Bhagya Lakshmi: ಅಬ್ಬಬ್ಬಾ ಜೋರಾದ ಧ್ವನಿಯಲ್ಲಿ ಮಾತನಾಡಿಯೇ ಬಿಟ್ಟಳಲ್ಲ ಭಾಗ್ಯ..!? ತಾಂಡವ್ ಶಾಕ್..!
ಭಾಗ್ಯಳಿಗೆ ತಾಂಡವ್ ಮಾಡುತ್ತಿರುವ ಮೋಸವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಪದೇ ಪದೇ ತಾಂಡವ್ ಸಾಂಬಾರಿಗೆ ಉಪ್ಪು ಹಾಕಿದ್ದು ಭಾಗ್ಯಳ ಕಣ್ಣ ಮುಂದೆ ಬರುತ್ತಿದೆ .ಜೊತೆಗೆ ಇನ್ನು ಎಷ್ಟು ದಿವಸ ನಾನು ಈ ರೀತಿ ನಾಟಕ ಮಾಡುತ್ತಾ ಎಲ್ಲವನ್ನು ಸಹಿಸಿಕೊಳ್ಳಬೇಕು ಎಂದು ತಾಂಡವ್ ಹೇಳಿಕೊಳ್ಳುತ್ತಿರುವ ಮಾತು ಭಾಗ್ಯಳ ಕಿವಿಗೆ ಬಿದ್ದಿದೆ. ಇದೆಲ್ಲವೂ ಸಹ ಭಾಗ್ಯಳಿಗೆ ಪದೇ ಪದೇ ನೆನಪಾಗುತ್ತಿದ್ದು ಅವಳಿಗೆ ಹಿಂಸೆಯನ್ನ ಕೊಡುತ್ತಿವೆ. ಭಾಗ್ಯ ಸಹ ನಾನು ಹೀಗೆ ಇದ್ದರೆ ಆಗುವುದಿಲ್ಲ ಎಂದು ತಿಳಿದು ಜೋರು ಧ್ವನಿಯಲ್ಲಿ ಮಾತನಾಡವುದನ್ನು ಕಲಿತಿದ್ದಾಳೆ.
ತನ್ವಿ ಭಾಗ್ಯ ಓದಲು ಹೋದರೆ ನಾನು ಎಸ್‌ಎಸ್‌ಎಲ್‌ಸಿ ಎಕ್ಸಾಮ್ ಬರೆಯುವುದಿಲ್ಲ ಎಂದು ಮನೆಯಲ್ಲಿ ಕಂಡೀಶನ್ ಹಾಕಿದ್ದಳು. ಭಾಗ್ಯಾಗೆ ತನ್ನ ಮಗಳು ಹೀಗೆ ಮಾತನಾಡುತ್ತಿದ್ದಾಳೆ ಎಂಬುದನ್ನು ಕೇಳಿ ತುಂಬಾನೇ ಶಾಕ್ ಆಯಿತು. ಇನ್ನು ತಾಂಡವ್ ಈ ಸನ್ನಿವೇಶ ಬಳಸಿಕೊಂಡು ಅಮ್ಮನಿಗೆ ಈ ರೀತಿಯಲ್ಲಿ ಮಾತನಾಡಬಾರದು ಎಂದಿದ್ದಾನೆ. ನಾನು ಇರುವುದನ್ನೇ ಹೇಳುತ್ತಿದ್ದೇನೆ ನಾನು ಅಂತೂ ಶಾಲೆ ಬಿಡುತ್ತೇನೆ ಅಮ್ಮ ಏನಾದರೂ ಶಾಲೆಗೆ ಹೋದರೆ ಎಂದು ಬ್ಲಾಕ್ ಮೇಲ್ ಮಾಡಿದ್ದಾಳೆ.

