Bhagyalakshmi: 1000 ಸಂಚಿಕೆಗಳ ಬಳಿಕ ಅಂತಿಮ ಘಟ್ಟ ತಲುಪಿದ 'ಭಾಗ್ಯಲಕ್ಷ್ಮಿ'; ಕೊನೆಯ ಸಂಚಿಕೆ ಯಾವಾಗ?

ಕನ್ನಡ ಕಿರುತೆರೆ ಲೋಕದಲ್ಲಿ ಕೆಲ ಧಾರಾವಾಹಿಗಳು ವೀಕ್ಷಕರ ದೈನಂದಿನ ಅಭ್ಯಾಸವಾಗಿ ಹೋಗಿದೆ. ಆ ಧಾರಾವಾಹಿಗಳನ್ನು ನೋಡದೇ ಇದ್ದರೆ ಅವರಿಗೆ ಸಮಾಧಾನವೇ ಆಗುವುದಿಲ್ಲ. ಕನ್ನಡದ ಇಂತಹ ಧಾರಾವಾಹಿಗಳಲ್ಲಿ 'ಭಾಗ್ಯಲಕ್ಷ್ಮಿ' ಕೂಡ ಒಂದು. 2022ರಲ್ಲಿ ಆರಂಭಗೊಂಡಿದ್ದ ಈ ಧಾರಾವಾಹಿ ಹೆಚ್ಚು ಕಡಿಮೆ 4 ವರ್ಷಗಳ ಕಾಲ ನಿರಂತರವಾಗಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಂಡಿದೆ. ಅದೀಗ ಅಂತಿಮ ಘಟ್ಟಕ್ಕೆ ತಲುಪಿದೆ.

ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ 'ಭಾಗ್ಯಲಕ್ಷ್ಮಿ'. ಕಳೆದ ನಾಲ್ಕು ವರ್ಷಗಳಿಂದ ಟಿಆರ್‌ಪಿ (TRP)ಯಲ್ಲೂ ಹಲವು ಮೈಲಿಗಲ್ಲನ್ನು ತಲುಪಿದೆ. ಇತ್ತೀಚೆಗೆ 'ಭಾಗ್ಯಲಕ್ಷ್ಮಿ' ಧಾರಾವಾಹಿ ಯಶಸ್ವಿಯಾಗಿ ಸಾವಿರ ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿತ್ತು. ಭಾಗ್ಯಲಕ್ಷ್ಮಿಯ ಹೋರಾಟದ ಬದುಕು ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಾ ಮುನ್ನುಗ್ಗುತ್ತಿತ್ತು. ಈ ಹೊಸ ಮೈಲಿಗಲ್ಲು ತಲುಪಿದೆ ಬೆನ್ನಲ್ಲೇ ಧಾರಾವಾಹಿಗೆ ಕ್ಲೈಮ್ಯಾಕ್ಸ್ ಕೊಡುವುದಕ್ಕೆ ತಂಡ ಸಜ್ಜಾಗಿದೆ.

Colors Kannada Bhagyalakshmi Serial will end soon after completing thousand episodes

ಈಗಾಗಲೇ ವರದಿಯಾಗಿರುವಂತೆ ಕಲರ್ಸ್ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಈ ಧಾರಾವಾಹಿಯು ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ವೀಕ್ಷಕರಿಗೆ ಬಿಗ್ ಟ್ವಿಸ್ಟ್ ಕೊಡುವುದಕ್ಕೆ ಸಜ್ಜಾಗಿದೆ. ಹಾಗಿದ್ದರೆ, 'ಭಾಗ್ಯಲಕ್ಷ್ಮಿ' ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರ ಆಗುವುದು ಯಾವಾಗ? ತಿಳಿಯಲು ಮುಂದೆ ಓದಿ.

