Muddu Sose Serial:ಸಾವಿತ್ರಿಯ ನಂಬಿಕೆ ದ್ರೋಹದ ಮುಖವಾಡ ಕಳಚುತ್ತಾಳಾ ʻಮುದ್ದುಸೊಸೆ'; ಭದ್ರನ ಕಥೆ ಏನಾಯ್ತು?
ಕನ್ನಡದ ಕಿರುತೆರೆ ವಾಹಿನಿಗಳು ಕಾಂಪಿಟೇಷನ್‌ಗೆ ಬಿದ್ದು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ವೀಕ್ಷಕರನ್ನು ಸೆಳೆಯುವುದಕ್ಕೆ ಪ್ರತಿ ದಿನ ಏನಾದರೂ ಒಂದು ಟ್ವಿಸ್ಟ್ ಅಂಡ್ ಟರ್ನ್ ಇದ್ದೇ ಇರುತ್ತೆ. ಹೀಗೆ ಕಿರುತೆರೆ ವೀಕ್ಷಕರಲ್ಲಿ ಕುತೂಹಲ ಕೆರಳಿಸಿರುವ ಧಾರಾವಾಹಿಗಳಲ್ಲಿ ಕಲರ್ಸ್ ಕನ್ನಡದ ಮುದ್ದು ಸೊಸೆ ಕೂಡ ಒಂದು. ಈ ಧಾರಾವಾಹಿ ಈಗ ಕುತೂಹಲ ಘಟಕ್ಕೆ ಬಂದು ನಿಂತಿದೆ.
ಬಿಗ್ ಬಾಸ್ ಖ್ಯಾತಿಯ ತ್ರಿವಿಕ್ರಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಮುದ್ದು ಸೊಸೆ' ಆರಂಭ ಆದಲ್ಲಿಂದಲೂ ವೀಕ್ಷಕರ ಗಮನ ಸೆಳೆಯುತ್ತಿದೆ. ಧಾರಾವಾಹಿಯ ಕಥೆ ಹಾಗೂ ರೋಚಕ ತಿರುವುಗಳ ಮೂಲಕ ಮನರಂಜನೆಯನ್ನು ನೀಡುತ್ತಾ ಬಂದಿದೆ. ಇಂದಿನಿಂದ (ಫೆಬ್ರವರಿ 23) ಪ್ರಸಾರ ಆಗುತ್ತಿರುವ ಎಪಿಸೋಡ್‌ಗಳಲ್ಲಿ ಇನ್ನೂ ಟ್ವಿಸ್ಟ್ ಅಂಡ್ ಟರ್ನ್‌ಗಳು ಸಿಗಲಿವೆ. ಇದೀಗ ಧಾರಾವಾಹಿಯ ನಾಯಕಿ ವಿದ್ಯಾಳ ಬದುಕನ್ನೇ ಬುಡಮೇಲು ಮಾಡುವಂತಹ ಘಟನೆಯೊಂದು ಧಾರಾವಾಹಿಯಲ್ಲಿ ನಡೆಯುತ್ತಿದೆ.

ಮುದ್ದು ಸೊಸೆ "ಕಣ್ಣಿಗೆ ಕಂಡಿದ್ದೆಲ್ಲಾ ಸತ್ಯವಲ್ಲ, ನನ್ನ ಗಂಡನ ಮೇಲಿರುವ ಅಪವಾದ ಸುಳ್ಳು" ಎಂದು ನಂಬಿದ್ದಾಳೆ. ಈ ನಂಬಿಕೆಯ ಮೇಲೆ ನಾಯಕಿ ವಿದ್ಯಾ ಈಗ ಅಗ್ನಿಪರೀಕ್ಷೆಗೆ ರೆಡಿಯಾಗುತ್ತಿದ್ದಾಳೆ. ಕಥೆಯಲ್ಲಿ ಟ್ವಿಸ್ಟ್‌ಗಳನ್ನು ಕೊಡುವ ಮೂಲಕವೇ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತಿದೆ. ಈಗ ಈ ಧಾರಾವಾಹಿಯು ಕಥೆಯ ದಿಕ್ಕನ್ನೇ ಬದಲಿಸುವಂತಹ 'ಮಹಾ ತಿರುವು' ಪಡೆದುಕೊಂಡಿದೆ. ಸದ್ಯಕ್ಕೀಗ ಧಾರಾವಾಹಿಯಲ್ಲಿ ಸಂಸಾರದ ಕಲಹ ಅಷ್ಟೇ ಅಲ್ಲ. ಕುಟುಂಬದ ಅಸ್ತಿತ್ವ ಹಾಗೂ ಸಂಬಂಧದ ನಡುವಿನ ಸಂಘರ್ಷಕ್ಕೆ ವೇದಿಕೆ ಸಜ್ಜಾಗುತ್ತಿದೆ.
