ಬಿಗ್ ಬಾಸ್ ಕನ್ನಡ 12 ನಿರೂಪಣೆ ಮಾಡೋದು ಯಾರು? ಕಲರ್ಸ್ ಕನ್ನಡ ಬಿಟ್ಟು ಕೊಟ್ಟು ಸುಳಿವೇನು?
ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಆಗಿ ಅಂತ್ಯ ಕಂಡಿದ್ದಾರೆ. ವೀಕ್ಷಕರು ಅಂದುಕೊಂಡತೇ ಹನುಮಂತ ಗೆದ್ದು ಬೀಗಿದ್ದಾನೆ. ಇತ್ತ ತ್ರಿವಿಕ್ರಮ್ ಅಭಿಮಾನಿಗಳಿಗೆ ಬೇಸರ ಆಗಿದ್ದರೂ, ರನ್ನರ್ ಅಪ್ ಆಗಿದ್ದಕ್ಕೆ ಖುಷಿಯಾಗಿದ್ದಾರೆ. ಎಲ್ಲ ಖುಷಿ ಖುಷಿಯಾಗಿರುವಾಗಲೇ ಕಿಚ್ಚ ಸುದೀಪ್ ಅಭಿಮಾನಿಗಳು ಮಾತ್ರ ಬೇಸರದಲ್ಲಿದ್ದಾರೆ. ಅದಕ್ಕೇನು ಕಾರಣ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುವುದು ಇದೇ ಕೊನೆ ಎಂದು ಈಗಾಗಲೇ ಹೇಳಿದ್ದಾರೆ. ಶೋ ಮುಗಿಯುವುದಕ್ಕೂ ಮುನ್ನವೇ ಮತ್ತೊಮ್ಮೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇಷ್ಟೆಲ್ಲ ಹೇಳಿದ ಮೇಲೆ ಮತ್ತೆ ಬಿಗ್ ಬಾಸ್ ನಿರೂಪಣೆ ಮಾಡುವುದ ಅನುಮಾನ ಅನ್ನೋದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಕಿಚ್ಚ ಸುದೀಪ್ ಅಭಿಮಾನಿಗಳು ಕೂಡ ಕೈ ಚೆಲ್ಲಿ ನಿಂತಿದ್ದರು.

ಆದ್ರೀಗ ಕಲರ್ಸ್ ಕನ್ನಡ ಫಿನಾಲೆಯಲ್ಲಿದ್ದ ಮೊದಲ ಮೂವರು ಸ್ಪರ್ಧಿಗಳನ್ನು ಇಟ್ಟುಕೊಂಡು ಪತ್ರಿಕಾಗೋಷ್ಠಿಯನ್ನು ನಡೆಸಿತ್ತು. ಅದರಲ್ಲಿ ಮುಂದಿನ ಸೀಸನ್‌ಗೆ ಯಾರು ಹೋಸ್ಟ್ ಅನ್ನೋ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಬಿಟ್ಟು ಬಿಗ್ ಬಾಸ್ ವೇದಿಕೆ ಮೇಲೆ ಮತ್ತೆ ಇನ್ಯಾರನ್ನು ಊಹಿಸಿಕೊಳ್ಳುವುದಕ್ಕೆ ಸಾಧ್ಯ? ಮುಂದಿನ ಸೀಸನ್ ಬಗ್ಗೆ ಕಲರ್ಸ್ ಕನ್ನಡ ಕೊಟ್ಟ ಸುಳಿವು ಏನು? ಅನ್ನುವುದನ್ನು ನೋಡುವುದಾರೆ..
ಕಿಚ್ಚ ಸುದೀಪ್ ಬಿಗ್ ಬಾಸ್‌ನ ಕಳೆದ 11 ಸೀಸನ್‌ಗಳನ್ನು ನಡೆಸಿಕೊಟ್ಟಿದ್ದಾರೆ. ಇದೂವರೆಗೂ ಈ ರಿಯಾಲಿಟಿ ಶೋ ನಿರೂಪಣೆಯನ್ನು ಸುದೀಪ್ ಬಿಟ್ಟರೆ ಬೇರೆ ಯಾರನ್ನೂ ನಡೆಸಿಕೊಟ್ಟಿಲ್ಲ. ಕಿರುತೆರೆ ವೀಕ್ಷಕರು ಕೂಡ ಬೇರೆ ಯಾರನ್ನೂ ಊಹಿಸಿಕೊಂಡಿಲ್ಲ. ಹೀಗಾಗಿ ಕಿಚ್ಚ ಸುದೀಪ್ ಸ್ಥಾನದಲ್ಲಿ ಯಾರು ಬರಬಹುದು? ಅನ್ನೋದು ಪ್ರಶ್ನೆಗೆ ಅಷ್ಟು ಸುಲಭಕ್ಕೆ ಉತ್ತರ ಸಿಗೋದೂ ಇಲ್ಲ. ಯಾಕೆ ಅಂತ ನೂರೆಂಟು ಕಾರಣಗಳನ್ನು ಹುಡುಕುವ ಅಗತ್ಯವಿಲ್ಲ.
