Puttakkana Makkalu:ಪ್ರಮುಖ ಪಾತ್ರಕ್ಕೆ ಆಡಿಷನ್ ಕರೆದ ಆರೂರು ಜಗದೀಶ್; ಧಾರಾವಾಹಿಯಲ್ಲೇನಿದು ಬದಲಾವಣೆ?

ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು'. ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಧಾರಾವಾಹಿ ಕಿರುತೆರೆ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಟಿಆರ್‌ಪಿಯಲ್ಲೂ ಈ ಧಾರಾವಾಹಿ ಉತ್ತಮ ಅಂಕಗಳನ್ನು ಪಡೆದು ಟಾಪ್ ಲಿಸ್ಟ್‌ನಲ್ಲಿ ಇದೆ. ಪ್ರತಿ ಎಪಿಸೋಡ್‌ನಲ್ಲಿ ಏನಾದರೂ ಟ್ವಿಸ್ಟ್ ಇರುತ್ತೆ. ಇಲ್ಲಾ ಎಮೋಷನಲ್ ಸೀನ್‌ಗಳಂತೂ ಇದ್ದೇ ಇರುತ್ತೆ.

ಸದ್ಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಹಿರಿಯ ನಟಿ ಉಮಾಶ್ರೀ ಹಾಗೂ ಮಂಜು ಭಾಷಿಣಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಮಂಜು ಭಾಷಿಣಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಂಗಾರಮ್ಮ ಹಾಗೂ ಸಿಂಗಾರಮ್ಮ ಅನ್ನುವ ಎರಡು ಪಾತ್ರಗಳಲ್ಲಿ ಮಂಜುಭಾಷಿಣಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಸದ್ಯ ಬಂಗಾರಮ್ಮನ ಕಥೆಯೇನು? ಅನ್ನೋ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತಿದೆ.

Casting call for Puttakkana Makkalu Serial new lead role here is the details

ಇನ್ನೊಂದು ಕಡೆ ಪುಕ್ಕಟ್ಟನಿಗೆ ಒಂದಲ್ಲ ಒಂದು ಕಷ್ಟಗಳು ಎದುರಾಗುತ್ತಲೇ ಇರುತ್ತವೆ. ಮೂವರು ಹೆಣ್ಣು ಮಕ್ಕಳನ್ನು ಜವಾಬ್ದಾರಿಯುತವಾಗಿ ಬೆಳೆಸಿರುವ ಪುಟ್ಟಕ್ಕಗೆ ಇಂದಿಗೂ ಕಷ್ಟಗಳ ಸರಮಾಲೆಯೇ ಎದುರಾಗುತ್ತಿದೆ. ಪುಟ್ಟಕ್ಕನ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಒಂದ್ಕಡೆ, ಬಂಗಾರಮ್ಮನ ಪಾತ್ರದಲ್ಲಿ ಮಂಜು ಭಾಷಿಣಿಯ ಟ್ರ್ಯಾಕ್ ಮತ್ತೊಂದು ಕಡೆ. ಈ ಕಾರಣಕ್ಕೆ ಕಿರುತೆರೆ ವೀಕ್ಷಕರು ಬಿಡದೇ ಧಾರಾವಾಹಿಯನ್ನು ವೀಕ್ಷಣೆ ಮಾಡುತ್ತಿದ್ದಾರೆ.

ಇದೀಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಹೊಸ ನಟಿಯನ್ನು ಕರೆದುಕೊಂಡು ಬರುವುದಕ್ಕೆ ನಿರ್ಮಾಪಕ ಕಮ್ ನಿರ್ದೇಶಕ ಆರೂರು ಜಗದೀಶ್ ನಿರ್ಧರಿಸಿದ್ದಾರೆ. ಈ ವಿಷಯವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 23 ರಿಂದ 26 ವಯಸ್ಸಿನ ಅಂತರದಲ್ಲಿರುವ ನಟಿಯರನ್ನು ಪ್ರಮುಖ ಪಾತ್ರಕ್ಕೆ ಆಹ್ವಾನಿಸಲಾಗಿದೆ. ಈ ಮೂಲಕ ಯುವ ನಟಿಯರಿಗೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಟಿಸುವ ಸುವರ್ಣ ಅವಕಾಶ ಸಿಕ್ಕಿದೆ.

ಆರೂರು ಜಗದೀಶ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. "ನಮ್ಮ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಹೊಸ ಪ್ರಧಾನ ಪಾತ್ರಕ್ಕೆ 23 ರಿಂದ 26 ವಯಸ್ಸಿನ ಒಳಗಿನ, ಸ್ಪಷ್ಟವಾಗಿ ಕನ್ನಡ ಮಾತನಾಡುವ, ನಟನೆ ಗೊತ್ತಿರುವ, ಗುಡ್ ಲುಕ್ ಇರುವ ಹುಡುಗಿ ಬೇಕಾಗಿದ್ದಾರೆ. ದಯವಿಟ್ಟು ನಿಮ್ಮ ಪೋಟೊ ಮತ್ತು ಬಯೊಡಾಟಾವನ್ನು ಶೀಘ್ರವಾಗಿ [email protected] ಗೇ ಮೇಲ್ ಮಾಡಿ." ಎಂದಿದ್ದಾರೆ.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಲು ನಟಿಯನ್ನು ಆಹ್ವಾನಿಸಿದ್ದು, ಕಿರುತೆರೆ ವೀಕ್ಷಕರ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈಗ ನಟಿಸುತ್ತಿರುವ ಯಾವುದಾದರೂ ನಟಿಯನ್ನು ಬದಲಾಯಿಸುತ್ತಾರಾ? ಅವರ ಜಾಗಕ್ಕೆ ಹೊಸ ನಟಿಯನ್ನು ಕರೆದುಕೊಂಡು ಬರುತ್ತಾರಾ? ಇಲ್ಲ ಹೊಸ ಪಾತ್ರವನ್ನೇ ಕರೆದುಕೊಂಡು ಬರುತ್ತಾರಾ? ಅನ್ನೋ ಅನುಮಾನವಂತೂ ಮೂಡಿದೆ.

ಏನೇ ಇದ್ದರೂ ಶೀಘ್ರದಲ್ಲಿಯೇ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗೆ ಹೊಸ ಪಾತ್ರದ ಆಗಮನ ಆಗಲಿದೆ. ಆದರೆ, ಈ ಹೊಸ ನಟಿ ಯಾರಿಗೆ ಜೋಡಿಯಾಗಿ ಬರಬಹುದು? ಇಲ್ಲ ಯಾರ ಮನೆಗೆ ಎಂಟ್ರಿ ಕೊಡಬಹುದು ಎಂಬ ಅನುಮಾನ ಮೂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಕುತೂಹಲಕ್ಕೆ ತೆರೆಬೀಳುವ ಸಾಧ್ಯತೆಯಿದೆ. ಮತ್ತೊಂದು ಟ್ವಿಸ್ಟ್ ಕೊಡುವ ಸಾಧ್ಯತೆಯಿದೆ.

More from Filmibeat

English summary
Casting call for Puttakkana Makkalu Serial
Read more about: serial tv filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X