ಝಾನ್ಸಿ-ರಾಘು ಪ್ರೀತಿ ಗೆಲ್ಲಿಸೋಕೆ ಚಾರು-ಚಾರಿ ಎಂಟ್ರಿ; ಯಜಮಾನ- ರಾಮಾಚಾರಿ ಮಹಾಸಂಗಮ

ಧಾರಾವಾಹಿಗಳನ್ನು ಒಂದು ದಿನವೂ ಬಿಡದೇ ನೋಡುವವರಿಗೆ ಮನರಂಜನಾ ವಾಹಿನಿಗಳು ಆಗಾಗ ಸರ್ಪ್ರೈಸ್‌ಗಳನ್ನು ನೀಡುತ್ತಲೇ ಇರುತ್ತೆ. ವೀಕ್ಷಕರ ನೆಚ್ಚಿನ ಎರಡು ಧಾರಾವಾಹಿಗಳನ್ನು ಒಟ್ಟಿಗೆ ಸೇರಿಸಿ ಮಹಾಸಂಗಮ ಮಾಡಿಬಿಡುತ್ತೆ. ಸಾಮಾನ್ಯವಾಗಿ ಇದು ನಡೆಯುತ್ತಲೇ ಇರುತ್ತೆ. ಈಗ ಕಲರ್ಸ್ ಕನ್ನಡ ತನ್ನ ಎರಡು ಜನಪ್ರಿಯ ಧಾರಾವಾಹಿಗಳನ್ನು ಒಟ್ಟಿಗೆ ಸೇರಿಸಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಯಜಮಾನ' ಹಾಗೂ 'ರಾಮಾಚಾರಿ' ಈ ಎರಡು ಜನಪ್ರಿಯ ಧಾರಾವಾಹಿಗಳು ಒಟ್ಟಿಗೆ ಬರುತ್ತಿವೆ. ಈ ಮಹಾಸಂಗಮದಲ್ಲಿ ಸಿಕ್ಕಾಪಟ್ಟೆ ಡ್ರಾಮಾ, ಟ್ವಿಸ್ಟ್ ಅಂಡ್ ಟರ್ನ್‌ಗಳನ್ನು ನೋಡಬಹುದು. ನಿನ್ನೆಯಿಂದ (ಸೆಪ್ಟೆಂಬರ್ 8) ಈ ಎರಡೂ ಧಾರಾವಾಹಿಗಳ ಮಹಾಸಂಗಮ ಆಗಿವೆ. ಒಂದ್ಕಡೆ 'ಯಜಮಾನ' ಧಾರಾವಾಹಿಯಿಂದ ಝಾನ್ಸಿ-ರಾಘು, ಇನ್ನೊಂದು ಕಡೆ 'ರಾಮಾಚಾರಿ' ಧಾರಾವಾಹಿಯಿಂದ ಚಾರು-ರಾಮಾಚಾರಿ. ಈ ಒಂದು ವಾರ ಏನೆಲ್ಲ ಆಗುತ್ತೆ ಅನ್ನೋದೇ ಕಿರುತೆರೆ ವೀಕ್ಷಕರಿಗೆ ಕುತೂಹಲ.

Colors Kannada Serials Yajamana and Ramachari Unite for Special Mahasangama Episode
ಅಗ್ರಿಮೆಂಟ್‌ ಮ್ಯಾರೇಜ್‌ನಲ್ಲಿ ಚಿಗುರಿದೆ ಪ್ರೀತಿ

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಗಳಲ್ಲಿ 'ಯಜಮಾನ' ಕಿರುತೆರೆ ವೀಕ್ಷಕರಿಗೆ ಹೊಸತು. ಲವ್ ಮ್ಯಾರೇಜೂ ಅಲ್ಲದ, ಅರೇಂಜ್ ಮ್ಯಾರೇಜೂ ಅಲ್ಲದ ಪಕ್ಕಾ ಅಗ್ರೀಮೆಂಟ್ ಮ್ಯಾರೇಜ್ ಸ್ಟೋರಿಯನ್ನು ಹೇಳುವುದಕ್ಕೆ ಹೊರಟಿತ್ತು. ಈಗ ಈ ಕಥೆಯಲ್ಲಿ ನಾಯಕ ನಿಜವಾಗಲೂ ಯಾರಿಗೆ 'ಯಜಮಾನ' ಆಗ್ತಾನೆ ಅನ್ನೋ ಪ್ರಶ್ನೆಯ ಮೇಲೆ ಧಾರಾವಾಹಿಯ ಮುಂದಕ್ಕೆ ಸಾಗುತ್ತಿದೆ.