ಅಷ್ಟಕ್ಕೂ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಅಂತ ಹೇಳುತ್ತಿರುವುದು ಯಾಕೆ? ಮುಂದಿನ ಸೀಸನ್ ನಿರೂಪಣೆ ಮಾಡೋದು ಯಾರು? ಈ ಎರಡು ಪ್ರಮುಖ ಪ್ರಶ್ನೆಗಳಿಗೆ ಕಲರ್ಸ್ ಕನ್ನಡದ ನಾನ್ ಫಿಕ್ಷನ್ ಹೆಡ್ ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಹತ್ತನೇ ಸೀಸನ್ ಮುಗಿಯುತ್ತಿದ್ದಂತೆ ಸಾಕು ಎಂದು ಕೊಂಡಿದ್ದರು. ಹತ್ತು ಸೀಸನ್ ಸಾಕು. ಕೆಲಸ ಒಂದೇ ತರ ಅನಿಸುತ್ತಿದೆ ಎಂದು ಹೇಳಿದ್ದರಂತೆ. ಆದರೆ, ಕಲರ್ಸ್ ಕನ್ನಡ ತಂಡವೇ ಅವರನ್ನು ಒಪ್ಪಿಸಿ ಸೀಸನ್ 11ಕ್ಕೆ ಕರೆದುಕೊಂಡಿದ್ದಾಗಿ ಹೇಳಿದ್ದಾರೆ.
ಇನ್ನು ಬಿಗ್ ಬಾಸ್ ಕನ್ನಡ 12ನೇ ಸೀಸನ್‌ಗೆ ಮುಂದಿನ ಹೋಸ್ಟ್ ಯಾರು? ಈ ಪ್ರಶ್ನೆಗೂ ಉತ್ತರ ಕೊಟ್ಟಿದ್ದಾರೆ. ಅದೇನು ಅಂತ ಕೇಳಿದರೆ ಕಿಚ್ಚ ಸುದೀಪ್ ಫ್ಯಾನ್ಸ್ ಥ್ರಿಲ್ ಆಗುವುದರಲ್ಲಿ ಅನುಮಾನವಿಲ್ಲ. "ಸುದೀಪ್ ಸರ್ ಅನ್ನು ಬಿಟ್ಟು ಬೇರೆ ಯಾರನ್ನಾದರೂ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇದೂವರೆಗೂ ಬೇರೆ ಯಾರ ಬಗ್ಗೆನೂ ಯೋಚನೆಯೂ ಮಾಡಿಲ್ಲ. ಅವರನ್ನು ಕನ್ವಿನ್ಸ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇವೆ. ಬಿಗ್ ಬಾಸ್ ಸೀಸನ್ 12ಕ್ಕೆ ಅವರನ್ನು ಕರೆದುಕೊಂಡು ಬರುತ್ತೇವೆ ಎಂದು ಕಲರ್ಸ್ ಕನ್ನಡದ ನಾನ್ ಫಿಕ್ಷನ್ ಹೆಡ್ ಪ್ರಕಾಶ್ ಹೇಳಿದ್ದಾರೆ.
ಹೌದು ಕಿಚ್ಚ ಸುದೀಪ್ ಅಷ್ಟು ಸ್ಪಷ್ಟವಾಗಿ ಮಾತಾಡೋರು ಕಾಣಿಸುತ್ತಿಲ್ಲ. ಸ್ಪರ್ಧಿಗಳಿಗೆ ಖಡಕ್ ಆಗಿ ಎಚ್ಚರಿಕೆ ಕಡೋರು, ತಪ್ಪನ್ನು ತಿದ್ದಿ ಹೇಳೋರು. ಸ್ಪರ್ಧಿಗಳು ಹಾದಿ ತಪ್ಪಿದಾಗ ಅವರನ್ನು ಸರಿ ದಾರಿಗೆ ತರೋರು, ಸ್ಪರ್ಧಿಗಳನ್ನು ನಗಿಸೋರು ಈ ಎಲ್ಲಾ ಪ್ಯಾಕೇಜ್‌ಗಳು ಒಟ್ಟಿಗೆ ಸಿಗೋದು ಸದ್ಯಕ್ಕಂತೂ ಕಷ್ಟ. ಇವೆಲ್ಲದರ ಮಧ್ಯೆ ಕಿಚ್ಚ ಸುದೀಪ್ ಕನ್ನಡದ 'ಕೋಟ್ಯಾಧಿಪತಿ' ಶೋ ನಡೆಸಿಕೊಡುತ್ತಾರೆ ಅನ್ನೋ ಗುಲ್ಲೆದ್ದಿದೆ. ಮುಂದೇನಾಗುತ್ತೋ ಗೊತ್ತಿಲ್ಲ.


Click it and Unblock the Notifications