'ಭಾಗ್ಯಲಕ್ಷ್ಮಿ' ಪಯಣ

'ಭಾಗ್ಯಲಕ್ಷ್ಮಿ' ಬರೀ ಕೌಟುಂಬಿಕ ಕಥೆಯಷ್ಟೇ ಅಲ್ಲ. ಇದು ಒಬ್ಬ ಮಧ್ಯಮ ವರ್ಗದ ಸಾಮಾನ್ಯ ಮಹಿಳೆಯ ಕಥೆಯನ್ನು ವೀಕ್ಷಕರ ಮುಂದೆ ಇಟ್ಟಿತ್ತು. ಮಧ್ಯಮ ವರ್ಗದ ಕುಟುಂಬದಲ್ಲಿ ನಡೆಯುವ ಘಟನೆಗಳನ್ನು ಮುಂದಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿತ್ತು. 'ಭಾಗ್ಯಲಕ್ಷ್ಮಿ' ಪತಿ ತಾಂಡವ್ ನಿರಂತರ ನಿರ್ಲಕ್ಷ್ಯ, ದ್ರೋಹವನ್ನು ಎದುರಿಸುವ ಹೆಣ್ಣು ಮಗಳ ಕಥೆ. ತನ್ನೆಲ್ಲ ಕಷ್ಟವನ್ನು ಮೆಟ್ಟಿ ನಿಂತು ಸಮಾಜದಲ್ಲಿ ಗುರುತನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಭಾಗ್ಯಾಳ ಪರಿವರ್ತನೆ ಇಡೀ ಕುಟುಂಬವೇ ಒಟ್ಟಿಗೆ ಕುಳಿತು ನೋಡುವಂತೆ ಮಾಡಿದೆ.

Also Read
9 ವರ್ಷಗಳ ನಂತರ ಕಿರುತೆರೆಗೆ ಲಕ್ಷ್ಮೀ ಬಾರಮ್ಮ ಚಿನ್ನು ಕಂಬ್ಯಾಕ್ ; 'ಜಗದ್ಧಾತ್ರಿ'ಯ ನಾಯಕಿ ಯಾರು ? ಮೋಕ್ಷಿತಾನಾ ? ಕವಿತಾನಾ ?
9 ವರ್ಷಗಳ ನಂತರ ಕಿರುತೆರೆಗೆ ಲಕ್ಷ್ಮೀ ಬಾರಮ್ಮ ಚಿನ್ನು ಕಂಬ್ಯಾಕ್ ; 'ಜಗದ್ಧಾತ್ರಿ'ಯ ನಾಯಕಿ ಯಾರು ? ಮೋಕ್ಷಿತಾನಾ ? ಕವಿತಾನಾ ?

1000 ಸಂಚಿಕೆಗಳ ಮೈಲಿಗಲ್ಲು

'ಭಾಗ್ಯಲಕ್ಷ್ಮಿ' ಧಾರಾವಾಹಿ ಆರಂಭ ಆದಲ್ಲಿಂದಲೂ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ಭಾಗ್ಯಲಕ್ಷ್ಮಿ' ದೈನಂದಿನ ಬದುಕಿನ ಕಷ್ಟಗಳು, ಅದಕ್ಕೆ ಆಕೆಯ ತಿರುಗೇಟು, ಇವೆಲ್ಲವೂ ಪ್ರೇಕ್ಷಕರಿಗೆ ಇಷ್ಟ ಆಗುತ್ತಿತ್ತು. ಹೀಗಾಗಿ ಧಾರಾವಾಹಿಗೆ ವೀಕ್ಷಕರ ಮನ್ನಣೆಯನ್ನು ಪಡೆದುಕೊಂಡಿತ್ತು. ಸದ್ಯ 1000 ಸಂಚಿಕೆಯನ್ನು ಪೂರೈಸಿರುವ ಕೊನೆಯ ಹಂತ ತಲುಪಿದ ಈ ಸಂದರ್ಭದಲ್ಲಿ ಹೈ-ವೋಲ್ಟೇಜ್ ಡ್ರಾಮಾ ನಡೆಯುತ್ತಿದೆ. ಕುಸುಮಾಳ ಕಠಿಣ ನಿರ್ಧಾರಗಳು ಮತ್ತು ಭಾಗ್ಯಾ ತನ್ನ ಮುಂದಿನ ಬದುಕಿಗಾಗಿ ತಾಯಿಯಾಗಿ, ಹೆಂಡತಿಯಾಗಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಸೀರಿಯಲ್ ಅನ್ನು ಕ್ಲೈಮ್ಯಾಕ್ಸ್‌ನತ್ತ ಕೊಂಡೊಯ್ಯುತ್ತಿವೆ.