ತಾಂಡವ್ ತನ್ನ ತಾಯಿಯ ಮುಂದೆ ಹೀರೋ ಆಗಲು ಹೋಗಿದ್ದಾನೆ. ನಾನು ಹಾಸ್ಟೆಲ್‌ಗೆ ಸೇರಿಸುತ್ತೇನೆ. ಅವಳು ಭಾಗ್ಯಳಿಗೆ ಸ್ವಲ್ಪ ಸಹ ಮರ್ಯಾದೆಯನ್ನು ನೀಡುವುದಿಲ್ಲ ಎಂದು ಹೇಳಿದ್ದಾನೆ. ಆದರೆ, ತನ್ವಿಯನ್ನು ಹಾಸ್ಟೆಲ್‌ಗೆ ಸೇರಿಸುವುದು ಮನೆಯಲ್ಲಿ ಯಾರಿಗೂ ಸಹ ಇಷ್ಟವಿಲ್ಲ. ಮನೆಯಲ್ಲಿದ್ದುಕೊಂಡೇ ತನ್ವೀ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು ಎಂದು ಕುಸುಮಾ ಸಹ ಹೇಳಿದರು ತಾಂಡವ್ ತನ್ನ ಹಠವನ್ನು ಬಿಡುತ್ತಿಲ್ಲ.
ತನ್ವಿ ಹಾಸ್ಟೆಲ್‌ಗೆ ಹೋಗಲ್ಲ ಎಂದ ಭಾಗ್ಯಾ
ತನ್ನಿಯನ್ನು ತಾಂಡವ್ ಹಾಸ್ಟೆಲ್‌ಗೆ ಬಿಟ್ಟು ಬರುತ್ತೇನೆ. ಆಗ ಇವಳಿಗೆ ಬುದ್ಧಿ ಬರುತ್ತದೆ ಎಂದು ಬ್ಯಾಗ್ ಹಿಡಿದು ಮನೆಯಿಂದ ಹೊರಟಿದ್ದಾನೆ. ಇದಕ್ಕೆ ಭಾಗ್ಯಾ ಜೋರಾಗಿ ಏರು ಧನಿಯಲ್ಲಿ ಮಾತನಾಡಿ ತನ್ವಿ ಎಲ್ಲಿಗೂ ಹೋಗುವುದು ಬೇಡ ಮನೆಯಲ್ಲೇ ಇರಲಿ ಎಂದು ಹೇಳಿದ್ದಾಳೆ. ಭಾಗ್ಯಾ ಹೇಳಿದರೂ ಕೇಳದೆ ಅವಳಿಗೆ ಮನೆಯಲ್ಲೇ ನಾನು ಬುದ್ಧಿ ಕಲಿಸುತ್ತೇನೆ. ಅಪ್ಪ ಅಮ್ಮನನ್ನ ಅವಳು ಏನೆಂದು ತಿಳಿದುಕೊಂಡಿದ್ದಾಳೆ ನಾನು ಅವಳನ್ನ ಸರಿದಾರಿಗೆ ತರುತ್ತೇನೆ ಎಂದು ಭಾಗ್ಯಾ ಹೇಳಿದ್ದಾಳೆ.
ಭಾಗ್ಯಾ ಏರುಧನಿಯಲ್ಲಿ ತಾಂಡವ ಜೊತೆ ಮಾತನಾಡಿದ್ದಾಳೆ. ಇನ್ನು ತನ್ವಿ ನಿನಗೆ ಅಮ್ಮ ಎಂಬ ಮರ್ಯಾದೆಯನ್ನ ಕೊಡುವುದೇ ಇಲ್ಲ. ಅವಳು ಹಾಸ್ಟೆಲ್‌ನಲ್ಲಿ ಇರಲಿ ಎಂದು ಹೇಳಿದಾಗಲೂ ಸಹ ಭಾಗ್ಯಾ, ತಾಂಡವ್ ಮಾತನ್ನು ನಿರಾಕರಿಸಿದ್ದಾಳೆ. ತನ್ವಿಯನ್ನು ಮನೆ ಬಿಟ್ಟು ಹೋಗಲು ಎಲ್ಲಿಗೂ ಸಹ ಕಳಿಸಲ್ಲ ಎಂದು ಭಾಗ್ಯಾ ಕಡ್ಡಿ ತುಂಡು ಮಾಡಿದ ರೀತಿಯಲ್ಲಿ ಹೇಳಿದ್ದಾಳೆ. ಭಾಗ್ಯಾ ಆಡುತ್ತಿರುವ ಮಾತನ್ನು ಕೇಳುತ್ತಿರುವ ಗುಂಡಣ್ಣನಿಗೆ ತನ್ನ ಅಮ್ಮ ಈ ರೀತಿ ಮಾತನಾಡುತ್ತಿರುವುದು ತುಂಬಾ ಖುಷಿಯನ್ನ ಕೊಟ್ಟಿದೆ.

