ಕಲರ್ಸ್ ಕನ್ನಡದ 'ದಶಕದ ಮಹೋತ್ಸವ'; ಒಂದು ಚಾನೆಲ್, ನೂರಾರು ಎಮೋಷನ್ಸ್!

ಕನ್ನಡದ ಜನಪ್ರಿಯ ವಾಹಿನಿಗಳಲ್ಲಿ ಒಂದಾದ ಕಲರ್ಸ್ ಕನ್ನಡ ದಶಕದ ಸಂಭ್ರಮದಲ್ಲಿದೆ. ಇಪ್ಪತ್ತೈದು ವರ್ಷಗಳ ಹಿಂದೆ 'ಈ ಟಿವಿ ಕನ್ನಡ' ಹೆಸರಿನಲ್ಲಿ ಈ ವಾಹಿನಿ ಆರಂಭ ಆಗಿತ್ತು. ಅದು 'ಕಲರ್ಸ್‌ ಕನ್ನಡ'ವಾಗಿ ಮಾರ್ಪಾಡುಗೊಂಡು 10ನೇ ವರ್ಷಕ್ಕೆ ಕಾಲಿಟ್ಟಿದೆ. ಕಳೆದ ಒಂದು ದಶಕದಿಂದಲೂ ವಿಭಿನ್ನ ಕತೆಗಳ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋ ಹಾಗೂ ಕಾರ್ಯಕ್ರಮಗಳ ಮೂಲಕ ಕನ್ನಡಿಗರಿಗೆ ಮನರಂಜನೆಯನ್ನು ನೀಡುತ್ತಿದೆ.

ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿರುವ ಈ ಖುಷಿಯ ಸಂದರ್ಭದಲ್ಲಿ 'ಕಲರ್ಸ್‌ ಕನ್ನಡ' ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ತನ್ನ ವೀಕ್ಷಕರಿಗಾಗಿ 'ದಶಕದ ಮಹೋತ್ಸವ' ಎಂಬ ಮನರಂಜನೆಯ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ಮನರಂಜನೆಯು ಮುಗಿಲು ಮುಟ್ಟಿತು. ಈ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ ಅಂದರೆ ಜೂನ್ 7 ಮತ್ತು ಜೂನ್ 8ರಂದು ಎರಡು ದಿನಗಳ ಕಾಲ 'ಕಲರ್ಸ್ ಕನ್ನಡ' ದಲ್ಲಿ ಸಂಜೆ 7 ಗಂಟೆಯಿಂದ ರಾತ್ರಿ 10:30ರ ವರೆಗೆ ಪ್ರಸಾರ ಆಗಲಿದೆ.
ಈ ಮೂಲಕ ಕನ್ನಡದ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುವುದಕ್ಕೆ ಕಲರ್ಸ್ ಕನ್ನಡ ಮುಂದಾಗಿದೆ.

colors kannada dashaka mahotsava 2025 here is anniversary-special highlights

ದಶಕ ಪೂರೈಸಿದ ಸವಿನೆನಪಿಗಾಗಿ ನಡೆಸುತ್ತಿರುವ 'ದಶಕದ ಮಹೋತ್ಸವ' ಕಾರ್ಯಕ್ರಮದಲ್ಲಿ ಹಲವು ವಿಶೇಷತೆಗಳಿವೆ. ಮನರಂಜನೆಯ ಜೊತೆ ಜೊತೆಗೆ ಗೌರವ, ಸನ್ಮಾನಗಳನ್ನು ಹಮ್ಮಿಕೊಳ್ಳಲಾಗಿದೆ. ಕಲರ್ ಕನ್ನಡದ ದಶಕದ ಜರ್ನಿಯಲ್ಲಿರುವ ಕಲಾವಿದರು ಮತ್ತು ಗಣ್ಯರನ್ನು ಸ್ಮರಿಸಿ ಗೌರವಿಸುವುದು 'ದಶಕದ ಮಹೋತ್ಸವ'ದ ಉದ್ದೇಶವಾಗಿದೆ. ಇದೇ ವೇಳೆ 'ಅದೇ ಬೇರು, ಹೊಸ ಚಿಗುರು' ಎಂಬ ಹೆಸರಿನಲ್ಲಿ ಹೊಸ ಕಾರ್ಯಕ್ರಮಗಳ ಆರಂಭ ಕೂಡ ಆಗುತ್ತಿದೆ.

'ದಶಕದ ಮಹೋತ್ಸವ' ಕಾರ್ಯಕ್ರಮದಲ್ಲಿ ಸವಿನೆನಪುಗಳು ಹಾಗೂ ಮನರಂಜನೆಯ ಮಿಶ್ರಣವಿರಲಿದೆ. ಇದರಲ್ಲಿ ಜನಪ್ರಿಯ ಧಾರಾವಾಹಿ ಮತ್ತು ಸೆಲೆಬ್ರಿಟಿಗಳನ್ನು ಬೆರಗುಗೊಳಿಸುವ ವಿಶೇಷ ಶೋಗಳು ಇರುತ್ತವೆ. ಚಾನೆಲ್‌ನ ಮೆರುಗನ್ನು ಈ ದಶಕದಲ್ಲಿ ಚಾನೆಲ್‌ನ ಮೆರುಗನ್ನು ಕಲಾವಿದರು ಭರಪೂರ ಮನರಂಜನೆಯನ್ನು ಹೆಚ್ಚಿಸಿರುವುದು ವಿಶೇಷ.

