4 ವರ್ಷದ ಹಿಂದೆ ತಂದೆ ಕಳೆದುಕೊಂಡಿದ್ದ ರಾಕೇಶ್; ಅಪ್ಪ ಅಗಲುವ ವೇಳೆ ಜೊತೆಗಿರಲಿಲ್ಲವೆಂಬ ಬೇಸರವಿತ್ತು
ರಾಕೇಶ್ ಪೂಜಾರಿ ಓದಿನಲ್ಲಿ ಒಳ್ಳೆಯ ಅಂಕಗಳೇನು ಇರಲಿಲ್ಲ. ಪ್ರಾಥಮಿಕ ಶಿಕ್ಷಣದವರೆಗೂ ಚೆನ್ನಾಗಿಯೇ ಓದುತ್ತಿದ್ದ ನಟ ನಂತರದ ದಿನಗಳಲ್ಲಿ ಓದಿನಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದರು. ಆದರೂ, ತಂದೆಯ ಭಯವಿತ್ತು. ಹೇಗೋ ಕಷ್ಟ ಪಟ್ಟು ರಾಕೇಶ್ ಪದವಿಯನ್ನು ಮುಗಿಸಿದ್ದರು. ಆದರೆ, ಮುಂದೇನು ಮಾಡುವುದು ಅನ್ನೋದು ಗೊತ್ತಿರಲಿಲ್ಲ. ಗೊತ್ತಿದ್ದವರು ನಾಟಕಗಳನ್ನು ಮಾಡು ಎಂದಿದ್ದರು.
ತಂದೆ ದುಡಿಮೆಗಾಗಿ ದುಬೈನ ಸ್ಟಾರ್ ಹೊಟೇಲ್‌ನಲ್ಲಿ ಶೆಪ್ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ ಅವರು ದುಬೈನಿಂದ ಹಿಂತಿರುಗಿದ್ದರು. ಆದರೆ, ಅವರಿಗೆ ಮಗನದ್ದೇ ಚಿಂತೆಯಾಗಿತ್ತು. ಯಾಕಂದ್ರೆ ಭವಿಷ್ಯವನ್ನು ಹೇಗೆ ರೂಪಸಿಕೊಳ್ಳುತ್ತಾನೆ ಅನ್ನೋದೇ ಅವರ ಚಿಂತೆಗೆ ಕಾರಣವಾಗಿತ್ತು. ಕೊನೆಗೂ ಮಗ ಸಾಧನೆ ಮಾಡಿದ್ದನ್ನು ಕಣ್ತುಂಬಿಕೊಂಡು ಅಗಲಿದ್ದರು.

ತಂದೆ ಅಗಲಿದ ಕ್ಷಣವನ್ನು ಸ್ವತ: ರಾಕೇಶ್ ಪೂಜಾರಿ ಹೆಗ್ಗದ್ದೆ ಸ್ಡುಡಿಯೋ ಯೂಟ್ಯೂಬ್ ಚಾನೆಲ್‌ಗೆ ಎರಡು ವರ್ಷಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅವರು ಅಗಲುವ ಕ್ಷಣದಲ್ಲಿ ಜೊತೆಯಲ್ಲಿ ಇರಲಿಲ್ಲ ಎಂಬ ಬೇಸರವಿದೆ ಎಂದು ರಾಕೇಶ್ ಹೇಳಿದ್ದರು. ಅವರ ತಂದೆಯೊಂದಿಗೆ ಒಡನಾಟ ಹೇಗಿತ್ತು? ಮಗನ ಸಾಧನೆಯನ್ನು ಕಂಡು ಏನಂದಿದ್ರು? ಅನ್ನೋದನ್ನು ರಿವೀಲ್ ಮಾಡಿದ್ದರು.
"ನಾನು ವಿನ್ನರ್ ಆಗುತ್ತೇನೆ ಎನ್ನುವ ಸಮಯದಲ್ಲಿ ತಂದೆ ತೀರಿಕೊಂಡರು. ಎಲ್ಲರಿಗಿಂತ ದೊಡ್ಡ ಟೆನ್ಷನ್ ಇದ್ದಿದ್ದು ನಮ್ಮ ತಂದೆಗೆ. ಇವನು ಮುಂದೆ ಏನು ಮಾಡುತ್ತಾನೋ ಅಂತಿತ್ತು. ಪಪ್ಪ ನಾನು ಈ ಕೆಲಸ ಮಾಡುತ್ತೇನೆ ಅಂದಾಗ ಸರಿ ಮಾಡು ಅನ್ನೋರು. ಅದು ಫೇಲ್ ಆಗಿ ಬಂದಾಗ ಸರಿ ಏನು ಮಾಡುತ್ತೀಯಾ ಅನ್ನೋರು. ಬೈತಿದ್ರು ಆಮೇಲೆ ಏನು ಮಾಡುತ್ತೀಯ ಅಂತ ಕೇಳುತ್ತಿದ್ದರು. ಎಲ್ಲಾ ಕೇಳಿದ ಮೇಲೆ ಸರಿ ಹೋಗಿ ಮಾಡು ಅಂತಾರೆ. ಅಷ್ಟೆಲ್ಲ ಫ್ರೀಡಂ ಕೊಟ್ಟಿದ್ದರಿಂದ ನಾನು ಇಲ್ಲಿ ಇದ್ದೇನೆ. ಅದಕ್ಕೆ ಪ್ರಮುಖ ಕಾರಣನೇ ನನ್ನ ತಂದೆ" ಎಂದು ರಾಕೇಶ್ ಪೂಜಾರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ ಸಮಯದಲ್ಲಿ ರಾಕೇಶ್ ತಂದೆ ಸಾವನ್ನಪ್ಪಿದ್ದರು. "ಚಾಂಪಿಯನ್‌ಶಿಪ್ ಟೈಮ್‌ನಲ್ಲಿ ತಂದೆಯದ್ದು ಡೆತ್ ಆಯ್ತು. ಸ್ವಲ್ಪ ಸಮಾಧಾನದ ವಿಷಯ ಏನು ಅಂದರೆ, ನಾನು ಮನೆ ನೋಡಿಕೊಳ್ಳಬಹುದು ಎಂದು ಪ್ರೂವ್ ಮಾಡಿ ತೋರಿಸಿದ್ದೀನಿ. ಮನೆಯವರನ್ನು ನೋಡಿಕೊಳ್ಳಬಲ್ಲ. ನನ್ನ ಕಾಲ ಮೇಲೆ ನಾನು ನಿಲ್ಲಬಲ್ಲೆ ಅಂತ ಪ್ರೂವ್ ಮಾಡಿದ್ದು, ಚಾಂಪಿಯನ್ ಸೀಸನ್ ವಿನ್ನಿಂಗ್ ಟೈಮ್‌ನಲ್ಲಿ. ಆ ಟೈಮ್‌ನಲ್ಲಿ ನನ್ನ ತಂದೆಯ ಕಣ್ಣಲ್ಲಿ ಖುಷಿಯಿಂದ ಕಣ್ಣೀರು ನೋಡಿದ್ದು ಆ ಒಂದು ದಿನ. ನನ್ನ ವಿಷಯದಲ್ಲಿ ಟೆನ್ಷನ್‌ನಲ್ಲಿಯೇ ಇರುತ್ತಿದ್ದರು. ನನಗೆ 30 ವರ್ಷ ಆಗುವವರೆಗೂ ನನ್ನ ವಿಷಯದಲ್ಲಿ ಟೆನ್ಷನ್‌ನಲ್ಲಿಯೇ ಇರುತ್ತಿದ್ದರು." ಎಂದಿದ್ದಾರೆ. ಆದರೆ, ಈಗ ಅವರೇ ಇಹಲೋಕ ತ್ಯಜಿಸಿದ್ದಾರೆ.
ತಂದೆಯೊಂದಿಗೆ ರಾಕೇಶ್ ಪೂಜಾರಿ ಕ್ಲೋಸ್ ಆಗಿರಲಿಲ್ಲ. ಅಪ್ಪನನ್ನು ಕಂಡರೆ, ಅವರಿಗೆ ಎಲ್ಲಿಲ್ಲದ ಭಯ. ರಾಕೇಶ್ ಪೂಜಾರಿ ಭವಿಷ್ಯದ ವಿಚಾರದಲ್ಲಿ ತಂದೆಗೆ ಟೆನ್ಷನ್ ಇತ್ತು. ಆದರೆ, ಕಾಮಿಡಿ ಕಿಲಾಡಿಗಳು ಸೀಸನ್ 3 ವೇಳೆ ಅಪ್ಪ ಹಾಗೂ ಮಗ ಇಬ್ಬರೂ ಕ್ಲೋಸ್ ಆಗಿದ್ದರು. ಅಷ್ಟೇ ಅಲ್ಲದೆ ರಾಕೇಶ್ ಪೂಜಾರಿ ಸ್ನೇಹಿತರೊಂದಿಗೆ ಅವರ ತಂದೆ ಕ್ಲೋಸ್ ಆಗಿ ಓಡಾಡಿಕೊಂಡಿದ್ದರು. ಆದರೆ, ಅದು ರಾಕೇಶ್ ಪೂಜಾರಿಗೆ ಮಾತ್ರ ಸಾಧ್ಯವಾಗಿರಲಿಲ್ಲ. ಯಾಕೆಂದರೆ, ಅವರು ಬೆಂಗಳೂರಿನಲ್ಲಿ ಶೋ ಕೊಡುತ್ತಿದ್ದರು. ಈ ಬೇಸರವನ್ನು ಸಂದರ್ಶನದಲ್ಲಿ ಹೊರ ಹಾಕಿದ್ದರು.
ರಾಕೇಶ್ ಪೂಜಾರಿಯವರ ಚಿಕ್ಕಮ್ಮ ತೀರಿ ಹೋಗಿದ್ದರು. ಆ ಟೆನ್ಷನ್‌ನಲ್ಲಿ ತಂದೆ ಇದ್ದರು. ರಾಕೇಶ್ ತಂದೆ ಬಿಪಿ ಹಾಗೂ ಶೂಗರ್ ಇತ್ತು. ಹೀಗಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಹಿಂದೆ ಮುಂದೆ ಮಾಡುತ್ತಿದ್ದರು. ತಂದೆ ನಿಧನರಾಗುವ ವೇಳೆ ರಾಕೇಶ್ ಕೂಡ ಮನೆಯಲ್ಲಿ ಇರಲಿಲ್ಲ. ಅವರು ಉಜಿರೆ ಕಡೆ ಹೋಗಿದ್ದರಂತೆ. ಬಿಪಿ ಹಾಗೂ ಶೂಗರ್ ಹೆಚ್ಚಾಗಿದ್ದರಿಂದ ವೈದ್ಯರು ಮಣಿಪಾಲ್‌ಗೆ ಕರೆದುಕೊಂಡು ಹೋಗಿ ಎಂದಿದ್ದರಂತೆ. ಆದರೆ, ದಾರಿ ಮಧ್ಯೆನೇ ಅವರಿಗೂ ಹೃದಯಘಾತವಾಗಿ ಕೊನೆಯುಸಿರೆಳೆದಿದ್ದರು.


Click it and Unblock the Notifications