'ಯಜಮಾನ' ಧಾರಾವಾಹಿಯಲ್ಲಿ ರಘು ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದಾನೆ. ಯಾಕಂದ್ರೆ, ಒಂದುಕಡೆ ರಾಘು ಜೊತೆ ಅಗ್ರೀಮೆಂಟ್ ಮ್ಯಾರೇಜ್ ಆಗಿರೋ ಅಗರ್ಭ ಶ್ರೀಮಂತೆ ಝಾನ್ಸಿ ತನ್ನ ಪ್ರೀತಿ ಪಡೆಯೋದಕ್ಕೆ ಎಂತಹ ಕಷ್ಟ ಬಂದರೂ ಎದುರಿಸುತ್ತಿದ್ದಾಳೆ. ಅದೇ ಇನ್ನೊಂದು ಕಡೆ ಅರೇಂಜ್ ಮ್ಯಾರೇಜ್ ಆಗ್ಬೇಕಾಗಿರೋ ಅನಿತಾಗೆ ಹಸೆಮಣೆ ಮೇಲೆ ಮದುವೆ ನಿಂತಿರೋದು ಆಘಾತವಾಗಿದೆ. ಇದು ಆಕೆಯ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡಿದೆ. ಇಬ್ಬರಿಗೂ ತಮ್ಮ 'ಯಜಮಾನ' ರಾಘುನೇ ಆಗಬೇಕೆಂಬ ಹಠ.

ಸದ್ಯದ ಪರಿಸ್ಥಿತಿಯಲ್ಲಿ ರಘು ಯಾರಿಗೆ ಸೇರಬೇಕು? ಎಂಬ ಸಮಸ್ಯೆ ಹುಟ್ಟಿಕೊಂಡಿದೆ. ಈ ಸಮಸ್ಯೆಗೆ ಪರಿಹಾರವಾಗಿ ಮನೆಯವರೆಲ್ಲ ಸೇರಿ ಝಾನ್ಸಿ-ಅನಿತಾ ನಡುವೆ 'ನಾನಾ- ನೀನಾ' ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ. ಒಂದು ವೇಳೆ ಝಾನ್ಸಿ ಸರಿಯಾದ ರೀತಿಯಲ್ಲಿ ಆಡಿ ಗೆದ್ದರೂ ಮೊದಲ ನಿರ್ಧಾರ ಮಾಡಿಕೊಂಡಂತೆ ಅನಿತಾ ಸೋತರೂ ಅವಳದ್ದೇ ಗೆಲುವು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇದು ಇಲ್ಲಿವರೆಗೆ ನಡೆದಿರುವ ಕಥೆ. ಈ ಪರಿಸ್ಥಿತಿಯಲ್ಲಿ ರಾಮಾಚಾರಿ ಹಾಗೂ ಚಾರಿ ಎಂಟ್ರಿ ಆಗಿದೆ.

Colors Kannada Serials Yajamana and Ramachari Unite for Special Mahasangama Episode

