'ನಂದಗೋಕುಲ'ದಲ್ಲಿ 'ಒಟಿಪಿ' ಸಂಚಲನ; ಮೀನಾ-ಕೇಶವ ಜೋಡಿಯ ರೊಮ್ಯಾಂಟಿಕ್ ಕೋಡ್‌ವರ್ಡ್ ಏನು ಗೊತ್ತೇ?
ಕಲರ್ಸ್ ಕನ್ನಡದಲ್ಲಿ ಕೌಟುಂಬಿಕ ಧಾರಾವಾಹಿಗಳು ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿವೆ. ಅದರಲ್ಲಿ 'ನಂದಗೋಕುಲ' ಕೂಡ ಒಂದು. ದಿನದಿಂದ ದಿನಕ್ಕೆ ಅತ್ಯಂತ ರೋಚಕ ಹಾಗೂ ಹಾಸ್ಯದಿಂದ ಕೂಡಿದ ಎಪಿಸೋಡ್‌ಗಳು ವೀಕ್ಷಕರನ್ನು ಸೆಳೆಯುತ್ತಿವೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗುತ್ತಿದೆ.
ದಿನದಿಂದ ದಿನಕ್ಕೆ 'ನಂದಗೋಕುಲ' ಧಾರಾವಾಹಿಯಲ್ಲಿ ಹೊಸ ಪ್ರಯೋಗಳು ನಡೆಯುತ್ತಿವೆ. ಹೀಗಾಗಿ ವೀಕ್ಷಕರಲ್ಲಿ ಧಾರಾವಾಹಿ ಬಗ್ಗೆ ಕುತೂಹಲ ಹೆಚ್ಚಾಗಿದೆ. ಪ್ರಸ್ತುತ ಈ ಧಾರಾವಾಹಿಯಲ್ಲಿ ಪ್ರಮುಖ ವಿಷಯಯೊಂದು ಚರ್ಚೆಯಾಗುತ್ತಿದೆ. ಅದುವೇ 'ಒಟಿಪಿ'. ಹೌದು, ನಂದಗೋಕುಲದ ಮನೆಯಲ್ಲಿ ಈಗ ಇದೇ ಒಟಿಪಿ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದು 'ನಂದಗೋಕುಲ' ಧಾರಾವಾಹಿಯ ಕಥೆಗೆ ಹೊಸ ಆಯಾಮ ನೀಡುತ್ತಿದೆ.

ಒಟಿಪಿ ಅಂದ ಕೂಡಲೇ ಮೊದಲಿಗೆ ನೆನಪಾಗುವುದು ಬ್ಯಾಂಕ್, ಎಟಿಎಂ, ಆನ್‌ಲೈನ್ ಶಾಪಿಂಗ್ ಹೀಗೆ ಬ್ಯಾಂಕಿಂಗ್ ಅಥವಾ ಡಿಜಿಟಲ್ ವ್ಯವಹಾರಗಳು ಕಣ್ಮುಂದೆ ಬರುತ್ತವೆ. ಆದರೆ, 'ನಂದಗೋಕುಲ' ಧಾರಾವಾಹಿಯಲ್ಲಿ 'ಒಟಿಪಿ' ಪದ ಸಂಪೂರ್ಣ ಭಿನ್ನ ಅರ್ಥವನ್ನು ಕೊಡುತ್ತದೆ. ಕಲರ್ಸ್ ಕನ್ನಡದ ಈ ಧಾರಾವಾಹಿಯಲ್ಲಿ ಪ್ರಮುಖ ಜೋಡಿಗಳಾಗಿ ಗುರುತಿಸಿಕೊಂಡಿರುವ ಮೀನಾ ಹಾಗೂ ಕೇಶವ ನಡುವೆ ಈ ಒಟಿಪಿ ವಿಚಾರವಾಗಿಯೇ ಸನ್ನಿವೇಶಗಳು ನಡೆಯುತ್ತಿದೆ.
ಇವರಿಬ್ಬರ ಈ ಒಟಿಪಿ ವಿಚಾರ ಅತ್ಯಂತ ಮಜವಾಗಿ ಸಾಗುತ್ತಿದೆ. 'ಒಟಿಪಿ' ಅನ್ನೋ ಪದ ಕೇಳಿದ ತಕ್ಷಣ 'ಒನ್ ಟೈಮ್ ಪಾಸ್‌ವರ್ಡ್' ಇರಬಹುದೆಂಬ ಕುತೂಹಲ ಮೂಡಬಹುದು. ಆದರೆ, ಮೀನಾ ಮತ್ತು ಕೇಶವನ ಪ್ರೀತಿಯ ಭಾಷೆಯಲ್ಲಿ ಈ ಒಟಿಪಿ ಎಂದರೆ 'ಒನ್ ಟೈಮ್ ಪಪ್ಪಿ' ಎಂದರ್ಥ. ಈ ಜೋಡಿಯ ಕ್ಯೂಟ್ ರೊಮ್ಯಾಂಟಿಕ್ ಸೀಕ್ರೆಟ್ ಈಗ ಕೋಡ್‌ವರ್ಡ್ ಆಗಿ ಬದಲಾಗಿದೆ.
ಈ 'ಒಟಿಪಿ' ವಿಚಾರ ಸದ್ಯಕ್ಕೆ ನಂದಕುಮಾರ್ ಮನೆಯೀಗ ತೀವ್ರ ಕುತೂಹಲ ಕೆರಳಿಸಿದೆ. ಮೀನಾ ಮತ್ತು ಕೇಶವ ಪರಸ್ಪರ 'ಒಟಿಪಿ' ಕೊಡುವ ವಿಚಾರವಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಅದು ಮನೆಯವರಿಗೆ ದೊಡ್ಡ ರಹಸ್ಯವಾಗಿ ಕಾಣಿಸುತ್ತಿದೆ. ಮನೆಯವರೆಲ್ಲರೂ ಈ 'ಒಟಿಪಿ' ರಹಸ್ಯವನ್ನು ಹುಡುಕುವುದಕ್ಕೆ ಸ್ಕೆಚ್ ಹಾಕಿದ್ದಾರೆ. ಈ 'ಒಟಿಪಿ' ರಹಸ್ಯವನ್ನು ಭೇದಿಸುವುದಕ್ಕೆ ಮನೆಯವರೆಲ್ಲರೂ ಒಬ್ಬೊಬ್ಬರಾಗಿ "ನಾನು ಕೊಡ್ತೀನಿ, ನಾನು ಕೊಡ್ತೀನಿ" ಎನ್ನುವುದಕ್ಕೆ ಆರಂಭಿಸಿದ್ದಾರೆ. ಯಾರಿಗೂ ಇದರ ಅಸಲಿ ಅರ್ಥ ಗೊತ್ತಿಲ್ಲ. ಹೀಗಿರುವುದರಿಂದ ಧಾರಾವಾಹಿಯಲ್ಲಿ ಹಾಸ್ಯದ ಹೊಳೆಯೇ ಹರಿದಿದೆ.

