀರಿಯಲ್‌ಗೆ ಎಂಟ್ರಿ ಕೊಡುವ ಸುದ್ದಿ ಹೇಳಿ ಬರುತ್ತಿದೆ.

Buzz Puttakkana Makkalu Fame Sanjana Burli to Play Lead Actress in Sri Gandhada Gudi serial

ಹಾಗಂತ ಅದು 'ಪುಟ್ಟಕ್ಕನ ಮಕಳು' ಸೀರಿಯಲ್ ಅಲ್ಲ. ಬದಲಾಗಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಶ್ರೀ ಗಂಧದ ಗುಡಿ' ಎಂಬ ಪುಕಾರು ಹಬ್ಬಿದೆ. ಹಾಗಿದ್ದರೆ, ಸಂಜನಾ ಬುರ್ಲಿ ಈ ಹೊಸ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳುತ್ತಾರಾ? ಪ್ರೋಮೊದಲ್ಲಿ ಮತ್ಯಾಕೆ ಇಲ್ಲ? ಕಿರುತೆರೆ ಪ್ರಪಂಚ ಸಂಜನಾ ಎಂಟ್ರಿ ಬಗ್ಗೆ ಏನು ಹೇಳುತ್ತಿದೆ? ತಿಳಿಯುವುದಕ್ಕೆ ಮುಂದೆ ಓದಿ.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಿಂದ ಬಂದರೂ ಸಂಜನಾ ಬುರ್ಲಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಆಗಾಗಿ ಫೋಟೊ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈ ವೇಳೆ ಅವರ ಅಭಿಮಾನಿಗಳು ಮತ್ತೆ ಸೀರಿಯಲ್‌ಗಳಿಗೆ ಮರಳುವಂತೆ ಒತ್ತಡ ಹಾಕಿದ್ದರು. ಈಗ ಅವರ ಆಸೆಯನ್ನು ಪೂರೈಸುವುದಕ್ಕೆ ಹೊಚ್ಚ ಹೊಸ ಧಾರಾವಾಹಿ ಮೂಲಕ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಕಲರ್ಸ್ ಕನ್ನಡದಲ್ಲಿ ಹೊಸ ಹೊಚ್ಚ ಧಾರಾವಾಹಿ 'ಶ್ರೀ ಗಂಧದ ಗುಡಿ' ಆರಂಭ ಆಗುತ್ತಿದೆ. ಈ ಧಾರಾವಾಹಿಗೆ ಸಂಜನಾ ಬುರ್ಲಿ ಆಯ್ಕೆ ಆಗಿದ್ದಾರೆ ಅನ್ನೋ ಸುದ್ದಿ ಕಿರುತೆರೆ ಲೋಕದಲ್ಲಿ ಓಡಾಡುತ್ತಿದೆ. ಈ ಸೀರಿಯಲ್‌ನ ಪ್ರೋಮೋ ರಿಲೀಸ್ ಆಗಿದ್ದರೂ, ಇದೂವರೆಗೂ ಸಂಜನಾ ಬುರ್ಲಿ ಆಗಲಿ, ಕಲರ್ಸ್ ಕನ್ನಡ ಆಗಲಿ ಆ ಗುಟ್ಟನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, ಫ್ರೋಮೋ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದೆ.

ಈಗಾಗಲೇ ಬಿಡುಗಡೆಯಾಗಿರುವ 'ಶ್ರೀ ಗಂಧದ ಗುಡಿ' ಪ್ರೋಮೋ ವೀಕ್ಷಕರ ಗಮನ ಸೆಳೆದಿದೆ. ನಾಲ್ಕು ಮಕ್ಕಳಿರುವ ಕುಟುಂಬ. ಆ ಕುಟುಂಬಕ್ಕೆ ಒಬ್ಬಳು ಹೆಣ್ಣು ಮಗಳು ಬರಬೇಕು. ಈ ಮನೆಯಲ್ಲಿ ನಡೆಯುತ್ತಿರುವ ಅಣ್ಣ ತಮ್ಮಂದಿರ ಜಗಳ ನಿಲ್ಲಬೇಕು ಅನ್ನೋ ಆಸೆ. ಹೆಣ್ಣೇ ಇರದ ಮನೆಯೊಳಗೆ ಸಂಜನಾ ಬುರ್ಲಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಾರಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.

More from Filmibeat

English summary
Buzz: Puttakkana Makkalu Fame Sanjana Burli to Play Lead Actress in Sri Gandhada Gudi serial?
Read more about: actress tv show serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X