ಕಲರ್ಸ್ ಕನ್ನಡದ ಇನ್‌ಸ್ಟಾಗ್ರಾಂ ಅಕೌಂಟ್‌ಗೆ ಏನಾಯ್ತು? ಬಿಗ್ ಬಾಸ್ ಪ್ರೋಮೊ ಹೇಗೆ ನೋಡ್ತೀರಾ?
ಸೋಶಿಯಲ್ ಮೀಡಿಯಾ ಅನ್ನೋದು ಸಾಮಾನ್ಯ ಜನರ ಅವಿಭಾಜ್ಯ ಅಂಗವಾಗಿ ಹೋಗಿದೆ. ತಮಗೆ ಅನಿಸಿದ್ದನ್ನು ಪೋಸ್ಟ್ ಮಾಡುವುದರಿಂದ ಹಿಡಿದು ದುಡಿಮೆಯ ಒಂದು ಸಾಧನವಾಗಿ ಬಳಸುತ್ತಿದ್ದಾರೆ. ಇನ್ನು ಮನರಂಜನಾ ವಾಹಿನಿಗಳು ಕೂಡ ತಮ್ಮ ವೀಕ್ಷಕರಿಗೆ ತಾವು ಪ್ರಸಾರ ಮಾಡುತ್ತಿರುವ ರಿಯಾಲಿಟಿ ಶೋ, ಸೀರಿಯಲ್ ಸೇರಿದಂತೆ ಏನೇ ಅಪ್‌ಡೇಟ್ ಕೊಡಬೇಕೂ ಅಂದರೂ ಇನ್‌ಸ್ಟಾಗ್ರಾಂ ಬಳಸುತ್ತಾರೆ.
ಇತ್ತೀಚೆಗೆ ಜನರು ಇನ್‌ಸ್ಟಾಗ್ರಾಂ ಅನ್ನು ಅತೀ ಹೆಚ್ಚು ಬಳಕೆ ಮಾಡುತ್ತಾರೆ. ಅಲ್ಲದೆ ಮನರಂಜನೆ ನೀಡುವ ವಾಹಿನಿಗಳೂ ಅಷ್ಟೇ ಬಳಕೆ ಮಾಡುತ್ತಿವೆ. ಅದರಲ್ಲೂ ಕನ್ನಡದ ಪ್ರಮುಖ ವಾಹಿನಿಗಳು ಕೂಡ ಸೇರಿಕೊಂಡಿವೆ. ಆದರೆ, ಕೆಲವೇ ಕ್ಷಣಗಳ ಹಿಂದಷ್ಟೇ ಕಲರ್ಸ್ ಕನ್ನಡ ಹಾಗೂ ಕಲರ್ಸ್ ಹಿಂದಿ ವಾಹಿನಿಯ ಇನ್‌ಸ್ಟಾಗ್ರಾಂ ಖಾತೆಗಳು ಡಿ-ಆಕ್ಟಿವೇಟ್ ಆಗಿವೆ. ಸಾವಿರಾರು ವಿಡಿಯೋಗಳು ಡಿಲೀಟ್ ಆಗಿವೆ.

ಈ ಎರಡೂ ವಾಹಿನಿಗಳು ಬಿಗ್ ಬಾಸ್ ಅಂತ ರಿಯಾಲಿಟಿ ಶೋಗಳು ಸೇರಿದಂತೆ, ತಮ್ಮ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಸೀರಿಯಲ್‌ಗಳ ತುಣುಕುಗಳನ್ನು ಪ್ರಸಾರ ಮಾಡುತ್ತಿತ್ತು. ಮಿಲಿಯನ್ ಲೆಕ್ಕದಲ್ಲಿ ಫಾಲೋ ಮಾಡುತ್ತಿದ್ದ ವೀಕ್ಷಕರು ಅಪ್‌ಡೇಟ್ ಸಿಗದೆ ಪರದಾಡುತ್ತಿದ್ದಾರೆ. ಅದರಲ್ಲೂ ಬಿಗ್ ಬಾಸ್ ಪ್ರೇಮಿಗಳು ಪ್ರೋಮೊಗಳನ್ನು ನೋಡದೆ ಕಿರಿಕಿರಿ ಅನುಭವಿಸುತ್ತಿದ್ದಾರೆ. ಅಷ್ಟಕ್ಕೂ ಈ ಎರಡು ವಾಹಿನಿಗಳ ಇನ್‌ಸ್ಟಾಗ್ರಾಂ ಅಕೌಟ್‌ಗೆ ಏನಾಯ್ತು? ಈ ವಾಹಿನಿಗಳ ಅಪ್‌ಡೇಟ್ ಅನ್ನು ಎಲ್ಲಿ ನೋಡಬಹುದು? ತಿಳಿಯುವುದಕ್ಕೆ ಮುಂದೆ ಓದಿ.
ಕಲರ್ಸ್ ಕನ್ನಡ ಇನ್‌ಸ್ಟಾ ಅಕೌಂಟ್‌ಗೆ ಏನಾಯ್ತು?
