ಲಾಕ್‌ಡೌನ್ ನಡುವೆ ಹಸೆಮಣೆ ಏರಿದ ಕಾಮಿಡಿ ಕಿಲಾಡಿ ಖ್ಯಾತಿಯ ಸಂತೋಷ್
ಕಾಮಿಡಿ ಕಿಲಾಡಿ ರಿಯಾಲಿಟಿ ಶೋದ ಸೀಸನ್ ಮೂರರ ರನ್ನರ್ ಅಪ್ ಆಗಿದ್ದ ಹಾಸನದ ಸಂತೋಷ್, ಲಾಕ್ ಡೌನ್ ನಡುವೆ ಸರಳವಾಗಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ. ನಿಗದಿಯಾಗಿದ್ದ ಅನೇಕ ಮದುವೆಗಳು ಲಾಕ್‌ಡೌನ್ ಕಾರಣದಿಂದ ಮುಂದಕ್ಕೆ ಹೋಗಿವೆ. ಇನ್ನು ಕೆಲವು ಮದುವೆಗಳು ಮುಹೂರ್ತ ಮತ್ತೆ ಸಿಗದ ಕಾರಣ ಜಿಲ್ಲಾಡಳಿತದ ಅನುಮತಿ ಪಡೆದು ಮದುವೆಗಳು ನಡೆಯುತ್ತಿವೆ. ಅವುಗಳ ಸಾಲಿಗೆ ಸಂತೋಷ್ ಸೇರಿದ್ದಾರೆ.
Recommended Video
ಕಾಮಿಡಿ ಕಿಲಾಡಿಗಳು ಸೀಸನ್ ಮೂರರಲ್ಲಿ ತುಕಾಲಿ ಸ್ಟಾರ್ ಸಂತು ಎಂದೇ ಖ್ಯಾತರಾಗಿರುವ ಸಂತೋಷ್ ಕುಮಾರ್, ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕೇವಲ 20 ಮಂದಿ ಏಪ್ರಿಲ್ 10ರಂದು ನಡೆದ ಅವರ ಮದುವೆ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಮುಂದೆ ಓದಿ.

ಸರಳ ಮದುವೆಗೆ ತೀರ್ಮಾನ
ಸಂತೋಷ್ ಅವರ ಮದುವೆ ಈ ಮೊದಲೇ ನಿಗದಿಯಾಗಿತ್ತು. ಕುಟುಂಬದವರು, ಬಂಧು ಬಳಗ ಮತ್ತು ಗೆಳೆಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಗೆ ತೀರ್ಮಾನಿಸಲಾಗಿತ್ತು. ಆದರೆ ಲಾಕ್ ಡೌನ್ ಕಾರಣದಿಂದ ಪೊಲೀಸರ ಅನುಮತಿಯೊಂದಿಗೆ ಸರಳವಾಗಿ ಮದುವೆಯಾದರು. ಸಂತೋಷ್ ಅವರ ಸಹ ನಟ ಮಡೇನೂರು ಮನು ಕೂಡ ಮದುವೆಯಲ್ಲಿ ಭಾಗಿಯಾಗಿದ್ದರು.

ಸಿನಿಮಾಗಳಲ್ಲಿ ನಟನೆ
ಹಾಸನ ಜಿಲ್ಲೆ, ನರಸೀಪುರ ತಾಲ್ಲೂಕಿನ ಉದ್ದೂರು ಹೊಸಹಳ್ಳಿಯವರಾದ ಸಂತೋಷ್ ಈಗಾಗಲೇ 12 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಮೂಲಕ ಜನಪ್ರಿಯರಾದ ಅವರಿಗೆ ಮತ್ತಷ್ಟು ಅವಕಾಶಗಳು ಸಿಗುತ್ತಿವೆ.

ಸಂಭ್ರಮಕ್ಕೆ ಲಾಕ್‌ಡೌನ್ ಅಡ್ಡಿ
ಲಾಕ್ ಡೌನ್ ಕಾರಣದಿಂದ ಹೆಚ್ಚು ಜನರನ್ನು ಮದುವೆಗೆ ಆಹ್ವಾನಿಸಲು ಅವಕಾಶವಿರಲಿಲ್ಲ. ಸಂತೋಷ್ ಅವರ ಅದ್ಧೂರಿ ಮದುವೆಗೆ ಸಕಲ ಸಿದ್ಧತೆ ನಡೆಸಲಾಗಿತ್ತು. ಆದರೆ ಆ ಸಂಭ್ರಮಕ್ಕೆ ಲಾಕ್‌ಡೌನ್ ಅಡ್ಡಿಯಾಗಿದೆ. ಹೀಗಾಗಿ ನೂರಾರು ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರಿದ್ದರೂ ಅವರನ್ನು ಆಹ್ವಾನಿಸಲಾಗದೆ ಸಂತೋಷ್ ಸರಳ ವಿವಾಹವಾಗಿದ್ದಾರೆ.

ರನ್ನರ್ ಅಪ್
ಸಂತೋಷ್ ಮದುವೆಯ ಕ್ಷಣಗಳನ್ನು ಮಡೇನೂರು ಮನು ಹಂಚಿಕೊಂಡಿದ್ದಾರೆ. ಕಾಮಿಡಿ ಕಿಲಾಡಿಗಳು 3ನೇ ಸೀಸನ್‌ನಲ್ಲಿ ರಾಕೇಶ್ ಪೂಜಾರಿ ವಿಜಯಿಯಾಗಿದ್ದರು. ಅವರಿಗೆ ನಿಕಟ ಪೈಪೋಟಿ ನೀಡಿದ್ದ ಸಂತೋಷ್ ರನ್ನರ್ ಅಪ್ ಆಗಿದ್ದರು.


Click it and Unblock the Notifications