ಮೀನಾ ಮತ್ತು ಕೇಶವ ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುವುದಕ್ಕೆ ಈ ರಹಸ್ಯ ಕೋಡ್‌ವರ್ಡ್ ಅನ್ನು ಬಳಸುತ್ತಿದ್ದಾರೆ. ಇನ್ನೂ ಮನೆಯವರಿಗೆಈ ರಹಸ್ಯ ಕೋಡ್ ಭೇದಿಸಲು ಸಾಧ್ಯವಾಗಿಲ್ಲ. ಇಷ್ಟು ದಿನ ಕದ್ದುಮುಚ್ಚಿ ನಡೆಯುತ್ತಿದ್ದ ಈ ರೊಮ್ಯಾಂಟಿಕ್ ಆಟವೀಗ ಮನೆಯವರ ಕುತೂಹಲದ ಕೇಂದ್ರಬಿಂದು. ಈ ಜೋಡಿಯ ನಡುವಿನ ಇಂತಹ ಸಣ್ಣ ಪುಟ್ಟ ತುಂಟಾಟಗಳು ಮತ್ತು ಕಾಮಿಡಿ ಸನ್ನಿವೇಶಗಳು ವೀಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡುತ್ತಿವೆ. ಈ 'ಒಟಿಪಿ' ವಿಚಾರವೀಗ ಸೋಶಿಯಲ್ ಮೀಡಿಯಾದಲ್ಲಿಯೂ ಹಾಸ್ಯಾಸ್ಪದವಾಗಿ ಮೂಡಿ ಬರುತ್ತಿದೆ.
ಇನ್ನೊಂದೆಡೆ ಹೊಸ ಸೊಸೆ ಪ್ರಿಯಾ ಎಂಟ್ರಿ 'ನಂದಗೋಕುಲದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಪ್ರಿಯಾ ಮನೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ವಿಭಿನ್ನವಾಗಿ ವರ್ತಿಸುವುದಕ್ಕೆ ಶುರು ಮಾಡಿದ್ದು, ಮನೆಯ ಇತರ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಹುಟ್ಟು ಹಾಕುತ್ತಿದ್ದಾಳೆ. ಅಮಾಯಕತೆಯ ಮುಖವಾಡ ಧರಿಸಿ, ಮನೆಯ ಸದಸ್ಯರ ನಡುವೆ ವೈಮನಸ್ಸು ತಂದಿಡುವ ಕೆಲಸ ಮಾಡುತ್ತಿದ್ದಾಳೆ. ಇದರಿಂದ ನಂದಗೋಕುಲದ ಮನೆಯೊಳಗೆ ಶಾಂತಿಯುತ ವಾತಾವರಣವು ಕಡುತ್ತಿದೆ. ಮುಂದಿನ ದಿನಗಳಲ್ಲಿ ಈ ಸನ್ನಿವೇಶ ಯಾವ ರೂಪವನ್ನು ಪಡೆದುಕೊಳ್ಳುತ್ತೋ ನೋಡಬೇಕಿದೆ.
'ನಂದಗೋಕುಲ' ಧಾರಾವಾಹಿ ಕೇವಲ ಮನರಂಜನೆಯಷ್ಟೇ ಅಲ್ಲ. ಒಂದು ಫ್ಯಾಮಿಲಿ ಡ್ರಾಮಾದಲ್ಲಿ ಎದುರಾಗುವ ಸಂಕೀರ್ಣ ಸಂಬಂಧಗಳು, ಅವುಗಳ ನಡುವಿನ ವ್ಯತ್ಯಾಸಗಳನ್ನು ನೈಜವಾಗಿ ಶೂಟ್ ಮಾಡಲಾಗುತ್ತಿದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ತಮ್ಮದೇ ಆದ ಅಭಿಪ್ರಾಯಗಳು ಮತ್ತು ಭಿನ್ನಾಭಿಪ್ರಾಯಗಳಿದ್ದರೂ, ಒಟ್ಟಾಗಿ ಬದುಕ ಬೇಕಾಗಿದೆ.


Click it and Unblock the Notifications