'ಮುದ್ದು ಸೊಸೆ' ಧಾರಾವಾಹಿ ಆರಂಭ ಆದಲ್ಲಿಂದ ಸಾಕಷ್ಟು ತಿರುವುಗಳನ್ನು ನೀಡುತ್ತಾ ವೀಕ್ಷಕರನ್ನು ತನ್ನತ್ತ ಹಿಡಿಟ್ಟುಕೊಂಡಿದೆ. ಎಪಿಸೋಡ್‌ನಿಂದ ಎಪಿಸೋಡ್‌ಗೆ ಕೌತುಕವನ್ನು ಹೆಚ್ಚಿಸುತ್ತಾ ಕಥೆ ಮುಂದಕ್ಕೆ ಸಾಗುತ್ತಿದೆ. ಈ ಒಂದು ತಿಂಗಳೊಳಗೆ 8ಕ್ಕೂ ಅಧಿಕ ತಿರುವುಗಳನ್ನು ಈ ಧಾರಾವಾಹಿಯಲ್ಲಿ ನಡೆದಿದೆ. ಇಷ್ಟೊಂದು ಟ್ವಿಸ್ಟ್‌ಗಳನ್ನು ಕಂಡಿರುವ ಏಕೈಕ ಧಾರಾವಾಹಿ ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ಧಾರಾವಾಹಿಗಳು ಎಂದರೆ, ಕಥೆ ನಿಧಾನಗತಿಯಲ್ಲಿ ಸಾಗುತ್ತವೆ ಎಂಬ ಆರೋಪವಿದೆ. ಆದರೆ, ಕನ್ನಡ ಕಿರುತೆರೆಯಲ್ಲಿ ಇಷ್ಟೊಂದು ವೇಗವಾಗಿ ಕಥೆ ಹೇಳಲು ಹೊರಟಿರುವುದು ಒಂದು ಹೊಸ ಪ್ರಯೋಗ ಎನ್ನಲಾಗುತ್ತಿದೆ. ಇದೀಗ ʻಮುದ್ದುಸೊಸೆʼ ಮತ್ತೊಂದು ಟ್ವಿಸ್ಟ್ ಜೊತೆಗೆ ಎಂಟ್ರಿ ಕೊಟ್ಟಾಗಿದೆ. ಇಂದಿನಿಂದ ವೀಕ್ಷಕರಿಗೆ ಮತ್ತಷ್ಟು ಮನರಂಜನೆ ಸಿಗೋದು ಕನ್ಫರ್ಮ್. ಸದ್ಯ ಧಾರಾವಾಹಿಯಲ್ಲಿ ಏನಾಗುತ್ತಿದೆ ಎಂದು ನೋಡುವುದಾರೆ, ಯಾರೂ ಊಹಿಸದ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಇದರಲ್ಲಿ ಭದ್ರ ಹಾಗೂ ವಿನಂತಿ ಒಂದೇ ಹಾಸಿಗೆಯಲ್ಲಿ ಇರುವ ಸ್ಥಿತಿಯಲ್ಲಿ ಕಂಡಿದ್ದಾರೆ. ಭದ್ರ ಹಾಗೂ ವಿದ್ಯಾಳ ಸುಂದರ ಸಂಸಾರವನ್ನು ಒಡೆಯಲು ಕುತಂತ್ರಿಗಳು ಸ್ಕೆಚ್ ಹಾಕಿದ್ದಾರೆ. ಮನೆಯಲ್ಲೇ ಇರುವ ಸಾವಿತ್ರಿ ಮಾಡಿದ ದ್ರೋಹದಿಂದಾಗಿ ಇಡೀ ಮನೆಯ ವಾತಾವರಣವೇ ಹದಗೆಟ್ಟಿದೆ.