ಕೊನೆಯ ಎಪಿಸೋಡ್ ಯಾವಾಗ?

'ಭಾಗ್ಯಲಕ್ಷ್ಮಿ' ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಕಿರುತೆರೆಯ ಜನಪ್ರಿಯ ನಟಿ ಸುಷ್ಮಾ ಕೆ. ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೀಗ ಮಹಿಳೆ ಫೇವರಿಟ್. ಇವರ ಜೊತೆ ತಾಂಡವ್ ಪಾತ್ರದಲ್ಲಿ ಸುದರ್ಶನ್ ರಂಗಪ್ರಸಾದ್, ಪದ್ಮಜಾ ರಾವ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಸದ್ಯ ಈ ಧಾರಾವಾಹಿ ಜೂನ್ 7 ರಂದು ಕ್ಲೈಮ್ಯಾಕ್ಸ್ ಎಪಿಸೋಡ್ ಅನ್ನು ಪ್ರಸಾರ ಮಾಡುತ್ತಿದೆ.

ವೀಕ್ಷಕರಿಗೆ ಬೇಸರ

'ಭಾಗ್ಯಲಕ್ಷ್ಮಿ' ಧಾರಾವಾಹಿ 1000 ಸಂಚಿಕೆಗಳನ್ನು ಪೂರೈಸಿದೆ. ಇನ್ನು ಮುಂದುವರೆಸಿಕೊಂಡು ಹೋದರೆ, ವೀಕ್ಷಕರಿಗೆ ಬೋರ್ ಹೊಡೆಸಬಹುದು. ಅಲ್ಲದೆ ಕಳೆದ ಕೆಲವು ವಾರಗಳಿಂದ ಟಿಆರ್‌ಪಿಯಲ್ಲಿಯೂ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. ಹೀಗಾಗಿ ಈ ಧಾರಾವಾಹಿಯನ್ನು ಮುಗಿಸುವುದಕ್ಕೆ ಹೊರಟಿದ್ದಾರೆ. ಆದರೆ, ದೀರ್ಘಕಾಲದಿಂದ ತಮ್ಮ ದಿನಚರಿಯ ಭಾಗವಾಗಿದ್ದ 'ಭಾಗ್ಯಲಕ್ಷ್ಮಿ' ಮುಕ್ತಾಯ ಕಾಣುತ್ತಿರೋದು ವೀಕ್ಷಕರಲ್ಲಿ ಬೇಸರ ಮೂಡಿಸಿದೆ. ಭಾಗ್ಯಾಳ ಇಷ್ಟು ದಿನಗಳ ಹೋರಾಟದ ಬದುಕಿಗೆ ಕೊನೆಗೂ ನ್ಯಾಯ ಮತ್ತು ಸುಖಾಂತ್ಯ ಸಿಗುತ್ತಾ? ಅನ್ನೋದು ಕ್ಲೈಮ್ಯಾಕ್ಸ್‌ನಲ್ಲಿ ತಿಳಿಯಲಿದೆ.

English summary
Colors Kannada Bhagyalakshmi Serial will end soon after completing thousand episodes. Final episode will be telecasting on June 7th.
Read more about: tv show serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X