ಇದೇ ವೇಳೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 40 ವರ್ಷಗಳಾಗಿವೆ. ಈ ಸಂಭ್ರಮವನ್ನು 'ಶಿವಣ್ಣ 40' ಎಂದು ಕಲರ್ಸ್ ಕನ್ನಡ ಆಚರಿಸಿದೆ. ಈ ವೇಳೆ ಶಿವರಾಜ್‌ಕುಮಾರ್ ಅವರಿಗೆ ಸನ್ಮಾನ ಮಾಡಲಿದೆ. ಇದೇ ವೇಳೆ ಶಿವಣ್ಣಗೆ ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರಿಂದ ಹಲವಾರು ಅಚ್ಚರಿಗಳಿವೆ.

ಇದೇ ಸಂಭ್ರಮದಲ್ಲಿ ಕಲರ್ಸ್ ಕನ್ನಡದಲ್ಲಿ ಹೊಸ ಕಾರ್ಯಕ್ರಮಗಳ ಘೋಷಣೆಯೂ ಆಗುತ್ತಿದೆ. 10 ವರ್ಷಗಳ ಪಯಣದ ಮೈಲುಗಲ್ಲನ್ನು ವೀಕ್ಷಕರಿಗೆ ಮುಂದಿಡಲಿದೆ. ಎಂದಿನಂತೆ ಕೌಟುಂಬಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಮುಂದುವರೆಸುವ ಸಲುವಾಗಿ, ಅದೇ ಬೇರಿನ ಜೊತೆ ಹೊಸ ಚಿಗುರನ್ನು ಆಚರಿಸುವುದನ್ನು ಸಂಭ್ರಮಿಸಿದೆ.

ಹೈಲೈಟ್ಸ್

• 'ದಶಕದ ಮಹೋತ್ಸವ'ದಲ್ಲಿ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ವಿಜಯ ಕುಮಾರ್, ಶ್ರೀ ಮುರಳಿ, ವಿಜಯ ರಾಘವೇಂದ್ರ, ಅನು ಪ್ರಭಾಕರ್, ಶ್ರುತಿ, ತಾರಾ ಅನುರಾಧಾ, ಸೃಜನ್ ಲೋಕೇಶ್, ಟಿ. ಎನ್. ಸೀತಾರಾಮ್, ಮುಖ್ಯಮಂತ್ರಿ ಚಂದ್ರು, ಸಿಹಿ ಕಹಿ ಚಂದ್ರು, ಕಿರುತೆರೆಯ ಜನಪ್ರಿಯ ತಾರೆಯರಾದ ಶ್ವೇತಾ ಪ್ರಸಾದ್, ರಂಜನಿ ರಾಘವನ್, ಧನುಷ್, ಸುಷ್ಮಾ ನಾಣಯ್ಯ ಸೇರಿದಂತೆ ಹಲವರು 'ದಶಕದ ಮಹೋತ್ಸವ'ದ ಸಂಭ್ರಮದಲ್ಲಿ ಭಾಗವಹಿಸಿದ್ದಾರೆ.

• ಜನಪ್ರಿಯ ಧಾರಾವಾಹಿಗಳು : 'ಭಾಗ್ಯಲಕ್ಷ್ಮಿ', 'ಲಕ್ಷ್ಮಿ ಬಾರಮ್ಮ', 'ಅಗ್ನಿ ಸಾಕ್ಷಿ', 'ಪುಟ್ಟ ಗೌರಿ ಮದುವೆ', 'ಮಂಗಳ ಗೌರಿ ಮದುವೆ', 'ರಾಧಾ ರಮಣ', 'ಅಕ್ಕ', 'ನಮ್ಮನೆ ಯುವರಾಣಿ', 'ಕುಲವಧು', 'ಕನ್ನಡತಿ', 'ಗೀತಾ', 'ಶಾಂತಂ ಪಾಪಂ'

• ರಿಯಾಲಿಟಿ ಶೋಗಳು: 'ಬಿಗ್ ಬಾಸ್ ಕನ್ನಡ', 'ಅನುಬಂಧ ಅವಾರ್ಡ್ಸ್', 'ಮಜಾ ಟಾಕೀಸ್', 'ಗಿಚ್ಚಿ ಗಿಲಿಗಿಲಿ', 'ನನ್ನಮ್ಮ ಸೂಪರ್ ಸ್ಟಾರ್', 'ರಾಜಾ ರಾಣಿ', 'ಬಾಯ್ಸ್ ವರ್ಸಸ್ ಗರ್ಲ್ಸ್', 'ಮಹರ್ಷಿ ದರ್ಶನ'

More from Filmibeat

English summary
colors kannada dashaka mahotsava 2025 here is anniversary-special highlights.
Read more about: serial tv show celebration
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X