ಇಂದು (ನವೆಂಬರ್ 1) ಕಲರ್ಸ್ ಕನ್ನಡದ ಇನ್‌ಸ್ಟಾಗ್ರಾಂ ಖಾತೆ ಏಕಾಏಕಿ ನಿಷ್ಕ್ರಿಯಗೊಂಡಿದೆ. ಇದೂವರೆಗೂ ಅಪ್‌ಲೋಡ್ ಮಾಡಿದ್ದ ಲಕ್ಷಾಂತರ ವಿಡಿಯೋಗಳು ಡಿಲೀಟ್ ಆಗಿವೆ. ಇದಕ್ಕೆ ನಿಖರವಾದ ಕಾರಣ ಗೊತ್ತಿಲ್ಲದೆ ಇದ್ದರೂ, ಮೂಲಗಳು ಮಾಹಿತಿ ಕೊಟ್ಟಿರುವ ಪ್ರಕಾರ, ತಾಂತ್ರಿಕ ಸಮಸ್ಯೆ ಆಗಿದೆ. ಈ ಕಾರಣಕ್ಕೆ ಡಿ-ಆಕ್ಟಿವೇಟ್ ಆಗಿದೆ. ಇನ್‌ಸ್ಟಾ ಖಾತೆ ನಿಷ್ಕ್ರಿಯಗೊಳ್ಳುವುದಕ್ಕೆ ಕಾಪಿ ರೈಟ್ಸ್ ಸಮಸ್ಯೆ ಅಲ್ಲ ಎಂದು ಹೇಳಲಾಗುತ್ತಿದೆ.
ಆಕ್ಟಿವೇಟ್ ಆಗೋದು ಯಾವಾಗ?
ಕಲರ್ಸ್ ಕನ್ನಡ ಹಾಗೂ ಕಲರ್ಸ್ ಹಿಂದಿ ಎರಡೂ ವಾಹಿನಿಯ ಇನ್‌ಸ್ಟಾಗ್ರಾಂ ಖಾತೆ ಡಿ-ಆಕ್ಟಿವೇಟ್ ಆಗಿದೆ. ಹಾಗಂತ ತಕ್ಷಣಕ್ಕೆ ಸರಿ ಹೋಗುವ ಸಾಧ್ಯತೆನೂ ಇಲ್ಲ. ಮತ್ತೆ ಇವರ ಇನ್‌ಸ್ಟಾಗ್ರಾಂ ಖಾತೆ ಆಕ್ಟಿವೇಟ್ ಆಗುವುದಕ್ಕೆ ಕಮ್ಮಿ ಅಂದರೂ ಎರಡು ದಿನಗಳು ಬೇಕು ಎನ್ನಲಾಗಿದೆ. ಹೀಗಾಗಿ ಇನ್‌ಸ್ಟಾಗ್ರಾಂನಲ್ಲಿ ಕಲರ್ಸ್ ಕನ್ನಡ ಫಾಲೋ ಮಾಡುವವರಿಗೆ ಬಿಗ್ ಬಾಸ್ ಸೇರಿದಂತೆ ಸೀರಿಯಲ್‌ಗಳ ಅಪ್‌ಡೇಟ್ ಎರಡು ದಿನಗಳ ಮಟ್ಟಿಗೆ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಬಿಗ್ ಬಾಸ್ ಪ್ರೋಮೊ ಎಲ್ಲಿ ನೋಡಬಹುದು?
ಇನ್‌ಸ್ಟಾಗ್ರಾಂ ಖಾತೆ ತಾತ್ಕಾಲಿಕವಾಗಿ ನಿಷ್ಕ್ರಿಯಗೊಂಡಿರುವುದರಿಂದ ಬೇರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಗ್ ಬಾಸ್ ಕನ್ನಡ 12 ಪ್ರೋಮೊಗಳನ್ನು ನೋಡಬಹುದು. ಕಲರ್ಸ್ ಕನ್ನಡದ ವಾಟ್ಸಾಪ್ ಚಾನೆಲ್ ಹಾಗೂ ಫೇಸ್‌ಬುಕ್ ಖಾತೆಗಳಲ್ಲಿ ಪ್ರೋಮೊಗಳನ್ನು ಅಪ್‌ಡೇಟ್ ಮಾಡಲಾಗುತ್ತಿದೆ. ಬಿಗ್ ಬಾಸ್ ಕನ್ನಡದ ಪ್ರೇಮಿಗಳು ಅಲ್ಲಿ ಅಪ್‌ಡೇಟ್ ಪಡೆದುಕೊಳ್ಳುವ ಜೊತೆಗೆ ಪ್ರೋಮೊ ವೀಕ್ಷಣೆ ಮಾಡಬಹುದು.
ಬಿಗ್ ಬಾಸ್ ಅಪ್‌ಡೇಟ್ ಏನು?
ಇಂದು (ನವೆಂಬರ್ 1) ಕನ್ನಡ ರಾಜ್ಯೋತ್ಸವದಂದು ಬಿಗ್ ಬಾಸ್ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಹಾಗೇ ಕಿಚ್ಚನ ಬಿಗ್ ಬಾಸ್ ಮನೆಯ ಸದಸ್ಯರ ಆರೋಪ-ಪ್ರತ್ಯಾರೋಪಗಳಿಗೆ ಸಲಹೆ ನೀಡಲಿದ್ದಾರೆ. ಈ ವಾರ ಕೂಡ ಅಶ್ವಿನಿ ಗೌಡ ಸೇರಿದಂತೆ ಹಲವು ಸದಸ್ಯರಿಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆಯಿದೆ. ಜೊತೆಗೆ ಒಂದಿಷ್ಟು ಕಾಮಿಡಿ, ಒಂದಿಷ್ಟು ಪಂಚ್ ಡೈಲಾಗ್‌ಗಳನ್ನು ನಿರೀಕ್ಷೆ ಮಾಡಬಹುದು.


Click it and Unblock the Notifications