ಇಷ್ಟು ಗೌರವ ಬೇಡ ಎಂದ ಭಾಗ್ಯಾ
ತಾಯಿ ದೇವರ ಸಮಾನ. ತಾಯಿ ಹೇಳಿದಂತೆ ನೀನು ಕೇಳಬೇಕು ಎಂದು ತನ್ವಿ ಬಳಿಯಲ್ಲಿ ಹೇಳುತ್ತಿದ್ದಾನೆ. ತಾಯಿಗೆ ಗೌರವವನ್ನು ಕೊಟ್ಟರೆ ಸಾಕ್ಷಾತ್ ದೇವರಿಗೆ ಗೌರವ ಕೊಟ್ಟಂತೆ ಎಂದು ಹೇಳಿದ್ದಾನೆ. ಪ್ರತಿ ಹೆಜ್ಜೆ ಹೆಜ್ಜೆಗೂ ಸಹ ಭಾಗ್ಯಾಳಿಗೆ ತನ್ವಿ ಅವಮಾನವನ್ನು ಮಾಡುತ್ತಿದ್ದಾಳೆ. ಆದರೂ ಸಹ ಭಾಗ್ಯಾ ಮಗಳಿಗಾಗಿ ಎಲ್ಲವನ್ನು ಸಹಿಸಿಕೊಂಡು ಸುಮ್ಮನೆ ಇದ್ದಳು. ಈಗ ಯಾವುದನ್ನು ಸಹಿಸಿಕೊಳ್ಳದೆ ಎಲ್ಲದರ ಬಗ್ಗೆಯೂ ಅಲ್ಲಿಯೇ ಮಾತನ್ನ ಆಡಿ ಅದು ತಾಂಡವ ಮನಸ್ಸಿನ ಮೇಲೆ ಪರಿಣಾಮ ಬೀರುವಂತೆ ಮಾಡಿದ್ದಾಳೆ.
ನಾವು ಇನ್ನೊಬ್ಬರಿಗೆ ಪ್ರೀತಿ ಗೌರವ ತೋರಿಸುವುದು ಅದು ಮನಸ್ಸಿನಿಂದ ಬರಬೇಕು ಬೂಟಾಟಿಕೆಯಿಂದ ಅಲ್ಲ ಎಂದು ತನ್ನ ಗಂಡನಿಗೆ ಖಡಕ್ಕಾಗಿ ಭಾಗ್ಯಾ ಉತ್ತರವನ್ನು ಕೊಟ್ಟಿದ್ದಾರೆ. ಭಾಗ್ಯದ ಮಾತುಗಳನ್ನು ಕೇಳುತ್ತಿರುವ ಕುಸುಮಗೆ ಭಾಗ್ಯ ಯಾವುದೋ ಒಂದು ನೋವಿನಲ್ಲಿ ಇದ್ದಾಳೆ ಎಂದು ಅನಿಸಿದೆ. ಆದರೆ ಆ ನೋವು ಯಾವುದು ಎಂದು ತಿಳಿದುಕೊಳ್ಳಲು ಕುಸುಮ ಕೈಯಲ್ಲಿ ಆಗುತ್ತಿಲ್ಲ.


Click it and Unblock the Notifications