'ಯಜಮಾನ' ಧಾರಾವಾಹಿಯಲ್ಲಿ ಪ್ರತಿದಿನ ಕುತೂಹಲ ಹೆಚ್ಚಾಗುತ್ತಿದೆ. ಝಾನ್ಸಿ-ಅನಿತಾ ನಡುವೆ 'ನಾನಾ- ನೀನಾ' ಪಂದ್ಯ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡಲಾಗುತ್ತಿದೆ. ಎಷ್ಟೇ ಆದರೂ ಇಡೀ ಅನಿತಾ ಬೆಂಬಲಕ್ಕೆ ಕುಟುಂಬದ ಬೆಂಬಲ ಸಿಕ್ಕಿದೆ. ಇತ್ತ ರಾಘು ಸೇರಿದಂತೆ ಇನ್ನಿಬ್ಬರಿಗೆ ಮನಸ್ಸಲ್ಲಿ ಝಾನ್ಸಿಯೇ ಗೆಲ್ಲಬೇಕೆಂಬ ಆಸೆಯಿದೆ. ಅದನ್ನು ತೋರಿಸಿಕೊಳ್ಳಲು ಅವರ ಪರಿಸ್ಥಿತಿ ಸಹಕರಿಸುತ್ತಿಲ್ಲ. ಇದೀಗ ಝಾನ್ಸಿಯ ಪ್ರೀತಿಯನ್ನ ಗೆಲ್ಲಿಸೋಕೆ, ಅವಳಿಗೆ ಸಪೋರ್ಟ್ ಸಿಸ್ಟಮ್ ಆಗಿ ಜೊತೆಯಲ್ಲಿ ನಿಲ್ಲೋಕೆ ಕರುನಾಡೇ ಮೆಚ್ಚಿದ ಜೋಡಿ ರಾಮಾಚಾರಿ-ಚಾರು ಬಂದಿದೆ.

'ಯಜಮಾನ'-'ರಾಮಾಚಾರಿ' ಮಹಾಸಂಚಿಕೆ ಕರುನಾಡಿಗೆ ಮನರಂಜನೆಯ ರಸದೌತಣವನ್ನ ಕೊಡುವುದಕ್ಕೆ ಹೊರಟಿದೆ. ಎರಡು ಬ್ಯೂಟಿಫುಲ್ ಜೋಡಿಗಳ ಕ್ಯೂಟ್ ಲವ್ ಸ್ಟೋರಿ, ಇಬ್ಬರು ಪವರ್‌ಫುಲ್ ಹೀರೋಗಳ ಫೈಟ್, ಇಬ್ಬರು ಹೀರೋಯಿನ್‌ಗಳ ಇಮೋಷನಲ್ ಸೀನ್ಸ್, ವಿಲನ್‌ಗಳ ಅಟ್ಟಹಾಸ, ಅದನ್ನ ಅಡಗಿಸೋಕೆ ಮಾತ್ರ ತಂತ್ರಗಳು, ಜೊತೆಯಲ್ಲೊಂದಿಷ್ಟು ನಾನ್-ಸ್ಟಾಪ್ ನಗು, 'ನಾನಾ-ನೀನಾ' ಪಂದ್ಯದ ಟ್ವಿಸ್ಟ್‌ಗಳನ್ನು ನೋಡಬಹುದ. 'ಯಜಮಾನ'-'ರಾಮಚಾರಿ' ಮಹಾಸಂಚಿಕೆಯ ವಿಶೇಷ.

ಈ ಮಹಾಸಂಗಮದಲ್ಲಿ ಮನೆಯವರ ವಿಶ್ವಾಸ ಗೆದ್ದು 'ಸೊಸೆ' ಪಟ್ಟ ದಕ್ಕಿಸಿಕೊಳ್ಳೋರು ಯಾರು? 'ಯಜಮಾನ'ನಿಗೆ ಯಜಮಾನಿ ಆಗೋದ್ಯಾರು? ಮನೆಯಿಂದಾಚೆ ಹೋಗೋರು ಯಾರು? ಅನ್ನೋದು ಈ ಮಾಹಾ ಸಂಚಿಕೆಯಲ್ಲಿ ನಿರ್ಧಾರ ಆಗಲಿದೆ. ಯಜಮಾನ-ರಾಮಾಚಾರಿ ವಾರಪೂರ್ತಿ ಒಂದು ಗಂಟೆಯ ಮಹಾಸಂಚಿಕೆ ಸೆಪ್ಟೆಂಬರ್ 9ರಿಂದ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ.

More from Filmibeat

English summary
Colors Kannada bringing two popular serials Yajamana and Ramachari together as Mahasangama for a special crossover episode. Fans can expect high drama, emotional twists, and unforgettable moments.
Read more about: serial tv show kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X