ಮಕ್ಕಳಿಬ್ಬರ ಜೊತೆ "ಬಂದು ಬಿಡು ಶೀಲಾ" ಎಂದ ಆಟೋರಾಜ; 'ಶಾಂತಂ ಪಾಪಂ'

ಕಿರುತೆರೆ ಲೋಕದಲ್ಲಿ ಫಿಕ್ಷನ್ (ಧಾರಾವಾಹಿ) ಹಾಗೂ ರಿಯಾಲಿಟಿ ಶೋಗಳಿವೆ ಪ್ರತ್ಯೇಕ ವೀಕ್ಷಕರ ಫಾಲೋವಿಂಗ್ ಇದೆ. ಅದರಲ್ಲೂ ಫಿಕ್ಷನ್ ಕ್ಯಾಟಗರಿಯಲ್ಲಿ ಮಹಿಳೆಯನ್ನು ಗಮನದಲ್ಲಿಟ್ಟುಕೊಂಡು ಕಂಟೆಂಟ್ ಕ್ರಿಯೇಟ್ ಮಾಡುವುದೇ ಹೆಚ್ಚು. ಆದರೆ, ಮನರಂಜನಾ ಕ್ಷೇತ್ರದಲ್ಲಿ ಅಪರಾಧಗಳ ಕಥೆಯನ್ನು ವೀಕ್ಷಕರನ್ನು ಮುಂದೆ ತರುವುದು ದಕ್ಷಿಣ ಭಾರತದಲ್ಲಿ ತೀರಾ ವಿರಳ.

ಆದರೆ, ಕಲರ್ಸ್ ಕನ್ನಡ ಇಂತಹದ್ದೊಂದು ಪ್ರಯತ್ನವನ್ನು ಮಾಡಿಕೊಳ್ಳುತ್ತಾ ಬಂದಿದೆ. ಅದುವೇ 'ಶಾಂತಂ ಪಾಪಂ'. ಕಲರ್ಸ್ ಕನ್ನಡದ 'ಶಾಂತಂ ಪಾಪಂ' ಇಡೀ ದಕ್ಷಿಣ ಭಾರತದಲ್ಲಿ ಪ್ರಸಾರವಾಗುತ್ತಿರುವ ಏಕೈಕ ಕ್ರೈಂ ಆಧಾರಿತ ಫಿಕ್ಷನ್ ಶೋ ಆಗಿದೆ. ಇಲ್ಲಿವರೆಗೂ ಆರು ಶೋಗಳನ್ನು ಯಶಸ್ವಿಯಾಗಿ ಮುಗಿಸಿದ್ದು, 1000ಕ್ಕೂ ಅಧಿಕ ಎಪಿಸೋಡ್‌ಗಳು ಯಶಸ್ವಿಯಾಗಿ ಪ್ರಸಾರ ಆಗಿದೆ.

Colors Kannada Shantham Paapam season 7 Feb 4th episode about Auto driver and his wife

ಆರು ಸೀಸನ್‌ಗಳನ್ನು ಪೂರೈಸಿರೋ 'ಶಾಂತಂ ಪಾಪಂ' ಈಗ ಏಳನೇ ಸೀಸನ್‌ ಅನ್ನು ಶುರು ಮಾಡಿದೆ. ನಿಜ ಜೀವನದಲ್ಲಿ ನಡೆದ ಅಪರಾಧದ ಘಟನೆಗಳನ್ನು ಇಟ್ಟುಕೊಂಡು ಕಿರುತೆರೆಯಲ್ಲಿ ಪ್ರಸಾರ ಮಾಡುವುದಕ್ಕೆ ಮರುಸೃಷ್ಟಿ ಮಾಡಲಾಗುತ್ತಿದೆ. ಈ ಪ್ರಯತ್ನವನ್ನು ಹಿಂದಿ ಭಾಷೆಯ ಮನರಂಜನಾ ವಾಹಿನಿಗಳು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿವೆ. ಆದರೆ, ದಕ್ಷಿಣ ಭಾರತದಲ್ಲಿ ಇಂತಹ ಕ್ರೈಂ ಫಿಕ್ಷನ್ ಮುಂದಾಗಿದ್ದು ತೀರಾ ವಿರಳ. ಇಂದಿನ ಎಪಿಸೋಡ್‌ನಲ್ಲಿ ಬಿಟ್ಟು ಹೋದ ಪತ್ನಿಯನ್ನು ಹುಡುಕಿಕೊಂಡು ಹೊರಟ ಆಟೋರಾಜನ ಕಥೆಯನ್ನು ತೋರಿಸಲಾಗುತ್ತಿದೆ.