ಸವಾಲೆಸೆದ ಶಿವರಾಮೇಗೌಡ
ಇಂತಹದ್ದೊಂದು ಘಟನೆಯನ್ನು ಸಹಿಸದ ಭದ್ರನ ತಂದೆ ಶಿವರಾಮೇಗೌಡ ವಿನಂತಿ ಜೊತೆ ಮಗನ ಮದುವೆ ಮಾಡಿಸುವುದಕ್ಕೆ ಹೊರಟಿದ್ದಾನೆ. ಇಷ್ಟಕ್ಕೆ ಸುಮ್ಮನಾಗಿಲ್ಲ ಸೊಸೆ ವಿದ್ಯಾ ಮುಂದೆ ಎರಡು ಕಠಿಣ ಆಯ್ಕೆಗಳನ್ನು ಇಟ್ಟಿದ್ದಾನೆ. ಮೊದಲನೆ ಆಯ್ಕೆ ಭದ್ರನಿಗೆ ವಿಚ್ಛೇದನ ನೀಡಬಹುದು. ಪ್ರತಿಯಾಗಿ ತನ್ನ ಒಟ್ಟು ಆಸ್ತಿಯಲ್ಲಿ ಜೀವನಾಂಶದ ರೂಪದಲ್ಲಿ ಶಿವರಾಮೇಗೌಡ ಶೇಕಡಾ 50ರಷ್ಟು ಪಾಲನ್ನು ವಿದ್ಯಾಗೆ ನೀಡುತ್ತೇನೆಂದು ಒಪ್ಪಿಕೊಂಡಿದ್ದಾನೆ. ಎರಡನೆಯ ಆಯ್ಕೆ ಭದ್ರನ ಮೊದಲ ಪತ್ನಿಯಾಗಿಯೇ ಮನೆಯಲ್ಲಿ ಉಳಿಯುವುದು. ಆದರೆ, ಭದ್ರ ಮತ್ತು ವಿನಂತಿಯ ಎರಡನೇ ಮದುವೆಗೆ ವಿದ್ಯಾ ಸಮ್ಮತಿಸಿ, ಮೊದಲ ಪತ್ನಿಯಾಗಿ ಮನೆಯಲ್ಲಿಯೇ ಉಳಿಯಬೇಕು.

ವಿದ್ಯಾಳ ಅಚಲ ನಂಬಿಕೆ & ಹೋರಾಟ
ಊರಿನವರೆಲ್ಲ ಭದ್ರನ ಮೇಲೆ ಅನುಮಾನ ಪಟ್ಟರೆ, ತನ್ನ ಪತಿಯ ಮೇಲೆ ವಿದ್ಯಾಳಿಗೆ ನಂಬಿಕೆಯಿದೆ. ತನ್ನ ಗಂಡನ ವಿರುದ್ಧ ಯಾರೋ ದೊಡ್ಡ ಪಿತೂರಿ ಮಾಡಿದ್ದಾರೆಂಬುದು ಗೊತ್ತಿದೆ. ಆಸ್ತಿಗೂ, ರಾಜಿಗೂ ಯಾವುದಕ್ಕೂ ವಿದ್ಯಾ ಬಗ್ಗದೆ ಗಂಡನ ಪರವಾಗಿ ನಿಂತಿದ್ದಾಳೆ. ತನ್ನ ಮಾವ ಶಿವರಾಮೇಗೌಡನ ನಿರ್ಧಾರದ ವಿರುದ್ಧ ಹೋಗುವುದಕ್ಕೆ ನಿರ್ಧರಿಸಿದ್ದಾಳೆ. ಅಲ್ಲದೆ, ತನ್ನ ಪತಿಯ ಗೌರವವನ್ನು ಕಾಪಾಡಲು ರಣರಂಗಕ್ಕೆ ಧುಮುಕಿದ್ದಾಳೆ. ತನ್ನ ಗಂಡನನ್ನು ಉಳಿಸಿಕೊಳ್ಳಲು ಮನೆಯಲ್ಲೇ ಅಡಗಿರುವ ಕುತಂತ್ರಿಗಳ ನಿಜ ಬಣ್ಣವನ್ನು ಬಯಲು ಮಾಡೋದಕ್ಕೆ ಹೊರಟಿದ್ದಾರೆ.
ಮುಂದಿದೆ ಮಸ್ತ್ ಟ್ವಿಸ್ಸ್
ವಿದ್ಯಾಳ ಈ ಏಕಾಂಗಿ ಹೋರಾಟಕ್ಕೆ ಜಯ ಸಿಗುತ್ತಾ? ವಿಧಿ ಆಟದ ಮುಂದೆ ವಿದ್ಯಾ ಸೋಲುತ್ತಾಳಾ? ಸತ್ಯವನ್ನು ಸಾಬೀತುಪಡಿಸಿ ಸಂಸಾರವನ್ನು ಮತ್ತೆ ಒಂದು ಮಾಡುತ್ತಾಳಾ? ಕುತಂತ್ರಿಗಳ ಮುಖವಾಡ ಕಳಚುವ ಆ ರೋಚಕ ಕ್ಷಣಗಳು ಪ್ರಸಾರವಾಗಲಿವೆ. ಈ ಮಹಾ ತಿರುವುಗಳ ಸರಣಿ 'ಮುದ್ದುಸೊಸೆ' ಪ್ರತಿ ರಾತ್ರಿ 7:30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ.


Click it and Unblock the Notifications