'ಶಾಂತಂ ಪಾಪಂ' 7ನೇ ಸೀಸನ್‌ನಲ್ಲಿ ಹೊಸ ಹೊಸ ಕಥೆಯನ್ನು ಜನರ ಮುಂದಿಡುವ ಪ್ರಯತ್ನಕ್ಕೆ ಕಲರ್ಸ್ ಕನ್ನಡ ಮುಂದಾಗಿದೆ. ಈ ಮೂಲಕ ಕ್ರೈಂ ಜಗತ್ತಿನ ಬಗ್ಗೆ ಆಸಕ್ತಿ ಹೊಂದಿರುವ ವೀಕ್ಷಕರನ್ನು ತನ್ನಡೆಗೆ ಸೆಳೆಯಲು ಮತ್ತೊಂದು ಕಲರ್ಸ್ ಕನ್ನಡ ಮುಂದಾಗಿದೆ. ಈಗಾಗಲೇ 'ಶಾಂತಂ ಪಾಪಂ' 7ನೇ ಸೀಸನ್‌ನ ಎಪಿಸೋಡ್‌ಗಳು ಪ್ರಸಾರ ಆಗುತ್ತಿವೆ. ಅದರಲ್ಲಿ ಇಂದಿನ (ಫೆಬ್ರವರಿ 4) ಎಪಿಸೋಡ್‌ನಲ್ಲಿ ಆಟೋರಾಜ ಕಣ್ಣೀರಿನ ಕಥೆಯನ್ನು ತೋರಿಸಲಾಗುತ್ತಿದೆ.

ಈ ಕ್ರೈಂ ಫಿಕ್ಷನ್ ಶೋ ಪ್ರತಿ ದಿನ ರಾತ್ರಿ 10:30ಕ್ಕೆ ಪ್ರಸಾರವಾಗುತ್ತಿದೆ. ಸೋಮವಾರದಿಂದ- ಶುಕ್ರವಾರದವರೆಗೆ 'ಶಾಂತಂ ಪಾಪಂ'ನ ಶೋನಲ್ಲಿ ಹೊಸ ಕಥೆಗಳಿಗೆ ಮರುಜೀವ ಸಿಗಲಿದೆ. ಇಂದು (ಫೆಬ್ರವರಿ 4) ರಾತ್ರಿ "ಬಂದು ಬಿಡು ಶೀಲಾ" ಎಪಿಸೋಡ್‌ ಪ್ರಸಾರ ಆಗುತ್ತಿದೆ. ಇದರಲ್ಲಿ ಆಟೋರಾಜ ತನ್ನ ಮಕ್ಕಳಿಬ್ಬರ ಜೊತೆ ಪತ್ನಿಗಾಗಿ ಬೇಡಿಕೊಳ್ಳುವ ಕಥೆಯಿದೆ. ತನ್ನ ಪ್ರಿಯತಮನ ಜೊತೆ ಪರಾರಿಯಾಗಿರೋ ತನ್ನ ಪತ್ನಿ ಶೀಲಾಗೆ "ಬಂದು ಬಿಡು ಶೀಲಾ" ಎಂದು ಕೂಗಿ ಕೂಗಿ ಹೇಳುತ್ತಿರುವುದನ್ನು ಪ್ರೋಮೋದಲ್ಲಿ ತೋರಿಸಿದ್ದಾರೆ.

Colors Kannada Shantham Paapam season 7 Feb 4th episode about Auto driver and his wife

'ಶಾಂತಂ ಪಾಪಂ' ಕಲರ್ಸ್ ಕನ್ನಡದ ಜನಪ್ರಿಯರ ಕ್ರೈಂ ಫಿಕ್ಷನ್ ಶೋ. ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ಪ್ರಸಾರ ಆಗುತ್ತಿದೆ. ರಾತ್ರಿ 10.30ಕ್ಕೆ ಪ್ರಸಾರ ಆಗುತ್ತಿರುವ ಈ ಶೋಗೆ ಮನರಂಜನಾ ವಾಹಿನಿಯ ವೀಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ 7ನೇ ಸೀಸನ್‌ ಅನ್ನು ಇನ್ನು ಕ್ಲಾರಿಟಿಯಾಗಿ ಪ್ರಸಾರ ಮಾಡಲಾಗುತ್ತಿದೆ. ಈಗಾಗಲೇ ಪ್ರಸಾರ ಕಂಡಿರುವ ಎಪಿಸೋಡ್‌ಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

"ಬಂದು ಬಿಡು ಶೀಲಾ" ಎಪಿಸೋಡ್ ಟೈಟಲ್‌ನಿಂದಲೇ ಗಮನ ಸೆಳೆಯುತ್ತಿದೆ. ಪ್ರೋಮೋ ಕೂಡ ಕರುಳು ಕಿವುಚುವಂತಿದೆ. ಶೀಲಾ ಬಂದು ಬಿಡ್ತಾಳಾ ಎಂಬ ಕೂತೂಹಲಕ್ಕಾಗಿ ಇಂದಿನ ಎಪಿಸೋಡ್‌ನಲ್ಲಿ ತೆರೆಬೀಳಲಿದೆ.

More from Filmibeat

English summary
Colors Kannada Shantham Paapam season 7 Feb 4th episode about Auto driver and his wife.
Read more about: tv show colors kannada serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X